ಆರ್ಕಿಕ್ಲ್ಯಾಮೈಡಿ
ಆರ್ಕಿಕ್ಲ್ಯಾಮೈಡಿ, ಇದು ದ್ವಿದಳ ಸಸ್ಯಗಳ ಗುಂಪಿನ ಒಂದು ವಿಶಾಲ ಶಾಖೆ. ಎಂಗ್ಲರ್ ಜರ್ಮನಿಯ ವರ್ಗೀಕರಣ ಶಾಸ್ತ್ರಜ್ಞನ ರೀತ್ಯ ಎಂಬ್ರಿಯೋಫೈಟಾ ಸೈಪೊನೋಗ್ಯಾಮ ಎಂಬ ಬೀಜಕಾರಿಗಳ ವಿಭಾಗಕ್ಕೂ ಆಯಂಜುಯೋಸ್ಟಮ್ಸ್ ಎಂಬ ಆಚ್ಛಾದಿತ ಬೀಜಕಾರಿಗಳ ಉಪವಿಭಾಗಕ್ಕೂ ಸೇರಿದೆ. ಈ ಪಂಗಡದ ಪುಷ್ಪಗಳಲ್ಲಿ ದಳಗಳು ಬಿಡಿಯಾಗಿವೆ: ಈ ಉಪ ತರಗತಿಗೆ ಸಮನಾದ ಮತ್ತೊಂದು ಉಪತರಗತಿ ಮೆಟಾಕ್ಲ್ಯಾಮಿಡಿ; ಆದರೆ ಈ ಎರಡನೆಯ ಉಪತರಗತಿಯಲ್ಲಿ ಪುಷ್ಪದಳಗಳು ಕೂಡಿಕೊಂಡಿವೆ. ಆರ್ಕಿಕ್ಲ್ಯಾಮೈಡಿ ಗುಂಪಿನಲ್ಲಿ 33 ವರ್ಗಗಳೂ 201 ಕುಟುಂಬಗಳೂ ಸೇರಿವೆ. ಈ ಸಮುದಾಯದಲ್ಲಿ ಮೂಲರೂಪದ ಆಚ್ಛಾದಿತ ಬೀಜಕಾರಿಗಳನ್ನು ಸೇರಿಸಲಾಗಿದೆ. ಅವುಗಳಲ್ಲಿ ಮರಗಳೇ ಹೆಚ್ಚು; ವಿಕಾಸವಾದಂತೆಲ್ಲ ಮರಗಳು ಕಡಿಮೆ; ಮೇಲ್ತರದ ಕುಲಗಳಲ್ಲಿ ಮೂಲಿಕೆಗಳೇ ಹೆಚ್ಚು; ಕೆಳವರ್ಗದವುಗಳಲ್ಲಿ ಪುಷ್ಪಾಂಗಗಳು ಸುರುಳೀ ಕ್ರಮದಲ್ಲಿಯೂ ಮೇಲ್ತರದ ಕುಲಗಳಲ್ಲಿ ವೃತ್ತಕ್ರಮದಲ್ಲಿಯೂ ಜೋಡಿಸಿವೆ. ಆದಿಕುಲಗಳಲ್ಲಿ ಪುಷ್ಪಾಂಗಗಳು ಅನರ್ದಿಷ್ಟವಾಗಿಯೂ ಮುಂದುವರಿದ ಕುಲಗಳಲ್ಲಿ ನಿರ್ದಿಷ್ಟವಾಗಿಯೂ ಇವೆ. ಪುಷ್ಪಗಳು ಆವರಣರಹಿತವಾಗಿಯೊ ಏಕಾವರಣಸಹಿತವಾಗಿಯೊ ಅಥವಾ ದ್ವಯಾವರಣಸಹಿತವಾಗಿಯೊ ಇರುತ್ತವೆ; ಕೆಲವು ಕುಲಗಳಲ್ಲಿ ದಳರಹಿತವಾಗಿರುತ್ತವೆ. ಆದಿ ಕುಲಗಳಲ್ಲಿ ಉಚ್ಚ ಸ್ಥಿತಿಯ ಅಂಡಾಶಯ, ಬಹಳ ಮುಂದುವರಿದ ಕುಲಗಳಲ್ಲಿ ಅಧೋಸ್ಥಿತಿಯ ಅಂಡಾಶಯ ಇರುವುದು. ಈ ಕೆಳಗೆ ಆರ್ಕಿಕ್ಲ್ಯಾನಮಿಡಿಯಲ್ಲಿ ಕಂಡುಬರುವ ವರ್ಗಗಳ ಅಥವಾ ವರ್ಗಸಮೂಹಗಳ ಮುಖ್ಯ ಗುಣವಿಶೇಷಗಳನ್ನು ತಿಳಿಸಲಾಗಿದೆ.[೧]
ವರ್ಗಗಳು 1 ರಿಂದ 14
[ಬದಲಾಯಿಸಿ](ವರ್ಟಿಸಿಲ್ಲೇಟಿ, ಪೈಪರೇಲಿಸ್, ಹೈಡ್ರೊಸ್ಟಾಕಿಯೇಲಿಸ್, ಸ್ಯಾಲಿಕೇಲಿಸ್, ಗ್ಯಾರಿಯೇಲಿಸ್, ಬೆಲನಾಪ್ಸಿಡೇಲಿಸ್, ಮಿರಿಕೇಲಿಸ್, ಲೈಟ್ನೆರಿಯೇಲಿಸ್, ಜೂಗ್ಲಾಂಡೇಲಿಸ್, ಜೂಲಿಯನೇಲಿಸ್, ಬ್ಯಾಟಿಡೇಲಿಸ್, ಫ್ಯಾಗೇಲಿಸ್, ಆರ್ಟಿಕೇಲಿಸ್ ಮತ್ತು ಪೋಡಾಸ್ಟಿಮೇಲಿಸ್-20 ಕುಟುಂಬಗಳು) . ಈ ಸಮೂಹದ ವರ್ಗಗಳನ್ನು ಆದಿರೂಪದ ಅಥವಾ ಕೀಳ್ತೆರದ (ಪ್ರಿಮಿಟೀವ್) ವರ್ಗಗಳೆಂದು ಪರಿಗಣಿಸಲಾಗಿದೆ. ಈ ವರ್ಗಗಳಲ್ಲಿ ಸಾಮಾನ್ಯವಾಗಿ ಮರಗಳೇ ಹೆಚ್ಚು. (ಉದಾ: ಏಕ್, ಬೀಚ್, ವಾಲ್‍ನಟ್, ನೀರಂಜಿಮರ ಇತ್ಯಾದಿ) . ಹಿಂದೆ ಈ ಸಮೂಹವನ್ನು ಅಮೆಂಟಿಫೆರಿ (ಕುಚ್ಚುತೆನೆ ಸಸ್ಯಗಳು) ಎಂದು ಕರೆಯಲಾಗುತ್ತಿತ್ತು. ಪುಷ್ಪಗಳ ನಗ್ನ ಪುಷ್ಪಾವರಣ ಕ್ಷೀಣಪತ್ರದ ತರಹದ್ದು. ಪುಷ್ಪಾಂಗಗಳ ಸಂಖ್ಯೆ ಸಾಮಾನ್ಯವಾಗಿ ಅನಿರ್ದಿಷ್ಟ. ಪರಾಗಸ್ಪರ್ಶ ಗಾಳಿಯಿಂದ ನಡೆಯುವುದು. ಈ ವರ್ಗಗಳಿಗೂ ಇತರ ವರ್ಗಗಳಿಗೂ ಇರುವ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ.
