ವಿಷಯಕ್ಕೆ ಹೋಗು

ಅವ್ಯಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಮ ಪ್ರಕೃತಿ, ಕ್ರಿಯಾ ಪ್ರಕೃತಿಗಳು ಪ್ರತ್ಯಯಗಳನ್ನು ಕೂಡಿ ತಮ್ಮ ರೂಪವನ್ನು ಬದಲಾಯಿಸುತ್ತವೆ. ಆ ಯಾವ ರೀತಿಯ ರೂಪ ಭೇದಗಳನ್ನು ಪಡೆಯದೆಯೆ ಸಾಮಾನ್ಯವಾಗಿ ಏಕರೂಪವಾಗಿ ವಾಕ್ಯದಲ್ಲಿ ಬಳಕೆಯಾಗುವ ಶಬ್ದಗಳು ಅವ್ಯಯಗಳು. ಪ್ರಾಚೀನ ವೈಯಾಕರಣರು ಅವನ್ನು ಅರ್ಥಾನುಸಾರವಾಗಿಯೂ ಆಧುನಿಕರು ಕಾರ್ಯಾನುಸಾರವಾಗಿ ಗುಂಪು ಮಾಡುತ್ತಾರೆ.[]

ವ್ಯಾಖ್ಯೆ

[ಬದಲಾಯಿಸಿ]
  • ರೂಪಭೇದವಿಲ್ಲದವು ಆಂದರೆ ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪದಲ್ಲಿರುವ ಶಬ್ದಗಳು ‘ಅವ್ಯಯಪದ’ ಗಳೆನಿಸುವವು. ಈ ಅವ್ಯಯ ಪದಗಳು ನಾಮವಿಭಕ್ತಿ – ಕ್ರಿಯಾವಿಭಕ್ತಿ ಪ್ರತ್ಯಯಗಳನ್ನೂ ಮತ್ತು ಲಿಂಗ - ವಚನವನ್ನೂ ಹೊಂದಿರುವುದಿಲ್ಲ. ಉದಾ : ಮತ್ತು, ಹಾಗೆ, ಆದರೆ, ಬಳಿಕ, ಒಡನೆ, ವರೆಗೆ, ಅಹಹ, ಸುಮ್ಮನೆ, ಕೂಡಲೇ, ಇಲ್ಲ ,ಮುಂತಾದವು.
  • ಅವ್ಯಯವೆಂದರೆ ರೂಪಾಂತರವಾಗದಂಥ ಪದ. ಅದಕ್ಕೆ ವಿಭಕ್ತಿ ಮುಂತಾದದ್ದು ಏನೇನೂ ಹತ್ತುವುದಿಲ್ಲ. ಆದರೂ ಕೆಲವು ಅವ್ಯಯ ಪದಗಳಿಗೆ ವಿಕಲ್ಪದಿಂದ ವಿಭಕ್ತಿಗಳು ಹತ್ತುವುವು.

ಅವ್ಯಯ ವಿಧಗಳು

[ಬದಲಾಯಿಸಿ]

ನಾಮಪದಗಳು ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಬೇಧಗವನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳು ಅವ್ಯಯಗಳೆನಿಸುವುವು. ಅವ್ಯಯಗಳಲ್ಲಿ ಹತ್ತು ವಿಧ.

೧. ಸಾಮಾನ್ಯಾವ್ಯಯ

[ಬದಲಾಯಿಸಿ]

ಸಾಮಾನ್ಯ ಅವ್ಯಯ ಎಂದರೆ ಯಾವುದೇ ಕ್ರಿಯೆಯು ನಡೆದ ಕ್ರಿಯೆಯ ಸ್ಥಳ-ಕಾಲ-ರೀತಿಗಳನ್ನು ಹೇಳುವಂಥವು.

  1. ಸ್ಥಳಕ್ಕೆ : ಅಲ್ಲಿ, ಎಲ್ಲಿ, ಎಲ್ಲಿ, ಮೇಲು, ಕೆಳಗು
  2. ಕಾಲಕ್ಕೆ : ಆಗ, ಈಗ, ನಿನ್ನೆ, ಇಂದು, ಅಂದು, ಎಂದು, ಬಳಿಕ, ಬೇಗ,ತರುವಾಯ, ಕೂಡಲೆ, ಒಡನೆ.
  3. ರೀತಿಗೆ : ಚೆನ್ನಾಗಿ, ನೆಟ್ಟಗೆ, ತಟ್ಟನೆ, ಉಮ್ಮನೆ, ಸುಮ್ಮನೆ, ಕಮ್ಮನೆ, ಮೆಲ್ಲನೆ, ಹಾಗೆ.

