ಆಖ್ಯಾತ ಪ್ರತ್ಯಯ
ಆಖ್ಯಾತ ಪ್ರಕರಣ : ಧಾತುವಿನ ವ್ಯಾಖ್ಯೆ, ಹಳಗನ್ನಡ ಆಖ್ಯಾತ ಪ್ರತ್ಯಯಗಳು, ಪುರುಷ ಹಾಗೂ ಕಾಲಸೂಚಕ ಪ್ರತ್ಯಯಗಳು, ಹೊಸಗನ್ನಡದ ಪ್ರತ್ಯಯಗಳ ಪರಿಚಯ ಇತ್ಯಾದಿ ವಿಚಾರಗಳನ್ನು ಈ ಭಾಗದಲ್ಲಿ ನೋಡಬಹುದು.[೧]
ಧಾತು ಎಂದರೇನು ?
[ಬದಲಾಯಿಸಿ]‘ಕ್ರಿಯೆಯರ್ಥದ ಮೂಲಂ ಪ್ರತ್ಯಯ ರಹಿತಂ ಧಾತು’ 215
ಕೇಶಿರಾಜನ ಪ್ರಕಾರ, ‘ಧಾತು ಕ್ರಿಯಾರ್ಥದ ಮೂಲ ಘಟಕ, ಇದು ಪ್ರತ್ಯಯ ರಹಿತವಾದುದು’. ಧಾತುವಿನ ಮೇಲೆ ಹತ್ತುವ ಪ್ರತ್ಯಯಗಳನ್ನು ‘ಆಖ್ಯಾತ ಪ್ರತ್ಯಯ’ಗಳೆಂದು ಕರೆಯುತ್ತಾರೆ. ‘ಧಾರಣಾತ್ ಧಾತು’ ಎಂದರೆ ಆಧಾರ, ಪೋಷಕವಾಗಿರುವುದು, ಸ್ಥಾಪಿಸುವದು. ಕ್ರಿಯಾರ್ಥವನ್ನು ಕೊಡುವುದಾಗಿಯೂ ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು. ನಾಮಾರ್ಥಕ್ಕೂ, ಕ್ರಿಯಾರ್ಥಕ್ಕೂ ಮೂಲವಾದ ಸಾಮಾನ್ಯವಾದ ಘಟಕವನ್ನೇ ನಾವಿಲ್ಲಿ ಧಾತು ಎನ್ನಬಹುದು.[೨] ಧಾತುಗಳಲ್ಲಿ ಎರಡು ವಿಧ.
- ಮೂಲಧಾತು ಅಥವಾ ಸಹಜಧಾತು.
- ಪ್ರತ್ಯಯಾಂತ ಧಾತು ಅಥವಾ ಸಾಧಿತ ಧಾತು.
ಮೂಲಧಾತು
[ಬದಲಾಯಿಸಿ]ಮೂಲಧಾತು ಇವುಗಳನ್ನು ‘ಸಹಜಧಾತು’ಗಳೆಂದೂ ಹೆಳುವರು. ಇವುಗಳಿಗೆ ಪ್ರತ್ಯಯ ಸೇರುವುದಿಲ್ಲ. ಉದಾ: ಮಾಡು, ತಿನ್ನು, ಹೋಗು, ಓದು...ಇತ್ಯಾದಿ.
ಪ್ರತ್ಯಯಾಂತ ಧಾತು
[ಬದಲಾಯಿಸಿ]ಪ್ರತ್ಯಯಾಂತ ಧಾತು ಇವುಗಳನ್ನು ‘ಸಾಧಿತ ಧಾತು’ಗಳೆಂದೂ ಕರೆಯುವರು. ಇವು ಸಾಮಾನ್ಯವಾಗಿ ‘ಇಸು’ ಪ್ರತ್ಯಯಗಳನ್ನು ಹೊಂದಿರುತ್ತದೆ. ಅವುಗಳು ರೂಪುಗೊಳ್ಳುವ ರೀತಿ,
- ನಾಮಪ್ರಕೃತಿಗಳಿಗೆ, ಉದಾ : ಕನ್ನಡ+ಇಸು, ಸಿಂಗರ+ಇಸು, ಇತ್ಯಾದಿ.
- ಅನುಕರಣಗಳು, ಉದಾ: ಧಗಧಗ+ಇಸು, ಥಳಥಳ+ಇಸು, ಇತ್ಯಾದಿ.
