ಆಂಡ್ರೆಸ್ ಇನಿಯೆಸ್ಟಾ
Personal information | |||
---|---|---|---|
Full name | Andrés Iniesta Luján | ||
Date of birth | ಮೇ ೧೧, ೧೯೮೪ | ||
Place of birth | Fuentealbilla, Spain | ||
Height | 1.70 m (5 ft 7 in) | ||
Playing position | Midfielder / Winger | ||
Club information | |||
Current club | Barcelona | ||
Number | 8 | ||
Youth career | |||
1994–1996 | Albacete | ||
1996–2001 | Barcelona | ||
Senior career* | |||
Years | Team | Apps† | (Gls)† |
2001–2003 | Barcelona B | 54 | (5) |
2002– | Barcelona | 210 | (17) |
National team‡ | |||
2000 | Spain U15 | 2 | (0) |
2000–2001 | Spain U16 | 7 | (1) |
2001 | Spain U17 | 4 | (0) |
2001–2002 | Spain U19 | 7 | (1) |
2003 | Spain U20 | 7 | (3) |
2003–2006 | Spain U21 | 18 | (6) |
2006– | Spain | 49 | (8) |
2004– | Catalonia | 1 | (0) |
† Appearances (Goals). |
ಆಂಡ್ರೆಸ್ ಇನಿಯೆಸ್ಟಾ ರು (Spanish pronunciation: [anˈdɾes iˈnjesta]; ಕ್ಯಾಸ್ಟೈಲ್-ಲಾ ಮಾಂಚಾದ ಅಲ್ಬಾಸೆಟೆಯಲ್ಲಿನ ಫ್ಯೂಯೆಂಟೀಲ್‌ಬಿಲ್ಲಾನಲ್ಲಿ 11 ಮೇ 1984ರಂದು ಜನನ) ಓರ್ವ ವಿಶ್ವ ಕಪ್ ವಿಜೇತ ಸ್ಪ್ಯಾನಿಷ್ ಅಂತರರಾಷ್ಟ್ರೀಯ ಫುಟ್‌ಬಾಲ್ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರರಾಗಿದ್ದು ಪ್ರಸ್ತುತ ಸ್ಪ್ಯಾನಿಷ್ ಲಾ ಲಿಗಾ ಕ್ಲಬ್ ಆದ FC ಬಾರ್ಸಿಲೋನಾದಲ್ಲಿ ಆಡುತ್ತಿದ್ದಾರೆ. ಮೈದಾನದ ಯಾವುದೇ ಭಾಗದಲ್ಲಿಯೂ ಆಡುವುದಕ್ಕೆ ತಯಾರಿರುವಿಕೆ ಮತ್ತು ಸ್ವಾಭಾವಿಕ ವಿನಮ್ರತೆಗಳು ಸೇರಿ ಆತನಿಗೆ ಎಲ್ ಇಲ್ಯೂಷನಿಸ್ಟಾ (ಗಾರುಡಿಗ), ಎಲ್ ಆಂಟಿ-ಗ್ಯಾಲಕ್ಟಿಕೋ (ಮಹಾತಾರೆ-ವಿರೋಧಿ), ಸೆರೆಬ್ರೋ (ಬುದ್ಧಿವಂತ/ಮಿದುಳು) ಮತ್ತು ತೀರ ಇತ್ತೀಚೆಗೆ ಸ್ಪ್ಯಾನಿಷ್ ಪತ್ರಿಕಾರಂಗದಿಂದ ಡಾನ್ ಆಂಡ್ರೆಸ್ ಎಂಬ ಉಪನಾಮಗಳಿಗೆ ಬಾಧ್ಯರಾಗುವಂತೆ ಮಾಡಿವೆ.[೧] 2009ರ UEFA ಚಾಂಪಿಯನ್ಸ್ ಲೀಗ್ ಫೈನಲ್‌ನ ನಂತರ, ಮ್ಯಾಂಚೆಸ್ಟರ್ ಯುನೈಟೆಡ್‌ನ ಗೋಲು ಹೊಡೆಯುವ ಆಟಗಾರ/ಸ್ಟ್ರೈಕರ್ ವೇನ್ ರೂನೆಯವರು, ತಾನು ಈ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರನನ್ನು ವಿಶ್ವದಲ್ಲೇ ಅತ್ಯುತ್ತಮ ಆಟಗಾರ ಎಂದು ಭಾವಿಸಿದ್ದೇನೆ ಎಂದು ಒತ್ತಿ ಹೇಳಿದ್ದರು.[೨] ಅವರ ಬಾರ್ಸಿಲೋನಾದೊಂದಿಗಿನ ಪ್ರಸ್ತುತ ಗುತ್ತಿಗೆಯು 2015ರವರೆಗಿನದ್ದಾಗಿದೆ. ಅವರು ನೆದರ್‌ಲೆಂಡ್ಸ್ ವಿರುದ್ಧದ 2010ರ FIFA ವಿಶ್ವ ಕಪ್ ಫೈನಲ್ ಪಂದ್ಯದ 116ನೇ ನಿಮಿಷದಲ್ಲಿ ಸ್ಪೇನ್‌ನ ಪರವಾಗಿ ವಿಜಯದ ಗೋಲನ್ನು ಹೊಡೆದರಲ್ಲದೇ ಪಂದ್ಯದ ಪಂದ್ಯ ಪುರುಷರೂ ಆದರು.
ಕ್ಲಬ್ ವೃತ್ತಿಜೀವನ
[ಬದಲಾಯಿಸಿ]ಆರಂಭಿಕ ವೃತ್ತಿಜೀವನ
[ಬದಲಾಯಿಸಿ]ಮೊದಲಿಗೆ 12-ವರ್ಷ-ವಯಸ್ಸಿನ ಇನಿಯೆಸ್ಟಾ'ರ ಪೋಷಕರು ಬಾರ್ಸಿಲೋನಾಗೆ ತೆರಳಿ FC ಬಾರ್ಸಿಲೋನಾದ ಯುವ ತರಬೇತಿ ಕೇಂದ್ರ/ಶಾಲೆಯಾದ ಲಾ ಮಾಸಿಯಾ ದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಪ್ರಯಾಣದ ಪರಿಣಾಮವಾಗಿ ಇನಿಯೆಸ್ಟಾ'ರು ಬಾರ್ಕಾ/FC ಬಾರ್ಸಿಲೋನಾದ ಯುವ ತಂಡಕ್ಕೆ ಸೇರ್ಪಡೆಯಾದರು. ಲಾ ಮಾಸಿಯಾ ದ ಪದವೀಧರ ಸಂಗಡಿಗ ಸೆಸ್ಕ್ ಫೇಬ್ರ್‌ಗ್ಯಾಸ್‌ರಂತೆಯೇ, ಇನಿಯೆಸ್ಟಾರು ಮೂಲತಃ ರಕ್ಷಣಾ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರ[೩]ರಾಗಿ ಆರಂಭಿಸಿದರೂ ಅವರ ಸಮತೋಲನ, ಸಮೀಪ ನಿಯಂತ್ರಣ ಮತ್ತು ಚೆಂಡಿನ ಮೇಲಿನ ಕೌಶಲ್ಯಗಳು ಅವರನ್ನು ದಾಳಿಗಾರ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರರನ್ನಾಗಿ ಪ್ರಗತಿಯೆಡೆಗೆ ನಡೆಸಿತು. ಆ ಸಮಯದಿಂದ ಅವರು ಕ್ಲಬ್‌ನ ವಿವಿಧ ಮಟ್ಟದ ಶ್ರೇಯಾಂಕಗಳನ್ನೇರುತ್ತಾ ಹೋದರು. ಲೂಯಿಸ್ ವಾನ್ ಗಾಲ್‌ರವರು ಅವರಿಗೆ 29 ಅಕ್ಟೋಬರ್ 2002ರಂದು, ಬ್ರಗ್ಗೆ ಕ್ಲಬ್‌ನ ವಿರುದ್ಧದ UEFA ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಪ್ರಥಮ ಪಂದ್ಯವಾಡಲು ಅವಕಾಶ ಒದಗಿಸಿದರು. ಸ್ಪ್ಯಾನಿಷ್ ಪತ್ರಿಕಾರಂಗದ ಕೆಲ ವರ್ಗದವರು ಜುವಾನ್ ರೋಮನ್ ರಿಕ್ವೆಲ್ಮೆರ ಬದಲಿಯಾಗಿ ಬಾರ್ಸಿಲೋನಾದ ಪ್ರಾಥಮಿಕ ತಂಡದಲ್ಲಿ ಇನಿಯೆಸ್ಟಾರಿಗೆ ಅವಕಾಶ ಕೊಡಬೇಕೆಂದು ಅಭಿಪ್ರಾಯ ಸೂಚಿಸುವಷ್ಟು ಅವರ ಆರಂಭಿಕ ಪ್ರದರ್ಶನಗಳು ಗಮನ ಸೆಳೆಯುವಂತಿದ್ದವು.[೪] 2003–04ರ ಸಾಲಿನಲ್ಲಿ, ಬಹುತೇಕ ಸಂದರ್ಭಗಳಲ್ಲಿ ಕ್ಯಾಂಪ್ ನೌ ಕ್ರೀಡಾಂಗಣದ ಅಚ್ಚುಮೆಚ್ಚಿನ ಆಟಗಾರ ರೊನಾಲ್ಡಿನ್ಹೋರ ಬದಲಿಯಾಗಿ ಕಾಣಿಸಿಕೊಳ್ಳುತ್ತಿದ್ದರೂ ವ್ಯಾಲೆನ್ಷಿಯಾನ ನಂತರದ ಎರಡನೇ ಸ್ಥಾನವನ್ನು ಬಾರ್ಕಾ ಪಡೆದುಕೊಂಡ ಪಂದ್ಯದಲ್ಲಿ ಒಮ್ಮೆ ಗೋಲ್ ಗಳಿಸಿದ್ದ ಅವರು ಲೀಗ್‌ನಲ್ಲಿ 11 ಬಾರಿ ಕಾಣಿಸಿಕೊಂಡಿದ್ದರು.
