ವಿಷಯಕ್ಕೆ ಹೋಗು

ಆರ್ಥಿಕ ಆವರ್ತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Triangular trade wordless

ಜಗತ್ತಿನ ಆರ್ಥಿಕ ವ್ಯವಸ್ಥೆಯ ಕಳೆದ ನೂರೈವತ್ತು ವರ್ಷಗಳಿಂದ ಗಣನೀಯವಾದ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಇಂತಹ ಆರ್ಥಿಕ ಪ್ರಗತಿಯು ಯಾವುದೇ ಏರು-ಪೇರುಗಳಿಲ್ಲದೇ ನಿರಂತರವಾಗಿ ಸಾಗಿದೆ ಎಂದು ಭಾವಿಸಲು ಸಾಧ್ಯವಿಲ್ಲ. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಆಳವಾಗಿ ಬೇರೂರಿದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗಳಲ್ಲಿ ಸಮಗ್ರ ಆರ್ಥಿಕ ಚಟುವಟಿಕೆಗಳಲ್ಲಿನ ಏರುಪೇರುಗಳು ಸಹಜವೆನಿಸಿಬಿಟ್ಟಿವೆ.ಕ ಚಟುವಟಿ

ಆರ್ಥಿಕ ಆವರ್ತಗಳ ಅರ್ಥ ವಿವರಣೆ

[ಬದಲಾಯಿಸಿ]

ಉತ್ಪಾದನೆ, ಅನುಭೋಗ, ಹೂಡಿಕೆ, ಬೇಡಿಕೆ, ನೀಡಿಕೆ, ಉಳಿತಾಯ ಮು೦ತಾದ ಕ್ಷೇತ್ರಗಳಲ್ಲಿನ ಚಟುವಟಿಕೆಗಳನ್ನು ಆರ್ಥಿಕಗಳೆಂದು ಕರವರ ಪ್ರಕಾರ "ಆರ್ಥಿಕ ಆವರ್ತವು ಹೆಚ್ಚಾಗುತ್ತಿರುವ ಬೆಲೆಗಳು ಮತ್ತು ಕಡಿಮೆ ನಿರುದ್ಯೋಗದಿ೦ದ ಕೂಡಿದ ಲಾಭದಾಯಕ ವ್ಯಾಪಾರ ಅವಧಿ ಹಾಗೂ ಪರ್ಯಾಯವಾಗಿ ಇಳಿಯುತ್ತಿರುವ ಬೆಲೆಗಳು ಮತ್ತು ಅಧಿಕ ನಿರುದ್ಯೋಗದಿ೦ದ ಕೂಡಿರುವ ನಷ್ಟದಾಯಕ ವ್ಯಾಪಾರದ ಅವಧಿಗಳಿಂದ ಸಂರೆಯಲಾಗುತ್ತದೆ. ಆರ್ಥಿಕ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವ ಏರು ಪೇರುಗಳನ್ನೇ ಆರ್ಥಿಕ ಆವರ್ತಗಳು ಎ೦ದು ಕರೆಯಲಾಗುತ್ತದೆ. ಜೆ.ಎ೦ ಕೇನ್ಸ್ ಯೋಜನೆಗೊಂಡಿದೆ". []ಪ್ರೊ|| ಬೆನ್ ಪ್ರಕಾರ "ಆರ್ಥಿಕ ಆವರ್ತಗಳು ಆರ್ಥಿಕ ಚಟುವಟಿಕೆಗಳ ಹಿಗ್ಗುವಿಕೆ ಹಾಗೂ ಕುಗ್ಗುವಿಕೆ ಸ್ಥಿತಿಗಳನ್ನು ಒಳಗೊಂಡಿರುತ್ತೆವೆ. ಇವುಗಳಿಗೆ ನಿರ್ದಿಷ್ಟ ಸ್ವರೂಪವಿರುವುದಿಲ್ಲ. ಆರ್ಥಿಕ ಆವರ್ಥಗಳಲ್ಲಿ ಆರ್ಥಿಕ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಪದೇ ಪದೇ ಪುನರಾವರ್ತನೆಯಾಗುತ್ತವೆ ಹಾಗೂ ಹೆಚ್ಚು ಕಡಿಮೆ ಒಂದೇ ಸ್ವರೂಪದ್ದಾಗಿರುತ್ತವೆ" ಎಂದಿದ್ದಾರೆ.

