ವಿಷಯಕ್ಕೆ ಹೋಗು

ಅಳ್ವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಳ್ವಾರ್
Alwar
Location of ಅಳ್ವಾರ್

ಅಳ್ವಾರ್ (ರಾಜಸ್ಥಾನೀ: अलवर शहर), ಭಾರತದ ರಾಜಸ್ಥಾನ ರಾಜ್ಯದಲ್ಲಿರುವ ಅಳ್ವಾರ್ ಜಿಲ್ಲೆಯ ನಗರ ಪ್ರದೇಶ ಮತ್ತು ಆಡಳಿತಾತ್ಮಕ ಪ್ರಧಾನ ಕೇಂದ್ರಸ್ಥಾನವಾಗಿದೆ. ಇದು ನ್ಯಾಶನಲ್ ಕ್ಯಾಪಿಟಲ್ ರೀಜನ್ (ರಾಷ್ಟ್ರೀಯ ಅಗ್ರಗಣ್ಯ ರಾಜಧಾನಿ ಪ್ರದೇಶ) (NCR) ನ ಭಾಗವಾಗಿದೆ. ಇದು ದೆಹಲಿಯ ದಕ್ಷಿಣಕ್ಕೆ 160 ಕಿ.ಮೀ. ವರೆಗೂ ಮತ್ತು ರಾಜಸ್ಥಾನರಾಜಧಾನಿಯಾದ ಜೈಪುರದ ಉತ್ತರಕ್ಕೆ 150 ಕಿ.ಮೀ. ನವರೆಗೂ ಹಬ್ಬಿದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದಲ್ಲಿನ ಅಳ್ವಾರ್ ಹಿಂದೆ ಅಳ್ವಾರ್ ಅಥವಾ ಉಳ್ವಾರ್ ಎಂಬ ಸ್ಥಳೀಯ ರಾಜ್ಯದ ರಾಜಧಾನಿಯಾಗಿತ್ತು. ಭಾರತದಲ್ಲಿ ಎಂದಿಗೂ ದಾಖಲಿಸಲ್ಪಡದ 50.6 °C (123.1 °F) ನಷ್ಟು ಅತ್ಯಂತ ಗರಿಷ್ಠ ತಾಪಮಾನ ಅಳ್ವಾರ್ ನಲ್ಲಿ 1956 ರ ಮೇ 10 ರಂದು ದಾಖಲಾಗಿದೆ.[]

ಇತಿಹಾಸ

[ಬದಲಾಯಿಸಿ]

"ಅಳ್ವಾರ್" ಅನ್ನು ಹಿಂದೆ "ಉಳ್ವಾರ್" ಎಂದು ಕರೆಯಲಾಗುತ್ತಿತ್ತು. ಈ ಹೆಸರಿನಿಂದಾಗಿ ಇದು ವರ್ಣಾನುಕ್ರಮದ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆದ್ದರಿಂದ ಇದನ್ನು ಮೊದಲಿನ ಸ್ಥಾನಕ್ಕೆ ತರಲು ರಾಜ "ಅಳ್ವಾರ್" ಎಂದು ಮರುನಾಮಕರಣ ಮಾಡಿದ. 11 A.D.ಯ ವರೆಗೆ ಈ ಪ್ರದೇಶವನ್ನು ಪ್ರಬಲಶಾಲಿ ಬರ್ ಗುಜಾರ್ ಕುಲದ ಮುಖ್ಯಸ್ಥ ಆಳಿದನು.[] ಮುಸಲ್ಮಾನರ ಆಳ್ವಿಕೆಯ ಸಂದರ್ಭದಲ್ಲಿ ಮುಸ್ಲಿಂ ಚಕ್ರವರ್ತಿಗಳಲ್ಲಿ ಒಬ್ಬ, ಅಳ್ವಾರ್ ನ ಬರ್ ಗುಜಾರ್ ರಾಜನಾಗಿದ್ದ, ಈಶ್ವರ್ ದಾಸ್ ನ ಪುತ್ರಿಯನ್ನು ಮದುವೆಯಾಗಲು ಬಯಸಿದ. ಅವನ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ಕೈಗೆ ಸಿಕ್ಕ ಬರ್ ಗುಜಾರ್ ಠಾಕೂರರನ್ನು ಹತ್ಯೆ ಮಾಡಲಾಯಿತು. ಆದರೆ ಕೆಲವರು ತಪ್ಪಿಸಿಕೊಂಡರು, ಅವರುಗಳಲ್ಲಿ ಮುಖ್ಯನಾದವನು ರಾಜಾ ದಾಲ್ಕು ರಾಂ. ಈತ ವಂಶದ ಮುಖ್ಯಸ್ಥನಾಗಿದ್ದು, ಪಲಾಯನ ಮಾಡಿ; ನಂತರ ರಜಪೂತರ ಸಿಕಾರ್ವಾರ್ ಎಂಬ ಪಂಗಡವನ್ನು ಹುಟ್ಟುಹಾಕಿದನು.

