ಅಳುವಿಕೆ
ಗೋಚರ
- ಅಕ್ಕೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಲೇಪನ ಲೇಖನಕ್ಕಾಗಿ ಇಲ್ಲಿ ನೋಡಿ.
ಅಳುವಿಕೆ ಒಂದು ಭಾವನಾತ್ಮಕ ಸ್ಥಿತಿಗೆ ಪ್ರತಿಕ್ರಿಯೆಯಾಗಿ ಕಣ್ಣೀರನ್ನು ಸುರಿಸುವುದು. ಅಳುವಿಕೆಯ ಕ್ರಿಯೆಯನ್ನು "ಕಣ್ಣಿನ ರಚನೆಗಳಲ್ಲಿ ಯಾವುದೇ ಕಿರಿಕಿರಿಯಿರದ, ಲ್ಯಾಕ್ರಮಲ್ ಅಂಗವ್ಯೂಹದಿಂದ ಕಣ್ಣೀರನ್ನು ಸುರಿಸುವ ಲಕ್ಷಣಗಳಿರುವ ಸಂಕೀರ್ಣ ಸ್ರಾವಚಾಲಕ ವಿದ್ಯಮಾನ" ಎಂದು ವ್ಯಾಖ್ಯಾನಿಸಲಾಗಿದೆ.[೧]
ಅಳುವಿಕೆಯನ್ನು ಗದ್ಗದಿಸುವಿಕೆ ಎಂದು ವಿವರಿಸಲು, ಅದರ ಜೊತೆ ಸಾಮಾನ್ಯವಾಗಿ ಇತರ ಲಕ್ಷಣಗಳ ಸಮೂಹವಿರಬೇಕು, ಉದಾಹರಣೆಗೆ ನಿಧಾನ ಆದರೆ ಅನಿಯಮಿತ ಉಸಿರೆಳೆತ, ಉಸಿರು ಹಿಡಿದಿಟ್ಟುಕೊಳ್ಳುವಿಕೆಯ ಸಾಂದರ್ಭಿಕ ನಿದರ್ಶನಗಳು ಮತ್ತು ಸ್ನಾಯುವಿನ ನಡುಕ.
ಲ್ಯಾಕ್ರಮಲ್ ಗ್ರಂಥಿ (ಕಣ್ಣೀರು ನಾಳ) ಮತ್ತು ಭಾವನೆಯೊಂದಿಗೆ ತೊಡಗಿಸಿಕೊಂಡಿರುವ ಮಾನವ ಮಿದುಳಿನ ಪ್ರದೇಶಗಳ ನಡುವೆ ನರಕೋಶ ಸಂಪರ್ಕ ಇದೆಯೆಂದು ಸಾಬೀತಾಗಿದೆ. ಮಾನವನು ಭಾವನಾತ್ಮಕ ಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ಕಣ್ಣೀರನ್ನು ಉತ್ಪಾದಿಸುವ ಏಕೈಕ ಪ್ರಾಣಿ ಹೌದೋ ಅಥವಾ ಅಲ್ಲವೋ ಎಂಬುದರ ಬಗ್ಗೆ ವಿಜ್ಞಾನಿಗಳಲ್ಲಿ ಚರ್ಚೆ ಇದೆ.[೨].
ಉಲ್ಲೇಖಗಳು
[ಬದಲಾಯಿಸಿ]- ↑ Patel, V. (1993). "Crying behavior and psychiatric disorder in adults: a review". Compr Psychiatry. 34 (3): 206–11. doi:10.1016/0010-440X(93)90049-A. PMID 8339540. Quoted by Michelle C.P. Hendriks, A.J.J.M. Vingerhoets in Crying: is it beneficial for one's well-being?
- ↑ Walter, Chip (December 2006). "Why do we cry?". Scientific American Mind. 17 (6): 44.