Cycle économique

ಆರ್ಥಿಕ ಆವರ್ತಗಳ ಲಕ್ಷಣಗಳು

[ಬದಲಾಯಿಸಿ]

ಆರ್ಥಿಕ ಆವರ್ತಗಳ ವ್ಯಾಖ್ಯಾನಗಳನ್ನು ಗಮನಿಸಿದಾಗ ಆರ್ಥಿಕ ಆವರ್ತಗಳಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳು ಈ ರೀತಿ ಇವೆ. ೧) ಆರ್ಥಿಕ ಚಟುವಟಿಕೆಗಳಲ್ಲಿ ಸಂಭವಿಸುವ ಏರಿಳಿತಗಳು ಆರ್ಥಿಕ ಆವರ್ತಗಳ ಮೂಲ ಕಾರಣವಾಗಿವೆ. ೨) ಆರ್ಥಿಕ ಚಟುವಟಿಕೆಗಳ ಉಬ್ಬರ ಮತ್ತು ಇಳಿತಗಳು ಪರ್ಯಾಯವಾಗಿ ಹೊಂದಿದ್ದು ಕ್ರಮಬದ್ದವಾಗಿ ಸಂಭವಿಸುತ್ತವೆ. ೩) ಆರ್ಥಿಕ ಆವರ್ತಗಳು ಆವರ್ತಯುತವಾಗಿರುತ್ತವೆ. ೪) ಆರ್ಥಿಕ ಆವರ್ತಗಳು ಸಾಗರದ ಅಲೆಗಳಂತೆ ಸಂಭವಿಸುತ್ತವೆ. ೫) ಆರ್ಥಿಕ ಆವರ್ತಗಳೆಂದಾಗ ಬೆಲೆಗಳು ಮತ್ತು ಉದ್ಯೋಗ ಮಟ್ಟಗಳಲ್ಲಿ ಏರಿಳಿತಗಳಾಗುತ್ತವೆ. ೬) ಆರ್ಥಿಕ ಆವರ್ತಗಳು ಅನುಭೋಗಿ ಸರಕು ಕೈಗಾರಿಕೆಗಳಿಗಿಂತ ಬಂಡವಾಳ ಸರಕುಗಳ ಕೈಗಾರಿಕೆಗಳಲ್ಲಿ ಹೆಚ್ಚು ತೀವ್ರವಾಗಿರುತ್ತವೆ . ೭) ಆರ್ಥಿಕ ಆವರ್ತಗಳ ವಿವಿಧ ಹಂತಗಳು ಏಕರೂಪತೆಯನ್ನು ಹೊಂದಿರುವುದ್ದಿಲ. ೮) ಆರ್ಥಿಕ ಆವರ್ತಗಳು ಸಾರ್ವತ್ರಿಕ ಗುಣಲಕ್ಷಣಗಳನ್ನು ಹೊಂದಿವೆ.[]

The Forces of the Business Cycle, 1922

ಆರ್ಥಿಕ ಆವರ್ತಗಳ ವಿಧಗಳು

[ಬದಲಾಯಿಸಿ]