2004–2008
[ಬದಲಾಯಿಸಿ]2004–05ರ ಕ್ರೀಡಾಋತುವಿನಲ್ಲಿ ಇನಿಯೆಸ್ಟಾರು ಪ್ರಥಮ ತಂಡದಲ್ಲಿ ಯಶಸ್ವಿಯಾಗಿ ಶಾಶ್ವತ ಸ್ಥಾನವನ್ನು ಪಡೆದುಕೊಂಡರಲ್ಲದೇ ನಡೆದ ಒಟ್ಟಾರೆ 38 ಲೀಗ್ ಪಂದ್ಯಗಳಲ್ಲಿ 37ರಲ್ಲಿ ಪಾಲ್ಗೊಂಡಿದ್ದರು - ಇದು ಇತರ ಯಾವುದೇ ಆಟಗಾರರಿಗಿಂತ ಹೆಚ್ಚಿನದಾಗಿದೆ. ಅವರು ಕಾಲ್ಚೆಂಡನ್ನು ನಿಯತವಾಗಿ ಸ್ಯಾಮ್ಯುಯೆಲ್ ಎಟೋ ಮತ್ತು ರೊನಾಲ್ಡಿನ್ಹೋರವರುಗಳ ಕಡೆಗೆ ಹೋಗಲು ಸಹಾಯ ಮಾಡುತ್ತಾ ನಿಸ್ವಾರ್ಥ ಮನೋಭಾವ ತೋರಿದರಾದರೂ, ಅನೇಕ ಸಂದರ್ಭಗಳಲ್ಲಿ ಮರದಪಟ್ಟಿಗಳ ಅಡೆತಡೆಗಳಿಂದಾಗಿ ಗೋಲಿನ ಬಳಿ ಸರಿಯಾಗಿ ಆಟವಾಡಲಾಗಲಿಲ್ಲ, ಅವರು ಕೇವಲ ಎರಡು ಗೋಲುಗಳನ್ನು ಪಡೆಯಲು ಸಾಧ್ಯವಾಗಿತ್ತು.
ಓರ್ವ ಆಟಗಾರರಾಗಿ ಇನಿಯೆಸ್ಟಾ'ರ ಸುಧಾರಣೆಯು 2005–06ರ ಕ್ರೀಡಾಋತುವಿನಲ್ಲಿಯೂ ಮುಂದುವರೆಯಿತಲ್ಲದೇ, ಗಾಯದಿಂದಾಗಿ ಕ್ಸೇವಿಯವರ ಅನುಪಸ್ಥಿತಿಯಿಂದಾಗಿ, ಅವರಿಗೆ ನಿಯತವಾಗಿ ಮಧ್ಯ ಮೈದಾನದಲ್ಲಿ ಆರಂಭಿಕ ಹೊಡೆತದ ಅವಕಾಶಗಳನ್ನು ನೀಡಲಾಗುತ್ತಿತ್ತು. ಹೆಚ್ಚಿನ ಕ್ರಮಾಂಕದಲ್ಲಿ ಆಡಲು ಲಭ್ಯವಾದ ಹೆಚ್ಚುವರಿ ಆಟವಾಡುವ ಅವಧಿಯು ಅವರಿಗೆ ಅತ್ಯುತ್ತಮ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರರನ್ನಾಗಿ ವಿಕಸಿತಗೊಳ್ಳಲು ಅವಕಾಶ ನೀಡಿತು. ಬಾರ್ಸಿಲೋನಾ ತಂಡವು ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಡಬಲ್ ಪಂದ್ಯಗಳನ್ನು ಗೆದ್ದುದರಿಂದ ತಂಡಕ್ಕೆ ಅವರು ನೀಡಿದ ಕೊಡುಗೆಯನ್ನು ನಿರ್ವಾಹಕ ಫ್ರಾಂಕ್ ರಿಜ್‌ಕಾರ್ಡ್ ಪ್ರಶಂಸಿಸಿದರು. 2006–07ರ ಕ್ರೀಡಾಋತುವಿನಲ್ಲಿ ಇನಿಯೆಸ್ಟಾ'ರ ವೃತ್ತಿನೈಪುಣ್ಯತೆಯು ಹೆಚ್ಚುತ್ತಾ ಹೋಯಿತಲ್ಲದೇ ತನ್ನ ತಂಡದ ಯಾವುದೇ ಕ್ರಮಾಂಕದಲ್ಲಿಯೂ ಆಡಲು ಸಿದ್ಧವಾಗುವ ಅವರ ಮನೋಭಾವವು ಅವರಿಗೆ ಪ್ರಶಂಸೆಯನ್ನು ದೊರಕಿಸಿಕೊಟ್ಟಿತು. 2006ರ ಆಗಸ್ಟ್ 22ರಂದು ಆಂಡ್ರೆಸ್ ಜರ್ಮನ್ ತಂಡವಾದ ಬೇಯರ್ನ್ ಮ್ಯೂನಿಚ್ ಅನ್ನು 4–0 ಅಂತರದಿಂದ ತಂಡದ ನಾಯಕರಾಗಿ ಸೋಲಿಸಿದ ನಂತರ ಜೋನ್ ಗ್ಯಾಂಪರ್ ಪಾರಿತೋಷಿಕವನ್ನು ಎತ್ತಿ ಹಿಡಿದರು. ಅವರು ಮೊತ್ತಮೊದಲ ಬಾರಿಗೆ ಲೆವ್ಸ್‌ಕಿ ಸೋಫಿಯಾದ ವಿರುದ್ಧದ ಎರಡು ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲಿ ಬಾರ್ಸಿಲೋನಾ ತಂಡದ ಪರ ಎಡಬದಿಯ ಮುಂಚೂಣಿ ಆಟಗಾರರಾಗಿ ಪ್ರಥಮ ಬಾರಿಗೆ ಆಡಿ, ಎರಡು ಗೋಲುಗಳನ್ನು ಹೊಡೆದರು. ಅದೇ ಸ್ಪರ್ಧೆಯ ಪ್ರಥಮ ನಾಕ್‌ಔಟ್ ಘಟ್ಟದಲ್ಲಿ ಲಿವರ್‌ಪೂಲ್ ತಂಡದ ವಿರುದ್ಧ ಮಧ್ಯಮೈದಾನದ ಕೇಂದ್ರ ಭಾಗದಲ್ಲಿ ಅವರು ಆಡಿದರು. ನಿರ್ವಾಹಕ ಫ್ರಾಂಕ್ ರಿಜ್‌ಕಾರ್ಡ್‌ರಿಂದಾಗಿ ಮೈದಾನದ ಬೇರೆ ಬೇರೆ ಸ್ಥಾನಗಳಲ್ಲಿ ಆಡಬೇಕಾಗಿ ಬಂದರೂ, 2006–07ರ ಕ್ರೀಡಾಋತುವು ಇದುವರೆಗಿನ ಇನಿಯೆಸ್ಟಾ'ರ ಅತಿಹೆಚ್ಚಿನ ಗೋಲುಗಳಿಕೆಯ ಋತುವಾಗಿದೆ. ಯೂರೋಪಿಯನ್ ಸ್ಪೋರ್ಟ್ಸ್ ಮ್ಯಾಗಜೀನ್ಸ್‌ನ ಸದಸ್ಯ ನಿಯತಕಾಲಿಕೆಗಳಲ್ಲಿ ಒಂದಾದ ಸ್ಪ್ಯಾನಿಷ್ ಫುಟ್‌ಬಾಲ್ ನಿಯತಕಾಲಿಕೆ ಡಾನ್ ಬಾ/ಬ್ಯಾಲನ್ ನ ಪ್ರಕಾರ ಇನಿಯೆಸ್ಟಾರವರು ಪ್ರಿಮೇರಾ ವಿಭಾಗದ ಕಳೆದೆರಡು ಕ್ರೀಡಾಋತುಗಳಲ್ಲಿನ ಸ್ಥಿರ ಪ್ರದರ್ಶನ ನೀಡಿಕೊಂಡು ಬರುತ್ತಿರುವವರಲ್ಲಿ ಒಬ್ಬರಾಗಿದ್ದು, ಅವರಿಗೆ 2006–07ರ ಕ್ರೀಡಾಋತುವಿನಲ್ಲಿ ಐದನೇ ಸ್ಥಾನ,[೫] ಮತ್ತು 2007–08[೬]ರ ಕ್ರೀಡಾ ಋತುವಿನಲ್ಲಿ ನಾಲ್ಕನೇ ಸ್ಥಾನವನ್ನು ತಮ್ಮ ವಾರ್ಷಿಕ ಶ್ರೇಯಾಂಕ ವ್ಯವಸ್ಥೆಯಾದ ರ್ರ್ಯಾಂಕಿಂಗ್ ಡಾನ್ ಬಾ/ಬ್ಯಾಲನ್ ನಲ್ಲಿ ನೀಡಲಾಗಿತ್ತು. ಅವರು 2008ರ FIFA ವಿಶ್ವವರ್ಷದ ಕ್ರೀಡಾಪಟು ಆಯ್ಕೆಯಲ್ಲಿ ಒಟ್ಟು 37 ಅಂಕಗಳನ್ನು ಗಳಿಸಿ 9ನೇ ಸ್ಥಾನವನ್ನು ಕೂಡಾ ಪಡೆದಿದ್ದಾರೆ.[೭] ಬಾರ್ಸಿಲೋನಾ ತಂಡದ-ಜೊತೆಗಾರರಾದ ಲಿಯೋನೆಲ್ ಮೆಸ್ಸಿ, ಸ್ಯಾಮ್ಯುಯೆಲ್ ಎಟೋ ಮತ್ತು ಕ್ಸೇವಿಯವರುಗಳು ಕೂಡಾ ಅಗ್ರ ಹತ್ತು ಮಂದಿಯಲ್ಲಿ ಇದ್ದರು.