- ಸಂಸ್ಕೃತದ ಭಾವನಾಮ, ಉದಾ : ಯತ್ನ+ಇಸು, ಭಾವ+ಇಸು, ಇತ್ಯಾದಿ.
- ಪ್ರೇರಣಾರ್ಥಕ ಪ್ರತ್ಯಯಾಂತ, ಉದಾ : ತಿನ್ನು, ಹೋಗು, ಓಡು, ಇತ್ಯಾದಿ.
- ಅಕರ್ಮಕ ಧಾತುಗಳಿಗೆ ‘ಇಸು’ ಪ್ರತ್ಯಯ ಸೇರಿ ಸಕರ್ಮಕ ಧಾತುವಾಗುವುದು.
ಅಕರ್ಮಕ
[ಬದಲಾಯಿಸಿ]ಕರ್ಮಪದದ ಅಪೇಕ್ಷೆ ಇಲ್ಲದ ಧಾತು - ಮಲಗು, ಹೋಗು ಇತ್ಯಾದಿ.
ಸಕರ್ಮಕ
[ಬದಲಾಯಿಸಿ]ಕರ್ಮಪದದ ಅಪೇಕ್ಷೆಯಿರುವ ಧಾತು-ತಿನ್ನು, ಬರೆ, ಇತ್ಯಾದಿ.
ಹಳಗನ್ನಡ ಮತ್ತು ಹೊಸಗನ್ನಡ ಆಖ್ಯಾತ ಪ್ರತ್ಯಯಗಳ ಪರಿಚಯ
[ಬದಲಾಯಿಸಿ]ಆಖ್ಯಾತವೆಂದರೆ ಕ್ರಿಯಾರೂಪ. ಆಖ್ಯಾತ ಪದವೆಂದರೆ ಕ್ರಿಯಾಪದ. ಕ್ರಿಯಾಪದದ ಕೊನೆಯಲ್ಲಿ ಹತ್ತುವ ಪ್ರತ್ಯಯಗಳು ಕ್ರಿಯಾ ವಿಭಕ್ತಿಗಳು ಎಂದರೆ ಆಖ್ಯಾತ ವಿಭಕ್ತಿಪ್ರತಯಯಗಳು. ಕೇಶಿರಾಜನ ಸೂತ್ರದ ಪ್ರಕಾರ, ಮರಯಿರೆನೆವುಗಳಕ್ಕುಂ . . . .[217]
- ಪ್ರಥಮ, ಮಧ್ಯಮ, ಉತ್ತಮ ಪುರುಷಗಳಿಗೆ ಕ್ರಮವಾಗಿ ಅಮ್,ಅರ್,ಅಯ್,ಇರ್,ಎನ್,ಎವು - ಎಂಬಿವು ಆರು ವಿಭಕ್ತಿಗಳು. ಇವುಗಳು ಏಕ, ಅನೇಕ ವಚನಗಳಲ್ಲಿ ಪ್ರತ್ಯೇಕವಾಗಿ ಹತತುವುವು.
ಕೇಶಿರಾಜನ ಪ್ರಕಾರ, ಆಖ್ಯಾತ ಪ್ರತ್ಯಯಗಳು ಹಳಗನ್ನಡಕ್ಕೆ ವಿಶಿಷ್ಟವಾದವುಗಳು.
ಪುರುಷತ್ರಯಗಳು ಸರ್ವನಾಮ ಆಖ್ಯಾತ ಪ್ರತ್ಯಯ ಏಕವಚನ ಪ್ರಯೋಗ ಆಖ್ಯಾತ ಪ್ರತ್ಯಯ ಬಹುವಚನ ಪ್ರಯೋಗ
[ಬದಲಾಯಿಸಿ]ಪುರುಷವಾಚಕ | ಸರ್ವನಾಮ | ಆಖ್ಯಾತ ಪ್ರತ್ಯಯ ಏಕವಚನ | ಪ್ರಯೋಗ | ಆಖ್ಯಾತ ಪ್ರತ್ಯಯ ಬಹುವಚನ | ಪ್ರಯೋಗ |
---|---|---|---|---|---|
ಪ್ರಥಮ ಪುರುಷ | ಅವನು, ಅವಳು, ಅದು | ಅಮ್ | ನಡೆದಂ | ಅರ್ | ನಡೆದರ್ |
ಮಧ್ಯಮ ಪುರುಷ | ನೀನು, ನೀವು | ಅಯ್ | ನಡೆದಯ್ | ಇರ್ | ನಡೆದಿರ್ |
ಉತ್ತಮ ಪುರುಷ | ನಾನು, ನಾವು | ಎನ್ | ನಡೆದೆನ್ | ಎವು | ನಡೆದೆವು |
- ಪೂರ್ವದ ಹಳಗನ್ನಡದಲ್ಲಿ ಇವುಗಳ ಸ್ವರೂಪ ಬೇರೆಯಾಗಿತ್ತು.
