ವಿಷಯಕ್ಕೆ ಹೋಗು

ಆಕ್ ವರ್ತ್ ಕುಷ್ಠರೋಗ ವಸ್ತುಸಂಗ್ರಹಾಲಯ ಮತ್ತು ಆಸ್ಪತ್ರೆ, ವಡಾಲ, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'A Unique Museum in Mumbai – Acworth Leprosy Museum'

[ಬದಲಾಯಿಸಿ]

ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ, ಎಂಬ ಮಾತನ್ನು ಮಹಾತ್ಮ ಗಾಂಧಿಯವರು, ಮದರ್ ತೆರೇಸಾ, ಬಾಬಾ ಆಮ್ಟೆ, ಮುಂತಾದ ಮಹನೀಯರು, ಬಹಳಷ್ತು ಮನದಟ್ಟು ಮಾಡಿಕೊಟ್ಟಿದ್ದರು.ಈ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೋಗದ ಶುಷೄಷೆ ಮತ್ತು ಅದರ ನಿವಾರಣೆಯ ಬಗೆಗೆ, ಮನವರಿಕೆ ಮಾಡುತ್ತಿರುವ ಬಳಿಕವೂ ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಇನ್ನೂ ಸರಿಯಾದ ಅರಿವು ಮೂಡದಿರುವುದು ವಿಶಾದಕರ. ಈಗಲೂ ಹಲವಾರು ಜನ ಅದನ್ನು 'ಅಂಟು ಜಾಡ್ಯ'ವೆಂದು ಭಯಬೀಳುತ್ತಾರೆ. ಮಾಹಿತಿ ಗೊತ್ತಿಲ್ಲದಿರುವುದು ಒಂದು ಪಾಲಾದರೆ, ಅದರ ಬಗ್ಗೆ ತಪ್ಪು ಕಲ್ಪನೆಯನ್ನು ಇಂದಿಗೂ ತಾಳುತ್ತಿರುವುದು ಮತ್ತೊಂದು. ಹೀಗೆ ಜನರ ಆಧಾರರಹಿತ ಅಪನಂಬಿಕೆಗಳನ್ನು ದೂರಮಾಡಲು, ಮುಂಬಯಿನ 'ವಡಾಲಾ' ದಲ್ಲಿರುವ 'ಅಕ್ವರ್ತ್ ಆಸ್ಪತ್ರೆ'ಯ ಆವರಣದಲ್ಲೇ ಈಗ ಒಂದು 'ಲೆಪ್ರೊಸಿ ಮ್ಯೂಸಿಎಮ್' ನ್ನು ತೆರೆಯಲಾಗಿದೆ. ಇದು ಹಳೆಯದೇ ವಿಷಯವನ್ನು ಪುನರ್ರೂಪಿಸುವಲ್ಲಿ ಸಮರ್ಥವಾಗಿದೆಯೆಂದು ಅಲ್ಲಿಗೆ ಭೇಟಿನೀಡಿದವರ ಅಭಿಪ್ರಾಯ. ಸಾರ್ವಜನರ ಅವಗಾಹನೆಗೆ ತೆರೆದುಕೊಂಡ ಈ ಹೊಸ ಪರಿಸರ, 'ಕುಷ್ಠರೋಗದ ಹುಟ್ಟು ಮತ್ತು ಚರಿತ್ರೆ,' ಹಾಗೂ ಶಾಸ್ತ್ರೀಯ ಮತ್ತು ಆಧುನಿಕ ಚಿತಿತ್ಸಾ-ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡುವ ವಿಶಿಷ್ಠಪ್ರಕಾರದ ಮ್ಯೂಸಿಯೆಮ್ ಎಂದು ಹೇಳಲಾಗಿದೆ. 'ಇಡೀ ದೇಶದಲ್ಲೇ ಇದೊಂದು ಏಕೈಕ ಸಂಸ್ಥೆ' ಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. '೧೮೯೦' ರಲ್ಲಿ ಆಗಿನ ಬೊಂಬಾಯಿನ ಮ್ಯುನಿಸಿಪಲ್ ಕಮೀಶನರ್ ಆಗಿದ್ದ,'ಎಚ್. ಎ. ಅಕ್ವರರ್ತ್' ರವರ ಮುಂದಾಳತ್ವದಲ್ಲಿ ಆರಂಭವಾದ ಆಸ್ಪತ್ರೆ,ಹಾಗೂ ರಿಸರ್ಚ್ ಸೊಸೈಟಿ ಇವುಗಳ ಜಂಟಿ ಯೋಜನೆಯಾಗಿ ರೂಪುಗೊಂಡಿದೆ ಈ ಮ್ಯೂಸಿಯೆಮ್ ನ್ನು ಈಗ, 'ಜಪಾನಿನ ಸಸಾಕಾವಾ ಮೆಮೋರಿಯಲ್ ಹೆಲ್ತ್ ಫೌಂಡೇಶನ್' ಮತ್ತು 'ನಿಪ್ಪಾನ್' ಮರು ಸಜ್ಜುಗೊಳಿಸಲಾಗಿದೆ.

