ವಿಷಯಕ್ಕೆ ಹೋಗು

ಆಂಗ್ಲೋ-ಇಂಡಿಯನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Ethnic group ಆಂಗ್ಲೊ-ಇಂಡಿಯನ್ಸ್ ಅಂದರೆ ಇವರು ಮಿಶ್ರಿತ ಭಾರತೀಯ ಮತ್ತು ಬ್ರಿಟಿಶ್ ಪ್ರಾಚೀನತೆಯ ಪೂರ್ವಿಕ ವಂಶಕ್ಕೆ ಸೇರಿದವರಾಗಿದ್ದಾರೆ.[] ಭಾರತದಲ್ಲಿರುವ ಬ್ರಿಟಿಶ್ ರಹವಾಸಿಗಳಿಗೆ "ಯುರೇಸಿಯನ್ಸ್ "ಅಥವಾ ಯುರೊಪಿಯನ್ ಮತ್ತು ಭಾರತೀಯ ಮಿಶ್ರಿತ ವಂಶಾವಳಿಯ ಪೀಳಿಗೆಯವರಾಗಿದ್ದಾರೆ ಎಂಬ ಪದಬಳಕೆ ಇದೆ.(cf. ಜಾರ್ಜ್ ಒರ್ವೆಲ್ ನ ಬರ್ಮೀಸ್ ಡೇಯ್ಸ್ ). ಈ ಆಂಗ್ಲೊ-ಇಂಡಿಯನ್ ಸಮುದಾಯ ಆಧುನಿಕ, ವಿಶಿಷ್ಟ ಗುಣವಿಶೇಷದ್ದಾಗಿದೆ.ಈ ಸಣ್ಣ ಅಲ್ಪಸಂಖ್ಯಾತ ಸಮುದಾಯವು ಭಾರತ ಮೂಲವಾಸಿಯಾಗಿದೆ. ಬ್ರಿಟಿಶ್ ಮತ್ತು ಇಂಡಿಯನ್ ಪೀಳಿಗೆಯ ಮಿಶ್ರಿತ ಪೂರ್ವಜರನ್ನು ಹೊಂದಿದ್ದರೂ ಅವರ ಸ್ಥಳೀಯ ಭಾಷೆಯು ಇಂಗ್ಲೀಷ್ ಆಗಿದೆ. ಈ ಆಂಗ್ಲೊ-ಇಂಡಿಯನ್ ರ ಬ್ರಿಟಿಶ್ ಪೂರ್ವಜರನ್ನು ಪಿತೃತ್ವದ ಆಧಾರದ ಮೇಲೆ ವಂಶಾವಳಿಯ ಮುಂಪೀಳಿಗೆಯನ್ನು ನಿರ್ಧರಿಸಲಾಗುತ್ತದೆ. ಭಾರತ ಸಂವಿಧಾನಕಲಮ್ ವಿಧಿಯ 366(2) ರ ನಿಯಮದ ಪ್ರಕಾರ "ಓರ್ವ ಆಂಗ್ಲೊ ಇಂಡಿಯನ್ ನ ವಂಶಸ್ಥರು ಅಥವಾ ಅವನ ವಂಶಾವಳಿಯ ಪುರುಷರು ಯುರೊಪಿಯನ್ ಮೂಲಕ್ಕೆ ಸೇರಿದವರಾಗಿರುತ್ತಾರೆ.ಆತ ನೆಲೆಸಿರುವ ಭಾರತದ ಪ್ರಾದೇಶಿಕ ಗಡಿಯೊಳಗೆ ಅವರು ವಾಸಿಸಿರುತ್ತಾರೆ.ಅಥವಾ ಇದೇ ಪ್ರದೇಶದಲ್ಲಿ ಜನಸಿದವರಾಗಿದ್ದರೆ,ಅಥವಾ ಅವರ ತಂದೆ,ತಾಯಿ ಪೋಷಕರು ಇಲ್ಲಿಗೆ ಸೇರಿದವರಾಗಿರಬೇಕು.ಆದರೆ ಅವರು ತಾತ್ಕಾಲಿಕವಾಗಿ ಇಲ್ಲಿ ನೆಲೆವಾಸಿಗಳಾಗಿರಬಾರದು.[][] ಈ ವ್ಯಾಖ್ಯಾನವು "ಆಂಗ್ಲೊ-ಇಂಡಿಯನ್"ರನ್ನು ಸಂಪೂರ್ಣವಾಗಿ ಯುರೊಪಿಯನ್ (ಪುರುಷ)ಪೂರ್ವಜರಿಗೆ ಸೇರಿದವರಾಗಿರುತ್ತಾರೆ ಎಂದು ವಿವರಿಸುತ್ತದೆ ಈ ವ್ಯಾಖ್ಯಾನದಲ್ಲಿ ಹಳೆಯ ಪೊರ್ಚ್ ಗೀಸ್ ಕಾಲೊನಿಗಳಿಗೆ ಬಂದ ಭಾರತೀಯರನ್ನೂ ಸೇರಿಸಲಾಗಿದೆ.ಎರಡು ಪಂಗಡಗಳಾಗಿರುವ ಕೊರಮಂಡೆಲ್ ಮತ್ತು ಮಲಬಾರ್,ಕರಾವಳಿಯ ಇವರು ಈಸ್ಟ್ ಇಂಡಿಯಾ ಕಂಪನಿ ಬೆಂಬಲಿಗರಾಗಿ ಸೇರಿದಾಗ ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಕೊಂಡೊಯ್ದರು.[] ಅದೇ ರೀತಿಯಾಗಿ ಈ ವ್ಯಾಖ್ಯಾನವು ಮೆಸ್ಟಿಕೊಸ್ (ಮಿಶ್ರಿತ ಪೊರ್ಚ್ ಗೀಸ್ ಮತ್ತು ಭಾರತೀಯ) ಅಂದರೆ ಗೋವಾ ದ ಇಂಡಿಯನ್ಸ,ಅದಲ್ಲದೇ ಇಂಡೊ-ಫ್ರೆಂಚ್, ಮತ್ತು ಇಂಡೊ-ಡಚ್ ವಂಶಾವಳಿಯ ಪೂರ್ವಿಕ ಜನರನ್ನೂ ಒಳಗೊಂಡಿದೆ.[] ಈ ಆಂಗ್ಲೊ-ಇಂಡಿಯನ್ಸ್ ಭಾರತದ ಸ್ವಾತಂತ್ರ್ಯಕ್ಕಿಂತ ಮೊದಲು ಸಣ್ಣ ಒಂದು ಅಲ್ಪಸಂಖ್ಯಾತ ಸಮೂಹವಾಗಿ ಭಾರತದಲ್ಲಿತ್ತು.ಆದರೆ ಅವರಿಂದು ಭಾರತದಲ್ಲಿಗಿಂತ ಹೆಚ್ಚು ಹೊರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಭಾರತದಲ್ಲಿನ ಅವರ ಸಂಖ್ಯೆಯು ಕಡಿಮೆಯಾಗುತ್ತ ನಡೆದಿದ್ದು, ಬಹಳಷ್ಟು ಜನರು ಯುನೈಟೈಡ್ ಕಿಂಗ್ಡಮ್ ,ಆಸ್ಟ್ರೇಲಿಯಾ,ನ್ಯುಜಿಲ್ಯಾಂಡ್ ಮತ್ತು ಕೆನಡಾ ಅಲ್ಲದೇ ಕಡಿಮೆ ಪ್ರಮಾಣದಲ್ಲಿ ಯುನೈಟೆಡ್ ಸ್ಟೇಟ್ಸ ಗೆ ವಲಸೆ ಹೋಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಪರಿಭಾಷೆ

[ಬದಲಾಯಿಸಿ]

ಆಂಗ್ಲೊ-ಇಂಡಿಯನ್ ಎಂಬ ಪದವನ್ನು ಬ್ರಿಟನ್ನಿನಲ್ಲಿಯೂ ಕೂಡಾ ಕೊಲೊನಿಯಯಲ್ ಯುಗದಲ್ಲಿ ಬಳಸಲಾಗುತಿತ್ತು,ಉದಾಹರಣೆಗೆ (ರುದ್ಯಾರ್ಡ್ ಕ್ಲಿಪ್ಲಿಂಗ್ ಅಥವಾ ಬೇಟೆಗಾರ-ನಿಸರ್ಗವಾದಿ ಜಿಮ್ ಕಾರ್ಬೆಟ್ )ಇಂತವರನ್ನೂ ಸೂಚಿಸಲೂ ಬಳಸಲಾಗುತಿತ್ತು.ಯಾಕೆಂದರೆ ಇವರು ಬ್ರಿಟಿಶ್ ಮೂಲದವರಲ್ಲದೇ ಭಾರತದಲ್ಲಿ ಜನಸಿದ್ದರು.ಅದಲ್ಲದೇ ಇವರ ಪೋಷಕರು ಕಾಲೊನಿಯಲ್ ಆಡಳಿತ ಅಥವಾ ಸೈನ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಹೀಗೆ "ಆಂಗ್ಲೊ-ಇಂಡಿಯನ್ " ಪದವು "ಡೊಮಿಸಿಲ್ಡ್ ಬ್ರಿಟಿಶ್ "ಗೆ ಸಮಾನಾಂತರದಲ್ಲಿ ಬಳಕೆಯಾಗುತ್ತದೆ.[] ಈ ಶಬ್ದವನ್ನು ಸಮಪ್ರಮಾಣದ ಧ್ವನಿ ಹೊರಡಿಸುವ "ಇಂಡೊ ಆಂಗ್ಲಿಯನ್ ಗೆ ಹೋಲಿಕೆ ಮಾಡಿ ಗೊಂದಲಕ್ಕೀಡಾಗಬಾರದು.ಈ ಪದವನ್ನು ಭಾರತೀಯರ ಇಂಗ್ಲಿಷ್ ಸಾಹಿತ್ಯದ ಕೊಡುಗೆಯಲ್ಲಿ ವಿಶೇಷಣದಂತೆ ಬಳಸಲಾಗುತ್ತದೆ.[]

ಇತಿಹಾಸ

[ಬದಲಾಯಿಸಿ]

