ಆಮೆಲಿ ಟ್ರೂಬೆಟ್ಸ್ಕೊಯಿ
ಆಮೆಲಿ ಟ್ರೂಬೆಟ್ಸ್ಕೊಯಿ (1863-1945). ಅಮೆರಿಕದ ಕಾದಂಬರಿಗಾರ್ತಿ ಹಾಗೂ ನಾಟಕಗಾರ್ತಿ.
ಬದುಕು
[ಬದಲಾಯಿಸಿ]ಸಂಯುಕ್ತಸಂಸ್ಥಾನದ ಸೆನೆಟರ್ ಹಾಗೂ ಫ್ರಾನ್ಸಿನಲ್ಲಿ ರಾಯಭಾರಿಯಾಗಿದ್ದ ವಿಲಿಯಂ ಕ್ಯಾಬೆಲ್ ರೀವ್ಸ್ನ ಮೊಮ್ಮಗಳು. ಹುಟ್ಟಿದ್ದು ವರ್ಜಿನಿಯದ ರಿಚ್ಮಂಡ್ನಲ್ಲಿ. ಜಾನ್ ಆರಮ್ಸ್ಟ್ರಾಂಗ್ಚಾನ್ಲಕ್ ಎಂಬಾತನನ್ನು ಮದುವೆಯಾಗಿದ್ದು 1888ರಲ್ಲಿ ಆತನಿಂದ ವಿಚ್ಛೇದನ ಪಡೆದಳು. ಅನಂತರ ಪ್ರಿನ್ಸ್ ಪಿಯರಿ ಟ್ರೂಬೆಟ್ಸ್ಕೊಯಿ ಎಂಬಾತನನ್ನು (1896-1936) ಮದುವೆಯಾದಳು.
ಬರಹ
[ಬದಲಾಯಿಸಿ]ಈಕೆಯ ಮೊದಲ ಕಾದಂಬರಿ ದಿ ಕ್ವಿಕ್ ಆರ್ ದಿಡೆಡ್ (1888) ತುಂಬ ಜನಪ್ರಿಯತೆ ಗಳಿಸಿತು. ಇದರಲ್ಲಿ ವಿಧವೆಯೊಬ್ಬಳು ತನ್ನ ಹೊಸ ಪ್ರೇಮಿಯೊಂದಿಗೆ ಇಟ್ಟ ಗಾಢವಾದ ಪ್ರೇಮವನ್ನು ನಿರೂಪಿಸುವ ಚಿತ್ರಣ ಓದುಗರಲ್ಲಿ ಕೋಲಾಹಲವೆಬ್ಬಿಸಿತು. ವರ್ಜೀನಿಯ ಆಫ್ ವರ್ಜೀನಿಯ (1889); ದಿ ಗೋಲ್ಡನ್ ರೋಸ್ (1908); ಪ್ಯಾನ್ಸ್ ಮೌಂಟನ್ (1910); ಹಿಡನ್ ಹೌಸ್ (1911); ದಿ ವಲ್ಡ್ರ್ಸ್ ಎಂಡ್ (1914); ದಿ ಕ್ವೀರ್ನೆಸ್ ಆಫ್ ಸೆಲಿಯ (1926); ಫೈರ್ ಡ್ಯಾಮ್ಟ್ (1930)- ಇವು ಈಕೆಯ ಕಾದಂಬರಿಗಳು. ಆಗಸ್ಟೀನ್ ದಿ ಮ್ಯಾನ್ (1906) ಎಂಬುದು ಸರಳ ರಗಳೆಯಲ್ಲಿ ಬರೆದ ದುರಂತಕಾವ್ಯ. ಹೆರಾಸ್ ಅಂಡ್ ಮ್ಯಾರಿಯಾಮ್ನೆ (1888); ದಿ ಫಿಯರ್ ಮಾರ್ಕೆಟ್ (19160; ಅಲೀಜನ್ಸ್ (1918) ಲವ್ ಇನ್ ಎ ಮಿಸ್ಟ್ (ಗಿಲ್ಬರ್ಟ್ ಎಮರಿ ಜೊತೆಗೂಡಿ-1926). ದಿ ಯಂಗ್ ಎಲಿಜಬೆತ್ ( 1937) -ಮುಂತಾದವು ಈಕೆಯ ನಾಟಕಗಳು.