2008–09
[ಬದಲಾಯಿಸಿ]24 ಸೆಪ್ಟೆಂಬರ್ 2008ರಂದು, ಆಂಡ್ರೆಸ್ ಇನಿಯೆಸ್ಟಾರನ್ನು ಮಾಜಿ ಉಪ-ನಾಯಕ ರೊನಾಲ್ಡಿನ್ಹೋರೊಂದಿಗೆ ಮಿಲನ್‌ಗೆ ಹೊರಡುವ ಹೊಸ ಬಾರ್ಸಿಲೋನಾ ನಾಯಕರಲ್ಲಿ ಒಬ್ಬರನ್ನಾಗಿ ಆಯ್ಕೆಮಾಡಲಾಗಿತ್ತು. ಸ್ಥಳೀಯ ಸುದ್ದಿಪತ್ರಿಕೆಯಾದ ಎಲ್ ಮುಂಡೋ ಡೆಪೊರ್ಟಿವೋ ದ, ಪ್ರಕಾರ ಇನಿಯೆಸ್ಟಾರು ಬಾರ್ಕಾನ ನಾಲ್ಕನೇ-ಆಯ್ಕೆಯಾದ ನಾಯಕರಾಗಲಿದ್ದು, ಅವರಿಗಿಂತ ಮುಂಚೆ ಸಹ ಸ್ಪ್ಯಾನಿಷ್‌ರುಗಳಾದ, ಕಾರ್ಲೆಸ್ ಪುಯೋಲ್ (1ನೇ-ಆಯ್ಕೆ), ಕ್ಸೇವಿ (ಎರಡನೇ-ಆಯ್ಕೆ), ಮತ್ತು ವಿಕ್ಟರ್ ವಾಲ್ಡೆಸ್ (ಮೂರನೇ ಆಯ್ಕೆ)ಗಳು ಈ ಅವಕಾಶ ಪಡೆದವರಾಗಿದ್ದರು. ಇನಿಯೆಸ್ಟಾರ ಈ ಹೊಸ ಸಾಧನೆಯು ವಿಶ್ವದಾದ್ಯಂತದ ಎಲ್ಲಾ FC ಬಾರ್ಸಿಲೋನಾದ ಅಭಿಮಾನಿಗಳಿಂದ , ಅದರಲ್ಲೂ ವಿಶೇಷವಾಗಿ ಸ್ಪೇನ್‌ನಾದ್ಯಂತದ ಬಾರ್ಸಿಲೋನಾ-ಪರ ಪತ್ರಿಕಾರಂಗದಿಂದ ಸ್ವಾಗತವನ್ನು ಪಡೆದಿತ್ತು. 2008ರ ನವೆಂಬರ್ ಮಧ್ಯದಲ್ಲಿ ಇನಿಯೆಸ್ಟಾರ ಕಾಲಿಗೆ ಪೆಟ್ಟಾಯಿತಲ್ಲದೇ ಆರು ವಾರಗಳ ವಿಶ್ರಾಂತಿಯ ನಂತರ ಮರಳಬಹುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಇನಿಯೆಸ್ಟಾರು, ತಾವು 100 ಪ್ರತಿಶತ ಗುಣಮುಖರಾಗುವವರೆಗೂ ಹಿಂದಿರುಗಲಿಚ್ಛಿಸದೇ ಅಂತಿಮವಾಗಿ 3 ಜನವರಿ 2009ರಂದು ಮಾಲ್ಲೋರ್ಕಾ ತಂಡದ ವಿರುದ್ಧದ ಪಂದ್ಯದಲ್ಲಿ 65ನೇ ನಿಮಿಷದ ಬದಲಿಯಾಗಿ ಮೈದಾನಕ್ಕೆ ಮರಳಿದರು. ಅದಾದ ಕೇವಲ 10 ನಿಮಿಷಗಳಲ್ಲಿ ಒಂದು ನಿರ್ಣಾಯಕ ಗೋಲನ್ನು ಗಳಿಸಿದ ಅವರು ಕ್ಯಾಂಪ್ ನೌನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡಕ್ಕೆ ಪುನರಾಗಮನ ಮಾಡಿದರು.[೮] 2008–09ರ ಕ್ರೀಡಾಋತುವಿನಲ್ಲಿನ ಅವರ ಪ್ರದರ್ಶನಗಳನ್ನು ಬಹಳವಾಗಿ ಪ್ರಶಂಸಿಸಲಾಗಿತ್ತಲ್ಲದೇ, ಬಾರ್ಸಿಲೋನಾದಲ್ಲಿ ಕ್ಯಾಂಪ್ ನೌ ಪಂದ್ಯದಲ್ಲಿ, ಹಾಗೂ ದೂರದಲ್ಲಿ ನಡೆದ ಪಂದ್ಯಗಳಲ್ಲಿ ಪ್ರತಿಸ್ಪರ್ಧಿ ತಂಡಗಳ ಬೆಂಬಲಿಗರಿಂದಲೂ ನಿಂತು ಚಪ್ಪಾಳೆ ಹೊಡೆದು ನೀಡುವ ಜಯಘೋಷವನ್ನು ಕೂಡಾ ಪಡೆದಿದ್ದರು.[೯] ಇನಿಯೆಸ್ಟಾರು ಪಾಲ್ಗೊಂಡ ಫೆಬ್ರವರಿ 5ರಂದು ನಡೆದ ಮಾಲ್ಲೋರ್ಕಾ ವಿರುದ್ಧದ ಕೋಪಾ ಡೆಲ್ ರೇ ಪಂದ್ಯವು ಬಾರ್ಸಿಲೋನಾದ ಪರವಾಗಿ ಅವರ 250ನೇ ಪಂದ್ಯವಾಗಿತ್ತು. ಮಲಗಾ ತಂಡದ ವಿರುದ್ಧ, ಬಾರ್ಸಿಲೋನಾ' ತಂಡದ ತವರು ನೆಲದಲ್ಲಿ ನಡೆದ ಪಂದ್ಯದಲ್ಲಿ ಇನಿಯೆಸ್ಟಾರು ಮತ್ತೊಮ್ಮೆ ಗಾಯಗೊಂಡರಾದರೂ ಬೇಯರ್ನ್ ಮ್ಯೂನಿಚ್ ತಂಡ ವಿರುದ್ಧದ ಚಾಂಪಿಯನ್ಸ್ ಲೀಗ್‌ನ ಪ್ರಥಮ ಪಾಳಿಯ ಕ್ವಾರ್ಟರ್-ಫೈನಲ್ ಹೋರಾಟದ ಪಂದ್ಯದಲ್ಲಿ ಮರಳಿ ಬಾರ್ಸಿಲೋನಾಕ್ಕೆ 4–0 ಅಂಕಗಳ ಜಯ ದೊರಕಿಸಿಕೊಟ್ಟರು.