ಈ ಪದದ ಮೊದಲ ಬಳಕೆಯು ಭಾರತದಲ್ಲಿ ವಾಸಿಸುವ ಎಲ್ಲಾ ಬ್ರಿಟಿಶ್ ಜನರನ್ನು ಸಂಭೋದಿಸಲು ಬಳಸಲಾಗುತ್ತಿತ್ತು. ಇದೇ ವ್ಯಾಖ್ಯಾನವನ್ನು ಭಾರತ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಒಂದು ಜನಪ್ರಿಯವಾದ ಈ ಪದದ ಬಳಕೆಯೆಂದರೆ ಬ್ರಿಟಿಶ್ ಪುರುಷರ ಮೂಲಕ ಭಾರತೀಯ ಸ್ತ್ರೀಯಗೆ ಜನಸಿದ ಪೀಳಿಗೆಯನ್ನು ಮಿಶ್ರಿತ ರಕ್ತದ ಆಂಗ್ಲೊ-ಇಂಡಿಯನ್ ಜನರು ಎಂದು ಕರೆಯಲಾಗುತ್ತದೆ.[] ಬ್ರಿಟಿಶ್ ಮತ್ತು ಭಾರತದ ರಕ್ತ ಮಿಶ್ರಣದಿಂದ ಜನಿಸಿದ ಪೀಳಿಗೆಯನ್ನು ಈ ಹಿಂದೆ 'ಯುರೇಸಿಯನ್ಸ್ ' ಎನ್ನಲಾಗುತಿತ್ತು.ಆದರೆ ಸಾಮಾನ್ಯವಾಗಿ ಅವರನ್ನೀಗ 'ಆಂಗ್ಲೊ-ಇಂಡಿಯನ್ಸ್ ' ಎಂದೇ ಉಲ್ಲೇಖಿಸಲಾಗುತ್ತದೆ.[] ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯ ಭಾರತದ ಆಡಳಿತ ಅವಧಿಯಲ್ಲಿ ಅಂದರೆ 18 ನೆಯ ಮತ್ತು 19 ನೆಯ ಶತಮಾನದ ಆರಂಭದಲ್ಲಿ ಬ್ರಿಟಿಶ್ ರು ಇಲ್ಲಿಗೆ ಬಂದರು.ಆಗ ಬ್ರಿಟಿಶ್ ಅಧಿಕಾರಿಗಳು ಮತ್ತು ಸೈನ್ಯದಲ್ಲಿರುವವರು ಭಾರತೀಯ ಸ್ತ್ರೀಯರನ್ನು ವಿವಾಹವಾಗಿ ಪತ್ನಿಯರನ್ನಾಗಿ ಸ್ವೀಕರಿಸುವುದು ಸಾಮಾನ್ಯವಾಗಿತ್ತು.[][೧೦] ಆಗ 19 ನೆಯ ಶತಮಾನದ ಮಧ್ಯ ಭಾಗದಲ್ಲಿ ಸುಮಾರು 40,000 ಬ್ರಿಟಿಶ್ ಸೈನಿಕರಿದ್ದರು,ಆದರೆ 2,000 ಕ್ಕಿಂತ ಕಡಿಮೆ ಬ್ರಿಟಿಶ್ ಅಧಿಕಾರಿಗಳು ಭಾರತದಲ್ಲಿದ್ದರು.[೧೧] ಆಗ 19 ನೆಯ ಶತಮಾನದ ಮಧ್ಯ ಭಾಗದಲ್ಲಿ ದೊಡ್ಡ ಪ್ರಮಾಣದ ಬ್ರಿಟಿಶ್ ಕುಟುಂಬದ ಮಹಿಳೆಯರು ಬ್ರಿಟಿಶ್ ಭಾರತಕ್ಕೆ ಬರಲಾರಂಭಿಸಿದರು.ಹೀಗಾಗಿ ಭಾರತದಲ್ಲಿದ್ದ ಬ್ರಿಟಿಶ್ ರ ಅಂತರ್ ಜಾತೀಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು.ಅದಲ್ಲದೇ ಭಾರತದ 1857 ರ ಸ್ವತಂತ್ರ ಸಿಪಾಯಿ ದಂಗೆ [೧೨]ಕೂಡ ಇದಕ್ಕೆ ಕಾರಣವಾಯಿತು.ಅದೇ ಸಂದರ್ಭದಲ್ಲಿ ವರ್ಣಸಂಕರದ-ವಿರೋಧಿ ಕಾನೂನುಗಳು ಜಾರಿಯಾದವು.[೧೩][೧೪] ಹೀಗಾಗಿ ಬ್ರಿಟಿಶ್ ಮತ್ತು ಭಾರತದ ಜನಸಂಖ್ಯೆಯು, ಭಾರತದಲ್ಲಿರುವ ಯುರೇಸಿಯನ್ ರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ನಂತರದ ಪೀಳಿಗೆಯು ಆಂಗ್ಲೊ-ಇಂಡಿಯನ್ಸ್ ಅವರ ಸಮುದಾಯದೊಳಗಿನ ವಿವಾಹಗಳಿಂದ ತಮ್ಮ ಸಮುದಾಯ ಹೆಚ್ಚಿಸಿ ತಮ್ಮದೇ ಸಂಸ್ಕೃತಿಯೊಂದಿಗೆ ಬೆಳವಣಿಗೆಗೆ ಕಾರಣವಾಯಿತು. ಹೀಗೆ ಆಂಗ್ಲೊ-ಇಂಡಿಯನ್ ಪಾಕ ಪದ್ದತಿ,ಉಡುಪು,ಮಾತು ಮತ್ತು ಧಾರ್ಮಿಕ ಪದ್ದತಿಗಳು ಸ್ಥಳೀಯ ಜನರೊಂದಿಗೆ ಮತ್ತಷ್ಟು ವಿಭಜನೆ ಕಂಡವು. ಅವರು ತಮ್ಮದೇ ಆದ ಶಾಲಾ ಪದ್ದತಿಯನ್ನು ಇಂಗ್ಲಿಷ್ ಭಾಷೆ ಮೇಲೆ ಒತ್ತು ನೀಡುವ ಮೂಲಕ ಆರಂಭಿಸಿದರು.ಅವರು ಸಾಮಾಜಿಕ ಕ್ಲಬ್ ಗಳು ಮತ್ತು ಸಂಸ್ಥೆಗಳನ್ನು ಆರಂಭಿಸಿ ತಮ್ಮದೇ ಆದ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳ ಆಚರಣೆಗೆ ಮುಂದಾದರು.[] ಬರಬರುತ್ತಾ ಆಂಗ್ಲೊ-ಇಂಡಿಯನ್ಸ್ ರನ್ನು ವಿಶೇಷ ನಿಯಮದಡಿ ಕೆಲಸಕ್ಕೆ ನೇಮಕ ಮಾಡಲಾಯಿತು.ಸೀಮಾ ಸುಂಕ ಮತ್ತು ಅಬ್ಕಾರಿ,ಅಂಚೆ ಟೆಲಿಗ್ರಾಫ್ಸ್,ಅರಣ್ಯ ಇಲಾಖೆ,ರೈಲ್ವೆಗಳು ಮತ್ತು ವೃತ್ತಿಪರ ಶಿಕ್ಷಕರನ್ನಾಗಿ ನೇಮಿಸುವಲ್ಲಿ ಆದ್ಯತೆ ನೀಡಲಾಯಿತು.ಅವರನ್ನೂ ಇನ್ನಿತರ ಇಲಾಖೆಗಳಲ್ಲಿಯೂ ನೇಮಕ ಮಾಡಲಾಯಿತು. ಇದು ಹಲವಾರು ಆಂಗ್ಲೊ-ಇಂಡಿಯನ್ಸ್ ರಲ್ಲಿ ತಮ್ಮ ಸಮುದಾಯದ ಬಗ್ಗೆ ಇನ್ನಷ್ಟು ಆಸ್ಥೆ ಹುಟ್ಟುವಂತೆ ಮಾಡಿತು. ಅವರ ಇಂಗ್ಲಿಷ್ ಭಾಷೆ ಶಾಲಾ ಪದ್ದತಿ,ಅವರ ಆಂಗ್ಲ ಆಧಾರಿತ ಸಂಸ್ಕೃತಿ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿನ ನಂಬಿಕೆಗಳು ಅವರನ್ನು ಇನ್ನಷ್ಟು ಬಂಧಿಸಿದವು.[೧೫] ಮೂಲದಲ್ಲಿ ಅವರು ರೆಗ್ಯುಲೇಶನ್ VIII ರ 1813 ರಲ್ಲಿನ ನಿಯಂತ್ರಣ ಕಾಯ್ದೆಯಡಿ ಬ್ರಿಟಿಶ್ ಕಾನೂನು ಪದ್ದತಿಯಿಂದ ಹೊರಗಿಡಲ್ಪಟ್ಟಿದ್ದಾರೆ.ಬೆಂಗಾಲ್ ನಲ್ಲಿ ಅವರು ಮೊಹಮ್ಮೆದನ್ ಕಾನೂನಡಿಯ ಪ್ರಜೆಗಳಾಗಿದ್ದು,ಇದು ಕೊಲ್ಕತಾದ ಹೊರಭಾಗಕ್ಕೆ ಅನ್ವಯವಾಗುತ್ತದೆ.ಹೀಗಾಗಿ ಅವರು ಯಾವುದೇ ಜಾತಿ ಅಥವಾ ವರ್ಗದ ಶ್ರೇಣಿಗೆ ಸೇರದೇ ತಮ್ಮನ್ನು ತಾವೇ ವಿಭಜಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆಗ 1821 ರಲ್ಲಿ "ವೃತ್ತಿಪರ ಸುಧಾರಕ" ರೊಬ್ಬರು "ಇಂಡೊ-ಬ್ರಿಟನ್ ರ ಪರಿಸ್ಥಿತಿಗಳ ಸುಧಾರಣೆಗೆ ಭಿತ್ತಿ ಚಿತ್ರ ಮತ್ತು ಮಾಹಿತಿ ಕರಪತ್ರಗಳನ್ನು ಹಂಚಿ ಇದಕ್ಕೆ ಸಂಭಂಧಿಸಿದ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸಿದರು.ವ್ಯಾಪಾರ ವಲಯದಲ್ಲಿರಲು ಯುವ ಯುರೇಶಿಯನ್ಸ್ ರ ಮನಸ್ಸಿನಲ್ಲಿನ ಪೂರ್ವಾಗ್ರಹಪೀಡಿತ ವಿಚಾರಗಳನ್ನು ತೊಡೆದು ಹಾಕಲು ಈ ಪ್ರಯತ್ನ ಮಾಡಲಾಯಿತು. ಇದೇ ಕರಪತ್ರದ ಹಿಂದೆಯೇ ಇನ್ನೊಂದು"ಇಂಡೊ-ಬ್ರಿಟನ್ಸ್ ಅವರ ಪರವಾಗಿ ಒಂದು ಮನವಿ"ಎಂಬ ಮತ್ತೊಂದು ಮಾಹಿತಿಯನ್ನೂ ಬಹಿರಂಗಗೊಳಿಸಲಾಯಿತು. ಕೊಲ್ಕತ್ತಾದಲ್ಲಿದ್ದ ಪ್ರಮುಖ ಯುರೇಶಿಯನ್ಸ್ "ಈಸ್ಟ್ ಇಂಡಿಯನ್ ಕಮೀಟಿ"ಯೊಂದನ್ನು ರಚಿಸಿ ತಮ್ಮ ಪರಿಸ್ಥಿತಿ-ಕುಂದುಕೊರತೆಗಳ ಬಗ್ಗೆ ಕೊಂಚ ಗಮನಹರಿಸಬೇಕೆಂಬ ಮನವಿಯನ್ನು ಬ್ರಿಟಿಶ್ ಪಾರ್ಲಿಮೆಂಟ್ ಗೆ ಕಳಿಸಿದರು. ಯುರೇಶಿಯನ್ ಜನಾಂಗದ ಕಾರಣಗಳಿಗಾಗಿ ಶ್ರಮಿಸಿ, ಮೊದಲ ನೊಬೆಲ್ ಬಹುಮಾನ ಪಡೆದ ಜಾನ್ ವಿಲಿಯಮ್ ರಿಕೆಟ್ಸ್ ಸ್ವಯಂಸ್ಪೂರ್ತಿಯಿಂದ ಇಂಗ್ಲೆಂಡ್ ಗೆ ತೆರಳಿದರು. ಅವರ ಆ ಧ್ಯೇಯೋದ್ದೇಶ ಯಶಸ್ವಿಯಾತಲ್ಲದೇ ಅವರು ಮದ್ರಾಸ್ ಮೂಲಕ ಭಾರತಕ್ಕೆ ಬರುವಾಗ ಆ ಪ್ರೆಸಿಡೆನ್ಸಿ ಜನರಿಂದ ಉತ್ತಮ ಸ್ವಾಗತ ಪಡೆದರು.ನಂತರ ಕೊಲ್ಕತ್ತಾದಲ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು.ಕೊಲ್ಕಾತ್ತ ಟೌನ್ ಹಾಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ವರದಿಯನ್ನು ಬಹಿರಂಗಪಡಿಸಲಾಯಿತು. ಏಪ್ರಿಲ್ 1834 ರಲ್ಲಿ ಸಂಸದೀಯ ಕಾನೂನೊಂದನ್ನು ಆಗಷ್ಟ್ 1833 ರ ನಿಯಮಾವಳಿಯಂತೆ ಭಾರತ ಸರ್ಕಾರವು ಆಂಗ್ಲೊ-ಇಂಡಿಯನ್ಸ್ ರಿಗೆ ಸರ್ಕಾರಿ ಕೆಲಸಗಳನ್ನು ನೀಡಲೇ ಬೇಕಾದ ಬಗ್ಗೆ ಬಲವಂತದ ಒತ್ತಾಯ ಅದರಲ್ಲಿತ್ತು.[೧೫] ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಹಲವಾರು ಆಂಗ್ಲೊ-ಇಂಡಿಯನ್ಸ್ ತಮ್ಮನ್ನು ಬ್ರಿಟಿಶ್ ಆಡಳಿತದೊಂದಿಗೆ ಗುರುತಿಸಿಕೊಂಡಿದ್ದರು.(ಅಥವಾ ಹಾಗೆ ಅವರು ಕಲ್ಪಿಸಿಕೊಂಡಿರಲ್ಲಿಕ್ಕೂ ಸಾಕು).ಇದರಿಂದ ಬಹುತೇಕ ಭಾರತೀಯರೊಂದಿಗೆ ಅಪನಂಬಿಕೆ ಮತ್ತು ಹಗೆತನಕ್ಕೆ ಒಳಗಾಗಬೇಕಾಯಿತು.[ಸೂಕ್ತ ಉಲ್ಲೇಖನ ಬೇಕು] ಸ್ವಾತಂತ್ರ್ಯ ಸಂದರ್ಭದಲ್ಲಿ ಅವರ ಪರಿಸ್ಥಿತಿ ತೊಂದರೆಯಲ್ಲಿ ಸಿಲುಕಿತ್ತು. ಅವರು ಬ್ರಿಟಿಶ್ "ಸದನ"ಕ್ಕೆ ತಮ್ಮ ನಿಷ್ಟೆ ತೋರಿದ್ದರೂ ಅವರು ಅಲ್ಲಿ ಸಾಮಾಜಿಕವಾಗಿ ನಗಣ್ಯರಾಗಿದ್ದರು. ಮಾಸ್ಟರ್ಸ್ ಎಂಬ ಆಂಗ್ಲೊ-ಇಂಡಿಯನ್ ಬರೆದ (ಭೌವನಿ ಜಂಕ್ಷನ್ )ಎಂಬ ಕಾದಂಬರಿಯು ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಆಂಗ್ಲೊ-ಇಂಡಿಯನ್ ರ ವಿದ್ಯಮಾನಗಳ ಕುರಿತು ವಿವರಿಸಿದ್ದಾರೆ. ಭಾರತದಲ್ಲಿ ಅವರು ಅಭದ್ರತೆಯಿಂದ ಬಳಲಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದೇ ಸರ್ಕಾರದ ಪ್ರಮುಖ ವಿಚಾರಗಳಲ್ಲಿ ಅವರಿಗೆ ಆದ್ಯತೆ ಸವಾಲಾಗಿತ್ತು. ಬಹಳಷ್ಟು ಆಂಗ್ಲೊ-ಇಂಡಿಯನ್ಸ್ 1947 ರಲ್ಲಿ ಹೊಸ ಬದುಕಿನ ಹುಡುಕಾಟಕ್ಕಾಗಿ ಹೊರಗಡೆ ಹೋದರು.ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್ )ಅಥವಾ ಇನ್ನೆಲ್ಲಾದರೂ ಕಾಮನ್ ವೆಲ್ತ್ ಆಫ್ ನೇಶನ್ಸ್ ನ ಆಸ್ಟ್ರೇಲಿಯಾ ಅಥವಾ ಕೆನಡಾಗಳಲ್ಲಿ ಬದುಕು ಅರಸಿ ಆಶಾಭಾವದೊಂದಿಗೆ ಹೊರಟರು. ದೊಡ್ಡ ಪ್ರಮಾಣದ ವಲಸೆಯು 1950 ಮತ್ತು 1960 ರ ವರೆಗೆ ಮುಂದುವರೆಯಿತು.ಬಹುತೇಕರು 1990 ರ ಹೊತ್ತಿಗೆ ಸಂಪೂರ್ಣ ಎನ್ನುವ ಮಟ್ಟಿಗೆ ವಲಸೆ ಹೋದರು,ಉಳಿದ ಆಂಗ್ಲೊ-ಇಂಡಿಯನ್ಸ್ ತೊರೆಯುವ ಹಾದಿಯಲ್ಲಿದ್ದಾರೆ.[೧೬] ಪಾರ್ಸಿ ಸಮುದಾಯದಂತೆ ಆಂಗ್ಲೊ-ಇಂಡಿಯನ್ಸ್ ರು ಸಹ ನಗರವಾಸಿಗಳೇ ಆಗಿದ್ದಾರೆ. ಪಾರ್ಸಿಗಳಂತೆ ಇವರಲ್ಲಿನ ಉನ್ನತ ಶಿಕ್ಷಣ ಪಡೆದ ಹಣಕಾಸಿನಿಂದ ಭದ್ರತೆ ಪಡೆದ ಆಂಗ್ಲೊ-ಇಂಡಿಯನ್ಸ್ ರು ಕಾಮನ್ ವೆಲ್ತ್ ರಾಷ್ಟ್ರಗಳತ್ತ ಮುಖ ಮಾಡಿದರು.[] ಆದರೆ 21 ನೆಯ ಶತಮಾನದ ಆಂಗ್ಲೊ-ಇಂಡಿಯನ್ಸ್ ರ ಆಚರಣೆಯಲ್ಲಿ ಮತ್ತೆ ಪುನಃಶ್ಚೇತನ ಬಂದಿದೆ.ಇಂಟರ್ ನ್ಯಾಶನಲ್ ಆಂಗ್ಲೊ-ಇಂಡಿಯನ್ಸ್ ರಿಯುನಿಯನ್ಸ್ ರಚನೆ ಮತ್ತು ಆಂಗ್ಲೊ-ಇಂಡಿಯನ್ಸ್ ಬಗ್ಗೆ ಪುಸ್ತಕಗಳ ಪ್ರಕಟಿಸಲಾಯಿತು. ಒಟ್ಟಾರೆ ಈಗಾಗಲೇ ಏಳು ಮರುಒಕ್ಕೂಟಗಳು,ಹೊಂದಾಣಿಕೆಗಳ ಸಭೆಗಳನ್ನು ನಡೆಸಲಾಗಿದೆ.ಇತ್ತೀಚಿನದ್ದೆಂದರೆ ಆಗಷ್ಟ್ 2007 ರಲ್ಲಿನದು ಎಂದು ಹೇಳಬಹುದು. ಆಂಗ್ಲೊ-ಇಂಡಿಯನ್ಸ್ ಬಗ್ಗೆ ಇತ್ತೀಚಿಗೆ ಪ್ರಕಟಗೊಂಡ ಪುಸ್ತಕಗಳು;ಆಂಗ್ಲೊ-ಇಂಡಿಯನ್ಸ್-ವ್ಯಾನಿಶಿಂಗ್ ರೆಮ್ನಂಟ್ಸ್ ಆಫ್ ಎ ಬೈಗೊನ್ ಎರಾ [೧೭] ಪ್ರಕಟನೆ(2002), ಹೌಂಟಿಂಗ್ ಇಂಡಿಯಾ [೧೮] ಪ್ರಕಟನೆ(2003), ವಾಯ್ಸಸ್ ಆನ್ ದಿ ವರಾಂಡಾ [೧೯] ಪ್ರಕಟನೆ(2004),ದಿ ವೇ ಉಯಿ ವೇರ್Way We Were - ಆಂಗ್ಲೊ-ಇಂಡಿಯನ್ಸ್ ಕ್ರೊನಿಕಲ್ಸ್ [೨೦] ಪ್ರಕಟನೆ(2006) ಮತ್ತು ದಿ ವೇ ಉಯಿ ಆರ್- ಆನ್ ಅಂಗ್ಲೊ-ಇಂಡಿಯನ್ ಮೊಸಾಯಿಕ್ [೨೧] ಪ್ರಕಟನೆ(2008).