ಮ್ಯೂಸಿಯೆಮ್ ನ ಒಳಭಾಗದಲ್ಲಿ

[ಬದಲಾಯಿಸಿ]

ಬೆಳವಣಿಗೆ ಮತ್ತು ಚರಿತ್ರೆಯಂತೆಯೇ ಕುಷ್ಠರೋಗದ ಬಗ್ಗೆ ಪುರಾತನ ಕಾಲದಿಂದ ಇಂದಿನ ವರೆಗೆ ಕೈಗೊಳ್ಳಲಾದ ಆರೈಕೆಯ, ಮುತ್ತು ಶುಶೄಶೆಯ ವಿಧಾನಗಳು ಮತ್ತು ಆದ ಪ್ರಗತಿಮತ್ತು ಯಶಸ್ಸಿನ ಮಾಹಿತಿಗಳನ್ನು ದಾಖಿಸಲಾದ ಕಥೆಗಳಿವೆ. ಒಟ್ಟು ೮ ವಿಭಾಗೀಯ ವಲಯಗಳಲ್ಲಿ ಕುಷ್ಠರೋಗದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ತೊರಿಸುವ ಪ್ರಾತ್ಯಕ್ಷಿಕೆಗಳು ಮತ್ತು ಮಾಹಿತಿ-ಸಾರಸಂಗ್ರಹಗಳನ್ನು ಹಮ್ಮಿಕೊಳ್ಳಲಾಗಿದೆ. ಆಸ್ಪತ್ರೆಯ ಆರಂಭದ ದಿನಗಳು ಕುಷ್ಠರೋಗದ ಚರಿತ್ರೆ, ಅದರ ನಿದಾನದಲ್ಲಿ ಮಾಡಿದ ಸಾಧನೆಗಳ ವಿವರಗಳು, ಸಮಯಾವಧಿಯ ಚೌಕಟ್ಟಿನ ಚಿಕಿತ್ಸಾಕ್ರಮ. ಅದಕ್ಕೆ ಮೀಸಲಾಗಿಟ್ಟ ಅವಧಿ, ಸರಳವಾಗಿ ವಿವರಿಸಲ್ಪಡುತ್ತದೆ.

ಕುಷ್ಠರೋಗದ ಬಗ್ಗೆ ಸಾರ್ವಜನಿಕರಿಗಿರುವ ಸಂದೇಹಗಳ ಪರಿಹಾರ

[ಬದಲಾಯಿಸಿ]

ಆರಂಭದ ದಿಶೆಯಲ್ಲೇ ಸರಿಯಾದ ಚಿಕಿತ್ಸೆಯನ್ನು ಅಳವಡಿಸಿಕೊಂಡರೆ, ಸಂಪೂರ್ಣ ಗುಣ ಖಾತ್ರಿ. ಸಂದೇಹ, ಶಂಕೆ, ಭೀತಿಗಳು ಮಾಯವಾಗುತ್ತವೆ.ಇನ್ನೊಂದು ವಿಭಾಗದಲ್ಲಿ ಕೈನಿಂದಲೇ ಮಾಡಿದ ಮರದ ವಿವಿಧ ಕಲಾಕೃತಿಗಳು, ಮಾದರಿಯ ಪ್ರದರ್ಶನವಿದೆ. ಒಂದು ಪ್ರದರ್ಶನ ಗ್ಯಾಲರಿಯಲ್ಲಿ ರೋಗಿಗಳು ಧರಿಸತಕ್ಕ ವಿಶಿಷ್ಠವಾದ ಪಾದರಕ್ಷೆಗಳ ಮಾದರಿಗಳ ಸಾಲನ್ನು ಕಾಣಬಹುದು. ಪ್ರಮುಖ ಆಕರ್ಷಣೆ, ರೋಗಕ್ಕೆ ಸಂಬಂಧಿಸಿದ ಪುರಾತನ ದಾಖಲೆಗಳು, ಸರಕಾರಿ ರಿಪೋರ್ಟ್ ಗಳು ಮತ್ತು ಕರಪತ್ರಗಳನ್ನು ಕ್ರಮಬದ್ಧವಾಗಿ ಜೋಡಿಸಿಟ್ಟಿದ್ದಾರೆ. ಮನುಸ್ಮೃತಿಯಿಂದ ಶುರುವಾಗಿ, ೧೯ ನೇ ಶತಮಾನದ ಬ್ರಿಟಿಷ್ ಆಡಳಿತದ ಸಿವಿಲ್, ಕ್ರಿಮಿನಲ್, ಮತ್ತು ಇಂದಿನ ಕಾನೂನುಗಳ ಒಂದು ಪಕ್ಷಿನೋಟವೂ ನಮಗೆ ನೋಡಲು ಸಿಗುತ್ತದೆ. ಸಂಬಂಧಪಟ್ಟ ಹಲವಾರು ಅಧ್ಯಯಯನ ಸಾಮಗ್ರಿಗಳೂ ಲಭ್ಯವಿವೆ.