೨. ಅನುಕರಣಾವ್ಯಯ

[ಬದಲಾಯಿಸಿ]

ಅರ್ಥವಿಲ್ಲದ ಧ್ವನಿವಿಶೇಷಗಳನ್ನು ಕೇಳಿದಂತೆ, ಪುನ: ಉಚ್ಚರಣೆ ಮಾಡಿ ಹೇಳುವ ಶಬ್ದಗಳು. ಉದಾಹರಣೆಗೆ, ದಬದಬ, ಪಟಪಟ,ಕರಕರ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು.ಮಿಣಿಮಿಣಿ ಉಧಾಹರಣೆ = ನೀರು ದಬ ದಬ ಸುರಿಯಿತು

೩.ಭಾವಸೂಚಕಾವ್ಯಯ

[ಬದಲಾಯಿಸಿ]

ಮನೋಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ. ಇವುಗಳನ್ನು ಭಾವಬೋಧಕಾವ್ಯಯ, ನಿಪಾತಾವ್ಯಯ ಎನ್ನವರು. ಉದಾಹರಣೆಗೆ, ಅಯ್ಯೋ ! ಎಲಾ ! ಆಹಾ ! ಭಲೇ ! ಅಕಟಕಟಾ!, ಓಹೋ!.

೪. ಕ್ರಿಯಾರ್ಥಕಾವ್ಯಯ

[ಬದಲಾಯಿಸಿ]

ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲದ್ದೂ ಕ್ರಿಯೆಯ ಅರ್ಥವನ್ನು ಹೇಳುವ ಶಬ್ದಗಳು. ಉದಾಹರಣೆಗೆ, ಉಂಟು, ಬೇಕು, ಬೇಡ, ಅಲ್ಲ, ಹೌದು, ಸಾಕು, ಅಹುದು,.

೫. ಸಂಬಂಧಾರ್ಥ ಸೂಚಕಾವ್ಯಯ

[ಬದಲಾಯಿಸಿ]

ಹಲವು ಪದಗಳ, ಹಲವು ವಾಕ್ಯಗಳ ಸಂಬಂಧವನ್ನು ತೋರಿಸುವ ಶಬ್ದಗಳು. ಉದಾಹರಣೆಗೆ, ಊ, ಉಂ, ಆದ್ದರಿಂದ, ಮತ್ತು, ಅಥವಾ, ರಾಮನು, ಹಾಗಾದರೆ, ಆದುದರಿಂದ, ಸಂಗಡ, ಹೊರತು.

ಅವ್ಯಯದಂತೆ ರೂಪಭೇದವಿಲ್ಲದೆ ಕೃತ್ ಪ್ರತ್ಯಯಗಳು ದಾತುಗಳ ಮುಂದೆ ಸೇರಿದಾಗ. ಐದು ವಿಧ.