ಬ್ರಿಟನ್

[ಬದಲಾಯಿಸಿ]

ಇದಕ್ಕೆ ತದ್ವಿರುದ್ದವಾಗಿ ಆಗ '(ಯುರೇಶಿಯನ್ಸ್ )'ಎನ್ನಲಾಗುತಿತ್ತು.ಇವರು ಬ್ರಿಟಿಶ್ ಭಾರತದಲ್ಲಿ ಜನನ ಪಡೆದು,ತಮ್ಮ ವಂಶಾವಳಿಯನ್ನು ಬ್ರಿಟಿಶ್ ಪೋಷಕರಿಗೆ ಸಂಭಂಧಿಸುತ್ತಾರೆ.ಹಾಗೆಯೇ ಭಾರತದ ಪೂರ್ವಜರ ಸಂಭಂಧಿಕರಿದ್ದು ಇವರು ಬ್ರಿಟನ್ ನಲ್ಲಿ ಜನಿಸಿದವರಾಗಿದ್ದಾರೆ,ಇಂತವರು ಭಾರತ ಮೂಲದ ತಂದೆ ತಾಯಿಗಳಾದರೆ ಬ್ರಿಟಿಶ್ ಮೂಲದ ಅಜ್ಜಿ-ತಾತ ಸಂಭಂಧ ಹೊಂದಿರುತ್ತಾರೆ. ಬ್ರಿಟನ್ ನಲ್ಲಿ 17 ನೆಯ ಶತಮಾನದಿಂದ ಅಂತರ್ ಜನಾಂಗೀಯ ವಿವಾಹ ಸಂಭಂಧಗಳು ಸಾಮಾನ್ಯವಾಗಿದ್ದವು.ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯು ಸಾವಿರಾರು ಭಾರತೀಯ ಪ್ರತಿಭಾವಂತರನ್ನು,ದೋಣಿಗಾರರ ನ್ನು ಮತ್ತು ಕೆಲಸಗಾರರನ್ನು (ಬಹುತೇಕ ಬೆಂಗಾಳಿ ಮತ್ತು /ಅಥವಾ ಮುಸ್ಲಿಮ್ ರನ್ನು ಬ್ರಿಟನ್ ಗೆ ಕರೆತಂದಿತು.ಇವರೆಲ್ಲಾ ಅಲ್ಲಿನವರನ್ನು ವಿವಾಹವಾಗಿ ಅಲ್ಲಿನ ಸ್ಥಳೀಯ ಬಿಳಿ ಬ್ರಿಟನ್ ಮಹಿಳೆಯರು ಮತ್ತು ಹುಡುಗಿಯರೊಂದಿಗೆ ಸಹಜೀವನ ನಡೆಸಲು ಆರಂಭಿಸಿದರು.ಆಗ ಬ್ರಿಟನ್ ನಲ್ಲಿ ಭಾರತೀಯ ಮಹಿಳೆಯರ ಕೊರತೆಯೇ ಇದಕ್ಕೆ ಕಾರಣವಾಯಿತು. ನಂತರ ಇದು ವಿವಾದಾತ್ಮಕವಾತ್ಮಕ ವಿಷಯವಾಯಿತು.ಲಂಡನ್ ಟಾವರ್ ಹ್ಯಾಮ್ಲೆಟ್ಸ್ ಪ್ರದೇಶದ ಮ್ಯಾಜಿಸ್ಟ್ರೇಟ್ 1817 ರಲ್ಲಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳೀಯ ಇಂಗ್ಲಿಷ್ ಮಹಿಳೆಯರು ಹೇಗೆ ವಿದೇಶಿಯರಾದ ಭಾರತೀಯ ದೋಣಿಗಾರ ರು ಮತ್ತು ಸಮುದ್ರ ಕೆಲಸಗಾರರು ಇವರೊಂದಿಗೆ ಸಹಜೀವನ ನಡೆಸುವುದನ್ನು ಅವರು ಖಂಡಿಸಿದರು. ಆದಾಗ್ಯೂ 'ಮಿಶ್ರಣ'ದ ವಿವಾಹಗಳಿಗೆ ಬ್ರಿಟನ್ ನಲ್ಲಿ ಭಾರತದಲ್ಲಿರುವಂತೆ ಕಾನೂನು ಕಟ್ಟಳೆಗಳಿಲ್ಲ.[೨೨][೨೩] [೨೪] ದಕ್ಷಿಣ ಏಶಿಯಾದ ದೋಣಿಗಾರ ತಂದೆಯರು ಮತ್ತು ಬಿಳಿ ತಾಯಿಂದರ ಕುಟುಂಬಗಳು ಅಂತರಜನಾಂಗೀಯ ಸಮುದಾಯವಾಗಿ ಬ್ರಿಟನ್ ನ ಕರಾವಳಿ ಪ್ರದೇಶಗಳಲ್ಲಿ ನೆಲೆಯಾಗಿವೆ.[೨೫] ಇದು "ಮಿಶ್ರ ಜನಾಂಗ"ದ ಮಕ್ಕಳ ಸಂಖ್ಯೆಯನ್ನು ಬ್ರಿಟನ್ ನಲ್ಲಿ ಹೆಚ್ಚಿಸಿತು.ಸರ್ಕಾರದ ಸರಳ ವ್ಯಾಖ್ಯಾನ ಸುಲಭವಾಗಿ ಅವರನ್ನು ಬ್ರಿಟಿಶ್ ವಿರುದ್ದ ಭಾರತೀಯ,ಆಡಳಿತ ವಿರುದ್ದ ಆಡಳಿತಕ್ಕೊಳಪಟ್ಟವರು" ಎಂಬ ಅರ್ಥ ವಿವರಣೆ, ಈ ವರ್ಣಸಂಕರದವರನ್ನು ಗುರುತಿಸಲು ಸಮರ್ಪಕವಾಗಲಿಲ್ಲ.[೧೧] ಬ್ರಿಟನ್ ನಲ್ಲಿ ಈ ಜನಾಂಗೀಯ ಮಹಿಳೆಯರ ಬಣ್ಣದ ವರ್ಣ ಸಂಕರವು "ಅರ್ಧ-ಜಾತಿ ಭಾರತೀಯ"ಮಕ್ಕಳ ಜನನಕ್ಕೆ ಕಾರಣವಾಯಿತು.ಏಕೆಂದರೆ ಈ ಹೆಣ್ಣು ಮಕ್ಕಳೆಲ್ಲಾ ಬ್ರಿಟಿಶ್ ಮಹಿಳೆಯರು ಮತ್ತು ಭಾರತೀಯ ಪುರುಷರಿಗೆ ಜನಿಸಿದ್ದರಿಂದ ಇವರ ಸಂಖ್ಯೆ ಮಿತಿ ಮೀರಿತ್ತು.[೨೬] ಆಗ 19 ನೆಯ ಶತಮಾನದ-ಮಧ್ಯ ಭಾಗದಲ್ಲಿ ಸುಮಾರು 40,000 ಕ್ಕಿಂತಲೂ ಅಧಿಕ ಭಾರತೀಯ ಸಮುದ್ರ ಕೆಲಸಗಾರರು,ರಾಜತಾಂತ್ರಿಕರು,ಪ್ರತಿಭಾವಂತರು,ಸೈನಿಕರು,ಕಚೇರಿ ಸಿಬ್ಬಂದಿ,ಪ್ರವಾಸಿಗಳು,ವಹಿವಾಟುದಾರರು ಮತ್ತು ವಿದ್ಯಾರ್ಥಿಗಳು ಬ್ರಿಟನ್ ಗೆ ಬಂದವರಾಗಿದ್ದರು.[೧೦] ಆನಂತರ 19 ನೆಯ ಶತಮಾನದ ಅಂತ್ಯ ಮತ್ತು 20 ನೆಯ ಶತಮಾನದ ಆರಂಭದಲ್ಲಿ ಸುಮಾರು 70,000 ಭಾರತೀಯರು ಬ್ರಿಟನ್ ನಲ್ಲಿದ್ದರು.ಅದರಲ್ಲಿ,[೨೭] 51,616 ರಷ್ಟು ದೋಣಿಗಾರ ಸಮುದ್ರ ಕೆಲಸಗಾರರಿದ್ದರು.(ಆವಾಗ ಮೊದಲ ವಿಶ್ವಯುದ್ದ I ಸುರುವಾಗಿತ್ತು,).[೨೮] ಇದಲ್ಲದೇ ಭಾರತೀಯ ಪತ್ನಿಯರನ್ನು ಮತ್ತು ಆಂಗ್ಲೊ-ಇಂಡಿಯನ್ ಮಕ್ಕಳನ್ನು ಹೊಂದಿದ್ದ ಬ್ರಿಟಿಶ್ ಅಧಿಕಾರಿಗಳು ಮತ್ತು ಸೈನಿಕರು ತಮ್ಮ ಕುಟುಂಬ ಸದಸ್ಯರನ್ನು 19 ನೆಯ ಶತಮಾನದಲ್ಲಿ ಬ್ರಿಟನ್ ಗೆ ಕರೆತಂದರು.[೨೯] ಬ್ರಿಟನ್ ನಲ್ಲಿದ್ದ ಆಂಗ್ಲೊ-ಇಂಡಿಯನ್ಸ್ ಸ್ಥಳೀಯ ಬಿಳಿ ಮಹಿಳೆಯರೊಂದಿಗೆ ವಿವಾಹವಾಗಿ ಹೇಗೂ ಬ್ರಿಟಿಶ್ ಸಮಾಜದಲ್ಲಿ ಬೆರೆತು ಹೋದರು.ಹೀಗಾಗಿ ಅವರು ತಮ್ಮದೇ ಆದ ಸಂಘಟನೆ ಕಟ್ಟಿಕೊಳ್ಳಲಿಲ್ಲ.ಆದರೆ ಭಾರತದಲ್ಲಿ ಆಂಗ್ಲೊ-ಇಂಡಿಯನ್ಸ್ ರು ತಮ್ಮದೇ ಸಂಘಟನೆ ಮತ್ತು ಅವರದೇ ಜನಾಂಗದೊಂದಿಗೆ ವಿವಾಹ ಸಂಭಂಧ ಬೆಳೆಸುತ್ತಾರೆ. ಆಗ 1902,ರಲ್ಲಿ ಸರ್ ವಿಲಿಯಮ್ ಹಟ್ಟ್ ಕರ್ಜನ್ ವಿಲ್ಲೆಯೆ ಮತ್ತು ಲಾರ್ಡ್ ಜಾರ್ಜ್ ಹ್ಯಾಮಿಲ್ಟನ್ ಅವರು ಭಾರತೀಯ ವಿದ್ಯಾರ್ಥಿಗಳ ಬಗ್ಗೆ ತಮ್ಮ ಕಾಳಜಿ ವ್ಯ್ಕರಪಡಿಸಿದ್ದಾರೆ, ರಾಜಾಗಳು (ರಾಜ ಮನೆತನ),ಸಿಪಾಯಿಗಳು (ಸೈನಿಕರು) ಮತ್ತುದೋಣಿಗಾರರು (ಸಮುದ್ರ ಕೆಲಸಗಾರರು) ಇವರು ಸ್ಥಳೀಯ ಬಿಳಿ ಬ್ರಿಟನ್ ಮಹಿಳೆಯರೊಂದಿಗೆ ಸಂಭಂಧ ಹೊಂದಿದ್ದಾರೆ.[೩೦] ಆಗ 1909 ರಲ್ಲಿ ಪತ್ರಕರ್ತ ಸಿ.