೧ ಬೃಹತ್ ಮತ್ತು ಸಣ್ಣ ಆವರ್ತಗಳು - ಆರ್ಥಿಕ ಆವರ್ತಗಳಲ್ಲಿ ಬೃಹತ್ ಮತ್ತು ಸಣ್ಣ ಆವರ್ತಗಳಿವೆಯೆಂದು ಆರ್ಥಿಕ ಪ್ರೊ|| ಹಾಸ್ಸೆನ್ ಹೇಳಿದ್ದಾರೆ. ಯಾವುದಾದರೂ ಎರಡು ನಿರಂತರ ಆರ್ಥಿಕ ಬಿಕ್ಕಟ್ಟುಗಳ ನಡುವಣ ಅವಧಿಯಲ್ಲಿ ಕಂಡುಬರುವ ವಾಣಿಜ್ಯ ಏರಿಳಿತಗಳೇ ಬೃಹತ್ ಆವರ್ತಗಳಾಗಿರುತ್ತದೆ. ಬೃಹತ್ ಆವರ್ತಗಳು ೬ ರಿಂದ ೧೩ ವರ್ಷಗಳ ಅವಧಿಗೆ ಸಂಭವಿಸುತ್ತವೆ ಎನ್ನುತಾರೆ. ಪ್ರತಿಯೊಂದು ಬೃಹತ್ ಆವರ್ತವು ಎರಡು ಅಥವಾ ಮೂರು ಸಣ್ಣ ಪ್ರಮಾಣದ ಆರ್ಥಿಕ ಆವರ್ತಗಳಿಂದ ಕೂಡಿರುತ್ತದೆ. ಸಣ್ಣ ಆರ್ಥಿಕ ಆವರ್ತಗಳು ೨ ರಿಂದ ೫ ವರ್ಷಗಳ ಅವಧಿಗೆ ಸಂಭವಿಸುತ್ತವೆ. ಅಮೇರಿಕಾ ಆರ್ಥಿಕ ವ್ಯವಸ್ಥೆಯಲ್ಲಿ ೧೭೯೫ ರಿಂದ ೧೯೩೭ರ ನಡುವಿನ ಅವಧಿಯಲ್ಲಿ ಸುಮಾರು ೧೭ ಬೃಹತ್ ಆರ್ಥಿಕ ಆವರ್ತಗಳು ಸಂಭವಿಸಿದ್ದು, ಅವುಗಳ ಸರಾಸರಿ ಕಾಲಾವಧಿ ೮.೩೫ ವರ್ಷವಾಗಿದೆ. ಹಾಗೂ ೧೮೦೭ ರಿಂದ ೧೯೩೭ರ ಅವಧಿಯ ನಡುವೆ ೩೭ ಸಣ್ಣ ಆರ್ಥಿಕ ಆವರ್ತಗಳು ಸಂಭವಿಸಿದ್ದು, ಅವುಗಳ ಸರಾಸರಿ ಕಾಲಾವಧಿ ೩.೫೧ ವರ್ಷವಾಗಿದೆ.[] ೨) ಕಟ್ಟಡ ಆವರ್ತಗಳು- ಕಟ್ಟಡ ರಚನೆಯ ಮಟ್ಟದಲ್ಲಾಗುವ ಏರಿಳಿತಗಳಿಂದ ಅಸ್ತಿತ್ವಕ್ಕೆ ಬರುವ ಆವರ್ತಗಳಿಗೆ ಕಟ್ಟಡ ಆರ್ಥಿಕ ಆವರ್ತಗಳು ಎನ್ನಬಹುದು. ಇತರ ಆರ್ಥಿಕ ಆವರ್ತಗಳಿಗಿಂತಲೂ ಕಟ್ಟಡ ಆವರ್ತಗಳ ಕಾಲಾವಧಿಯ ದೀರ್ಘವಾಗಿರುತ್ತದೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು ನಿರ್ದಿಷ್ಟ ಕಾಲಾವಧಿಯನ್ವಯ ಪುನರಾವರ್ತನೆಗೊಳ್ಳುತ್ತಿರುತ್ತವೆ. ಈ ಆವರ್ತಗಳ ಸರಾಸರಿ ಕಾಲಾವಧಿಯು ಸಾಮಾನ್ಯವಾಗಿ ೧೮ ವರ್ಷಗಳಾಗಿರುತ್ತದೆ. ಅಮೇರಿಕಾದಲ್ಲಿ ೧೮೩೦ ರಿಂದ ೧೯೩೪ರ ಅವಧಿಯಲ್ಲಿ ಸುಮಾರು ೬ ಅತ್ಯಂತ ಕ್ಲಿಷ್ಟಕರವಾದ ಕಟ್ಟಡ ಆರ್ಥಿಕ ಆವರ್ತಗಳು ಉಂಟಾಗಿದ್ದವು. ೩) ಧಿರ್ಘಾವಧಿ ಆರ್ಥಿಕ ಆವರ್ತಗಳು- ಆರ್ಥಿಕ ಆವರ್ತಗಳ ಕಾಲಾವಧಿಯು ೫೦ ಅಥವಾ ೬೦ ವರ್ಷಗಳಿಗಿಂತಲೂ ಅಧಿಕವಾಗಿದ್ದರೆ ಅಂತಹ ಆವರ್ತಗಳನ್ನು ಧಿರ್ಘಾವಧಿ ಆರ್ಥಿಕ ಆವರ್ತಗಳು ಎಂದು ಕರೆಯಲಾಗುತ್ತದೆ. ಈ ರೀತಿಯ ಆವರ್ತಗಳನ್ನು ರಷ್ಯಾದ ಆರ್ಥಿಕ ವಿದ್ಯಾವಂತರಾದ ಪ್ರೊ|| ಕೊಂಡ್ರಾಟಿಫ್ ಎಂಬುವರು ಪತ್ತೆಹಚ್ಚಿದ್ದರು. ಅದರಿಂದ ಧಿರ್ಘಾವಧಿ ಆರ್ಥಿಕ ಆವರ್ತಗಳನ್ನು ಕೊಂಡ್ರಾಟಿಫ್ ಆವರ್ತಗಳು ಎಂದು ಕರೆಯಲಾಗುತ್ತದೆ. ೪) ಜಗ್ಲರ್ ಆರ್ಥಿಕ ಆವರ್ತಗಳು- ೧೯ನೇಯ ಶತಮಾನದಲ್ಲಿ ಫ್ರೆಂಚ್ ಆರ್ಥಿಕ ಪ್ರೊ|| ಕ್ಲೆಮಂಟ್ ಜಗ್ಲರ್ ಎಂಬುವರು ವಾಣಿಜ್ಯ ಕ್ಷೀತ್ರದಲ್ಲಿ ಏರಿಳಿತಗಳನ್ನು ಗುರುತಿಸಿದನು. ಈ ಆವರ್ತವನ್ನು "ಅನುಕ್ರಮ ಬಿಕ್ಕಟ್ಟುಗಳ ನಡುವಿನ ವ್ಯವಹಾರ ಚಟುವಟಿಕೆಗಳಲ್ಲಿನ ಏರಿಳಿತಗಳು" ಎಂದು ವ್ಯಾಖ್ಯಾನಿಸಬಹುದು. ಇವು ಸುಮಾರು ೧೦ ವರ್ಷಗಳಿಗೊಮ್ಮೆ ಪುನರಾವರ್ತಿಸುತ್ತವೆ ಎಂದು ಅದಾಜು ಮಾಡಿದರು. ಈ ರೀತಿಯ ಆವರ್ತಗಳನ್ನು ಜಗ್ಲರ್ ಗುರುತಿಸಿರುವುದರಿಂದ ಇವುಗಳನ್ನು "ಜಗ್ಲರ್ ಆರ್ಥಿಕ ಆವರ್ತಗಳು "ಎಂದು ಕರೆಯಲಾಗುತ್ತಿದೆ. ೫) ಅಲ್ಪಾವಧಿಯ ಕಿಚನ್ ಆವರ್ತಗಳು- ಕಿಚನ್ ಆವರ್ತಗಳನ್ನು ಚಿಕ್ಕ ಆವರ್ತವೆಂದು ಕರೆಯಲಾಗಿದ್ದು ಸುಮಾರು ೪೦ ತಿಂಗಳುಗಳ ಕಾಲಾವಧಿಯನ್ನು ಒಳಗೊಂಡಿರುತ್ತದೆ. ಜೋಸೆಫ್ ಕಿಚನ್ ಎಂಬ ಆರ್ಥಿಕ ವಿದ್ಯಾವಂತರಾದ ಪ್ರೊ|| ೧೯೩೨ರಲ್ಲಿ ಗುರುತಿಸಿದ್ದರಿಂದ ಈ ಆವರ್ತಗಳಿಗೆ ಅಲ್ಪಾವಧಿಯ ಕಿಚನ್ ಆವರ್ತಗಳೆಂದು ಕರೆಯಲಾಗುತ್ತದೆ. ಅಂದರೆ ಕೇವಲ ೪೦ ತಿಂಗಳ ಅಲ್ಪಾವಧಿಯ ವ್ಯಾಪಾರ ಆವರ್ತಗಳನ್ನು ಕಿಚನ್ ವ್ಯಾಪಾರ ಆವರ್ತಗಳೆಂದು ಕರೆಯಲಾಗುವುದು.