ಅಳ್ವಾರ್ ಅದರ ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದಾಗಿ ಜನಪ್ರಿಯವಾಗಿದೆ.

ಹೇಮುವನ್ನು ಸಾಮ್ರಾಟ ಹೇಮಚಂದ್ರ ವಿಕ್ರಮಾದಿತ್ಯ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತಿತ್ತು. ಈತ ಭಾರತದ ಹಿಂದೂ ಚಕ್ರವರ್ತಿಯಾಗಿದ್ದು, ಈ ಜಿಲ್ಲೆಯ 'ಮಚೆರಿ ದೆವತ್' ಎಂಬ ಹಳ್ಳಿಯಲ್ಲಿ 1501 ರಲ್ಲಿ ಜನಿಸಿದನು. ಅವನ ತಂದೆಯಾದ ರಾಯ್ ಪುರಾಣ್ ದಾಸ್ ಬ್ರಾಹ್ಮಣ ಪುರೋಹಿತರಾಗಿದ್ದರು. ಇಸ್ಲಾಂಧರ್ಮಕ್ಕೆ ಮತಾಂತರಗೊಳ್ಳಬೇಕೆಂಬ ಅಕ್ಬರನ ಒತ್ತಾಯವನ್ನು ನಿರಾಕರಿಸಿದ್ದಕ್ಕಾಗಿ ಮೆಚರಿ ಊರಿನಲ್ಲೇ 1556 ರಲ್ಲಿ ಶಿರಚ್ಛೇದನ ಮಾಡಿ ಅವರನ್ನು ಕೊಲ್ಲಲಾಯಿತು. ಆಗ ಅವರು 85 ವರ್ಷದವರಾಗಿದ್ದರು. ಹೇಮು 1553-56 ರ ಸಂದರ್ಭದಲ್ಲಿ ಆಫ್ಘಾನ್ ನ ಬಂಡಾಯಗಾರರ ವಿರುದ್ಧ ನಡೆದ 22 ಯುದ್ಧದಲ್ಲಿ ಜಯಗಳಿಸಿದನು. ಪಂಜಾಬ್ ನಿಂದ ಬೆಂಗಾಲ್ ನ ವರೆಗೆ ತನ್ನ ಸಾಮ್ರಾಜ್ಯವನ್ನು ಹರಡುವ ಮೂಲಕ ಇಡೀ ಉತ್ತರ ಭಾರತವನ್ನು ಆಕ್ರಮಿಸಿಕೊಂಡನು. ಅಲ್ಲದೇ ಆಗ್ರಾ ಮತ್ತು ದೆಹಲಿ ಯಲ್ಲಿ ಅಕ್ಬರನ ಸೈನ್ಯವನ್ನು ಸೋಲಿಸುವ ಮೂಲಕ 1556 ರ ಅಕ್ಟೋಬರ್ 7 ರಂದು ದೆಹಲಿಯ ಸಿಂಹಾಸನವನ್ನೇರಿದನು. ಹೇಮುವಿನ ರಾಜ್ಯಾಭಿಷೇಕವನ್ನು (ಪಟ್ಟಾಭಿಷೇಕವನ್ನು) ದೆಹಲಿಯ ಪುರಾನಾ ಕಿಲಾ ಹಳೆಯ ಕೋಟೆಯಲ್ಲಿ ನೆರವೇರಿಸಲಾಯಿತು. ಹೇಮು ವಿಕ್ರಮಾದಿತ್ಯ , ಇಸ್ಲಾಂ ಧರ್ಮದ ದಾಳಿಕೋರರು ಮತ್ತು ರಾಜರುಗಳನ್ನು ಒಳಗೊಂಡಂತೆ 350 ವರ್ಷಗಳವರೆಗೆ ವಿದೇಶಿಯರ ಆಳ್ವಿಕೆಯ ನಂತರ ಉತ್ತರ ಭಾರತದಲ್ಲಿ 'ಹಿಂದೂ ರಾಜ್' ಅನ್ನು ಸ್ಥಾಪಿಸಿದನು. ಇವನು ಎರಡನೇ ಪಾಣಿಪತ್ ಯುದ್ಧದಲ್ಲಿ ಮೊಗಲರ ವಿರುದ್ಧ ಹೋರಾಡುತ್ತ ಪ್ರಾಣ ಬಿಟ್ಟನು. ಪ್ರತಾಪ್ ಸಿಂಗ್ ಎಂಬ ರಾಜ ಅಳ್ವಾರ್ ನ ಮಹರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯವನ್ನು ಸ್ಥಾಪಿಸಿದನು. ಇವನು 18 ನೇ ಶತಮಾನದ ಉತ್ತರಾರ್ಧದಲ್ಲಿದ್ದ ಕಚವಾ ವಂಶಕ್ಕೆ ಸೇರಿದ ರಜಪೂತನಾಗಿದ್ದಾನೆ. ಈತನ ದತ್ತು ಪುತ್ರ ಭಕ್ತಾವರ್ ಸಿಂಗ್ ಮರಾಠಿಗರ ವಿರುದ್ಧದ ಕಾರ್ಯಾಚರಣೆಯಲ್ಲಿ ಬ್ರಿಟಿಷರಿಗೆ ಸಹಾಯಮಾಡಿದ. ಆಳ್ವಾರ್ , ಲಾಸ್ವಾರಿ(1803) ಯುದ್ಧದ ನಂತರ, ಬ್ರಿಟಿಷ ಈಸ್ಟ್ ಇಂಡಿಯಾ ಕಂಪೆನಿ ಯ ಜೊತೆಯಲ್ಲಿ 'ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಒಪ್ಪಂದಕ್ಕೆ' ಸಹಿಹಾಕಿದ, ರಾಜಪೂತ ರಾಜ್ಯಗಳಲ್ಲಿ ಮೊದಲನೇಯ ರಾಜ್ಯವಾಗಿದೆ[]. ಕೆಲವು ವರ್ಷಗಳ ನಂತರ, ಭಕ್ತಾವರ್ ಸಿಂಗ್ ಪಕ್ಕದ ಜೈಪುರ ರಾಜ್ಯದ ಮೇಲೆ ಯುದ್ಧಸನ್ನದ್ಧನಾಗಿ ಅನಿರೀಕ್ಷಿತ ದಾಳಿ ನಡೆಸುವ ಸಾಹಸ ಮಾಡಿದನು. ಇದು ಕಚವಾ ವಂಶದ ಹಿರಿಯ ರಾಜ್ಯವಾಗಿದ್ದು, ಅವನ ಪೂರ್ವಿಕರ ಹಿಂದಿನ ಅಧಿಪತಿಯಾಗಿತ್ತು. ಭಕ್ತಾವರ್ ಸಿಂಗ್ ನನ್ನು ಸೋಲಿಸಲಾಯಿತು; HEIC ಅವನ ಜೊತೆಯಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ ಅವನು ಬ್ರಿಟಿಷರ ಅನುಮತಿ ಇಲ್ಲದೆಯೇ ಇತರ ರಾಜ್ಯಗಳ ರಾಜಕೀಯದಲ್ಲಿ ಮಧ್ಯಪ್ರವೇಶಿಸುವುದನ್ನು ನಿಷೇಧಿಸಲಾಯಿತು. 1857 ರ ಸಿಪಾಯಿ ದಂಗೆಯ ಸಂದರ್ಭದಲ್ಲಿ ರಾವ್ ರಾಜಾ ಬಾನೇ ಸಿಂಗ್ , ಆಗ್ರಾ ದಲ್ಲಿ ಬ್ರಿಟಿಷರ ರಕ್ಷಣೆಗಾಗಿ ಮುಸ್ಲಿಂರು ಮತ್ತು ರಜಪೂತರನ್ನು ಒಳಗೊಂಡಿರುವ ಸೈನ್ಯವನ್ನು ಕಳುಹಿಸಿಕೊಟ್ಟನು. ಮುಸ್ಲಿಮರು