Andrés Iniesta, September 2009[೧೦]
ಬಾರ್ಸಿಲೋನಾದೊಂದಿಗಿನ ಅವರ ಪ್ರಸ್ತುತ ಗುತ್ತಿಗೆಯು ಜೂನ್ 2014ರಲ್ಲಿ ಮುಕ್ತಾಯಗೊಳ್ಳಲಿದೆ.[೧೧] 19 ಜುಲೈ 2007ರಂದು, ರಿಯಲ್ ತಂಡವು ಅವರಿಗೆ ತಮ್ಮ ಜವಾಬ್ದಾರಿಯಿಂದ ಮುಕ್ತಗೊಳ್ಳಲು ಪಾವತಿಸಬೇಕಾದ €60 ದಶಲಕ್ಷ ಮೊತ್ತವನ್ನು ಪಾವತಿಸಲು,[೧೨] ತಯಾರಿರುವುದಾಗಿ ಸುದ್ದಿ ಪತ್ರಿಕೆಗಳು ಪ್ರಕಟಿಸಿದ ವರದಿಗಳ ಮೂಲಕ ಪ್ರತಿಸ್ಪರ್ಧಿ ತಂಡವಾದ ರಿಯಲ್ ಮ್ಯಾಡ್ರಿಡ್‌ಗೆ ಸ್ಥಳಾಂತರಗೊಳ್ಳುವ ನಡೆಯನ್ನು ಕೈಗೊಳ್ಳುತ್ತಿದ್ದಾರೆಂಬ ವದಂತಿಯೊಂದಿಗೆ ಅವರನ್ನು ತಳುಕು ಹಾಕಲಾಯಿತು. ಈ ವದಂತಿಗಳನ್ನು ಇನಿಯೆಸ್ಟಾರು ತಳ್ಳಿಹಾಕಿದರಲ್ಲದೇ, ತಾವು ಬಾರ್ಕಾದೊಂದಿಗೆ ಮುಂದುವರೆಯಲು ಇಚ್ಛಿಸಿರುವುದಾಗಿ ಹೀಗೆ ಹೇಳಿದರು: "ನಾನು ಈ ಸುದ್ದಿಗಳ ಬಗ್ಗೆ ಏನೂ ಮಾಡಲಾರೆ, ಆದರೆ ನಾನು ಮತ್ತೊಮ್ಮೆ ಬಿಡಿಸಿ ಹೇಳುವುದೇನೆಂದರೆ ನಾನು ಈ ತಂಡದಲ್ಲಿಯೇ ಮುಂದುವರಿಯಲಿಚ್ಛಿಸುತ್ತೇನೆ. ನಾನು ಬಾರ್ಕಾದಿಂದ ನಿವೃತ್ತಿಯಾಗುತ್ತೇನೆಂದು ಹೇಳುವುದಾದರೆ, ಪೂರ್ಣ ಮನಸ್ಸಿನಿಂದ ಹಾಗೆ ಹೇಳುತ್ತೇನೆ."[೧೩] ಈ ಬಗ್ಗೆ ಇತರರ ಪ್ರಯತ್ನಗಳನ್ನು ತಪ್ಪಿಸಲು ಇನಿಯೆಸ್ಟಾ'ರ ಬಿಡುಗಡೆ ಪಾವತಿ ಮೊತ್ತವನ್ನು €150 ದಶಲಕ್ಷಕ್ಕೆ ಏರಿಸಲಾಗಿದೆ. ಮಾಜಿ ಸಹಆಟಗಾರ ಸ್ಯಾಮ್ಯುಯೆಲ್ ಎಟೋರವರು ಇನಿಯೆಸ್ಟಾರನ್ನು ಹೀಗೆ ವರ್ಣಿಸುತ್ತಾರೆ "ವಿಶ್ವದಲ್ಲೇ ಅತ್ಯುತ್ತಮ ಆಟಗಾರ ; ಇನಿಯೆಸ್ಟಾರು ಮೈದಾನದಲ್ಲಿ ಇದ್ದಾಗಲೆಲ್ಲಾ, ಅವರು ಚಮತ್ಕಾರಗಳನ್ನು ಸೃಷ್ಟಿಸುತ್ತಾರೆ."[೧೪] ಇನಿಯೆಸ್ಟಾರು 6 ಮೇ 2009ರಂದು ನಡೆದ ಚೆಲ್ಸಿಯಾ ವಿರುದ್ಧದ ಬಾರ್ಸಿಲೋನಾ'ದ ಸೆಮಿ-ಫೈನಲ್ ಪಂದ್ಯದಲ್ಲಿ ಸಮವಾಗುವುದಕ್ಕೆ ಬೇಕಾದ ಗೋಲುಗಳನ್ನು ಗಾಯಗೊಳ್ಳುತ್ತಿರುವ ಸಮಯದ ಮೂರನೇ ನಿಮಿಷದಲ್ಲಿ ಗಳಿಸಿದ್ದು ಸರಿಸಮವಾದ ಈ ಪಂದ್ಯದಲ್ಲಿ ಚೆಲ್ಸಿಯಾ ಮಾಡಿದ ಅನೇಕ ಪೆನಾಲ್ಟಿ ಕೋರಿಕೆಗಳನ್ನು ತಿರಸ್ಕರಿಸಲಾಗಿತ್ತು. ಆದಾಗ್ಯೂ, ಇನಿಯೆಸ್ಟಾರು ಉಳಿದಿದ್ದ ನಾಲ್ಕು ನಿಮಿಷಗಳಲ್ಲೇ ಪಂದ್ಯವನ್ನು ದೂರದಿಂದ ಹೊಡೆವ ಗೋಲುಗಳ ಮೂಲಕ ಸರಿಸಮಗೊಳಿಸಿದರು. ಹೀಗೆ ಅವರು ಹೊಡೆದ ಗೋಲು ಬಾರ್ಸಿಲೋನಾ ತಂಡವನ್ನು ಆಗಿನ ಚಾಂಪಿಯನ್ ಮ್ಯಾಂಚೆಸ್ಟರ್ ಯುನೈಟೆಡ್,[೧೫] ತಂಡದ ವಿರುದ್ಧದ 2009ರ UEFA ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯಕ್ಕೆ ಅರ್ಹತೆ ಗಳಿಸಿಕೊಟ್ಟಿತ್ತು, ಅವರು ಭಾರೀ ಪ್ರಭಾವಶಾಲಿಯಾಗಿ ಪರಿಣಮಿಸಿದ ಆ ಪಂದ್ಯದಲ್ಲಿ (ಸ್ಯಾಮ್ಯುಯೆಲ್ ಎಟೋರು ಗಳಿಸಿದ ಪ್ರಥಮ ಗೋಲಿಗೆ ನೀಡಿದ ಸಹಕಾರದ ಮೂಲಕ) ಅವರ ತಂಡವು 2–0 ಅಂತರದಿಂದ ಗೆದ್ದಿತ್ತು. ಪಂದ್ಯದ ನಂತರ, ವೇನ್ ರೂನೆಯವರು ಇನಿಯೆಸ್ಟಾರನ್ನು ವಿಶ್ವದ ಅತ್ಯುತ್ತಮ ಆಟಗಾರರೆಂದು ವರ್ಣಿಸಿದರು.[೨] ಡಾನ್ ಬಾ/ಬ್ಯಾಲನ್ ಪತ್ರಿಕೆ ಯು 2008-09ರ ಲಾ ಲಿಗಾ ಕ್ರೀಡಾಋತುವಿನ ಸಹ-ಆಟಗಾರರಾದ ಕ್ಸೇವಿ ಮತ್ತು ಲಿಯೋನೆಲ್ ಮೆಸ್ಸಿರಿಗಿಂತ ಮುಂಚೂಣಿಯಲ್ಲಿ ಅತ್ಯಧಿಕ ಸ್ಥಿರತೆ ಸಾಧಿಸಿದ ಆಟಗಾರರು ಎಂದು ಅವರನ್ನು ಕೊಂಡಾಡಿತ್ತು.[೧೬] ಫೈನಲ್ ಪಂದ್ಯಕ್ಕಿಂತ ಮುಂಚೆ ಇನಿಯೆಸ್ಟಾರ ತೊಡೆಯಲ್ಲಿ ಸಣ್ಣ ತರಚು ಗಾಯವಾಗಿದ್ದರೂ ಲೆಕ್ಕಿಸದೇ ನೋವಿನಲ್ಲಿಯೇ ಪಂದ್ಯವನ್ನು ಮುಂದುವರೆಸಿ ಅದು ಉಲ್ಬಣಗೊಳ್ಳುವುದಕ್ಕೆ ಅವರು ಕಾರಣರಾದರು.