- ಹಳಗನ್ನಡದ ‘ಅಮ್’ ಪ್ರಥಮ ಪುರುಷ ಏಕವಚನದ ಪ್ರತ್ಯಯವು ಪೂರ್ವದ ಹಳಗನ್ನಡದಲ್ಲಿ ಅನ್, ಆನ್, ಒನ್, ಓನ್, ಓನುಂ ಎಂದಾಗಿದ್ದುವು. ಉದಾ :ಮಹಾಪಾತಕನ್[ಹಲ್ಮಿಡಿ ಶಾಸನ 450], ಇತ್ತೊದಾನ್[[[ಬಾದಾಮಿ ಶಾಸನ]] 578], ಕಳ್ದೋನ್[[[ಹಲ್ಮಿಡಿ ಶಾಸನ]] 450], ಕಿಡಿಸಿದೋಮ್[[[ಲಕ್ಷ್ಮೇಶ್ವರ ಶಾಸನ]] 793]. ಹಳಗನ್ನಡದ ‘ಅರ್’ ಪ್ರಥಮ ಪುರುಷ ಬಹುವಚನ ರೂಪವು ಪೂರ್ವದ ಹಳಗನ್ನಡದಲ್ಲಿ ಆ, ಒರ್ ಎಂದಾಗಿದ್ದವು. ಉದಾ : ಸ್ವರ್ಗಾಗ್ರಮಾನ್ ಎರೆದಾರ್, ಪಟಂ ಸೂಡೊದೋರ್.
- ಹೊಸಗನ್ನಡದಲ್ಲಿ ಎವೆಲ್ಲವೂ ಸ್ವರಾಂತ್ಯಗಳಾಗಿವೆ. ಉದಾ
- ಅಮ್-ಅನು-ಬಂದನು. ಅರ್-ಬಂದರು [ಪ್ರಥಮ ಪುರುಷ]
- ಅಯ್, ಎ,ಇ - ಬಂದೆ > ಬಂದಿ, ಇರ್-ಇರಿ-ಬಂದಿರಿ [ಮಧ್ಯಮ ಪುರುಷ]
- ಎನ್-ಏನು > ಎ; ನೋಡಿದೆನು, ನೋಡಿದೆ.
- ಎನ್-ಎವು > ಇವಿ - ನೋಡಿದೆವು, ನೋಡಿದಿವಿ[ಪ್ರಾದೇಶಿಕ]
ಆಖ್ಯಾತ ಪ್ರತ್ಯಯಗಳಲ್ಲಿ ಕಾಲಕ್ರಮದಲ್ಲಿ ಆಗುವ ವ್ಯತ್ಯಾಸ ರೂಪ
[ಬದಲಾಯಿಸಿ]ಮೇಲೆ ಹೇಳಿದ ಎಲ್ಲಾ ಆಖ್ಯಾತ ಪ್ರತ್ಯಯಗಳು ಲಿಂಗ, ವಚನಾನುಸಾರಿಯಾಗಿ ಆಯಾ ಪ್ರತ್ಯಯಗಳನ್ನು ಪಡೆದುದೊಳ್ಳುತ್ತವೆ. ಆದರೆ ಹಳಗನ್ನಡದಲ್ಲೇ ಆಗಲಿ, ಹೊಸಗನ್ನಡದಲ್ಲೇ ಆಗಲಿ ನಾನು, ನೀನು, ತಾನು ಎಂಬ ಪದಗಳು ಕೇವಲ ವಾಚ್ಯ ಲಿಂಗಗಳಾಗಿವೆ. ಎಂದರೆ ಇಲ್ಲಿ ಸ್ತ್ರೀಲಿಂಗ, ಪುಲ್ಲಿಂಗ ಭೇದವಿಲ್ಲ. ಅದೇ ರೀತಿ ಪುಲ್ಲಿಂಗ ಸ್ತ್ರೀಲಿಂಗದ ಬಹುವಚನದ ‘ಗಳ್’, ‘ಅರ್’; ಮಧ್ಯಮ ಪುರುಷದ - ‘ಇರ್’; ಉತ್ತಮ ಪುರುಷದ ‘ಎವು’ ಎಂಬಲ್ಲಿಯೂ ಲಿಂಗಭೇದವಿಲ್ಲ. ಅನ್, ಅಳ್, ಅದು - ಮುಂತಾದ ಏಕವಚನದಲ್ಲಿ ಪುಂಸ್ತ್ರೀನಪುಂಸಕಾದಿ ಲಿಂಗಗಳು ನೇರವಾಗಿ ಗೊತ್ತಾಗುತ್ತದೆ.