ಓಡಿಹೋದರು; ಇನ್ನುಳಿದವರು ಬಂಡಾಯಗಾರರಿಂದ ಸೋಲನ್ನು ಅನುಭವಿಸಿದರು. ರೆವಾರಿಯ ರಾವ್ ತುಲಾ ರಾಮ್ ಜೊತೆಯಲ್ಲಿ 1857 ರಲ್ಲಿ ಹೋರಾಡಿದ ಪ್ರಾಣ್ ಸುಕ್ ಯಾದವ್, ಸತ್ತ ಸೈನಿಕರ ಸಂಬಂಧಿಕರೊಡನೆ ಅಳ್ವಾರ್ ಜಿಲ್ಲೆಯ ನಿಹಾಲ್ ಪುರ,ಬೆಹರೂರ್ ತೆಹಸಿಲ್ ನಲ್ಲಿ ನೆಲೆಯೂರಿದನು. ಬಾನ್ಸುರ್ ತೆಹಸಿಲ್ ನ ಕಿಶೋರ್ ಪುರ ಹಳ್ಳಿಯನ್ನು ಗುರ್ಜರ್ ಸಮುದಾಯದ ಭಾತಿ ವಂಶದವರು ಆಳುತ್ತಿದ್ದರು. ಇಸವಿ 1947 ರಲ್ಲಿ ಭಾರತ ಸ್ವಾಂತತ್ರ್ಯ ಪಡೆದ ನಂತರ ಅಳ್ವಾರ್ ಭಾರತ ಸರ್ಕಾರದ ಆಳ್ವಿಕೆಗೆ ಒಳಪಟ್ಟಿತು. 1948 ರ ಮಾರ್ಚ್ 18 ರಂದು ಮತ್ಸ್ಯ ಒಕ್ಕೂಟದ ಮೂಲಕ ಈ ರಾಜ್ಯವನ್ನು ರಾಜರ ಆಳ್ವಿಕೆಗೆ ಒಳಪಟ್ಟಿದ ಪಕ್ಕದ ಮೂರು ರಾಜ್ಯ(ಭಾರತ್ ಪುರ, ದೋಲ್ ಪುರಕರೌಲಿ)ಗಳೊಡನೆ ಸೇರಿಸಲಾಯಿತು. ಈ ಒಕ್ಕೂಟವನ್ನು ಮುಂದೆ ಭಾರತದ ಒಕ್ಕೂಟದಲ್ಲಿ ಸೇರಿಸಲಾಯಿತು. 1949 ರ ಮೇ 15 ರಂದು, ಪ್ರಸ್ತುತದಲ್ಲಿರುವ ರಾಜಸ್ಥಾನ ಎಂಬ ಭಾರತದ ರಾಜ್ಯದ ಮೂಲಕ ಇದನ್ನು ಇತರ ಕೆಲವೊಂದು ರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯಗಳೊಡನೆ ಹಾಗು ಅಜ್ಮೀರ್ ನ ಪ್ರದೇಶಗಳೊಡನೆ ಸೇರಿಸಲಾಯಿತು. ಸ್ವತಂತ್ರ ಬಂದ ನಂತರ ಅಳ್ವಾರ್ ನ ಹಳ್ಳಿಗಳಿಗೆ ಶಿಕ್ಷಣ ಸೌಲಭ್ಯ ತರುವ ಕಾರ್ಯದಲ್ಲಿ ಜೈ ದಯಾಲ್ ಯಾದವ್ ಮತ್ತು ಮತ್ಸ್ಯ ಒಕ್ಕೂಟದ ಪ್ರಧಾನ ಮಂತ್ರಿಯಾಗಿದ್ದ ಶೋಭ ರಾಮ್ ಕುಮಾವತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಕೇಶ್ ಖಂಡೆಲ್ ವಾಲ್ ಸ್ಟಾರ್ ಅಗ್ರಿವೇರ್ ಹೌಸಿಂಗ್ ಅಂಡ್ ಕಲ್ಯಾಟರಲ್ ಮ್ಯಾನೆಜ್ ಮೆಂಟ್ Ltd. ನ ಕಾರ್ಯಾಚರಣೆಯ ನಿರ್ವಾಹಕರಾಗಿದ್ದರು.