2009–10
[ಬದಲಾಯಿಸಿ]ಅಕ್ಟೋಬರ್ 18ರಂದು, ಸಹಆಟಗಾರರಾದ ಕ್ಸೇವಿ, ಥಿಯೆರ್ರಿ ಹೆನ್ರಿ, ಯಾಯಾ ಟೌರೆ, ಝ್ಲಾಟಾನ್ ಇಬ್ರಾಹಿಮೋವಿಕ್, ಲಿಯೋನೆಲ್ ಮೆಸ್ಸಿ ಮತ್ತು ಮಾಜಿ-ಸಹಆಟಗಾರ ಮತ್ತು ಪ್ರಸ್ತುತ ಇಂಟರ್‌ನ್ಯಾಜನಲೇ ತಂಡದ ಗೋಲು ಹೊಡೆಯುವ ಆಟಗಾರ/ಸ್ಟ್ರೈಕರ್‌ರಾದ ಸ್ಯಾಮ್ಯುಯೆಲ್ ಎಟೋರವರುಗಳೊಂದಿಗೆ ಯೂರೋಪ್‌ನಲ್ಲಿ ವರ್ಷದ ಅಗ್ರ ಆಟಗಾರರಿಗೆ ನೀಡುವ ಪ್ರತಿಷ್ಠಿತ ಬಾಲನ್ನ್ ಡಾರ್ ಪ್ರಶಸ್ತಿಗೆ ನಾಮಾಂಕಿತಗೊಂಡ 30 ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೂಡಾ ಸೇರ್ಪಡೆಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಇನಿಯೆಸ್ಟಾರವರಿಗೆ ಖಚಿತಗೊಳಿಸಲಾಯಿತು. ಸಹಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ಸೇವಿ ಹರ್ನಾಂಡೆಜ್‌ರವರುಗಳೊಡನೆ ವರ್ಷದ ವಿಶ್ವ ಆಟಗಾರ ಪ್ರಶಸ್ತಿಗೆ ನಾಮಾಂಕಿತಗೊಂಡ ಐವರಲ್ಲಿ ಆಂಡ್ರೆಸ್ ಒಬ್ಬರಾಗಿದ್ದಾರೆ. ನಾಮಾಂಕಿತಗೊಂಡುದುದಕ್ಕೆ ಹೆಮ್ಮೆ ಪಟ್ಟ ಅವರು "ಇದೆಲ್ಲಾ ತಂಡಕ್ಕೆ ಎಂದಿನಿಂದಲೂ ಬೆಂಬಲ ನೀಡುತ್ತಾ ಬಂದಿರುವ ಅಭಿಮಾನಿ ಬಳಗದಿಂದ ಸಾಧ್ಯವಾಯಿತು. ನಮ್ಮ ಸಹ-ಆಟಗಾರರು ಕೂಡಾ ಈ ರೀತಿಯ ಮನ್ನಣೆಗೆ ಅರ್ಹರಾಗಿದ್ದಾರೆ" ಎಂದು ಪ್ರತಿಕ್ರಿಯಿಸಿದರು. ಸಮಾರಂಭವನ್ನು ಜ್ಯೂರಿಚ್‌ನಲ್ಲಿ ನಡೆಸಲಾಯಿತಾಗಿ ಸಹಆಟಗಾರ ಲಿಯೋನೆಲ್ ಮೆಸ್ಸಿ ಈ ಪ್ರಶಸ್ತಿಯನ್ನು ಪಡೆದುಕೊಂಡರು. ಇನಿಯೆಸ್ಟಾರು 134 ಮತಗಳೊಂದಿಗೆ ಐದನೇ ಸ್ಥಾನದಲ್ಲಿದ್ದರು.[೧೭] ಆ ಕ್ರೀಡಾಋತುವಿನ ಪ್ರಥಮ ಗೋಲನ್ನು ರೇಸಿಂಗ್ ಸ್ಯಾಂಟ್ಯಾಂಡರ್‌ರ ವಿರುದ್ಧ 4–0 ಅಂತರದಿಂದ ಗೆದ್ದರು. ಇನಿಯೆಸ್ಟಾ'ರು 2009-10ರ ಕ್ರೀಡಾಋತುವಿನಲ್ಲಿ ಪದೇ ಪದೇ ಮರುಕಳಿಸುತ್ತಿದ್ದ ಗಾಯಗಳ ಸಮಸ್ಯೆಗಳಿಂದಾಗಿ ಬಹುತೇಕ ಅಡ್ಡಿಗಳನ್ನು ಎದುರಿಸಬೇಕಾಯಿತು. 2009ರ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಆದ ತೊಡೆಯಲ್ಲಿನ ತರಚು ಗಾಯದಿಂದಾಗಿ ಕ್ರೀಡಾಋತು-ಪೂರ್ವದ ಅರ್ಹತಾ ತರಬೇತಿಗಳಿಗೆ [೧೮] ಹಾಜರಾಗಲಾಗದ್ದುದರಿಂದ ಬಹುತೇಕ ಹಿಂದಿನ ಕ್ರೀಡಾಋತುವಿನಷ್ಟೇ ಪಂದ್ಯಗಳಲ್ಲಿ ಭಾಗವಹಿಸಿದ್ದರೂ, ಅವೆಲ್ಲದರಲ್ಲೂ ಬಹುತೇಕ ಬದಲಿಯಾಗಿ ಆಡಿ, ಕೇವಲ 20 ಪಂದ್ಯಗಳಲ್ಲಿ ಮಾತ್ರವೇ ಆರಂಭಿಕ ಆಟಗಾರರಾಗಿದ್ದರು.[೧೯] ತರಬೇತಿಯ ಸಮಯದಲ್ಲಿ ಆದ ಹಿಂದಿನ ಮೀನಖಂಡದಲ್ಲಿನ ಗಾಯವು ಉಲ್ಬಣಗೊಂಡುದರಿಂದ ಅವರ ಕ್ರೀಡಾಋತುವು ಕೊನೆಗೊಂಡಿತು.[೨೦]
ಅಂತರರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]UEFA ಐರೋಪ್ಯ 16-ವಯಸ್ಸಿನೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಸ್ಪೇನ್ ಗೆಲ್ಲುವಂತೆ ಮಾಡಿ ಮತ್ತು ಅದರ ಮುಂದಿನ ವರ್ಷದ UEFA ಐರೋಪ್ಯ 19-ವಯಸ್ಸಿನೊಳಗಿನವರ ಚಾಂಪಿಯನ್‌ಷಿಪ್ ಗೆದ್ದ ತಂಡದಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಇನಿಯೆಸ್ಟಾರು 2001ರಲ್ಲಿ ಅಂತರರಾಷ್ಟ್ರೀಯ ಕ್ರೀಡಾರಂಗದಲ್ಲಿ ಪಾದಾರ್ಪಣೆ ಮಾಡಿದರು. ಆಗಿನಿಂದ ಅವರು, ಯುವ/ಯುವಕರ ತರಬೇತುದಾರ ಜುವಾನ್ ಸ್ಯಾಂಟಿಸ್ಟೆಬಾನ್‌ರ ನಿಯತ ಆಯ್ಕೆಯಾದರು. 2003ರಲ್ಲಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ FIFA ವಿಶ್ವ ಯುವ ಚಾಂಪಿಯನ್‌ಷಿಪ್ ಫೈನಲ್‌ಅನ್ನು ತಲುಪಿದ ಸ್ಪ್ಯಾನಿಷ್ ಪರ ತಂಡದ ಭಾಗವಾಗಿದ್ದರಲ್ಲದೇ FIFA ಸರ್ವ-ತಾರಾ ತಂಡದಲ್ಲಿಯೂ ಸೇರ್ಪಡೆಗೊಳಿಸಲ್ಪಟ್ಟಿದ್ದರು. ಸ್ಪೇನ್ U21 ತಂಡದ ಪರ ಆಡುವಾಗಿನ ಅವಧಿಯಲ್ಲಿ ಅನೇಕ ಬಾರಿ ಇನಿಯೆಸ್ಟಾರನ್ನು ನಾಯಕರನ್ನಾಗಿ ಹೆಸರಿಸಲಾಗಿತ್ತು. 15 ಮೇ 2006ರಂದು ನಡೆದ ವಿಶ್ವ ಕಪ್ 2006ರಲ್ಲಿ ಮೂಲತಃ ಹಿಂಜರಿಕೆಯ ಆಟಗಾರರಾದ ಅವರನ್ನು ಅನೇಕ ಜನರು ಅಚ್ಚರಿ ಪಡುವಂತೆ, ಸ್ಪೇನ್ ಅನ್ನು ಪ್ರತಿನಿಧಿಸಲು ಕರೆಯಲಾಗಿತ್ತು. 