ಆರ್ಥರ್ ಹಾರ್ಡೆನ್
ಆರ್ಥರ್ ಹಾರ್ಡೆನ್ | |
---|---|
ಜನನ | ೧೮೬೫ ಅಕ್ಟೋಬರ್ ೧೨ |
ಮರಣ | ೧೯೪೦ ಜೂನ್ ೧೭ |
ರಾಷ್ಟ್ರೀಯತೆ | ಬ್ರಿಟನ್ನ್ |
ಕಾರ್ಯಕ್ಷೇತ್ರಗಳು | ರಸಾಯನವಿಜ್ಞಾನಿ |
ಬ್ರಿಟನ್ನಿನ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಆರ್ಥರ್ ಹಾರ್ಡೆನ್‌ರವರು ೧೮೬೫ರ ಅಕ್ಟೋಬರ್ ೧೨ರಂದು ಮಾಂಚೆಸ್ಟರ್ನಲ್ಲಿ ಜನಿಸಿದರು. ಹಾರ್ಡೆನ್‌ರವರು ೧೮೯೮ರಲ್ಲಿ ಸಕ್ಕರೆಯ ಕಿಣ್ವನದ (sugar fermentation) ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಅಂತಹ ಪ್ರಕ್ರಿಯೆಯಲ್ಲಿ ಝೈಮೇಸ್ (zymase) ಎಂಬ ಕಿಣ್ವದ (enzyme) ಪಾತ್ರವಿದೆ ಎಂಬುದಾಗಿ ಅವರು ಕಂಡುಹಿಡಿದರು. ಹಾಗೆ ನೋಡಿದರೆ ಅನೇಕ ಕಿಣ್ವಗಳ ಮಿಶ್ರಣವಾಗಿರುವ ಝೈಮೇಸ್‌ನನ್ನು ಎಜುರ್ಡ್ ಬುಕ್ನರ್ರವರು (೧೮೬೦-೧೯೧೭) ೧೮೮೭ರಲ್ಲಿಯೇ ಕಂಡುಹಿಡಿದಿದ್ದರು. ನಂತರ ಹಾರ್ಡೆನ್ ಮತ್ತು ಅವರ ಸಹಚರರು ಝೈಮೇಸ್‌ನಲ್ಲಿ ಎರಡು ವಿರುದ್ಧ ಸ್ವಭಾವಗಳ ವಸ್ತುಗಳಿವೆ ಎಂಬುದಾಗಿ ಕಂಡುಹಿಡಿದರು. ಮೊದಲನೆಯದು ಉಷ್ಣ-ಸಂವೇದಕ (heat-sensitive) ವಸ್ತುವಾದರೆ, ಇನ್ನೊಂದು ಉಷ್ಣ-ಸ್ಥಿರ (heat-stable) ವಸ್ತುವಾಗಿದೆ (Harden called it ‘co-ferment’and now known as co-enzyme) ಎಂಬುದಾಗಿ ಗೊತ್ತಾಯಿತು.[೧] ಥಾಮಸ್ ಗ್ರಹಾಮ್‌ರವರು (೧೮೦೫-೧೮೬೯) ಕಂಡುಹಿಡಿದಿದ್ದ ಅಪೋಹನ ಪ್ರಕ್ರಿಯೆಯ ವಿಧಾನದಿಂದ ಹಾರ್ಡೆನ್‌ರವರು ಆ ಎರಡೂ ವಸ್ತುಗಳನ್ನು ಬೇರ್ಪಡಿಸುವುದರಲ್ಲಿ ಯಶಸ್ವಿಯಾದರು. ಅದರಿಂದ ಉಷ್ಣ-ಸ್ಥಿರ ವಸ್ತುವಾದ ಕೊ-ಎನ್ಝೈಮ್ ಸ್ವಭಾವದಲ್ಲಿ ಕಲಿಲ ವಸ್ತುವಲ್ಲ (non-colloidal) ಎಂಬುದು ದೃಢವಾಯಿತು. ಕಿಣ್ವನ ಪ್ರಕ್ರಿಯೆಗೆ ಕಿಣ್ವ (enzyme), ಸಹ-ಎನ್ಝೈಮ್ (co-enzyme), ಅಧಃಸ್ತರ (substrate) ಎಂಬ ಮೂರು ಘಟಕಗಳು ಅವಶ್ಯಕವಾಗಿವೆ ಎಂಬುದಾಗಿ ಹಾರ್ಡೆನ್‌ರವರು ತೋರಿಸಿಕೊಟ್ಟರು. ಆ ಪ್ರಕ್ರಿಯೆಯ ವೇಗವನ್ನು ವರ್ಧಿಸಲು ಫಾಸ್ಫೇಟ್‌ಗಳನ್ನು ಸೇರಿಸಬೇಕಾಗುತ್ತದೆ, ಇಲ್ಲದಿದ್ದರೆ ಪ್ರಕ್ರಿಯೆ ಬಹಳ ನಿಧಾನಗತಿಯಿಂದ ನಡೆಯುತ್ತದೆ ಎಂಬುದನ್ನೂ ಸಹ ಅವರು ಕಂಡುಹಿಡಿದರು. ಈ ಸಂಶೋಧನೆಗಾಗಿ ಹಾರ್ಡೆನ್‌ರವರಿಗೆ ೧೯೨೯ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು[೨] [ಜರ್ಮನಿಯ ಜೈವಿಕ ರಸಾಯನವಿಜ್ಞಾನಿ ಹಾನ್ಸ್ ವಾನ್ ಯೂಲರ್-ಚೆಪ್ಲಿನ್‌ರವರ (೧೮೭೩-೧೯೬೪) ಜೊತೆ] ನೀಡಲಾಯಿತು. ಹಾರ್ಡೆನ್‌ರವರು ೧೯೪೦ರ ಜೂನ್ ೧೭ರಂದು ಬಕಿಂಗ್‌ಹ್ಯಾಮ್‌ಷೈರಿನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-03-24. Retrieved 2016-04-22.
- ↑ https://www.nobelprize.org/nobel_prizes/chemistry/laureates/1929/harden-facts.html