  1. ವರ್ತಮಾನ ಕೃದಂತಾವ್ಯಯ - ಧಾತುಗಳ ಮುಂದೆ ಅವ್ಯಯದಂತೆ ವರ್ತಮಾನ ಕಾಲದ ಉತ್ತ/ಉತ್ತಾ ಪ್ರತ್ಯಯಗಳು ಸೇರಿದಾಗ ಆಗುತ್ತದೆ. ಉದಾಹರಣೆಗೆ, ಹೋಗು + ಉತ್ತ., ನಗುತ್ತ, ಹಾಡುತ್ತ, ನೋಡುತ್ತ, ಆಡುತ್ತ.
  2. ಭೂತ ಕೃದಂತಾವ್ಯಯ - ಧಾತುಗಳ ಮುಂದೆ ಅವ್ಯಯದಂತೆ ಭೂತಕಾಲದ ‘ದು’, ‘ಇ’ ಪ್ರತ್ಯಯಗಳು ಸೇರಿದಾಗ ಆಗುತ್ತದೆ. ಉದಾಹರಣೆಗೆ, ನಗು+ದು=ನಕ್ಕು. ಬೇ+ದು=ಬೆಂದು. ನುಂಗು+ಇ=ನುಂಗು. ಕೊಲ್ಲು+ದು=ಕೊಂದು.
  3. ನಿಷೇಧಾರ್ಥಕ ಕೃದಂತಾವ್ಯಯ - ಧಾತುಗಳ ಮುಂದೆ ನಿಷೇಧಾರ್ಥ ತೋರುವ ಅದೆ ಪ್ರತ್ಯಯ ಸೇರಿದಾಗ ಆಗುತ್ತದೆ. ಉದಾಹರಣೆಗೆ,ನಗು+ಅದೆ=ನಗದೆ, ಕೇಳದೆ, ತಿಳಿಯದೆ, ಸೇರದೆ, ತಿನ್ನದೆ, ಬರದೆ, ಹೋಗದೆ.
  4. ಭಾವಲಕ್ಷಕ ಕೃದಂತಾವ್ಯಯ - ಧಾತುಗಳ ಮುಂದೆ ‘ಅಲು/ಎ’ ಪ್ರತ್ಯಯಗಳು ಬಂದಾಗ ಆಗುತ್ತದೆ. ಉದಾಹರಣೆಗೆ, ಹಾಡು+ಅಲು=ಹಾಡಲು, ನೋಡಲು,ಕೇಳಲು, ಬರಲು, ಹೋಗಲು, ಓಡಲು, ಬರೆಯಲು. ಕಣ್ಣು+ಅರ್+ಎ=ಕಣ್ಣಾರೆ. ಕಿವಿಯಾರೆ.
  5. ಪಕ್ಷಾರ್ಥಕ ಕೃದಂತಾವ್ಯಯ - ಧಾತುಗಳ ಮುಂದೆ ‘ಅರೆ’ ಪ್ರತ್ಯಯವು ಸೇರಿದಾಗ ಆಗುತ್ತದೆ. ಉದಾಹರಣೆಗೆ, ಹೋಗು+ದ್+ಅರೆ=ಹೋದರೆ. ಬಂದರೆ, ನಿಂತರೆ, ಕೊಟ್ಟರೆ,ಕೇಳಿದರೆ.

೭.ತದ್ಧಿತಾಂತಾವ್ಯಯ

[ಬದಲಾಯಿಸಿ]

ಷಷ್ಠ್ಯಂತ ನಾಪದಗಳ ಮುಂದೆ ಅಂತೆ, ಹಾಗೆ, ವೋಲ್, ವೊಲು, ವೋಲು, ತನಕ, ವರೆಗೆ, ಮಟ್ಟಿಗೆ, ಓಸುಗ, ಓಸ್ಕರ, ಇಂತ, ಆಗಿ, ಸಲುವಾಗಿ,.

೮. ಅವಧಾರಣಾರ್ಥಕಾವ್ಯಯ

[ಬದಲಾಯಿಸಿ]

ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದು. ಎ, ಏ, = ಅದೆ, ಅದೇ, ನಾನೇ, ರಾಮನೇ, ನೀನೇ, ಅವನೇ, ಅವಳೇ, ಅವರೇ.

೯.ಸಂಬೋಧಕಾವ್ಯಯ

[ಬದಲಾಯಿಸಿ]

ಕರೆಯುವಾಗ ಉಪಯೋಗಿಸುವ ಶಬ್ದಗಳು - ಎಲೋ, ಎಲಾ, ಎಲೇ, ಎಲೌ, ಓ.

೧೦.ಪ್ರಶ್ನಾರ್ಥಕಾವ್ಯಯ

[ಬದಲಾಯಿಸಿ]

ಪ್ರಶ್ನೆಮಾಡುವಾಗ ಉಪಯೋಗಿಸುವ ಅವ್ಯಯಗಳು-ಎ, ಏ, ಓ, ಆ, ಏನು, ಅವನು ಬಂದನೇ.

ಉಲ್ಲೇಖ

[ಬದಲಾಯಿಸಿ]
  1. ಕೇಶಿರಾಜಶಬ್ದಮಣಿದರ್ಪಣ
"https://kn.wikipedia.org/w/index.php?title=ಅವ್ಯಯ&oldid=1278450" ಇಂದ ಪಡೆಯಲ್ಪಟ್ಟಿದೆ