ಪುರುಷತ್ರಯ | ಪೂರ್ವದ ಹಳಗನ್ನಡ | ಹಳಗನ್ನಡ | ಹೊಸಗನ್ನಡ |
---|---|---|---|
ಪ್ರಥಮ ಪುರುಷ ಏಕವಚನ | ಅನ್, ಒನ್,ಓನ್, ಓನುಂ | ಅಮ್ | ಅನು |
ಬಹುವಚನ | ಆರ್, ಒರ್, ಓರ್ | ಅರ್, ಆರು | ಅರು |
ಮಧ್ಯಮ ಪುರುಷ ಏಕವಚನ | ಐ, ಅಯ್ | ಅಯ್ | ಎ, ಇ |
ಬಹುವಚನ | ಇರ್ | ಇರ್ | ಇರಿ |
ಉತ್ತಮ ಪುರುಷ ಏಕವಚನ | ಆನ್, ಏನ್ | ಎನ್ | ಎನು, ಎ |
ಬಹುವಚನ | ಎಮ್, ಎವ್ ಎಮ್ | ಎಮ್, ಎವು | ಇವಿ, ವಿ |
ಕಾಲಸೂಚಕ ಆಖ್ಯಾತ ಪ್ರತ್ಯಯಗಳು
[ಬದಲಾಯಿಸಿ]ಯಾವುದೇ ಆಖ್ಯಾತ ಪ್ರತ್ಯಯಗಳು ಆಯಾ ಧಾತುವಿಗೆ ನೆರವಾಗಿ ಹತ್ತುವುದಿಲ್ಲ. ಕಾಲವಾಚಿ ಪ್ರತ್ಯಯಗಳನ್ನು ಮೊದಲು ಪಡೆದು, ಕ್ರಿಯಾರೂಪಗಳಾಗಿ ನಿಂತು, ನಂತರ ಆಖ್ಯಾತ ಪ್ರತ್ಯಯಗಳನ್ನು ಹೊಂದುತ್ತವೆ. ಉದಾಹರಣೆಗೆ, ನೋಡು, ಬಾಡು, ಕೂಡು, ಇತ್ಯಾದಿ ಪದಗಳು.
ಇನ್ನು ದ, ದಪ, ವ, ಎಂಬಿವು ಕಾಲವಾಚಕ ಪ್ರತ್ಯಯಗಳು. ಇಲ್ಲಿ ಪ್ರಕೃತಿ - ಪ್ರತ್ಯಯಗಳು ಬೆಸುಗೆಯ ರೂಪದಲ್ಲಿ ಸೇರುತ್ತವೆ. ಉದಾ : ಕೊಟ್ಟಪೆಂ = ಕೊಡು[ಧಾತು], ಕೊಟ್ಟ+ದಪ+ಏನ್= ‘ದಪ’ ಕಾಲವಾಚಿ
- ಪೋದನ್=ಪೋಗು[ಧಾತು], ಪೋಗು+ದ+ಅನ್= ‘ದ’ ಕಾಲವಾಚಿ
- ನಾಚುವಳ್=ನಾಣ್[ಧಾತು], ನಾಣ್+ಚು+ವ+ಅಳ್= ‘ವ’ ಕಾಲವಾಚಿ
- ಕಂಡೆನ್ =ಕಾಣ್[ಧಾತು] ಕಾಣ್+ದಪ+ಎನ್=‘ದಪ’ ಕಾಲವಾಚಿ [ಕಾಣ್ದಪೆನ್-ಕಂಡಪೆನ್>ಕಂಡಹೆನ್-ಕಂಡೆನ್-ಕಂಡೆನು]