27 ಮೇ 2006ರಂದು ನಡೆದ ರಷ್ಯಾ ವಿರುದ್ಧದ ಸ್ನೇಹಪರ ಪಂದ್ಯದ ಅರ್ಧಸಮಯ ಕಳೆದ ನಂತರ ಕರೆಸಿಕೊಂಡಾಗ ಸ್ಪೇನ್‌ನ ಪರ ತಮ್ಮ ಪ್ರಥಮ ರಾಷ್ಟ್ರೀಯ ತಂಡದ ಪ್ರವೇಶವನ್ನು ಇನಿಯೆಸ್ಟಾ ಪಡೆದರು. ಅವರು ಸ್ಪೇನ್‌ನ ಪರ ತಮ್ಮ ಪ್ರಥಮ ಗೋಲನ್ನು 7 ಫೆಬ್ರವರಿ 2007ರಂದು ನಡೆದ ಇಂಗ್ಲೆಂಡ್ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ ಗಳಿಸಿದ್ದರು. ಅವರ ದೀರ್ಘ ವ್ಯಾಪ್ತಿಯ ಪ್ರಯತ್ನ, ಕಾಲ್ಚೆಂಡನ್ನು ಅಡ್ಡಸರಳಿನ ಕೆಳಬದಿಯಿಂದ ಹೋಗಬೇಕಾದೆಡೆಗೆ ಒದೆಯುವ ಅವರ ವೈಖರಿಯು ಸ್ಪೇನ್ ತಂಡಕ್ಕೆ 63 ನಿಮಿಷಗಳಲ್ಲಿ ಮುನ್ನಡೆಯನ್ನು ದೊರಕಿಸಿಕೊಟ್ಟಿತು. ಸ್ವೀಡನ್ ತಂಡದ ವಿರುದ್ಧ ಗೋಲುಗಳನ್ನು ಗಳಿಸುವ ಮೂಲಕ ಹಾಗೂ ಗೋಲು ಹೊಡೆಯುವ ಆಟಗಾರ/ಸ್ಟ್ರೈಕರ್‌ಗಳಿಗೆ ಸಹಕಾರ ನೀಡುವ ಮೂಲಕ ಸ್ಪೇನ್'ನ ತಂಡವು ಯೂರೋ 2008ರ ಪಂದ್ಯಾವಳಿಗೆ ಅರ್ಹತೆ ಗಳಿಸುವಲ್ಲಿ ಇನಿಯೆಸ್ಟಾರು ಪ್ರಧಾನ ಪಾತ್ರ ವಹಿಸಿದ್ದರು. ಇನಿಯೆಸ್ಟಾ ಸಾಧಾರಣವಾಗಿ ಮೈದಾನದ ಮಧ್ಯದಲ್ಲಿ ಆಡುವವರಾಗಿದ್ದರೂ, ಸ್ಪೇನ್ ತಂಡವು ಬೇರೆಡೆಗಳಲ್ಲಿ ಆಡುವಾಗ ಮೈದಾನದಲ್ಲಿನ ಇನ್ನೂ ಮುಂದಿನ ಸ್ಥಳಗಳಲ್ಲಿ ಆಡುವ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗುತ್ತಿತ್ತು, ಇದರಲ್ಲಿ ಗಮನಾರ್ಹವಾದ ಪಂದ್ಯವೆಂದರೆ ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ನೀಡಲಾದ ಎಡ ಮುಂಬದಿಯ ಸ್ಥಾನ. ಆಸ್ಟ್ರಿಯಾ ಮತ್ತು ಸ್ವಿಟ್ಜರ್‌ಲೆಂಡ್‌ಗಳಲ್ಲಿ ನಡೆಸಲಾದ UEFA ಯೂರೋ 2008 ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪೇನ್' ತಂಡಕ್ಕೆ ಇನಿಯೆಸ್ಟಾರು ಆಯ್ಕೆಯಾಗಿದ್ದರು. ಉದರದ ವೈರಸ್‌ನಿಂದಾಗಿ ಅವರ ಸಾಮರ್ಥ್ಯವು ಸಾಕಷ್ಟು ಕ್ಷೀಣಿಸಿದ್ದರೂ ಅವರು ಮೈದಾನದ ಮಧ್ಯಭಾಗದಲ್ಲಿ ಪ್ರಧಾನ ಜವಾಬ್ದಾರಿ ನಿರ್ವಹಿಸಿದರು. ಸ್ಪೇನ್'ನ ಗುಂಪು ಮಟ್ಟದ ಮೊದಲೆರಡು ಪಂದ್ಯಗಳಲ್ಲಿ ಆಡಿದ ಅವರು ನಿರ್ದಿಷ್ಟವಾಗಿ ರಷ್ಯಾ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಿಲ್ಲಾ'ರು ಹೊಡೆದ ಎರಡನೇ ಗೋಲಿಗೆ ನೀಡಿದ ಗಮನಾರ್ಹ ಕಳುಹಿಸುವಿಕೆಯ ನಡೆಯ ಮೂಲಕ ತಾವು ತಂಡದ ಪ್ರಮುಖ ಭಾಗವೆಂಬುದನ್ನು ಸಾಬೀತುಪಡಿಸಿದರು. ಗ್ರೀಸ್ ವಿರುದ್ಧದ ಫೈನಲ್ ಗುಂಪು ಪಂದ್ಯದಲ್ಲಿ ಸ್ಪೇನ್ ತಂಡದ ಬಹುತೇಕ ಇತರ ನಿಯತ ಕ್ರೀಡಾಳುಗಳಂತೆ ಅವರಿಗೆ ವಿಶ್ರಾಂತಿ ನೀಡದೇ ಆಡಿಸಲಾದರೂ (ಈ ಪಂದ್ಯದಲ್ಲಿ ರೂಬೆನ್ ಡೆ ಲಾ ರೆಡ್‌ರ ಅದ್ಭುತ ವಾಲಿ ಹೊಡೆತ ಮತ್ತು ಡೇನಿಯಲ್ ಗೈಝಾರಿಂದ ಪಂದ್ಯದ ಕೊನೆಗೆ ಬಂದ ಗೆಲುವಿನ ಹೊಡೆತಗಳಿಂದಾಗಿ 2-1 ಅಂತರದಲ್ಲಿ ಸ್ಪೇನ್ ಗೆದ್ದಿತು), ಸ್ಪೇನ್ ತಂಡವು ಪೆನಾಲ್ಟಿಗಳಲ್ಲಿ ಇಟಲಿಯನ್ನು ಸೋಲಿಸಿದುದರಿಂದ ಅವರು ಕ್ವಾರ್ಟರ್ ಫೈನಲ್‌ಗಳಿಗೆ ಮರಳಿದರು. ತಮ್ಮ ಇತರ ಆರಂಭದ ಆಟಗಳಂತೆಯೇ ಪೆನಾಲ್ಟಿಗಳ ಮುಂಚೆಯೇ ಇನಿಯೆಸ್ಟಾರನ್ನು ಬದಲಿಯಾಗಿ ಕಳಿಸಲಾಗಿತ್ತು. ರಷ್ಯಾ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ ಅವರು ಸಂಪೂರ್ಣ 90 ನಿಮಿಷಗಳ ಕಾಲ ಆಡಿ ಗುಣಮಟ್ಟದ ಅಡ್ಡಚಲನೆಯನ್ನು ನೀಡಿದಾಗ ಕ್ಸೇವಿಯವರು ಅದನ್ನು ತಮ್ಮ ಗೋಲುಗಳ ಖಾತೆ ತೆರೆಯಲು ಬಳಸಿಕೊಂಡರು. ತಾಂತ್ರಿಕ ಅಧ್ಯಯನ ತಂಡ/ಟೆಕ್ನಿಕಲ್ ಸ್ಟಡಿ ಗ್ರೂಪ್ ಅವರನ್ನು ಪಂದ್ಯಪುರುಷರನ್ನಾಗಿ ಘೋಷಿಸಿತು.[೨೧] ಜರ್ಮನಿ ವಿರುದ್ಧದ 1–0 ಅಂತರದಲ್ಲಿ ಜಯ ಗಳಿಸಿದ ಸ್ಪೇನ್'ನ ಫೈನಲ್ ಪಂದ್ಯದಲ್ಲಿ ಅವರು ಪೂರ್ಣಾವಧಿ ಆಡಿದರು. ಸ್ಪೇನ್‌ನ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಸಹಆಟಗಾರರಾದ ಕ್ಸೇವಿ, ಸೆಸ್ಕ್ ಫೇಬ್ರ್‌ಗ್ಯಾಸ್ ಮತ್ತು ಮಾರ್ಕೋಸ್ ಸೆನ್ನಾ ಮತ್ತು ಇತರೆ 5 ಸಹಆಟಗಾರರೊಂದಿಗೆ ಇನಿಯೆಸ್ಟಾರನ್ನೂ ಪಂದ್ಯಾವಳಿಯ ತಂಡ/ಟೀಮ್ ಆಫ್ ದ ಟೂರ್ನಮೆಂಟ್ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಕಾನ್‌ಫೆಡರೇಷನ್ಸ್/ಒಕ್ಕೂಟಗಳ ಕಪ್ ಪಂದ್ಯಾವಳಿಯಲ್ಲಿ ತೊಡೆಯ ಸ್ನಾಯುವಿಗಾದ ಗಾಯದಿಂದಾಗಿ ಇನಿಯೆಸ್ಟಾರು ಪಾಲ್ಗೊಂಡಿರಲಿಲ್ಲ.[೨೨] 2010ರ ವಿಶ್ವ ಕಪ್‌ನಲ್ಲಿ ಅವರನ್ನು ಕರೆಸಿದಾಗ, ಚಿಲಿ ವಿರುದ್ಧದ 2-1 ಅಂತರದ ಗೆಲುವಿನ ಪಂದ್ಯದಲ್ಲಿ ಎರಡನೇ ಗೋಲನ್ನು ಅವರು ಗಳಿಸಿದರು. ಅವರನ್ನು ಪಂದ್ಯ ಪುರುಷರೆಂದೂ ಸಹಾ ಘೋಷಿಸಲಾಗಿತ್ತು.[೨೩] ಸ್ಪೇನ್ ತಂಡವು ಪಂದ್ಯಾವಳಿಯಲ್ಲಿ ಫೈನಲ್ ತಲುಪಲು ಸಹಾಯ ಮಾಡಿದ ಅದ್ಭುತ ಆಟಗಾರಿಕೆಗಾಗಿ, ಇನಿಯೆಸ್ಟಾರನ್ನು ಗೋಲ್ಡನ್ ಬಾಲ್ ಪ್ರಶಸ್ತಿಗೆ ಹೆಸರಿಸಲಾಗಿತ್ತು.[೨೪] ನೆದರ್‌ಲೆಂಡ್ಸ್ ವಿರುದ್ದದ 2010ರ FIFA ವಿಶ್ವ ಕಪ್ ಫೈನಲ್ ಪಂದ್ಯದ 116ನೇ ನಿಮಿಷದಲ್ಲಿ,[೨೫] ವಿಜಯದ ಗೋಲು ಹೊಡೆದ ನಂತರ, ತಾವು ಗೆದ್ದ ಸಂತೋಷವನ್ನು ವ್ಯಕ್ತಪಡಿಸಲು ತಮ್ಮ ಹೊರ ಮೇಲುಡುಪನ್ನು ತೆಗೆದಾಗ 2009ರಲ್ಲಿ ಮೃತಪಟ್ಟ ಮಾಜಿ ಸ್ಪೇನ್ ಯುವ ಸಹಆಟಗಾರ ಮತ್ತು RCD ಎಸ್ಪಾನ್ಯೋಲ್ ನಾಯಕ ಡೇನಿಯಲ್ ಜಾರ್ಕ್ಯೂರ ನೆನಪಿಗಾಗಿ ಸಿದ್ಧಪಡಿಸಿದ್ದ ಅವರ ಒಳಅಂಗಿಯಲ್ಲಿದ್ದ ಬರಹವು ಹೀಗಿತ್ತು "ಡ್ಯಾನಿ ಜಾರ್ಕ್ಯೂ/Dani Jarque - Siempre con nosotros", ಎಂದಿದ್ದು ಅದರರ್ಥವು "ಡ್ಯಾನಿ ಜಾರ್ಕ್ಯೂ ಯಾವಾಗಲೂ ನಮ್ಮೊಂದಿಗಿರುತ್ತಾನೆ," ಎಂಬುದಾಗಿತ್ತು.[೨೬] ಅವರನ್ನು ಪಂದ್ಯ ಪುರುಷರೆಂದೂ ಘೋಷಿಸಲಾಯಿತು.[೨೫]