ನೀಮ್ರಾನ

ಅಳ್ವಾರ್ ರಾಜ್ಯದ ಅರಸರು

[ಬದಲಾಯಿಸಿ]
  • ಪ್ರತಾಪ್ ಸಿಂಗ್ ಪ್ರಭಾಕರ್ ಬಹದ್ದೂರ್ (1775–1791) ಅಳ್ವಾರ್ ನ ರಾವ್ ರಾಜ
  • ಭಕ್ತಾವರ್ ಸಿಂಗ್ ಪ್ರಭಾಕರ್ ಬಹದ್ದೂರ್ (1791–1815) ಅಳ್ವಾರ್ ನ ರಾವ್ ರಾಜ
  • ಬಾನೇ ಸಿಂಗ್ ಪ್ರಭಾಕರ್ ಬಹದ್ದೂರ್ (1815–1857) ಅಳ್ವಾರ್ ನ ಮಹಾರಾವ್ ರಾಜ
  • ಶಿಯೋದನ್ ಸಿಂಗ್ ಪ್ರಭಾಕರ್ ಬಹದ್ದೂರ್ (1857–1874) ಅಳ್ವಾರ್ ನ ಮಹಾರಾವ್ ರಾಜಾ
  • ಮಂಗಳ್ ಸಿಂಗ್ ಪ್ರಭಾಕರ್ ಬಹದ್ದೂರ್ (1874–1892) ಅಳ್ವಾರ್ ನ ಮಹರಾಜ
  • ಜೈ ಸಿಂಗ್ ಪ್ರಭಾಕರ್ ಬಹದ್ದೂರ್ (1892–1937) ಅಳ್ವಾರ್ ನ ಮಹರಾಜ
  • ತೇಜ್ ಸಿಂಗ್ ಪ್ರಭಾಕರ್ ಬಹದ್ದೂರ್ (1937–1971) ಅಳ್ವಾರ್ ನ ಮಹರಾಜ (1971–2009 ರಿಂದ ನಾಮಕಾವಾಸ್ತೆಯ ಮಹರಾಜ)
  • ಜಿತೇಂದ್ರ ಪ್ರತಾಪ್ ಸಿಂಗ್ ಪ್ರಭಾಕರ್ ಬಹದ್ದೂರ್, ಅಳ್ವಾರ್ ನ ಮಹರಾಜ (2009-ರಿಂದ ನಾಮಕಾವಾಸ್ತೆಯ ಮಹರಾಜ)

ಭೌಗೋಳಿಕ ಕ್ಷೇತ್ರ/ಭೂಗೋಳ

[ಬದಲಾಯಿಸಿ]

ಅಳ್ವಾರ್ 27°34′N 76°36′E / 27.57°N 76.6°E / 27.57; 76.6 ನಲ್ಲಿದೆ.[] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 271 ಮೀಟರ್ ಗಳಷ್ಟು (889 ಅಡಿ) ಎತ್ತರದಲ್ಲಿದೆ.