ಹ್ಯಾಮಿಲ್ಟನ್ ಮೆಕ್ ಗಿನ್ನಿಸ್ ವರದಿ ಮಾಡಿದಂತೆ ಹಲವಾರು ಭಾರತೀಯ ಪುರುಷರೊಂದಿಗೆ ಇರುವ ಬ್ರಿಟಿಶ್ ಬಿಳಿ ಮಹಿಳೆಯರನ್ನು "ಬಸ್ ಗಳಲ್ಲಿ, ಬೀದಿಗಳಲ್ಲಿ, ಸಿನೆಮಾ ಮಂದಿರಗಳಲ್ಲಿ ಹೀಗೆ ಎಲ್ಲಿ ಬೇಕಾದಲ್ಲಿ ಈ ಜೋಡಿಗಳನ್ನು ಕಾಣಬಹುದಾಗಿದೆ ಎಂದು ವರದಿಯಲ್ಲಿ ವೀಕ್ಷಿಸಿದ್ದಾರೆ". ಇಂತಹ ಅಂತರಜನಾಂಗೀಯ ವ್ಯವಸ್ಥೆಯಿಂದ ಬಿಳಿ ಮಹಿಳೆಯರ ಕುಟುಂಬದ "ಗೌರವ" ಕಾಪಾಡಲು ಮಧ್ಯೆ ಪ್ರವೇಶಿಸುವಂತೆ ಪೊಲೀಸರಿಗೆ ಅವರು ಸಲಹೆ ಮಾಡಿದ್ದಾರೆ.[೩೧] ಆಗಿನ ವಿಶ್ವ ಯುದ್ದ I ರ ಸಂದರ್ಭದಲ್ಲಿ ಒಟ್ಟು 135,000 ಭಾರತೀಯ ಸೈನಿಕರು ಬ್ರಿಟನ್ ಮತ್ತು ಫ್ರಾನ್ಸನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಇವರಲ್ಲಿ ಹಲವರು ಅಂತರಜನಾಂಗೀಯ ವಿವಾಹದೊಂದಿಗೆ ಬಿಳಿ ಮಹಿಳೆಯರೊಂದಿಗೆ ವಾಸಿಸಲಾರಂಭಿಸಿದರು.[೩೨] ಈ ಸಂದರ್ಭದಲ್ಲಿ ಫ್ರೆಂಚ್ ಅಧಿಕಾರಿಗಳು ಈ ತೆರನಾದ ಯಾವುದೇ ಅಂತರಜನಾಂಗೀಯ ವಿವಾಹಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.ಆದರೆ ಬ್ರಿಟಿಶ್ ಅಧಿಕಾರಿಗಳು ಇದನ್ನು ಮಿತಿಗೊಳಿಸಲು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಸೈನಿಕರನ್ನು ನೋಡಿಕೊಳ್ಳಲು ಮಹಿಳಾ ದಾದಿಯರನ್ನು ನೇಮಿಸದಂತೆ ತಡೆಯುತ್ತಿದ್ದರು.[೩೩] ವಿಶ್ವಯುದ್ದ I ರ ನಂತರ ಬ್ರಿಟನ್ [೩೪]ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಬೆಳೆಯಲಾರಂಭಿಸಿತು.ಅದೇ ತೆರನಾಗಿ ಹೊರದೇಶದಿಂದ ಅದರಲ್ಲೂ ಹೆಚ್ಚಾಗಿ ಭಾರತೀಯ ಉಪಖಂಡದಿಂದ ದೊಡ್ಡ ಪ್ರಮಾಣದಲ್ಲಿ ಸಮುದ್ರ ಕೆಲಸಗಾರರು ಬರಲಾರಂಭಿಸಿದರು. ಇವರು ಅಂತರಜನಾಂಗೀಯ ಮದುವೆ ಮತ್ತು ಬಿಳಿ ಮಹಿಳೆಯರೊಂದಿಗೆ ಅಲ್ಲಿಯೇ ಕುಟುಂಬಗಳಾಗಿ ನೆಲೆ ನಿಂತರು.ಆಗ ಈ ವರ್ಣಸಂಕರದ ಬಗೆಗಿನ ಆಗಿನ ವೇಳೆಯಲ್ಲಿನ ವಿಚಾರಗಳು ಹಲವಾರು ಜನಾಂಗೀಯ ಹಿಂಸಾಚಾರಗಳಿಗೆ ಕಾರಣವಾದವು.[೩೫] ಆಗ ಭಾರತೀಯ ಸಮುದ್ರ ಕೆಲಸಗಾರರೊಂದಿಗೆ ಯುವ ಬಿಳಿ ಮಹಿಳೆಯರು ಸಂಭಂಧಗಳನ್ನು ಬೆಳೆಸುತಿದ್ದುದು 1920 ರಲ್ಲಿ ಕೋಲಾಹಲಕ್ಕೆ ಕಾರಣವಾಯಿತು.[೩೬] ನಂತರ 1920 ರ ಅವಧಿಯಿಂದ 1940 ವರೆಗಿನ ಸಮಯದಲ್ಲಿ ಈ 'ಮಿಶ್ರ-ಪೀಳಿಗೆ' ಜನಸಂಖ್ಯೆ ಬಗ್ಗೆ ಹಲವಾರು ಬರಹಗಾರರು ತೀವ್ರ ಕಳವಳಕ್ಕೀಡಾದರು.ಅಂದರೆ ವಿದೇಶಿ ಏಶಿಯನ್ (ಬಹುತೇಕ ಭಾರತೀಯ)ತಂದೆಯರು ಮತ್ತು ಸ್ಥಳೀಯ ಬಿಳಿ ತಾಯಂದಿರಿಗೆ ವಿವಾಹ ಬಂಧನವಿಲ್ಲದೇ ಜನಿಸಿದ ಈ ಮಕ್ಕಳ ಬಗ್ಗೆ ತಮ್ಮ ಧ್ವನಿ ಎತ್ತಿದರು. ಅವರು ಏಶಿಯನ್ ಪುರುಷರೊಂದಿಗಿನ ಸಂಭಂಧದೊಂದಿಗಿನ ಮಿಶ್ರ ಯುವತಿಯರನ್ನು ನಿರಾಕರಿಸಿದರು.ಅಲ್ಲದೇ ಅವರನ್ನು 'ನಾಚಿಕೆಗೇಡು' ಎಂದು ಕರೆದರಲ್ಲದೇ ಈ 'ಅರ್ಧ-ಜಾತಿ ಮಕ್ಕಳ ಮೇಲೆ ಬಹಿಷ್ಕಾರ ತರಲು ಯತ್ನಿಸಿದರು.ಆದರೆ ವರ್ಣಸಂಕರ ವಿರೋಧಿ ಕಾನೂನುಗಳು ಸಹ ಯಶಸ್ವಿಯಾಗಲಿಲ್ಲ.[೩೭] ಅದರ ನಂತರದ 1970 ರಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಮಹಿಳೆಯರು ಬ್ರಿಟನ್ ಗೆ ಬರಲಾರಂಭಿಸಿದರು.ಸುಮಾರಾಗಿ ಅವರು ಕುಟುಂಬ ಸದಸ್ಯರಾಗಿದ್ದರು.ಆಗ ಬ್ರಿಟನ್ ನಲ್ಲಿದ್ದ ಭಾರತೀಯರು ಇವರನ್ನು ಆಯ್ಕೆ ಮಾಡಿ ಮದುವೆ ಮಾಡಿಕೊಳ್ಳಲು ಆರಂಭಿಸಿದಾಗ ಅಂತರಜನಾಂಗೀಯ ವಿವಾಹಗಳ ಇಳಿಮುಖ ಕಾಣಿಸಿತು.ಆದರೆ ಬ್ರಿಟಿಶ್ ಇಂಡಿಯನ್ ರ ಸಂಖ್ಯೆ ಏರುತ್ತಾ ನಡೆಯಿತು. ಯುನೈಟೆಡ್ ಕಿಂಗಡಮ್ 2001 ರ ಜನಗಣತಿ ಪ್ರಕಾರ ಬ್ರಿಟಿಶ್ ಏಶಿಯನ್ ಪುರುಷರು ಅದರಲ್ಲೂ ದಕ್ಷಿಣ ಏಶಿಯಾದ ಪುರುಷರ ಸಂಖ್ಯೆಯ ಹೆಚ್ಚಾಗಿತ್ತು. ಅಂತರಜನಾಂಗೀಯ ಮದುವೆಗಳಮೂಲಕ ವಾಸಿಸುತ್ತಿದ್ದ ಜನರಲ್ಲಿ (ಬಿಳಿ ಮತ್ತು ಕಪ್ಪು ಮಹಿಳೆಯರ ಸಂಖ್ಯೆಯ ಪರಿಗಣಿಸಿ ಹೋಲಿಸಿದರೆ ಏಶಿಯನ್ ಮಹಿಳೆಯರಿಗಿಂತ ಕಡಿಮೆ ಇತ್ತು.) ಏಶಿಯನ್ ರುಗಳಲ್ಲಿ,ಬ್ರಿಟಿಶ್ ಭಾರತೀಯರು ಇನ್ನುಳಿದ ದೇಶಗಳ ಜನರೊಂದಿಗೆ ಜನಾಂಗೀಯ ವಿವಾಹ ಮಾಡಿಕೊಂಡರು. ಅದರಲ್ಲೂ ಬಹುತೇಕ ಅನುಪಾತದಲ್ಲಿ ಬ್ರಿಟಿಶ್ ಪಾಕಿಸ್ತಾನಿಗಳು ಮತ್ತು ಬ್ರಿಟಿಶ್ ಬಂಗ್ಲಾದೇಶಿಗಳು ಗಳು ಸೇರಿದ್ದರು. ಬ್ರಿಟನ್ ನಲ್ಲಿ ಬಿಳಿಯರು ಮತ್ತು ಭಾರತೀಯರ ನಡುವಿನ ಅಂತರ ಜನಾಂಗೀಯ ಮದುವೆಗಳ ಪ್ರಮಾಣವು 11%,ಅದಲ್ಲದೇ ಅಂತರ-ಅನ್ಯಜನಾಂಗೀಯ ವಿವಾಹಗಳು 26% ರಷ್ಟು ಇವೆ.ಅಂದರೆ ಬಿಳಿಯರು ಮತ್ತು 'ಮಿಶ್ರಿತ ಜನಾಂಗ'(ಇದರಲ್ಲಿ ಆಂಗ್ಲೊ-ಇಂಡಿಯನ್ ರೂ ಸೇರಿ)[೩೮] ಕಳೆದ 2005 ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಅಂದಾಜಿನಂತೆ, ಬ್ರಿಟನ್ ನಲ್ಲಿರುವ ಪ್ರತಿ ಐದು ಪುರುಷರಲ್ಲೊಬ್ಬ ಬಿಳಿವರ್ಣದ ಸಂಗಾತಿಯನ್ನು ಹೊಂದಿದ್ದಾನೆ.[೩೯] ನಂತರ 2006 ರಲ್ಲಿನ ಸಮೀಕ್ಷೆಯಂತೆ ಒಟ್ಟು 246,400 ಬ್ರಿಟಿಶ್ ನಾಗರಿಕರು ಮಿಶ್ರಿತ ಬಿಳಿ ಅಮ್ತ್ತು ದಕ್ಷಿಣ ಏಶಿಯನ್ ರಾಗಿದ್ದಾರೆ.(ಬಹುತೇಕ ಭಾರತೀಯ ವಂಶಾವಳಿಯವರು)[೪೦] ಇದು ಬ್ರಿಟನ್ನಲ್ಲಿ ನ 'ಬ್ರಿಟಿಶ್-ಮಿಶ್ರಿತ ಜನಾಂಗ'ದ ಜನಸಂಖ್ಯೆಯು ಒಟ್ಟು 30% ರಷ್ಟಿದೆ.