ಸಾರ್ವಕಾಲಿಕ ಕ್ಲಬ್ ಸಾಧನೆಗಳು
[ಬದಲಾಯಿಸಿ]10 ಏಪ್ರಿಲ್ 2010ರ ಹಾಗೆ [೨೭][೨೮]
1 || 7 ಫೆಬ್ರವರಿ 2007 || ಓಲ್ಡ್ ಟ್ರ್ಯಾಫರ್ಡ್, ಮ್ಯಾಂಚೆಸ್ಟರ್, ಇಂಗ್ಲೆಂಡ್ || ಇಂಗ್ಲೆಂಡ್ || 1 – 0 || 1 – 0 || ಅಂತರರಾಷ್ಟ್ರೀಯ ಸ್ನೇಹಪರ ಪಂದ್ಯ# | ದಿನಾಂಕ | ಸ್ಥಳ | ಎದುರಾಳಿ ತಂಡ | ಗೋಲು/ಅಂಕಗಳು | ಫಲಿತಾಂಶ | ಪೈಪೋಟಿ |
---|---|---|---|---|---|---|
2. | 28 ಮಾರ್ಚ್ 2007 | ONO ಎಸ್ಟಾಡಿ, ಪಾಲ್ಮಾ ಡೆ ಮಾಲ್ಲೋರ್ಕಾ, ಸ್ಪೇನ್ | ಐಸ್ಲೆಂಡ್ | 1 – 0 | 1 – 0 | UEFA ಯೂರೋ 2008 ಅರ್ಹತಾ ಪಂದ್ಯ |
3. | 2 ಜೂನ್ 2007 | ಸ್ಕೋಂಟೋ ಸ್ಟೇಡಿಯನ್ಸ್, ರಿಗಾ, ಲಾಟ್ವಿಯಾ | Latvia | 2 – 0 | 2 – 0 | UEFA ಯೂರೋ 2008 ಅರ್ಹತಾ ಪಂದ್ಯ |
4. | 8 ಸೆಪ್ಟೆಂಬರ್ 2007 | ಲಾಗರ್ಡಾಲ್ಸ್‌ವಾಲ್ಲುರ್, ರೇಕ್ಜಾವಿಕ್, ಐಸ್‌ಲೆಂಡ್ | ಐಸ್ಲೆಂಡ್ | 1 – 0 | 1 – 1 | UEFA ಯೂರೋ 2008 ಅರ್ಹತಾ ಪಂದ್ಯ |
5. | 17 ನವೆಂಬರ್ 2007 | ಸ್ಯಾಂಟಿಯಾಗೋ ಬರ್ನಾಬ್ಯೂ, ಮ್ಯಾಡ್ರಿಡ್, ಸ್ಪೇನ್ | Sweden | 2 – 0 | 3 – 0 | UEFA ಯೂರೋ 2008 ಅರ್ಹತಾ ಪಂದ್ಯ |
6. | 15 ಅಕ್ಟೋಬರ್ 2008 | ಕಿಂಗ್ ಬಾಟೌವಿನ್ ಕ್ರೀಡಾಂಗಣ, ಬ್ರಸೆಲ್ಸ್, ಬೆಲ್ಜಿಯಂ | Belgium | 1 – 1 | 2 – 1 | 2010ರ FIFA ವಿಶ್ವ ಕಪ್ ಅರ್ಹತಾ ಪಂದ್ಯ |
7. | 25 ಜೂನ್ 2010 | ಲಾಫ್ಟಸ್ ವರ್ಸ್‌ಫೆಲ್ಡ್ ಕ್ರೀಡಾಂಗಣ, ಪ್ರಿಟೋರಿಯಾ, ದಕ್ಷಿಣ ಆಫ್ರಿಕಾ | Chile | 2 – 0 | 2 – 1 | 2010ರ FIFA ವಿಶ್ವ ಕಪ್ |
8. | 11 ಜುಲೈ 2010 | ಸಾಕರ್ ಸಿಟಿ, ಜೋಹಾನ್ನೆಸ್‌ಬರ್ಗ್, ದಕ್ಷಿಣ ಆಫ್ರಿಕಾ | ನೆದರ್ಲ್ಯಾಂಡ್ಸ್ | 1 – 0 | 1 – 0 | 2010ರ FIFA ವಿಶ್ವ ಕಪ್ ಫೈನಲ್ |
ಪ್ರಶಸ್ತಿಗಳು
[ಬದಲಾಯಿಸಿ]ಬಾರ್ಸಿಲೋನಾ
[ಬದಲಾಯಿಸಿ]- ಸ್ಪ್ಯಾನಿಷ್ ಲೀಗ್ (4): 2004–05, 2005–06, 2008–09, 2009–10
- ಸ್ಪ್ಯಾನಿಷ್ ಕಪ್: (1) 2008–09
- ಸ್ಪ್ಯಾನಿಷ್ ಸೂಪರ್ಕಪ್ (3): 2005, 2006, 2009
- UEFA ಚಾಂಪಿಯನ್ಸ್ ಲೀಗ್ (2): 2005–06, 2008–09
- UEFA ಸೂಪರ್ ಕಪ್ (1): 2009
- FIFA ಕ್ಲಬ್ ವಿಶ್ವ ಕಪ್ (1): 2009
ಸ್ಪೇನ್
[ಬದಲಾಯಿಸಿ]- 2002ರ FIFA ವಿಶ್ವ ಕಪ್
- 2008ರ UEFA ಐರೋಪ್ಯ ಚಾಂಪಿಯನ್‌ಷಿಪ್
- 2001ರ UEFA ಐರೋಪ್ಯ 16-ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್
- 2002ರ UEFA ಐರೋಪ್ಯ 19-ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್
- 2003ರ FIFA ವಿಶ್ವ ಯುವ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್-ಅಪ್
ವೈಯಕ್ತಿಕ ಸಾಧನೆ
[ಬದಲಾಯಿಸಿ]- ಯೂರೋ 2008ರ ಪಂದ್ಯಾವಳಿಯಲ್ಲಿನ ಪಂದ್ಯಾವಳಿಯ ತಂಡ/ಟೀಮ್ ಆಫ್ ದ ಟೂರ್ನಮೆಂಟ್
- ವರ್ಷದ ಅತ್ಯುತ್ತಮ ಸ್ಪ್ಯಾನಿಷ್ ಆಟಗಾರರಿಗೆ ನೀಡುವ ಡಾನ್ ಬಾ/ಬ್ಯಾಲನ್ ಪ್ರಶಸ್ತಿ : 2009
- ಲಾ ಲಿಗಾ'ದ ಅತ್ಯುತ್ತಮ ದಾಳಿಕೋರ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರ: 2009
- UEFA ವರ್ಷದ ತಂಡ : 2009
ಇವನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]ಮೂಲ ರಾಷ್ಟ್ರೀಯ ತಂಡಗಳ ಟೊಪ್ಪಿಗೆಗಳು ಮತ್ತು ಗೋಲುಗಳ ವಿವರಗಳು: HISTORIA DEL FÚTBOL ESPAÑOL, SELECCIONES ESPAÑOLAS (Spanish) ISBN 978-84-8229-123-9
- ↑ "ಆರ್ಕೈವ್ ನಕಲು". Archived from the original on 2009-02-20. Retrieved 2010-07-23.