ಜನಸಂಖ್ಯೆಯ ಅಂಕಿ-ಅಂಶದ ವಿವರ

[ಬದಲಾಯಿಸಿ]

As of 2001 ಭಾರತದ ಅಂಕಿಅಂಶ,[] ದ ಪ್ರಕಾರ ಅಳ್ವಾರ್ 160,245 ನಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ನಷ್ಟಿದ್ದಾರೆ. ಅಳ್ವಾರ್ ಸರಾಸರಿ 73% ದಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 59.5% ಗಿಂತ ಹೆಚ್ಚಿದೆ; ಪುರುಷರು 59% ಮತ್ತು ಮಹಿಳೆಯರು 41% ನಷ್ಟಿದ್ದಾರೆ. ಜನಸಂಖ್ಯೆಯಲ್ಲಿ 13% ದಷ್ಟು 6 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಜನಾಂಗೀಯತೆ

[ಬದಲಾಯಿಸಿ]

ಅಳ್ವಾರ್ ರ ನಿವಾಸಿಗಳು ಅನೇಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರಲ್ಲಿ ಬಹುಪಾಲು ನಿವಾಸಿಗಳು ಯಾದವ ಸಮುದಾಯಕ್ಕೆ ಸೇರಿದ್ದು , ಉಳಿದವರು ಮಿಯೋ, ಗುಜ್ಜರ್, ಬ್ರಾಹ್ಮಣ, ಸೈನಿ ಮತ್ತು ದಲಿತ್ ಎಂಬ ಸಮುದಾಯಕ್ಕೆ ಸೇರಿದ್ದಾರೆ.

ಸ್ಥಳೀಯ ಆಕರ್ಷಣೆಗಳು

[ಬದಲಾಯಿಸಿ]
ಅಳ್ವಾರ್ ರೈಲ್ವೆ ನಿಲ್ದಾಣದ ಹೊರಗೆ
ಅಳ್ವಾರ್ ಜಂಕ್ಷನ್

ಅಳ್ವಾರ್ ಅನೇಕ ಆಸಕ್ತಿದಾಯಕ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ. ನಗರವು ಸುಂದರವಾದ ಸರೋವರವನ್ನು ಮತ್ತು ಕಣ್ಣಿಗೆ ಕಟ್ಟಿದಂತಿರುವ ಆಕರ್ಷಕವಾದ ಕಣಿವೆಯನ್ನು ಹೊಂದಿದೆ. (ಸಾರಿಸ್ಕ ಮೀಸಲು ಸಂರಕ್ಷಿತ ಹುಲಿಧಾಮ)ಸಾರಿಸ್ಕ ಟೈಗರ್ ರಿಸರ್ವ್ ರಾಷ್ಟ್ರೀಯ ಪಾರ್ಕ್, (ಉದ್ಯಾನ) ಅಳ್ವಾರ್ ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿವೆ. ಪ್ರಾಜೆಕ್ಟ್ ಟೈಗರ್ (ಸಂರಕ್ಷಿತ)ರಿಸರ್ವ್ ಅಭಯಾರಣ್ಯ, ವಿರಳವಾದ ಪಕ್ಷಿ ಮತ್ತು ಸಸ್ಯಗಳನ್ನು ಒಳಗೊಂಡಂತೆ ಇತರ ಜೀವಿ ಸಂಕುಲಕ್ಕೂ ಆಶ್ರಯ ನೀಡಿದೆ. ಸೈನಿಕರ ಶಾಶ್ವತ ಬೀಡಾದ ಇಟರಾನ ಪ್ರದೇಶವು ಅಳ್ವಾರ್ ನ ಹೊರವಲಯದಲ್ಲಿ.