'ಪ್ರಾರಭ್ದ ಕರ್ಮ,' 'ಹಣೆಬರಹ' ಮತ್ತು,'ಸಾಂಕ್ರಾಮಿಕಜಾಡ್ಯ' ಕಲ್ಪನೆಗಳಿಗೆ ತಕ್ಕವಿವರಣೆ

[ಬದಲಾಯಿಸಿ]

'ಆಕ್ ವರ್ತ್ ಆಸ್ಪತ್ರೆ' ಯಲ್ಲಿ ಕುಷ್ಠರೋಗದ ಬಗ್ಗೆ ಮಾಹಿತಿನೀಡುವ ಅಮೂಲ್ಯ ಗ್ರಂಥ ಭಂಡಾರವಿದೆ. ಈ ಗ್ರಂಥಗಳ ಉಪಯೋಗವನ್ನು ಅನೇಕ, ಸಮಾಜಶಾಸ್ತ್ರ, ವೈದ್ಯಕೀಯ, ಮತ್ತು ಚರಿತ್ರೆಯ ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಕಾರ್ಯಗಳಿಗೆ, ಬಳಕೆಮಾಡಿಕೊಳುತ್ತರೆ. ಮತ್ತೊಂದು ವಿಶೇಷವೆಂದರೆ, ಈ ಸಂಶೋಧನಾ ವರದಿಗಳು ೧೮೬೦ ರಿಂದ, ಪ್ರತಿಗಳನ್ನು ಡಿಗಿಟಲ್ ರೀಊಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ.ಇಂದಿಗೂ ನಮ್ಮ ಮಡಿವಂತ ಸಮಾಜದ ಹಲವರು, ಕುಷ್ಠರೋಗವನ್ನು 'ಹಣೆಬರಹ', ಮತ್ತು ಪೂರ್ವಜನ್ಮದ ಗುಣಪಡಿಸಲಾಗದ ಪಾಪವಿಶೇಷ, 'ಪ್ರಾರಭ್ದ ಕರ್ಮ' ವೆಂದು ಹಾಗೂ 'ಸಾಂಕ್ರಾಮಿಕಜಾಡ್ಯ'ವೆಂದು ಪರಿಗಣಿಸುವವರು, ಅತ್ಯವಶ್ಯಕವಾಗಿ ಮ್ಯೂಸಿಯೆಮ್ ಗೆ ಒಮ್ಮೆ ಭೆಟ್ಟಿನೀಡಲೇ ಬೇಕು. ಇಲ್ಲಿ ಸಂಗ್ರಹಿಸಿರುವ ಅಮೂಲ್ಯ ಮಾಹಿತಿ ಸಂಗ್ರಹಗಳು ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಕುರುಡುನಂಬಿಕೆಗಳು ಮಾಯವಾಗಿ, ಅನುಕಂಪ ಮೂಡುತ್ತವೆ.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸುವ ಕೊಂಡಿ

[ಬದಲಾಯಿಸಿ]

http://www.theacworthleprosymuseum.org/ Archived 2009-08-11 ವೇಬ್ಯಾಕ್ ಮೆಷಿನ್ ನಲ್ಲಿ. ಚಿತ್ರದ ಮೇಲೆ, ಕ್ಲಿಕ್ಕಿಸುತ್ತಾ ಹೋಗಿ.