ವರ್ಗಗಳು 15 ರಿಂದ 20
[ಬದಲಾಯಿಸಿ](ಪ್ರೋಟಿಯೇಲಿಸ್, ಸ್ಯಾಂಟಲೇಲಿಸ್, ಅರಿಸ್ಟೊಲೋಕಿಯೇಲಿಸ್, ಬೆಲೆನೋಪೊರೇಲಿಸ್, ಪಾಲಿಗೊನೇಲಿಸ್ ಮತ್ತು ಸೆಂಟ್ರೋ ಸ್ಪರ್ಮಿ-23 ಕುಟುಂಬಗಳು). ಈ ವರ್ಗ ಸಮೂಹ ಸ್ಥೂಲವಾಗಿ ನೋಡಿದರೆ ಪ್ರತ್ಯೇಕವಾಗಿ ಉಳಿದಿರುವಂತೆ ಕಾಣುತ್ತದೆ. ಇದರಲ್ಲಿ ಗಂಧದ ಮರದ ಕುಟುಂಬ, ದಂಟು ಕುಟುಂಬ, ( ಅಮರಾಂತೇಸಿ). ]]ಚಕ್ಕೋತ]]ಸೊಪ್ಪು ಕುಟುಂಬ ಮುಂತಾದುವು ಅಡಕವಾಗಿವೆ. ಪುಷ್ಪಪತ್ರಗಳು ಒಂದೇ ತರಹದ್ದಾಗಿ ದಳಕಲ್ಪವಾಗಿವೆ. ಮುಂದುವರಿದ ಕುಟುಂಬಗಳಲ್ಲಿ ಪುಷ್ಪಪತ್ರಕ್ಕೂ ದಳಸಮೂಹಕ್ಕೂ ವ್ಯತ್ಯಾಸ ಕಂಡಿದೆ. ಪುಷ್ಪವಲಯಗಳು ವೃತ್ತಕ್ರಮದಲ್ಲಿ ಕಾಣುತ್ತವೆ; ಪ್ರತಿಸುತ್ತಿನಲ್ಲೂ 3--5 ವರೆಗೆ ಬಿಡಿ ಭಾಗಗಳಿವೆ. ಕೆಲವು ಕುಟುಂಬಗಳಲ್ಲಿ ಕೀಟದಿಂದ ಪರಾಗಸ್ಪರ್ಶ ನಡೆಯುತ್ತದೆ.
ವರ್ಗ 21 (ರ್ಯಾನೇಲಿಸ್ 19 ಕುಟುಂಬಗಳು)
[ಬದಲಾಯಿಸಿ]ಇತ್ತೀಚಿಗೆ ಈ ವರ್ಗಕ್ಕೆ ಇತರ 6 ಕುಟುಂಬಗಳನ್ನು ಸೇರಿಸಿಕೊಳ್ಳಲಾಗಿದೆ. ಈ ವರ್ಗ ಆರ್ಕಿಕ್ಲ್ಯಾಮಿಡಿ ಉಪತರಗತಿಯಲ್ಲಿ ಬಹು ವಿಶಾಲವಾದ ಮತ್ತು ಮುಖ್ಯವಾದ ವರ್ಗವೆಂದು ಪರಿಗಣಿಸಲಾಗಿದೆ. ಇದರಲ್ಲಿ ಸಾಮಾನ್ಯವಾದ ರ್ಯಾನನ್‍ಕ್ಯುಲೇಸಿ, ನಿಂಘಿಯೇಸಿ, ಅನೋನೇಸಿ, ಮ್ಯಾಗ್ನೋಲಿಯೇಸಿ (ತಾವರೆ, ಸೀತಾಫಲ, ಸಂಪಿಗೆ) ಮುಂತಾದ ಕುಲಗಳು ಸೇರಿವೆ. ಪುಷ್ಪಗಳು ಪುಷ್ಪಪತ್ರ ಮತ್ತು ದಳಸಮೂಹಗಳು ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸುವುದಿಲ್ಲ. ಪುಷ್ಪಾಂಗಗಳು ಅಧಿಕ ಸಂಖ್ಯೆಯಲ್ಲಿದ್ದು ಕೀಳ್ತೆರದ ಕುಟುಂಬಗಳಲ್ಲಿ ಸುರುಳಿ ಕ್ರಮದಲ್ಲಿಯೂ ಮೇಲ್ತರದ ಕುಟುಂಬಗಳಲ್ಲಿ ವೃತ್ತ ಕ್ರಮದಲ್ಲಿಯೂ ಜೋಡಿಸಲ್ಪಟ್ಟಿವೆ. ಅಂಡಕೋಶ ಅಧಿಕ ಶಲಾಕಾಗ್ರಗಳನ್ನೂ ವಿಭಕ್ತ ಆಂಡಕೋಶವನ್ನೂ ಹೊಂದಿದೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಕೆಲವು ವರ್ಗೀಕರಣ ಶಾಸ್ತ್ರಜ್ಞರು ಈ ರ್ಯಾನೇಲಿಸ್ ವರ್ಗವನ್ನು ಆರ್ಕಿಕ್ಲ್ಯಾಮಿಡಿಯಲ್ಲಿ ಆದಿರೂಪದ ಜೀವಂತ ವರ್ಗ ಎಂದೂ ಈ ವರ್ಗದಿಂದ ಏಕದಳ ಮತ್ತು ದ್ವಿದಳ ಸಸ್ಯಪಂಗಡಗಳು ಉದ್ಭವಿಸಿವೆಯೆಂದೂ ಹೇಳುತ್ತಾರೆ.