ಸದ್ಯದ ಆಂಗ್ಲೊ-ಇಂಡಿಯನ್ ಸಮುದಾಯ

[ಬದಲಾಯಿಸಿ]

ಸಾಂವಿಧಾನಿಕವಾಗಿ ಸಮುದಾಯಗಳು ಮತ್ತು ಧಾರ್ಮಿಕ ಹಾಗು ಭಾಷಾ ಅಲ್ಪಸಂಖ್ಯಾತರು ಇತ್ಯಾದಿಗಳಡಿ ಆಂಗ್ಲೊ-ಇಂಡಿಯನ್ಸ್ ತಮ್ಮದೇ ಆದ ಶಾಲಾಪದ್ದತಿ ಮತ್ತು ಇಂಗ್ಲಿಷ್ ಮಾಧ್ಯಮ ಅಳವಡಿಕೆಗೆ ಅನುವು ಮಾಡಿಕೊಡಲಾಗಿದೆ. ಸಮುದಾಯದ ಸಮಗ್ರತೆ ಕಾಯ್ದುಕೊಂಡು ಹೋಗಲು ಸಾಮಾಜಿಕ ಮುಖ್ಯವಾಹಿನಿಯೊಂದಿಗೆ ಈ ಸಮುದಾಯ ಬೆರೆಯುವಂತಾಗಲು,ಸರ್ಕಾರವು ಹಲವಾರು ವಿದ್ಯಾರ್ಥಿ ಸಂಘಟನೆಗಳಿಗೂ ಉತ್ತೇಜನ ನೀಡಿದೆ.ಭಾರತದ ಇತರ ಸಮುದಾಯದಿಂದ ಬಂದ ವಿದ್ಯಾರ್ಥಿ ಸಮೂಹಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಿದೆ.[ಸೂಕ್ತ ಉಲ್ಲೇಖನ ಬೇಕು] ಆದರೆ ಯಾವುದೇ ಆಂಗ್ಲೊ-ಇಂಡಿಯನ್ಸ್ ಅಧಿಕಾರಿಗಳೊಂದಿಗೆ ಭಾರತ ಸರ್ಕಾರ ತಾರತಮ್ಯ ಮಾಡಿದ ಸಾಕ್ಷಿಗಳಿಲ್ಲ,ಆದರೆ ಆಧುನಿಕ ಭಾರತದ ಸ್ಥಳೀಯ ಭಾಷಾ ಪದ್ದತಿಗಳನ್ನು ಅನುಸರಿಸುವಲ್ಲಿ ಈ ಸಮುದಾಯ ತಮ್ಮ ಅನಾಸಕ್ತಿ ತೋರಿದ್ದು ಅವುಗಳಿಗೆ ಹಿನ್ನಡೆಯಾಗಿರಬಹುದೇ ವಿನಹ ಅವುಗಳ ಪ್ರೊತ್ಸಾಹಕ್ಕೆ ಯಾವುದೇ ಕೊರತೆ ಇಲ್ಲ. ಆಂಗ್ಲೊ-ಇಂಡಿಯನ್ಸ್ ಮಿಲಿಟರಿ ಸೈನ್ಯ ಸೇವೆಗಳಲ್ಲಿ ತಮ್ಮದೇ ಆದ ವಿಶಿಷ್ಟತೆ ಹೊಂದಿದ್ದಾರೆ. ಏರ್ ವೈಸ್-ಮಾರ್ಶಲ್, ಮೌರೀಸ್ ಬಾರ್ಕರ್ ಭಾರತದ ಮೊದಲ ಆಂಗ್ಲೊ-ಇಂಡಿಯನ್ ಮಾರ್ಶಲ್ ಆಗಿದ್ದಾರೆ. ಇವರ ನಂತರ ಸುಮಾರು ಏಳು ಜನರು ಈ ಹುದ್ದೆಯನ್ನು ಲಂಕರಿಸಿದ್ದಾರೆ,ಸಣ್ಣ ಸಮುದಾಯವೊಂದು ಈ ಮಟ್ಟಕ್ಕೆ ಹೋಗಿದ್ದು ಒಂದು ಸಾಧನೆಯೇ ಸರಿ. ಇನ್ನುಳಿದ ಹಲವರು ಮಿಲಿಟರಿ ಸೇವೆಗಳಲ್ಲಿ ಮಿಂಚಿದ ಸಾಧಕರಿದ್ದಾರೆ ಏರ್ ಮಾರ್ಶಲ್ ಎಂ.ಎಸ್.ಡಿ ವೂಲ್ಲನ್ ಅವರನ್ನು 1971 ರ ಬಾಂಗ್ಲಾದೇಶದೊಂದಿಗಿನ ಯುದ್ದ ಗೆಲ್ಲಿಸುವಲ್ಲಿ ಪ್ರಮುಖರೆಂದು ಪರಿಗಣಿಸಲಾಗಿದೆ.[೪೧] ಅದೇ ತೆರನಾಗಿ ಆಂಗ್ಲೊ-ಇಂಡಿಯನ್ಸ್ ಭಾರತೀಯ ನೌಕಾಪಡೆ ಮತ್ತು ಸೈನ್ಯಪಡೆಯಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ.[೪೨] ಆಂಗ್ಲೊ-ಇಂಡಿಯನ್ಸ್ ಗೆಲುವು ಸಾಧಿಸಿದ ಇನ್ನೊಂದು ಕ್ಷೇತ್ರವೆಂದರೆ ಶಿಕ್ಷಣ ಕ್ಷೇತ್ರ. ಭಾರತದಲ್ಲಿರುವ ಮೆಟ್ರಿಕ್ಯುಲೇಶನ್ ವಿದ್ಯಾಪ್ರಮಾಣ ಪತ್ರ ಪಡೆಯುವ ICSE ಪಠ್ಯ ಮಾದರಿಯನ್ನು ಪರಿಚಯಿಸಿದವರು ಈ ಸಮುದಾಯದ ಶಿಕ್ಷಣ ತಜ್ಞರು.ಅದರಲ್ಲಿ ಪ್ರಮುಖರೆಂದರೆ ಫ್ರಾಂಕ್ ಆಂಥೊನಿ ಈ ಪದ್ದತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಎ.ಇ.ಟಿ ಬಾರ್ರೊವ್ ಅವರು ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಈ ಶತಮಾನದ ಅರ್ಧ ಭಾಗದವರೆಗೆ ಅವರ ಸೇವೆ ಮುಂದುವರೆದು ಶಿಕ್ಷಣ ವಲಯದಲ್ಲಿ ಉತ್ತಮ ಸೇವೆಗೆ ದಾರಿ ಮಾಡಿತು. ಹಲವಾರು ಆಂಗ್ಲೊ-ಇಂಡಿಯನ್ಸ್ ತಮ್ಮ ಉತ್ತಮ,ನಿರರ್ಗಳ ಇಂಗ್ಲಿಷ್ ಭಾಷಾ ಜ್ಞಾನದಿಂದಾಗಿ ಅಂತಹ ಔಪಚಾರಿಕ ಶಿಕ್ಷಣ ಪ್ರಮಾಣಪತ್ರವಿಲ್ಲದಿದ್ದರೂ ಎಲ್ಲೆಡೆಗೂ ಕೆಲಸ ಪಡೆಯುತ್ತಿರುವುದು ಸಾಮಾನ್ಯವಗಿದೆ. ಇನ್ನೂ ಕ್ರೀಡಾವಲಯದಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ.ಅದರಲ್ಲೂ ಒಲಿಂಪಿಕ್ಸ್ ನಲ್ಲಿ ಅವರ ಸಾಧನೆ ಅಪರೂಪವಾಗಿದೆ.ನಾರ್ಮನ್ ಪ್ರಿಚರ್ಡ್ ಇವರು ಭಾರತಕ್ಕಾಗಿ ಮೊದಲ ಒಲಿಂಪಿಕ್ ಪದಕ ತಂದುಕೊಟ್ಟವರಾಗಿದ್ದಾರೆ.ಭಾರತಕ್ಕಾಗಿ; ಪ್ಯಾರಿಸ್,ಫ್ರಾನ್ಸ್ ನಲ್ಲಿ ನಡೆದ 1900 ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಅವರು ಎರಡು ಬೆಳ್ಳಿ ಪದಕ ಗಳಿಸಿದ್ದಾರೆ. ಕ್ರಿಕೆಟ್ ನಲ್ಲಿಯೂ ರೊಜರ್ ಬಿನ್ನಿ ಅವರು ಭಾರತದ 1983 ರ ವಿಶ್ವ ಕಪ್ ಸಾಧನೆಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವಿಲ್ಸನ್ ಜೊನ್ಸ್, ಭಾರತದ ಮೊದಲ ವಿಶ್ವ ಮಟ್ಟದ ವೃತ್ತಿಪರ ಬಿಲ್ಲಿಯರಡ್ಸ್ ಚಾಂಪಿಯನ್ ಆಗಿದ್ದಾರೆ. ವಿದೇಶಗಳಲ್ಲಿ ಹಲವಾರು ದತ್ತಿ ಸಂಸ್ಥೆಗಳನ್ನು(ಧಾರ್ಮಿಕ ಚಾರ್ಟಿಗಳು) ಹುಟ್ಟುಹಾಕಿ ಭಾರತದಲ್ಲಿರುವ ಸಮುದಾಯದಲ್ಲಿನ ಅತ್ಯಂತ ಬಡವರಿಗೆ ನೆರವಿನ ಹಸ್ತ ಚಾಚಲಾಗುತ್ತಿದೆ. ಅತ್ಯಂತ ಉತ್ತಮ ಸೇವೆ ಮಾಡುತ್ತಿರುವ CTR (ಕೊಲ್ಕತ್ತಾ ತಿಲ್ಜಾಲ್ಲ್ಹ ರಿಲೀಫ್ -ಇದು USA ದಲ್ಲಿ ತನ್ನ ಮೂಲ ಸ್ಥಾನ ಪಡೆದಿದೆ.)ಇದು ಹಿರಿಯ ನಾಗರಿಕರಿಗ ಪಿಂಚಣಿ ಪದ್ದತಿ,ಅಂದರೆ ಸುಮಾರು 300 ವೃದ್ಧರಿಗೆ ಪಿಂಚಣಿ ಒದಗಿಸುತ್ತದೆ. ಈ CTR ಸುಮಾರು 200 ಅಗತ್ಯವಿರುವ ಮಕ್ಕಳಿಗೆ ಶಿಕ್ಷಣ ಒದಗಿಸುತ್ತದೆ.[೪೩] ಭಾರತದಲ್ಲಿ ಇಂದು ಸುಮಾರು 80,000 ಆಂಗ್ಲೊ-ಇಂಡಿಯನ್ಸ್ ವಾಸವಾಗಿದ್ದಾರೆ,ಪ್ರಮುಖವಾಗಿದೆಹಲಿ, ಕೊಲ್ಕತ್ತಾ,ಚೆನ್ನೈ, ಬೆಂಗಳೂರು,ಹೈದ್ರಾಬಾದ್, ಮತ್ತು ಮುಂಬೈನಗರಗಳಲ್ಲಿದ್ದಾರೆ. ಆಂಗ್ಲೊ-ಇಂಡಿಯನ್ಸ್ ರು ಕೋಚಿ, ಗೋವಾ,ಪುನೆ, ಸಿಕಂದ್ರಾಬಾದ್, ವಿಶಾಕಪಟ್ಟಣಮ್, ಲಖನೌ, ಆಗ್ರಾ, ಮತ್ತು ಬಿಹಾರ, ಜಾರ್ಖಂಡ್ ಹಾಗು ಪಶ್ಚಿಮ ಬಂಗಾಲ ರಾಜ್ಯಗಳ ಕೆಲವು ಪಟ್ಟಣಗಳಲ್ಲೂ ವಾಸವಾಗಿದ್ದಾರೆ. ಈ ಜನಸಮುದಾಯದ ಅಧಿಕವೆನ್ನುವಷ್ಟು ಜನರು ಒರಿಸ್ಸಾದ ಖೋರ್ಡಾ ನಗರದಲ್ಲಿದ್ದಾರೆ.ಇದು ಪ್ರಮುಖ, ಅತ್ಯಂತ ಚಟುವಟಿಕೆಯ ರೈಲ್ವೆ ಜಂಕ್ಷನ್ ಎನಿಸಿದೆ.[೪೪] ಆಂಗ್ಲೊ-ಇಂಡಿಯನ್ಸ್ ಹೆಚ್ಕ್ಧು ನೆಲೆಸಿರುವ ಸಾಗರೋತ್ತರ ಅಥವಾ ವಿದೇಶಗಳೆಂದರೆ, ಬ್ರಿಟನ್,ಆಸ್ಟ್ರೇಲಿಯಾ, ಕೆನಡಾ,USA,ಮತ್ತು ನ್ಯುಜಿಲ್ಯಾಂಡ್. ಇದರಲ್ಲಿ ದಶಲಕ್ಷವೆನ್ನುವಂತೆ ಜನಸಮುದಾಯವಿರುವ (ಇದರಲ್ಲಿ ವಂಶಪರಂಪರಾಗತ ಸಂತತಿಯೂ ಸೇರಿದೆ), ಇವರೆಲ್ಲಾ ಬಹುತೇಕ ಭಾರತ ಮೂಲದವರಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಇದರಲ್ಲಿ ಕೆಲವರು ಏಶಿಯಾದಲ್ಲಿನ ಪಾಕಿಸ್ತಾನ್ ಮತ್ತು ಮಯ್ನ್ಮಾರ್, ಮತ್ತು ಯುರೊಪಿಯನ್ ದೇಶಗಳಲ್ಲಿಯೂ ಅಂದರೆ ಸ್ವಿಜರ್ ಲ್ಯಾಂಡ್, ಜರ್ಮನಿ, ಮತ್ತು ಫ್ರಾನ್ಸ್ ಗಳಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಆಂಗ್ಲೊ-ಇಂಡಿಯನ್ಸ್ ಗೆ ಬಹುತೇಕ ಭಾಗಗಳಲ್ಲಿ ಸಮಗ್ರತೆ ಒಟ್ಟು ಮೂಡಿಸುವಲ್ಲಿ ಸಮುದಾಯದಲ್ಲಿ ಯಾವುದೇ ತೊಂದರೆ ಇಲ್ಲ.[೪೫] ಮಯ್ನ್ಮಾರ್ ನಲ್ಲಿರುವ ಸಮುದಾಯವು ಅಲ್ಲಿನ ಆಂಗ್ಲೊ-ಬರ್ಮೀಸ್ ಸಮುದಾಯದೊಂದಿಗೆ ಅಂತರ-ಸಮುದಾಯ ವಿವಾಹಗಳನ್ನು ಮಾಡಿಕೊಂಡಿದೆ.ಆದರೆ ಇದು ಬರ್ಮಾವು 1962 ರಲ್ಲಿ ಮಿಲಿಟರಿ ಆಡಳಿತದಡಿ ಬಂದ ನಂತರ ಸಮುದಾಯ ತೊಂದರೆ ಅನುಭವಿಸಿ ಕೊನೆಗೆ ದೇಶವನ್ನೇ ತೊರೆಯುತ್ತಿದೆ.