- ↑ ೨.೦ ೨.೧ Mole, Giles (28 May 2009). "Manchester United v Barcelona: Wayne Rooney backs Andres Iniesta for Ballon d'Or". The Daily Telegraph. London. Archived from the original on 27 ಮಾರ್ಚ್ 2010. Retrieved 25 April 2010.
- ↑ FCBarcelona.cat. "Andrés Iniesta Lujan". Archived from the original on 9 ಮಾರ್ಚ್ 2009. Retrieved 17 March 2009.
- ↑ "Iniesta Owes Van Gaal - Xtratime Community". Xtratime.org. Retrieved 2010-06-17.
- ↑ donbalon.com. "Ranking db 2006-2007". Retrieved 1 May 2007.
- ↑ www.donbalon.com. "Ranking DB 07-08". Retrieved 1 May 2008.
- ↑ fifa.com. "FIFA World Player Gala 2008" (PDF). Archived from the original (PDF) on 26 ಜನವರಿ 2009. Retrieved 10 January 2009.
- ↑ Goal.com. "Iniesta Enjoys Barcelona Return Against Mallorca". Retrieved 4 January 2008.
- ↑ Goal.com. "Player Ratings: Almeria 0-2 Barcelona". Retrieved 15 March 2009.
- ↑ Iniesta: "No me veo para jugar 90 minutos" Público; 10 September 09; Accessed 11 September 2009 (Spanish)
- ↑ "www.footballdatabase.com". www.footballdatabase.com. Retrieved 2010-06-17.
- ↑ "Real Madrid chasing Barcelona midfielder Iniesta". Ontheminute.com. Archived from the original on 2010-09-27. Retrieved 2010-06-17.
- ↑ "FCBarcelona.cat". FCBarcelona.cat. 2007-07-19. Archived from the original on 2012-08-03. Retrieved 2010-06-17.
- ↑ Matt Lawton (2009-04-25). "Samuel Eto'o exclusive: Sign for a team from England? Why would I quit the best? | Mail Online". Dailymail.co.uk. Retrieved 2010-06-17.
- ↑ "Chelsea 1-1 Barcelona (agg 1-1)". BBC Sport. 6 May 2009. Retrieved 2009-05-07.
- ↑ [೧]
- ↑ "Lionel Messi Wins FIFA World Player Of The Year Award". Goal.com. 2009-12-22. Retrieved 2009-12-22.
- ↑ "Iniesta: "No me veo para jugar 90 minutos"". RTVE.es. 2009-09-10. Retrieved 2010-06-17.
- ↑ Andrés Iniesta (1984-05-11). "Andrés Luján Iniesta Profile, Statistics, News, Game Log - Barcelona, Spanish Primera División - ESPN Soccernet". Soccernet.espn.go.com. Archived from the original on 2009-04-13. Retrieved 2010-06-17.
- ↑ "FCBarcelona.cat". Fcbarcelona.com. 2010-04-13. Archived from the original on 2010-06-16. Retrieved 2010-06-17.
- ↑ "euro2008.uefa.com - Fanzone". Archived from the original on 2008-12-21. Retrieved 2010-07-23.
- ↑ (AFP) – Jun 5, 2009 (2009-06-05). "Injured Iniesta to miss Confederations Cup". Google.com. Archived from the original on 2011-03-15. Retrieved 2010-06-17.
{{cite web}}
: CS1 maint: numeric names: authors list (link) - ↑ "Chile 1 Spain 2: match report". telegarph.co.uk. 2010-06-25. Archived from the original on 2010-06-28. Retrieved 2010-06-25.
- ↑ News.bbc.co.uk
- ↑ ೨೫.೦ ೨೫.೧ "Iniesta sinks Dutch with late strike". ESPN Soccernet. Archived from the original on 2010-07-13. Retrieved 2010-07-23.
- ↑ ನೆದರ್‌ಲೆಂಡ್ಸ್ 0-1 ಸ್ಪೇನ್
- ↑ "Official site statistics". Fcbarcelona.cat. Archived from the original on 2010-05-20. Retrieved 2010-06-17.
- ↑ Andrés Iniesta (1984-05-11). "Soccernet player statistics". Soccernet.espn.go.com. Archived from the original on 2009-04-13. Retrieved 2010-06-17.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಆಂಡ್ರೆಸ್ ಇನಿಯೆಸ್ಟಾ'ರ ಅಧಿಕೃತ ಜಾಲತಾಣ
- BDಫುಟ್‌ಬಾಲ್ ವಿವರಗಳು
- ರಾಷ್ಟ್ರೀಯ ತಂಡದ ದತ್ತಾಂಶಗಳು Archived 2012-05-31 ವೇಬ್ಯಾಕ್ ಮೆಷಿನ್ ನಲ್ಲಿ. (Spanish)
- FC ಬಾರ್ಸಿಲೋನಾದ ವಿವರಗಳು
- ಆಂಡ್ರೆಸ್ ಇನಿಯೆಸ್ಟಾ – FIFA competition record
- FootballDatabase ವೃತ್ತಿಪರ ವಿವರಗಳು ಮತ್ತು ಅಂಕಿಅಂಶಗಳು
- ಆಂಡ್ರೆಸ್ ಇನಿಯೆಸ್ಟಾ ಅಭಿಮಾನಿ ವಲಯ/ಫ್ಯಾನ್ ಝೋನ್
- Pages with reference errors
- Pages using the JsonConfig extension
- Articles with Spanish-language external links
- CS1 maint: numeric names: authors list
- Pages using infobox3cols with undocumented parameters
- Pages using infobox3cols with multidatastyle
- Pages with plain IPA
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1984ರಲ್ಲಿ ಜನಿಸಿದವರು
- ಜೀವಿತ ವ್ಯಕ್ತಿಗಳು
- ಅಲ್ಬಾಸೆಟೆ (ಪ್ರಾಂತ್ಯ) ಮೂಲದ ಜನರು
- ಸ್ಪ್ಯಾನಿಷ್ ಫುಟ್‌ಬಾಲ್ ಆಟಗಾರರು
- ಅಸೋಸಿಯೇಷನ್ ಫುಟ್ಬಾಲ್ನ ಮಿಡ್‌ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರರು
- ಲಾ ಲಿಗಾದ ಫುಟ್‌ಬಾಲ್ ಆಟಗಾರರು
- FC ಬಾರ್ಸಿಲೋನಾದ ಅಥ್ಲೆಟಿಕ್ ಫುಟ್‌ಬಾಲ್ ಆಟಗಾರರು
- FC ಬಾರ್ಸಿಲೋನಾದ ಫುಟ್‌ಬಾಲ್ ಆಟಗಾರರು
- ಸ್ಪೇನ್‌ನ 21 ವರ್ಷದೊಳಗಿನ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರು
- ಸ್ಪೇನ್ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರು
- ಕ್ಯಾಟಲಾನ್ XI ಅತಿಥಿ ಫುಟ್‌ಬಾಲ್ ಆಟಗಾರರು
- 2006ರ FIFA ವಿಶ್ವ ಕಪ್ ಆಟಗಾರರು
- UEFA ಯೂರೋ 2008ರಲ್ಲಿ ಆಡಿದ ಆಟಗಾರರು
- UEFA ಐರೋಪ್ಯ ಫುಟ್‌ಬಾಲ್ ಚಾಂಪಿಯನ್‌ಷಿಪ್-ವಿಜೇತ ಆಟಗಾರರು
- FIFA ವಿಶ್ವ ಕಪ್-ವಿಜೇತ ಆಟಗಾರರು
- ಫುಟ್‌ಬಾಲ್
- Pages using ISBN magic links