ವರ್ಗಗಳು22 ರಿಂದ 23 (ರ್ಹಿಯಡೇಲಿಸ್ ಮತ್ತು ಸ್ಯಾರಾಸಿನಿಯೇಲಿಸ್ 10 ಕುಟುಂಬಗಳು)
[ಬದಲಾಯಿಸಿ]ಈ ವರ್ಗಗಳ ಕೆಲವು ಕುಟುಂಬಗಳು ರ್ಯಾನೇಲಿಸ್ ವರ್ಗದ ವಿಶೇಷ ಶಾಖೆಗಳಾಗಿ ಉದ್ಭವಿಸಿದಂತೆ ಕಾಣುತ್ತವೆ. ಈ ವರ್ಗಗಳಲ್ಲಿ ಕ್ರೂಸಿಫೆರಿ (ಮೂಲಂಗಿ) ಸ್ಯಿಆರಾಸಿನಿಯೇಸಿ ಮುಂತಾದ ಕುಟುಂಬಗಳು ಸೇರಿವೆ. ಪುಷ್ಪಗಳು ಕೇಂದ್ರ ಸೌಷ್ಠವವುಳ್ಳವಾಗಿಯೂ (ಆಕ್ಟಿನೋಮಾರ್ಫಿಕ್) ಪುಷ್ಪಭಾಗಗಳು ವೃತ್ತ ಕ್ರಮದಲ್ಲಿಯೂ ಇವೆ. ಸಂಯುಕ್ತಾಂಡಕೋಶ ಮತ್ತು ಉಚ್ಚಸ್ಥಿತಿಯ ಅಂಡಾಶಯ ಈ ಕುಲಗಳ ಮುಖ್ಯ ಗುಣಗಳು.
ವರ್ಗ 24: (ರೊಸೇಲಿಸ್ 17 ಕುಟುಂಬಗಳು)
[ಬದಲಾಯಿಸಿ]ಈ ವರ್ಗ ಆರ್ಕಿಕ್ಲ್ಯಾ ಮಿಡಿಯ ಒಂದು ವಿಶಾಲ ಪಂಗಡ ಇದರಲ್ಲಿ ಹಿರಿದಾದ 12,000 ಪ್ರಭೇದಗಳಿರುವ ಲಗ್ಯುಮಿನೋಸಿ (ಹುರುಳಿ ಇತ್ಯಾದಿ ಜಾತಿಗಳ) ಕುಟುಂಬವೂ ಪ್ರಮುಖವಾದ (ಗುಲಾಬಿ) ಕುಟುಂಬವೂ ಸೇರಿವೆ. ಈ ಎರಡು ಕುಟುಂಬಗಳೂ ರ್ಯಾನೇಲಿಸ್ ರೊಸೇಸಿವರ್ಗದಿಂದ ಜನಿಸಿದ ಶಾಖೆಗಳಾಗಿ ಕಾಣುತ್ತವೆ. ಪುಷ್ಪಾಂಗಗಳು ವೃತ್ತ ಕ್ರಮದಲ್ಲಿಯೂ ಪಂಚಾಪವತ್ರ್ಯವಾಗಿಯೂ ಇವೆ. ಅಂಡಾಶಯ ಉಚ್ಚ ಮಧ್ಯ ಅಥವಾ ಅಧೋಸ್ಥಿತಿಯಲ್ಲಿ ಕಂಡುಬರುತ್ತದೆ. ಲೆಗ್ಯುಮಿನೋಸಿ ಕುಟುಂಬದಲ್ಲಿ ಪುಷ್ಪಗಳು ಪಾಶ್ರ್ವಸೌಷ್ಠವ ಪಡೆದು ಕೀಟ ಪರಾಗಸ್ಪರ್ಶಕ್ಕಿರುವ ಹೊಂದಾಣಿಕೆಯನ್ನು ತೋರಿಸುತ್ತವೆ.