ಮಂತ್ರಮುಗ್ಧಗೊಳಿಸುವ ರಾಣಿ

[ಬದಲಾಯಿಸಿ]

ಈ ಹೆಸರಿನಿಂದ ಕಾರ್ಯನಿರ್ವಹಿಸುತ್ತಿರುವ ಪ್ರಪಂಚದಲ್ಲೇ ಅತ್ಯಂತ ಪ್ರಾಚೀನ ಉಗಿ ಎಂಜಿನ್ ಇದಾಗಿದೆ. ಈ ಉಗಿ ಎಂಜಿನ್ ಅನ್ನು 1855 ರಲ್ಲಿ ನಿರ್ಮಿಸಲಾಯಿತು. ಅಲ್ಲದೇ ಬ್ರಿಟಿಷರ ಪಾಲುದಾರಿಕೆಯಲ್ಲಿ ಭಾರತೀಯ ಪೂರ್ವ ರೈಲ್ವೆ ಇದನ್ನು ವಶಪಡಿಸಿಕೊಂಡಿತು. ಈಗ ಈ ರೈಲು ದೆಹಲಿಯಿಂದ ಹೊರಟು ರಾಜಸ್ಥಾನದಲ್ಲಿ ಅಳ್ವಾರ್ ಅನ್ನು ತಲುಪುವ ಅತ್ಯತ್ತಮ ಸಾರಿಗೆ ವ್ಯವಸ್ಥೆಯಾಗಿದೆ.

ವೀಕ್ಷಣಾ ಸ್ಥಳಗಳು

[ಬದಲಾಯಿಸಿ]
ಸಾರಿಸ್ಕ ಹುಲಿಗಳ ಅಭಯರಣ್ಯದಲ್ಲಿ ಸಾರಿಸ್ಕ ಅರಮನೆಯ ಚಿತ್ರ[]
ಸಿಲಿಸರ್ ಸರೋವರವು, ಅರಾವಳಿ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿರುವ ಅದ್ಭುತವಾದ ಪ್ರವಾಸಿ ಸ್ಥಳವಾಗಿದೆ.
  • ಅಳ್ವಾರ್ ಕೋಟೆ (ಬಾಲಾ ಕಿಲಾ)
  • ಸಾರಿಸ್ಕಾ ಹುಲಿಗಳ ಅಭಯಾರಣ್ಯ
  • ಹಲ್ದಿಯ ಭವನ್ - ಸುಮಾರು 250 ವರ್ಷಗಳಷ್ಟು ಹಳೆಯ ಹವೇಲಿ
  • ಸಿಲಿಸರ್ ಸರೋವರ
  • ಜೈಸಮಂದ ಸರೋವರ
  • ಪಾಂಡುಪಾಲ್ ಹನುಮಾನ್ ದೇವಾಲಯ
  • ನಗರ ಸ್ಥಳ
  • ಸರ್ಕಾರಿ ವಸ್ತು ಸಂಗ್ರಹಾಲಯ
  • ಮೂಸಿ ಮಹಾರಾಣಿ ಛತ್ರಿ (ಚಾಮರ)
  • ಪುರ್ಜನ್ ವಿಹಾರ್
  • ಫತೇ ಜಂಗ್ ನ ಗೋರಿ
  • ನೆಹರು ಉದ್ಯಾನವನ
  • ಹೋಪ್ ಸರ್ಕಸ್
  • ಮೋತಿ ದೋಂಗ್ರಿ ಪಾರ್ಕ್
  • ಭರ್ಥಾರಿ
  • ನಲ್ದೇಶ್ವರ್
  • ನೀಲಕಂಠ
  • ನಾರಾಯಣಿ ಮಾತಾ
  • ಕರಣಿ ಮಾತಾ
  • ಅದಾ ಪಾದ
  • ಅಂಧೇರಿ
  • ತಾಳವೃಕ್ಷ
  • ಸಾಗರ್
  • ಅಜಬ್ ಗಢ್
  • ಭಂಗಢ್
  • ಮಾನಸ ದೇವಿ ಮಂದಿರ
  • ಗರ್ವಾಜಿ
  • ಲಾಲ್ ದಿಗ್ಗಿ
  • ಕೃಷ್ಣ-ಕುಂದ
  • ಸಾರಿಸ್ಕಾ ಅರಮನೆ
  • ಸೂರ್ಯ ನಗರ