ರಾಜಕೀಯ

[ಬದಲಾಯಿಸಿ]

ಭಾರತದಲ್ಲಿನ ಸಂಸತ್ತಿಗೆ ಅಂದರೆ ಲೋಕ ಸಭೆಗೆ ನಾಮಕರಣಗೊಳ್ಳುವ ಏಕೈಕ ಸಮುದಾಯವೆಂದರೆ ಆಂಗ್ಲೊ-ಇಂಡಿಯನ್ಸ್. ಇದು ತನ್ನ ಸಮುದಾಯವನ್ನು ಈ ಸದನದಲ್ಲಿ ಪ್ರತಿನಿಧಿಸುತ್ತಿದೆ. ಆಗಿನ ಪ್ರಥಮ ಪ್ರಧಾನಿ ನೆಹ್ರೂ ಅವರಿಂದ ಪಡೆದ ಹಕ್ಕು ಇದಾಗಿದೆ.ಇದನ್ನು ಫ್ರಾಂಕ್ ಆಂಥೊನಿ;ಅವರು ಅಖಿಲ ಭಾರತ ಆಂಗ್ಲೊ-ಇಂಡಿಯನ್ ಅಸೊಶಿಯೇಶನ್ ನ ಸುದೀರ್ಘ ಕಾಲದ ಅಧ್ಯಕ್ಷರಾಗಿದ್ದಾಗ ಈ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಸಮುದಾಯದಿಂದ ಇಬ್ಬರು ಸದಸ್ಯರು ಪ್ರತಿನಿಧಿತ್ವ ಪಡೆದಿದ್ದಾರೆ. ಯಾಕೆಂದರೆ ಈ ಸಮುದಾಯಕ್ಕೆ ಯಾವುದೇ ಅದರದೇ ಆದ ಸ್ವಂತ ರಾಜ್ಯದ ನೆಲೆವಾಸದ ಆಧಾರವಿಲ್ಲ. ಇನ್ನುಳಿದಂತೆ ಆಂಧ್ರ ಪ್ರದೇಶ, ತಮಿಳು ನಾಡು, ಬಿಹಾರ್,ಪಶ್ಚಿಮ್ ಬಂಗಾಲ್,ಕರ್ನಾಟಕ ಮತ್ತು ಕೇರಳ ಇತ್ಯಾದಿ ರಾಜ್ಯಗಳ ಶಾಸನ ಸಭೆಗಳಲ್ಲಿ ಆಯಾ ಸಮುದಾಯದಿಂದ ಪ್ರಾತಿನಿಧ್ಯ ಪಡೆದಿದ್ದಾರೆ.

ಆಂಗ್ಲೊ-ಇಂಡಿಯನ್ ವಂಶಾವಳಿಯ ಪ್ರಸಿದ್ದ ವ್ಯಕ್ತಿಗಳು

[ಬದಲಾಯಿಸಿ]

ಯುರೊಪಿಯನ್ ವಂಶಾವಳಿಯಿಂದ ಬಂದ ಆಂಗ್ಲೊ-ಇಂಡಿಯನ್ಸ್ (ಮೂಲ ವ್ಯಾಖ್ಯೆ)

[ಬದಲಾಯಿಸಿ]
  • ಪೆಟೆ ಬೆಸ್ಟ್ - ಬೀಟಲ್ಸ್ ಗಾನಗೋಷ್ಟಿಗೆ ಮೂಲ ಡ್ರಮ್ ವಾದಕ
  • ಎಸ್.ಎಲ್.ಜೆ. ಗ್ಯಾಲೊಟ್ - ಫಾರ್ಮರ್ ಅಸಿಸ್ಟಂಟ್ ಡೈರೆಕ್ಟರ್ ಎಫ್.ಇ.ಆರ್.ಎ (ಸದ್ಯ F.E.M.A).
  • ಎಂಜೆಲ್ ಬರ್ಟ್ ಹಂಪರ್ ದಿಂಕ್ - ಸಿಂಗರ್.
  • ವಿವಿಯನ್ ಲೆಘ್ [ಸೂಕ್ತ ಉಲ್ಲೇಖನ ಬೇಕು],ಹಾಲಿವುಡ್ ನಟಿ.
  • ಕ್ಲಿಫ್ ರಿಚರ್ಡ್ - ಪಾಪ್ ಸಿಂಗರ್ (ರಿಯಲ್ ನೇಮ್, ಹ್ಯಾರಿ ವೆಬ್)

ಆಂಗ್ಲೊ-ಇಂಡಿಯನ್ಸ್ ಆಫ್ ಯುರೇಶಿಯನ್ ಡಿಸೆಂಟ್(ಯುರೇಶಿಯನ್ ವಂಶಾವಳಿಯಿಂದ ಬಂದ ಆಂಗ್ಲೊ-ಇಂಡಿಯನ್ಸ್ )(ಹೊಸ ವ್ಯಾಖ್ಯಾನ)

