ವಿಷಯಕ್ಕೆ ಹೋಗು

ಆಬ್ಸೆಲಾಮ್, ಆಬ್ಸೆಲಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಬ್ಸೆಲಾಮ್!, ಆಬ್ಸೆಲಾಮ್!
ಪ್ರಥಮ ಮುದ್ರಣದ ಮುಖಚಿತ್ರ
ಲೇಖಕರುವಿಲಿಯಂ ಫಾಕ್ನರ್
ಮುಖಪುಟ ಕಲಾವಿದGeorge Salter[]
ದೇಶUnited States
ಭಾಷೆಇಂಗ್ಲೀಷ್
ಪ್ರಕಾರSouthern Gothic
ಪ್ರಕಾಶಕರುRandom House
ಪ್ರಕಟವಾದ ದಿನಾಂಕ
೧೯೩೬
ಪುಟಗಳು೩೮೪
ಐಎಸ್‍ಬಿಎನ್0-679-73218-7
OCLC407010
813.52
LC ClassPS3511.A86
ಮುಂಚಿನPylon
ನಂತರದThe Unvanquished

ಆಬ್ಸೆಲಾಮ್, ಆಬ್ಸೆಲಾಮ್ - ಅಮೆರಿಕದ ಸುಪ್ರಸಿದ್ದ ಕಾದಂಬರಿಕಾರ ವಿಲಿಯಂ ಫಾಕ್ನರ್ನ ಕಾದಂಬರಿ (1936). 'ದಿ ಸೌಂಡ್ ಅಂಡ್ ದಿ ಪ್ಯೂರಿ' ಎಂಬ ಕಾದಂಬರಿಯಲ್ಲಿ ಆತ ಉಪಯೋಗಿಸಿದ ತಂತ್ರದ ಪ್ರಯೋಗವೇ ಇಲ್ಲೂ ಮುಂದುವರಿದಿದೆ. ಕಥಾ ನಾಯಕನಾದ ಥಾಮಸ್ ಸಟ್‍ಪೆನ್‍ನ ಕಥೆಯನ್ನು ಮೂರು ಜನರ ಬಾಯಲ್ಲಿ ಕೃತಿಕಾರ ಹೇಳಿಸುತ್ತಾನೆ. ಕಥೆ ಹೇಳುವ ರೀತಿಯಲ್ಲಿ ಅವರ ವ್ಯಕ್ತಿತ್ವ, ಅವರ ಹೃದಯದಲ್ಲಿರುವ ಭಾವನೆಗಳು ಚೆನ್ನಾಗಿ ಪ್ರಕಟವಾಗುತ್ತವೆ.

ಕಥಾವಸ್ತು

[ಬದಲಾಯಿಸಿ]

ಸಟ್‍ಪೆನ್‍ನ ಅತ್ತಿಗೆ ರೋಸಾ ಕೋಲ್ಡ್‍ಫೀಲ್ಡ್ ಎಂಬಾಕೆ ಕ್ವಿಂಟನ್ ಕಾಂಪ್-ಸನ್‍ಗೆ ಆತ ಹಾರ್‍ವರ್ಡ್‍ಗೆ ಪ್ರಯಾಣ ಮಾಡುವ ಸ್ವಲ್ಪ ಮುಂಚೆ-ಸಟ್‍ಪೆನ್‍ನ ಕಥೆಯನ್ನು ಮೊದಲು ಹೇಳುತ್ತಾಳೆ. ಈ ಕಥೆಯನ್ನು ಆಮೇಲೆ ಕ್ವಿಂಟನ್‍ನ ತಂದೆ ಮುಂದುವರಿಸುತ್ತಾನೆ. ಅನಂತರ ಕ್ವಿಂಟನ್ ಈ ಇಬ್ಬರ ಕಥೆಗಳಿಗೆ ತನ್ನ ವಿವರಣೆಯನ್ನು ಸೇರಿಸಿ ಹಾರ್‍ವರ್ಡಿ ತನ್ನ ಜೊತೆಗಾರನಿಗೆ ಹೇಳುತ್ತಾನೆ. ಥಾಮಸ್ ಸಟ್‍ಪೆನ್‍ಗೆ ತಾನು ದಕ್ಷಿಣ ಅಮೆರಿಕದ ದೊಡ್ಡ ಶ್ರೀಮಂತನೆಂದು ಕರೆಸಿಕೊಳ್ಳಬೇಕೆಂಬ ಮಹತ್ತ್ವಾಕಾಂಕ್ಷೆ. ಅಷ್ಟೇ ಅಲ್ಲ, ಅವನಿಗೆ ಶ್ರೀಮಂತ ಕುಟುಂಬದ ಸ್ಥಾಪಕನೆಂದು ಕರೆಸಿಕೊಳ್ಳುವ ಹಂಬಲವೂ ಇತ್ತು. ಈ ದಿಶೆಯಲ್ಲಿ ಆತ ಮಾಡುವ ಪ್ರಯತ್ನಗಳೇ ಇಲ್ಲಿನ ಕಥಾವಸ್ತು.