ಪ್ರವಾಸಿ ಸ್ಥಳಗಳು

[ಬದಲಾಯಿಸಿ]
  • ವಿಜಯ ಮಂದಿರ ಅರಮನೆ (10 ಕಿ.ಮೀ.)
  • ಜೈಸಮಂದ ಸರೋವರ (6 ಕಿ.ಮೀ.)
  • ಸಿಲಿಸರ್ ಸರೋವರ ಮತ್ತು ಅರಮನೆ (13 ಕಿ.ಮೀ.)
  • ವಿರಾಟನಗರ್ (66 ಕಿ.ಮೀ.)
  • ಸಾರಿಸ್ಕ (42 ಕಿ.ಮೀ.)
  • ಸಾರಿಸ್ಕ ಅರಮನೆ [೧] Archived 2010-09-11 ವೇಬ್ಯಾಕ್ ಮೆಷಿನ್ ನಲ್ಲಿ. (21 ಕಿ.ಮೀ.)
  • ಹೋಪ್ ಸರ್ಕಸ್ (ಹಳೆ ನಗರದ ಮಧ್ಯ ಅರಮನೆ)
  • ಪಾಂಡು ಪೌಲ್ (70 ಕಿ.ಮೀ.)
  • ಅಜಬ್ ಗಢ್ ಮತ್ತು ಭಂಗಢ್ (80 ಕಿ.ಮೀ.)
  • ಪ್ರತಾಪಗಢ್ (55 ಕಿ.ಮೀ.)
  • ಮಾನಸ ಮಾತಾ ದೇವಾಲಯ ಹಮೀರ್ ಪುರ (ಬನ್ಸುರ್) (35 ಕಿ.ಮೀ.)
  • ಗೇಟರ್(ಅಲಿಗೇಟರ್) ಹೋಲ್ [೨] Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. (13 ಕಿ.ಮೀ.)
  • ಗಾರ್ ಹಿ ಮಾಮುರ್ (ಮಾಮುದ್ ಧಮ್ , ಮಾಂಡವ್ ರಿಷೀಸ್ ತಪೋಶತ್ಲಿ, ಕರ್ಮ ಬೈಸ್ ಕರ್ಮಶತಲಿ (ಮಾಮುದ್ ಧಮ್ ಮಹತ್ಯಮ್ Pt. ಪ್ರಭು ಧಯಾಳ್ ಜೋಶಿಯವರು ಬರೆದಿದ್ದಾರೆ))

ಉಲ್ಲೇಖಗಳು

[ಬದಲಾಯಿಸಿ]
  1. ಎಕ್ಸ್ ಟ್ರೀಮ್ ವೆದರ್ ಇವೆಂಟ್ಸ್ ಇಂಡಿಯಾ ಮೆಟ್ರಲಾಜಿಕಲ್ ಡಿಪಾರ್ಟ್ ಮೆಂಟ್
  2. ಭಾರತದ ಇಂಪಿರಿಯಲ್ ಗ್ಯಾಸಿಟಿಯರ್ ನ ಪ್ರಕಾರ v.23, p.419
  3. "ಆರ್ಕೈವ್ ನಕಲು". Archived from the original on 2012-02-05. Retrieved 2010-09-03.
  4. ಫಾಲಿಂಗ್ ರೇನ್ ಜಿನೋಮಿಕ್ಸ್, Inc - ಅಳ್ವಾರ್
  5. GRIndia
  6. [11]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಅಳ್ವಾರ್&oldid=1150182" ಇಂದ ಪಡೆಯಲ್ಪಟ್ಟಿದೆ