[ಬದಲಾಯಿಸಿ]
  • ಸೆಬ್ಯಾಸ್ಟಿಯನ್ ಕೊಯ್,[೪೬] ಬ್ರಿಟಿಶ್ ಅಥ್ಲೆಟೀ ಅಂಡ್ಪೀರ್
  • ರಿಚರ್ಡ್ ನೆರುಕರ್-ಬ್ರಿಟಿಶ್ ಉದ್ದದ-ಅಂತರದ ಓಟಗಾರ
  • ರಸೆಲ್ ಪೀಟರ್ಸ್,[೪೭] ಕೆನಡಿಯನ್ ನಿಂತು-ಆಡುವ ವಿದೂಷಕ ಮತ್ತು ನಟ
  • ಕೊಲಿನ್ ಮಾಥುರಾ-ಜೆರ್ಫ್ರಿ ನ್ಯುಜಿಲ್ಯಾಂಡ್-ರೂಪದರ್ಶಿ ಮತ್ತು ನಟಿ
  • ನಾರ್ಮನ್ ಡೌಗ್ಲಾಸ್ ಹಚಿಸನ್ ರಾಯಲ್ ಚಿತ್ರಕಲೆಗಾರ.
  • ಆಡ್ಮಿರಲ್ ಒ. ಎಸ್. ಡಾಸನ್-ಚೀಫ್ ಆಫ್ ದಿ ಇಂಡಿಯನ್ ನೇವಿ(1982–1984).(ಭಾರತ ನೌಕಾ ಪಡೆ ಮುಖ್ಯಸ್ಠ)
  • ಮೆಲಾನಿ ಸಿಕೆಸ್ - ರೂಪದರ್ಶಿ ಮತ್ತು ಟೀವಿ ಕಾರ್ಯಕ್ರಮ ನಿರೂಪಕ.
  • ಟೊನಿ ಬ್ರೆಂಟ್ - ಹಾಡುಗಾರ.
  • ಹೆನ್ರಿ ಗಿಡ್ನೆಯ್ - ಶಿಕ್ಷಣತಜ್ಞ (1873–1942).
  • ಬೆಟ್ಟಿ ನ್ಯುಥಾಲ್-ಟೆನ್ನಿಸ್ ಆಟಗಾರ( 1930 ರಲ್ಲಿ ದಿ U.S. ನ್ಯಾಶನಲ್ಸ್ ಗೆದ್ದ ಮೊದಲ ನಾನ್-ಅಮೆರಿಕನ್).[ಸೂಕ್ತ ಉಲ್ಲೇಖನ ಬೇಕು]
  • ಅನ್ನಾ ಲಿವೊನ್ವೆನ್ಸ್ (1834–1915),ಬ್ರಿಟಿಶ್ ಗವರ್ನೆಸ್ ದಿ ಸೈಮಸ್ ಕೋರ್ಟ್
  • ಲುಯಿಸ್ ಟಿ. ಲಿಯೊನ್ವೆನ್ಸ್ (1856–1919),ಸೈಯಾಮೆಸ್ ಅಶ್ವಪಡೆ ಅಧಿಕಾರಿ ಆಫಿಸರ್ ಮತ್ತು ವ್ಯಾಪಾರಿ;ಅನ್ನಾ ಲಿಯೊನ್ವೆನ್ಸ್ರ ಪುತ್ರ
  • ಅಲಿಸ್ಟೇರ್ ಮ್ಯಾಕ್ ಗೊವನ್-ಮೋಡಿಗಾರ, ವಿದೂಷಕ ಮತ್ತು ನಟ
  • ಫ್ರೆಡ್ರಿಕ್ ಅಕ್ಬರ್ ಮಹೊಮೆದ್-ವೈದ್ಯ; ಸೇಕ್ ಡೀನ್ ಮಹೊಮೆದ್ ರ ಮೊಮ್ಮಗ
  • ನಿಕೊಲ್ಲೆಟೆ ಶೆರಿಡಾನ್ -ನಟಿ.
  • ಟಿಮೊ ರೈಸಾನೆನ್- ಇಂಡೆ ಆರ್ಟಿಸ್ಟ್ ಫ್ರಾಮ್ ಸ್ವೀಡನ್.
  • ಫ್ರಾಂಕ್ ಆಂಥೊನಿ, ವಕೀಲ, ಆಂಗ್ಲೊ-ಇಂಡಿಯನ್ ಕಾರ್ಯಕರ್ತ, ರಾಜಕಾರಣಿ, ಶಿಕ್ಷಣ ತಜ್ಞ,ಯುನೈಟೆಡ್ ನೇಶನ್ಸ್,ನಲ್ಲಿ ಭಾರತದ ಪ್ರತಿನಿಧಿ ಬ್ರಿಟೇನ್ಸ್ ಬಿಟ್ರೇಯಲ್ ಇನ್ ಇಂಡಿಯಾ: ದಿ ಸ್ಟೊರಿ ಆಫ್ ದಿ ಆಂಗ್ಲೊ-ಇಂಡಿಯನ್ ಕಮ್ಯುನಿಟಿ, ಸೈಮನ್ ವಾಲೆನ್ ಬರ್ಗ್ಪ್ರೆಸ್ ಲಂಡನ್ ಗಳ ಬರಹಗಾರ
  • ಆನಂದ ಸತ್ಯಾನಾಂದ - ಗವರ್ನರ್ ಜನರಲ್ ಆಫ್ ನ್ಯುಜಿಲ್ಯಾಂಡ್.
  • ಗ್ಯಾಬ್ರೆಲ್ಲೆ ಅನ್ವರ್ - ನಟಿ
  • ರೋಜರ್ ಬಿನ್ನಿ, ಭಾರತದ ಕ್ರಿಕೆಟ್ ನ ಮಾಜಿ ಆಟಗಾರ
  • ಲೆಸ್ಲಿ ಕ್ಲಾಡಿಯಸ್, ಹಾಕಿ ಆಟಗಾರ 1948-1960 ರಿಂದ 4 ಒಲಿಂಪಿಕ್ ಪದಕಗಳ ಗೆದ್ದದ್ದು(3 ಚಿನ್ನ, 1 ಬೆಳ್ಳಿ).
  • ಶೆಲ್ಲೆಯ್ ಕೊನ್ನ್, ಅಭಿನೇತ್ರಿ
  • ಪೇಶನ್ಸ್ ಕೂಪರ್, ಭಾರತೀಯ ಚಲನಚಿತ್ರ ನಟಿ.
  • ಪಮೇಲಾ ಬಾಲಂಟೈನ್, ಪ್ರಚಾರಾಂದೋಲನದ ಕಾರ್ಯಕರ್ತರು. ಕ್ಯು.ಇ II ದಿಂದ ಜನಾಂಗೀಯ ಸಮಾನತೆಯ ಸೇವೆಗಳಿಗಾಗಿ MBE ಪ್ರಶಸ್ತಿ
  • ಹೆನ್ರಿ ಡೆರ್ಜೊಯಿ, 1809–1831, ಕೊಲ್ಕತಾ ಕವಿ,ಹಾರ್ಪ್ ಆಫ್ ಇಂಡಿಯಾ
  • ನೊಯಲ್ ಜೋನ್ಸ್, ಬ್ರಿಟಿಶ್ ರಾಜಧೂತ.
  • ಬೊರಿಸ್ ಕಾರಲ್ಪ್, ನಟ;ಅನ್ನಾ ಲೆನೊವ್ನೆನ್ನ ಮರಿ ಮೊಮ್ಮಗ
  • ಸಾರಾ ಕಾರ್ಲೊಫ್, ಬರಹಗಾರ್ತಿ;ಬೊರಿಸ್ ಕಾರ್ಲೊಫ್ಅವರ ಪುತ್ರಿ
  • ಜಾನ್ ಮೇಯೆರ್, ವಯೊಲಿನ್ ವಾದಕ, ಗೀತರಚನೆಗಾರ ಮತ್ತು ಶಿಕ್ಷಕ. ಇಂಡೊ-ಜಾಜ್ ವಾದ್ಯ ಸಂಗಮದ ರಚನೆಗಳ ವಿಧಾನವನ್ನು ಡಬಲ್ ಕ್ವಾರ್ಟೆಟ್ ಗೆ ಹೊಂದಿಸಿದ್ದು 1967
  • ಆಂಥೊನಿ ಡೆ ಮೆಲ್ಲೊde , ಭಾರತ ಕ್ರಿಕೆಟ ನಿಯಂತ್ರಣ ಮಂಡಳಿ ಸಂಸ್ಥಾಪಕ ಬೋರ್ಡ್ ಆಫ್ ಕಂಟ್ರೊಲ್ ಫಾರ್ ಕ್ರಿಕೆಟ್ ಇಂಡಿಯಾ (ಬಿಸಿಸಿಐ) ನ ಸಂಸ್ಥಾಪಕ.
  • ಮೆರ್ಲೆ ಒಬೆರೊನ್, ಅಭಿನೇತ್ರಿ, ಭಾರತದಲ್ಲಿ ಜನಿಸಿದ್ದು.
  • ಡಯನಾ ಕ್ವಿಕ್, ನಟಿ
  • ಜಾಸ್ಮಿನ್ ಸಾಬು, ಚಿತ್ರ-ನಿರ್ಮಾಪಕ ಮತ್ತು ಪ್ರಾಣಿಗಳ ತರಬೇತುದಾರ.
  • ಪೌಲ್ ಸಾಬು, ಸಂಗೀತಗಾರ.
  • ಪೀಟರ್ ಸಾರ್ಟೆಡ್ಟ್, ಪಾಪ್ ಹಾಡುಗಾರ -ಹಾಡು ರಚನೆಗಾರ.
  • ಸ್ಟೆಫೆನ್ ಹೆಕ್ಟೆರ್ ಟೇಲರ್-ಸ್ಮಿತ್, ಭಾರತದಲ್ಲಿ "ರಾಕೆಟ್ ಮೇಲ್" ನ ಪ್ರವರ್ತಕ ಅಲ್ಲದೇ ಅಂಚೆ ಚೀಟಿಯಲ್ಲಿ ಸ್ಮಾರಕದಿಂದ ಅಮರ.
  • ಅಲ್ಲನ್ ಸೀಲಿ, ಕಾದಂಬರಿಗಾರ
  • ಡೆಂಜಿಲ್ ಕೀಲರ್, IAF (ಇಂಡಿಯನ್ ಏರ್ ಫೊರ್ಸ್ ) 1971 ರ ಪಾಕಿಸ್ಥಾನದ ಯುದ್ದ ಸಂದರ್ಭದಲ್ಲಿ ನಾಯಕಗುಣ ಪ್ರದರ್ಶಿಸಿದ್ದು
  • ಆಯೆಶಾ ಟಾಕಿಯಾ, ನಟಿ
  • ಟ್ರೆವರ್ ಕೀಲರ್, IAF (ಇಂಡಿಯನ್ ಏರ್ ಫೊರ್ಸ್ ) 1971 ರ ಪಾಕಿಸ್ಥಾನದ ಯುದ್ದ ಸಂದರ್ಭದಲ್ಲಿ ನಾಯಕಗುಣ ಪ್ರದರ್ಶಿಸಿದ್ದು
  • ಗ್ಲೆನ್ ಡಂಕನ್, ಬರಹಗಾರ
  • ಜುಲ್ಸ್ ಫೈಫೆ, ವಿಶ್ವ ಮಟ್ಟದ ಸಂಗೀತ ಗಿಟಾರಿಸ್ಸ್ಟ್
  • ಹೆಲೆನ್ ರಿಚರ್ಡ್ಸನ್ ಖಾನ್,ಬಾಲೆಯುಡ್ ನಟಿ
  • ಕೆವಿನ್ ಕೀಲನ್, ನಾರ್ವಿಚ್ ನಗರ ಗೋಲ್ ಕೀಪರ್[ಸೂಕ್ತ ಉಲ್ಲೇಖನ ಬೇಕು]
  • ಮೈಕೆಲ್ ಚೊಪ್ರಾ,ನಿವ್ ಕ್ಯಾಸ್ಟಲ್ ಯುನೈಟೆಡ್ ಮತ್ತು ಸಂಡರ್ ಲ್ಯಾಂಡ್AFC ಸ್ಟ್ರೈಕರ್
  • ಮಾರ್ಕ್ ಎಲ್ಲಿವೊಟ್, ನಟಿ
  • ಡೆರೆಕ್ ಒ'ಬ್ರೆಯೆನ್, ಕ್ವಿಜ್ ಮಾಸ್ಟರ್
  • ಡಯಾನಾ ಹೆಯಡನ್,ನಟಿ ಮತ್ತು ಮಾಜಿಮಿಸ್ ವರ್ಲ್ಡ್(ವಿಶ್ವಸುಂದರಿ)
  • ವಿಲ್ಸನ್ ಜೊನ್ಸ್,ಮಾಜಿ ಬಿಲ್ಲಿಯರ್ಡ್ಸ್ ವಿಶ್ವ ಚಾಂಪಿಯನ್
  • ಲಿಯೊನ್ ಐರ್ಲ್ಯಾಂಡ್,ಭಾರತದ ಜನಪ್ರಿಯ ಸಂಗೀತ ಬ್ಯಾಂಡ್ ಮೋಕ್ಷಾದ ಹಾಡುಗಾರ
  • ಕಟ್ರಿನಾ ಕೈಫ್, ರೂಪದರ್ಶಿ& ನಟಿ
  • ಕ್ರಿಸ್ ಪೌವೆಲ್,ಹೆಸರಾಂತ ಡ್ರಮ್ ವಾದಕ ಮತ್ತು ಬಂದಿಶ್ ಬ್ಯಾಂಡ್ ನ ಸಂಸ್ಥಾಪಕ,ಈ ಬ್ಯಾಂಡ್ ಮೊದಲು ಭಾರತದ ಯುರೊಪಿಯಾ ಬ್ಯಾಂಡ್ ನೊಂದಿಗಿತ್ತು.

ಇವನ್ನೂ ನೋಡಿ

[ಬದಲಾಯಿಸಿ]
  • ಬ್ರಿಟೀಷ್‌‌ ಏಶಿಯನ್
  • ಬ್ರಿಟಿಶ್ ಇಂಡಿಯನ್, ಸಿಟಿಜನ್ಸ್ ಆಫ್ ದಿ ಯುನೈಟೆಡ್ ಕಿಂಗಡಮ್ ಹೂ ಆರ್ ಎಥ್ನಿಕ್ಲಿ ಇಂಡಿಯನ್
  • ಬ್ರಿಟಿಶ್ ಮಿಶ್ರಣದ-ಜನಾಂಗ
  • ಬರ್ಘರ್ ಪೀಪಲ್, ಶ್ರೀಲಂಕನ್ ಪೀಪಲ್ ಆಫ್ ಪಾರ್ಟ್ಲಿ ಯುರೊಪಿಯನ್ ಎನ್ಸೆಸ್ಯ್ಟ್ರಿ
  • ಯುರೇಶಿಯನ್(ಮಿಶ್ರಿತ ಪೂರ್ವಿಕರು)
  • FIBIS - ಫೆಮಿಲೀಸ್ ಇನ್ ಬ್ರಿಟಿಶ್ ಇಂಡಿಯಾ ಸೊಸೈಟಿ
  • ರೊಮಾನಿಚಲ್-ಎ ರೊಮನಿ ಎಥ್ನಿಕ್ ಗ್ರುಪ್ ಆಫ್ ಇಂಗ್ಲೆಂಡ್