ಆತ ಹುಟ್ಟಿದ್ದು ಪಶ್ಚಿಮ ವರ್ಜೀನಿಯದ ಒಂದು ಬಡ ಬಿಳಿಯ ಕುಟುಂಬದಲ್ಲಿ. ತನ್ನ ಸಾಹಸದಿಂದ ಜಫರ್‍ಸನ್ ಊರಿನಲ್ಲಿ ಸಮಾಜದ ಓರ್ವ ಗಣ್ಯ ವ್ಯಕ್ತಿಯಾಗುತ್ತಾನೆ. ಅಮೆರಿಕದ ಅಂತರ್ಯುದ್ಧ ಸಮಯದಲ್ಲಿ ಕರ್ನಲ್ ಪದವಿಗೆ ಚುನಾಯಿತನಾಗುತ್ತಾನೆ. ಯುದ್ಧ ಮುಗಿದು ತನ್ನ ಜಮೀನಿಗೆ ಹಿಂತಿರುಗುವಾಗ ಆತ ನೋಡುವ ಪರಿಸ್ಥಿತಿ-ಮದುವೆಯಿಲ್ಲದೆ ಕನ್ಯೆಯಾಗಿಯೇ ಉಳಿದಿರುವ ಮಗಳು, ಕಾಣದೆ ತಪ್ಪಿಸಿಕೊಂಡಿರುವ ಮಗ, ಅರ್ಧ ಬೀಳು ಬಿದ್ದಿರುವ ಜಮೀನು. ತನ್ನ ಹೆಸರನ್ನು ಮುಂದುವರಿಸುವ ಉದ್ದಿಶ್ಯದಿಂದ ಮತ್ತೊಬ್ಬ ಮಗನನ್ನು ಪಡೆಯಲು ಹಂಬಲಿಸುತ್ತಾನೆ. ಆತ ಪ್ರೀತಿಸಿದ್ದ ಒಬ್ಬಳು ಬಡ ಬಿಳಿ ಹುಡುಗಿಯ ಹೊಟ್ಟೆಯಲ್ಲಿ ಒಂದು ಹೆಣ್ಣು ಮಗು ಹುಟ್ಟುತ್ತದೆ. ಕಡೆಗೆ ಸಟ್‍ಪೆನ್‍ನನ್ನು ಹುಡುಗಿಯ ಅಜ್ಜ ಕೊಂದು ಹಾಕುತ್ತಾನೆ. ಅವನು ಕಂಡ ಕನಸಿನ ಕೊನೆಯಲ್ಲಿ ಉಳಿಯುವುದು ಉರಿದು ಬಿದ್ದ ಮನೆ, ಅದರ ಬೂದಿಯಲ್ಲಿ ಅರಚುತ್ತ ಹೊರಳಾಡುತ್ತ ಬಿದ್ದಿರುವ ತನ್ನ ಒಬ್ಬನೇ ವಂಶಸ್ಥ ಜಿಮ್ ಬಾಂಡ್ ಎಂಬ ಬೆಪ್ಪು ನೀಗ್ರೊ. ತನ್ನ ಮೊದಲಿನ ನೀಗ್ರೊ ಹೆಂಡತಿಯನ್ನು ಮತ್ತು ಅವಳ ಮೂಲಕ ಪಡೆದ ಮಗನನ್ನು ಆತ ತನ್ನ ದಕ್ಷಿಣ ದೇಶದ ಸಮಾಜದ ಕಟ್ಟುಪಾಡಿಗೊಳಗಾಗಿ ನಿರಾಕರಿಸಿದ್ದ. ಅದರ ಪರಿಣಾಮಗಳು ಆತನ ಬಾಳಿನುದ್ದಕ್ಕೂ ಹಿಂಬಾಲಿಸಿ ಕಡೆಗೆ ಆತ ಸತ್ತ ಮೇಲೆ ಆತನ ಕನಸನ್ನು ನುಚ್ಚುನೂರು ಮಾಡುತ್ತವೆ. ಬಿಳಿಯರ ವಂಶದ ಹಿರಿಮೆ, ನೀಗ್ರೊಗಳ ಸಮಸ್ಯೆಗಳಿಗೆ ಈ ಕಾದಂಬರಿ ಒಳ್ಳೆಯ ನಿದರ್ಶನವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "George Salter's Covers #50–99". Coverbrowser.com. Retrieved 2012-09-07.