ವರ್ಗಗಳು 25 ರಿಂದ 32
[ಬದಲಾಯಿಸಿ](ಪ್ಯಾಂಡೇಲಿಸ್, ಜಿರೇನಿಯೇಲಿಸ್, ಸಪಿಂಡೇಲಿಸ್ ರಾಹ್ಯಮ್‍ನೇಲಿಸ್, ಮಾಲ್‍ವೇಲಿಸ್ ಪೆರೈತೀಲಿಸ್, ಒಪನ್‍ಷಿಯೇಲಿಸ್, ಮತ್ತು ಮಿರ್ಟಿಪ್ಲೋರಿ 89 ಕುಟುಂಬಗಳು). ಈ ವರ್ಗಗಳು ಹಿಂದಿನ ಕೆಲವು ವರ್ಗಗಳಿಂದ ಶಾಖೆಗಳಾಗಿ ಬೇರ್ಪಟ್ಟು ಪ್ರತಿಯೊಂದೂ ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿದೆ. ಎಲಚಿ, ದಾಸವಾಳ, ಪಾಪಾಸುಕಳ್ಳಿ, ಸೀಬೆ ಮುಂತಾದ ಜಾತಿಗಳು ಇದರಲ್ಲಿ ಸೇರಿವೆ. ಪುಷ್ಪಗಳು ಖಚಿತ ವೃತ್ತ ಕ್ರಮವನ್ನು ತೋರಿಸುತ್ತವೆ. ಮುಂದುವರಿದ ವರ್ಗಗಳಲ್ಲಿ ಅಂಡಾಶಯ ಅಧೋಸ್ಥಿತಿಯಲ್ಲಿರುತ್ತದೆ.[೨]
ವರ್ಗ 33: (ಅಂಬೆಲ್ಲಿಪ್ಲೋರಿ 3 ಕುಟುಂಬಗಳು ).
[ಬದಲಾಯಿಸಿ]ಆರ್ಕಿಕ್ಲ್ಯಾಮಿಡಿಯಲ್ಲಿ ಈ ವರ್ಗ ಅತ್ಯಂತ ಮುಂದುವರಿದ ವರ್ಗ. ಇದರಲ್ಲಿ ಅಂಬೆಲ್ಲಿಫೆರಿ (ಕೊತ್ತಂಬರಿ ) ಕುಟುಂಬ ಪ್ರಮುಖ. ಛತ್ರಮಂಜರಿ, ಪುಷ್ಪಾಂಗಗಳ ಸಂಖ್ಯೆ ಕನಿಷ್ಠವಾಗಿರುವಿಕೆ, ಮತ್ತು ಅವುಗಳಲ್ಲಿ ಗಿಣ್ಣಿರುವಿಕೆ, ಅಧೋಸ್ಥಿತಿಯ ಅಂಡಾಶಯ , ಅಂಡಕೋಶ ಸಂಖ್ಯೆ 2 ಮತ್ತು ಪ್ರತಿ ಅಂಡಕೋಶದಲ್ಲಿಯೂ ಒಂದೇ ಅಂಡಕವಿರುವಿಕೆ; ಛತ್ರಮಂಜರಿಯ ಸುತ್ತಲೂ ಇನ್‍ವಲ್ಯೂಕರ್ ಎಂಬ ಕ್ಷೀಣಪತ್ರಗಳಿವೆ; ಹೂ ಗೊಂಚಲಿನ ಹೊರಾವರಣದ ಹೂಗಳು ಆಕರ್ಷಕ, ಮಧ್ಯದ ಹೂಗಳು ಹೆಚ್ಚು ಫಲಕಾರಿ __ ಇವು ಈ ವರ್ಗದ ಮುಖ್ಯ ಗುಣಗಳು.
ಉಲ್ಲೇಖಗಳು
[ಬದಲಾಯಿಸಿ]