ವಿಷಯಕ್ಕೆ ಹೋಗು

ಆರೈಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರೈಗ

ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣುವ ನಕ್ಷತ್ರಪುಂಜ. ಆಕಾಶದ ಉತ್ತರ ವಲಯದಲ್ಲಿ ಪರ್ಸಿಯಸ್ ಪುಂಜ ಮತ್ತು ಮಿಥುನರಾಶಿಗಳ ನಡುವೆ ಇದೆ. ಸುಪ್ರಸಿದ್ಧ ಮಹಾವ್ಯಾಧ ಪುಂಜದಿಂದ (ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಸಂಜೆ ಪುರ್ವಾಕಾಶದಲ್ಲಿ ಕಾಣುವ ಭವ್ಯ ಚಿತ್ರ) ಉತ್ತರಕ್ಕಿದೆ. ಆರೈಗದಲ್ಲಿರುವ ಅತ್ಯಂತ ಪ್ರಕಾಶಮಾನ ನಕ್ಷತ್ರ ಬ್ರಹ್ಮ ಹೃದಯ. (ಕಪೆಲ್ಲಾ) ಇದರ ದೂರ ೪೫ ಜ್ಯೋತಿರ್ವರ್ಷಗಳು. ದೃಗ್ಗೋಚರ ಕಾಂತಿ ಪ್ರಮಾಣದಲ್ಲಿ ಇದರ ಸ್ಥಾನ ೬ (ಸೂರ್ಯ1). ಆರೈಗ ಪುಂಜದ ಸ್ವಲ್ಪಾಂಶ ಆಕಾಶಗಂಗೆಯ ಮೇಲೆ ಇದೆ. ಕಪೆಲ್ಲಾದ ಬ್ರಹ್ಮಾಂಡ ರೇಖಾಂಶ (ಗ್ಯಾಲಾಕ್ಟಿಕ್ ಲಾಂಗಿಟ್ಯೂಡ್) ಸುಮಾರು ೧೩೦೦. ಆರೈಗ ಪುಂಜದ ಪಂಚಮ ನಕ್ಷತ್ರ ಎಪ್ಸಿಲಾನ್ ಆರೈಗ ಮಹಾದೈತ್ಯ ನಕ್ಷತ್ರಗಳ (ಸುಪರ್ ಜಯಂಟ್ಸ್) ಸಾಲಿಗೆ ಸೇರಿದೆ. ಇದರ ವ್ಯಾಸ ಸೂರ್ಯವ್ಯಾಸದ ೨,೦೦೦ ಪಟ್ಟು, ಅಂದರೆ ಆರೈಗವನ್ನು ಸೂರ್ಯನ ಸ್ಥಾನದಲ್ಲಿಟ್ಟರೆ ಶನಿ, ಯುರೇನಸ್ ಗ್ರಹಗಳ ಕಕ್ಷೆಗಳ ನಡುವಣ ಪ್ರದೇಶ ದವರೆಗೆ ಈ ನಕ್ಷತ್ರ ವ್ಯಾಪಿಸುತ್ತದೆ. ೧೮೯೧ರಲ್ಲಿ ಆರೈಗಪುಂಜದಲ್ಲಿ ಒಂದು ಹೊಸ ನಕ್ಷತ್ರ ಗೋಚರವಾಯಿತು. ಇಂಥ ನಕ್ಷತ್ರಗಳ ಹೆಸರು ನೋವಾ. ಬರಿಗಣ್ಣಿಂದ ಕಂಡ ಈ ನೋವಾ (ಹೆಸರು ನೋವಾ ಆರೈಗ) ಖಗೋಳ ವಿಜ್ಞಾನಿಗಳ ವಿಶೇಷ ಕುತೂಹಲವನ್ನು ಆರೈಗ ಪುಂಜದೆಡೆಗೆ ಸೆಳೆಯಿತು. ಅಂದು ನೋವಾ ಆರೈಗದ ಕಾಂತಿವರ್ಗ (ಮ್ಯಾಗ್ನಿಟ್ಯೂಡ್) ೩.೮; ಇಂದು ೧೫ ನಕ್ಷತ್ರ-ಲೋಕ ಲ್ಯಾಟಿನ್ ಭಾಷೆಯಲ್ಲಿ ಆರೈಗ ಪದದ ಅರ್ಥ ರಥಿಕ. ಆ ರಥಿಕ ತನ್ನ ಬಲಗೈಯಲ್ಲಿ ಲಗಾಮನ್ನೂ ಎಡಗೈಯಲ್ಲಿ ಆಡು ಮತ್ತು ಅದರ ಮರಿಗಳನ್ನೂ ಹಿಡಿದಿರುವಂತೆ ಕಾಣಿಸುತ್ತದೆ. ಕಪೆಲ್ಲಾ ನಕ್ಷತ್ರ ಆಡಿನ ದೇಹ.

"https://kn.wikipedia.org/w/index.php?title=ಆರೈಗ&oldid=714958" ಇಂದ ಪಡೆಯಲ್ಪಟ್ಟಿದೆ