ಉಲ್ಲೇಖಗಳು

[ಬದಲಾಯಿಸಿ]
  1. ಆಂಗ್ಲೊ-ಇಂದಿಯನ್, Dictionary.com.
  2. ""Constitution of India"". Commonlii.org. 2004-01-07. Archived from the original on 2009-10-17. Retrieved 2010-10-27.
  3. "ಟ್ರೀಟಿ ಬಾಡೀಸ್ ಡಾಟಾ ಬೇಸ್- ಡಾಕ್ಯುಮೆಂಟ್- ಸ್ಟೇಟ್ ಪಾರ್ಟಿ ರಿಪೊರ್ಟ್" ಯುನೈಟೆಡ್ ನೇಶನ್ಸ್ ಹುಮನ್ ರೈಟ್ಸ್ ವೆಬ್ ಸೈಟ್. (ಏಪ್ರಿಲ್ 6, 2008).
  4. ಸೀ ಸ್ಟಾರ್ಕ್, op. cit.
  5. ಡೊವರ್, ಸೆಡ್ರಿಕ್. ಕಿಮ್ಮೆರಿ ಆರ್ ಯುರೇಶಿಯನ್ಸ್ ಅಂಡ್ ದೇರ್ ಫ್ಯುಚರ್: ಆನ್ ಆಂಗ್ಲೊ ಇಂಡಿಯನ್ ಹೆರಿಟೇಜ್ ಬುಕ್ . ಲಂಡನ್:ಸೈಮನ್ ವಾಲನ್ ಬರ್ಗ್ ಪ್ರೆಸ್, 2007. ಪುಟಗಳು 134–135
  6. ೬.೦ ೬.೧ ೬.೨ ೬.೩ ಸ್ಟಾರ್ಕ್, ಹರ್ಬರ್ಟ್ ಅಲಿಕ್. ಹೋಸ್ಟೇಜಿಸ್ ಟು ಇಂಡಿಯಾ: ಆರ್ ದಿ ಲೈಫ್ ಸ್ಟೊರಿ ಆಫ್ ದಿ ಆಂಗ್ಲೊ ಇಂಡಿಯನ್ ರೇಸ್. ಮೂರನೇ ಆವೃತ್ತಿ. ಲಂಡನ್:ಸೈಮನ್ ವಾಲನ್ ಬರ್ಗ್ ಪ್ರೆಸ್, 2007: Vol 2: (ಆನ್ ಆಂಗ್ಲೊ ಇಂಡಿಯನ್ ಹೆರಿಟೇಜ್ ಬುಕ್
  7. ಆಂಥೊನಿ, ಫ್ರಾಂಕ್. ಬ್ರಿಟನ್ಸ್ ಬಿಟ್ರೆಯಲ್ ಇನ್ ಇಂಡಿಯಾ: ದಿ ಸ್ಟೊರಿ ಆಫ್ ದಿ ಆಂಗ್ಲೊ-ಇಂಡಿಯನ್ ಕಮ್ಯುನಿಟಿ . ಎರಡನೇ ಆವೃತ್ತಿ. ಲಂಡನ್:ಸೈಮನ್ ವಾಲನ್ ಬರ್ಗ್ ಪ್ರೆಸ್, 2007. ಪೇಜಿಸ್ 18-19, 42, 45.
  8. "Eurasian". Dictionary.com. Retrieved 2009-01-13.
  9. Fisher, Michael Herbert (2006), Counterflows to Colonialism: Indian Traveller and Settler in Britain 1600-1857, Orient Blackswan, pp. 111–9, 129–30, 140, 154–6, 160–8, ISBN 8178241544
  10. ೧೦.೦ ೧೦.೧ Fisher, Michael H. (2007), "Excluding and Including "Natives of India": Early-Nineteenth-Century British-Indian Race Relations in Britain", Comparative Studies of South Asia, Africa and the Middle East, 27 (2): 303–314 [304–5]
  11. ೧೧.೦ ೧೧.೧ Fisher, Michael H. (2007), "Excluding and Including "Natives of India": Early-Nineteenth-Century British-Indian Race Relations in Britain", Comparative Studies of South Asia, Africa and the Middle East, 27 (2): 303–314 [305]
  12. Beckman, Karen Redrobe (2003), Vanishing Women: Magic, Film, and Feminism, Duke University Press, pp. 31–3, ISBN 0822330741
  13. Kent, Eliza F. (2004), Converting Women, Oxford University Press US, pp. 85–6, ISBN 0195165071
  14. Kaul, Suvir (1996), "Review Essay: Colonial Figures and Postcolonial Reading", Diacritics, 26 (1): 74–89 [83–9], doi:10.1353/dia.1996.0005
  15. ೧೫.೦ ೧೫.೧ ಮಹೆರ್, ಜೇಮ್ಸ್, ರೆಗಿನಾಲ್ಡ್. (2007). ದೀಜ್ ಆರ್ ದಿ ಆಂಗ್ಲೊ ಇಂಡಿಯನ್ಸ್. ಲಂಡನ್:ಸೈಮನ್ ವಾಲನ್ ಬರ್ಗ್ ಪ್ರೆಸ್, (ಆನ್ ಆಂಗ್ಲೊ ಇಂಡಿಯನ್ ಹೆರಿಟೇಜ್ ಬುಕ್)
  16. ಆಂಥೊನಿ, ಫ್ರಾಂಕ್. ಬ್ರಿಟನ್ಸ್ ಬಿಟ್ರೆಯಲ್ ಇನ್ ಇಂಡಿಯಾ: ದಿ ಸ್ಟೊರಿ ಆಫ್ ದಿ ಆಂಗ್ಲೊ-ಇಂಡಿಯನ್ ಕಮ್ಯುನಿಟಿ.. ಎರಡನೇ ಆವೃತ್ತಿ. ಲಂಡನ್: ದಿ ಸೈಮನ್ ವಾಲನ್ ಬರ್ಗ್ ಪ್ರೆಸ್, 2007 ಪೇಜಿಸ್ 144- 146, 92.
  17. Blair Williams. "Anglo-Indians - Vanishing Remnants of a Bygone Era". Blairrw.org. Archived from the original on 2010-09-06. Retrieved 2010-10-27.
  18. Blair Williams. "Haunting India". Blairrw.org. Archived from the original on 2011-07-25. Retrieved 2010-10-27.
  19. Blair Williams (2004-12-03). "Voices on the Verandah". Blairrw.org. Archived from the original on 2011-07-25. Retrieved 2010-10-27.
  20. Blair Williams. "The Way We Were - Anglo-Indian Chronicles". Blairrw.org. Archived from the original on 2010-09-06. Retrieved 2010-10-27.
  21. Blair Williams. "The Way We Are - An Anglo-Indian Mosaic". Blairrw.org. Archived from the original on 2011-07-25. Retrieved 2010-10-27.
  22. Fisher, Michael Herbert (2006), Counterflows to Colonialism: Indian Traveller and Settler in Britain 1600-1857, Orient Blackswan, pp. 106, 111–6, 119–20, 129–35, 140–2, 154–8, 160–8, 172, 181, ISBN 8178241544
  23. Fisher, Michael Herbert (2006), "Working across the Seas: Indian Maritime Labourers in India, Britain, and in Between, 1600–1857", International Review of Social History, 51: 21–45, doi:10.1017/S0020859006002604
  24. Ansari, Humayun (2004), The Infidel Within: The History of Muslims in Britain, 1800 to the Present, C. Hurst & Co. Publishers, p. 58, ISBN 1850656851
  25. "Growing Up". Moving Here. Archived from the original on 2014-04-06. Retrieved 2009-02-12.
  26. Laura Levine Frader, Sonya O. Rose (1996), Gender and Class in Modern Europe, Cornell University Press, p. 184, ISBN 0801481465
  27. Radhakrishnan Nayar (January 5, 2003). "The lascars' lot". ದಿ ಹಿಂದೂ. Archived from the original on 2003-09-18. Retrieved 2009-01-16.
  28. Ansari, Humayun (2004), The Infidel Within: The History of Muslims in Britain, 1800 to the Present, C. Hurst & Co. Publishers, p. 37, ISBN 1850656851
  29. Fisher, Michael Herbert (2006), Counterflows to Colonialism: Indian Traveller and Settler in Britain 1600-1857, Orient Blackswan, pp. 180–2, ISBN 8178241544
  30. Teo, Hsu-Ming (2004), "Romancing the Raj: Interracial Relations in Anglo-Indian Romance Novels", History of Intellectual Culture, 4 (1), University of Calgary: 8–9
  31. Lahiri, Shompa (2000), Indians in Britain, Taylor and Francis, pp. 140–2, ISBN 0714680494
  32. Enloe, Cynthia H. (2000), Maneuvers: The International Politics of Militarizing Women's Lives, University of California Press, p. 61, ISBN 0520220714
  33. Greenhut, Jeffrey (April 1981), "Race, Sex, and War: The Impact of Race and Sex on Morale and Health Services for the Indian Corps on the Western Front, 1914", Military Affairs, 45 (2), Society for Military History: 71–74, doi:10.2307/1986964
  34. Ansari, Humayun (2004), The Infidel Within: The History of Muslims in Britain, 1800 to the Present, C. Hurst & Co. Publishers, p. 94, ISBN 1850656851
  35. Bland, Lucy (April 2005), "White Women and Men of Colour: Miscegenation Fears in Britain after the Great War", Gender & History, 17 (1): 29–61
  36. Jackson, Louise Ainsley (2006), Women Police: Gender, Welfare and Surveillance in the Twentieth Century, Manchester University Press, p. 154, ISBN 0719073901
  37. Ansari, Humayun (2004), The Infidel Within: The History of Muslims in Britain, 1800 to the Present, C. Hurst & Co. Publishers, pp. 93–4, ISBN 1850656851
  38. "Inter-Ethnic Marriage: 2% of all Marriages are Inter-Ethnic". National Statistics. 2005-03-21. Retrieved 2008-07-15.
  39. Bland, Lucy (April 2005), "White Women and Men of Colour: Miscegenation Fears in Britain after the Great War", Gender & History, 17 (1): 29–61 [51–2]
  40. "Resident Population Estimates by Ethnic Group, All Persons". National Statistics. June 2006. Archived from the original on 2009-01-11. Retrieved 2009-01-15.
  41. "Anglo-Indians in the Indian Air Force". Sumgenius.com.au. Archived from the original on 2011-02-15. Retrieved 2010-10-27.
  42. ಆಂಥೊನಿ, ಫ್ರಾಂಕ್. ಬ್ರಿಟನ್ಸ್ ಬಿಟ್ರೆಯಲ್ ಇನ್ ಇಂಡಿಯಾ: ದಿ ಸ್ಟೊರಿ ಆಫ್ ದಿ ಆಂಗ್ಲೊ-ಇಂಡಿಯನ್ ಕಮ್ಯುನಿಟಿ. ಎರಡನೇ ಆವೃತ್ತಿ. ಲಂಡನ್: ದಿ ಸೈಮನ್ ವಾಲನ್ ಬರ್ಗ್ ಪ್ರೆಸ್.
  43. "Calcutta Tiljallah Relief". Blairrw.org. Archived from the original on 2010-05-29. Retrieved 2010-10-27.
  44. ಉಲ್ಲೇಖ ದೋಷ: Invalid <ref> tag; no text was provided for refs named escholarshare.drake.edu
  45. ದಿ ಆಂಗ್ಲೊ-ಇಂಡಿಯನ್ ಆಸ್ಟ್ರೇಲಿಯನ್ ಸ್ಟೊರಿ:ಮೈ ಎಕ್ಸ್ಪಿರಿಯೆನ್ಸ್, ಝೆಲ್ಮಾ ಫಿಲಿಪ್ಸ್ 2004
  46. Johnson, Angella (13 December 2009). Daily Mail. London http://www.dailymail.co.uk/femail/article-1235341/Lord-Coe-Punjabi-Playboy.html. {{cite news}}: Missing or empty |title= (help)
  47. "FAQ". RussellPeters.com. 2009-01-25. Archived from the original on 2015-03-20. Retrieved 2010-10-27.


ಪುಸ್ತಕಗಳು

[ಬದಲಾಯಿಸಿ]
  • ಆಂಥೊನಿ ಎಫ್ "ಬ್ರಿಟನ್ಸ್ ಬಿಟ್ರೆಯಲ್ ಇನ್ ಇಂಡಿಯಾ: ದಿ ಸ್ಟೊರಿ ಆಫ್ ದಿ ಆಂಗ್ಲೊ-ಇಂಡಿಯನ್ ಕಮ್ಯುನಿಟಿ ಲಂಡನ್:ಸೈಮನ್ ವಾಲನ್ ಬರ್ಗ್ ಪ್ರೆಸ್ ಅಮೆಜಾನ್ ಬುಕ್ಸ್ .
  • ಚಾಪ್ ಮನ್,ಪ್ಯಾಟ್ "ಟೇಸ್ಟ್ ಆಫ್ ದಿ ರಾಜ್, ಹೊಡ್ಲರ್& ಸ್ಟಗ್ಟನ್, ಲಂಡನ್— ISBN 0-340-68035-0 (1997)
  • ಡ್ಯಾಡಿ ಡಿ ಎಸ್ "ಸ್ಕ್ಯಾಟರ್ಡ್ ಸೀಡ್ಸ್: ದಿ ಡೈಯಸ್ಪೊರಾ ಆಫ್ ದಿ ಆಂಗ್ಲೊ-ಇಂಡಿಯನ್ಸ್...ಪಗೊಡಾ ಪ್ರೆಸ್
  • ಗ್ಯಾಬ್ ಎ "1600-1947 ಆಂಗ್ಲೊ-ಇಂಡಿಯನ್ ಲೆಗಸಿ"
  • ಹಾವೆಸ್ ಸಿ"ಪೂರ್ ರಿಲೇಶನ್ಸ್: ದಿ ಮೇಕಿಂಗ್ ಆಫ್ ಎ ಯುರೆಸಿಯನ್ ಕಮುನಿಟಿ "
  • ಮೂರೆ ಜಿ ಜೆ"ದಿ ಆಂಗ್ಲೊ ಇಂಡಿಯನ್ ವಿಜನ್"
  • ಸ್ಟಾರ್ಕ್ ಎಚ್ ಎ "ಹೋಸ್ಟೇಜಿಸ್ ಟು ಇಂಡಿಯಾ: ಆರ್ ದಿ ಲೈಫ್ ಸ್ಟೊರಿ ಆಫ್ ದಿ ಆಂಗ್ಲೊ ಇಂಡಿಯನ್ ರೇಸ್.ಸೈಮನ್ ವಾಲೆನ್ ಬರ್ಗ್ ಪ್ರೆಸ್.
  • ಮಹೆರ್,ಜೇಮ್ಸ್,ರೆಗಿನಾಲ್ಡ್ "ದೀಜ್ ಆರ್ ದಿ ಆಂಗ್ಲೊ ಇಂಡಿಯನ್ಸ್" - (ಆನ್ ಆಂಗ್ಲೊ-ಇಂಡಿಯನ್ಸ್ ಹೆರಿಟೇಜ್ ಬುಕ್) ಸೈಮನ್ ವಾಲೆನ್ ಬರ್ಗ್ ಪ್ರೆಸ್
  • ಫಿಲಿಪ್ಸ್ Z "ದಿ ಆಂಗ್ಲೊ-ಇಂಡಿಯನ್ ಆಸ್ಟ್ರೇಲಿಯನ್ ಸ್ಟೊರಿ:ಮೈ ಎಕ್ಸ್ಪಿರಿಯೆನ್ಸ್. ಎ ಕಲೆಕ್ಷನ್ ಆಫ್ ಆಂಗ್ಲೊ-ಇಂಡಿಯನ್ ಮೈಗ್ರೇಶನ್ ಹೆರಿಟೇಜ್ ಸ್ಟೊರೀಸ್"
  • ಬ್ರಿಜೆಟ್ ವ್ಹೈಟ್ -ಕುಮಾರ್"ದಿ ಬೆಸ್ಟ್ ಅಫ್ ಆಂಗ್ಲೊ-ಇಂಡಿಯನ್ ಕ್ಯುಸೈನ್- ಎ ಲೆಗಸಿ "ಫ್ಲೇವರ್ಸ್ ಆಫ್ ಪಾಸ್ಟ್", "ಆಂಗ್ಲೊ-ಇಂಡಿಯನ್ ಡೆಲಿಕಸೀಸ್", "ದಿ ಆಂಗ್ಲೊ-ಇಂಡಿಯನ್ ಫೆಸ್ಟಿವ್ ಹ್ಯಾಂಪರ್", "ಎ ಕಲೆಕ್ಷನ್ ಆಫ್ ಆಂಗ್ಲೊ-ಇಂಡಿಯನ್ ರೋಸ್ಟ್ಸ್, ಕ್ಯಾಸರೋಲ್ಸ್ ಅಂಡ್ ಬೇಕ್ಸ್"

ಬಾಹ್ಯ ಕೊಂಡಿಗಳು

[ಬದಲಾಯಿಸಿ]