ಆರ್ಥಿಕ ಆವರ್ತಗಳ ಹಂತಗಳು

[ಬದಲಾಯಿಸಿ]

ಸಾಮಾನ್ಯಾವಾಗಿ ಆರ್ಥಿಕ ಆವರ್ತವು ಹಲವು ಹಂತಗಳನ್ನು ಹಾದು ಹೋಗುತ್ತದೆ. ಅವುಗಳೆಂದರೆ ಮುಗ್ಗಟ್ಟು, ಚೇತರಿಕೆ, ಉತ್ಕರ್ಷ ವಿಸ್ತಣೆ ಮತ್ತು ಹಿಂಜರಿತ. ಬಂಡವಾಳಶಾಹಿ ಅರ್ಥವ್ಯವಸ್ಥೆಯೊಂದು ಈ ಎಲ್ಲಾ ಆರ್ಥಿಕ ಹಂತಗಳಲ್ಲೂ ಹಾದುಹೋಗುತ್ತಿರುತ್ತದೆ. ವ್ಯಾಪಾರ ಆವರ್ತದ ವಿವಿಧ ಹಂತಗಳನ್ನು ಮತ್ತು ಅವುಗಳ ಗುಣಲಕ್ಷಣಗಳನ್ನು ಕೆಳಕಂಡಂತೆ ವಿವರಿಸಬಹುದಾಗಿದೆ.

  1. ಮುಗ್ಗಟ್ಟು- ಆರ್ಥಿಕ ಆವರ್ತವೊಂದರ ಕೆಳಹಂತವೇ ಮುಗ್ಗಟ್ಟು ಆಗಿರುತ್ತದೆ. ಈ ಹಂತಕ್ಕೆ ಆರ್ಥಿಕ ಮುಗ್ಗಟ್ಟು , ಆರ್ಥಿಕ ಬಿಕ್ಕಟ್ಟು ಎಂದು ಸಹ ಕರೆಯಬಹುದು, ಮುಗ್ಗಟ್ಟಿನ ಹಂತದಲ್ಲಿ ಆರ್ಥಿಕ ಚಟುವಟಿಕೆಗಳು , ತುಂಬಾ ಕೆಳಮಟ್ಟದಲ್ಲಿರುತ್ತದೆ. ಸಾರ್ವತ್ರಿಕ ನಿರುದ್ಯೋಗ, ಬೆಲೆಗಳ ಕುಸಿತ ,ಲಾಭದ ಇಳಿಕೆ, ಉತ್ಪಾದನೆಯ ತೀವ್ರ ಕುಸಿತ ಬಂಡವಾಳ ಹೂಡಿಕೆ ಕುಸಿತ, ಮತ್ತು ಉದ್ಯಮ ವಿಫಲತೆಗಳು ಈ ಹಂತದ ಪ್ರಮುಖ ಲಕ್ಷಣಗಳಾಗಿವೆ. ಇಡೀ ಆರ್ಥಿಕತೆ ನಿರಾಶವಾದ ಮತ್ತು ಅತೃಪ್ತಿ ಕಾಣಿಸಿಕೊಳ್ಳುತದೆ. ಇದರಿಂದಾಗಿ ಇಡೀ ಉತ್ಪಾದನಾ ಚಟುವಟಿಕೆಗಳು ಸ್ಥಿಗಿತಗೊಳ್ಳುತ್ತವೆ. ಉತ್ಪಾದನೆ ಸ್ಥಿಗಿತಗೊಳ್ಳುವುದರಿಂದ ನಿರುದ್ಯೋಗ ಬೃಹತ್ ಪ್ರಮಾಣದಲ್ಲಿ ಬೆಳೆಯಲಾರಂಭಿಸುತ್ತದೆ. ಇದರ ಪರಿಣಾಮವಾಗಿ ಜನರ ಆದಾಯಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತದೆ. ಉತ್ಪಾದನಾ ವೆಚ್ಚ ಸ್ಥಿರವಿರುತ್ತದೆ. ಇದರಿಂದ ಉದ್ಯಮ ಸಂಸ್ಥೆಗಳಿಗೆ ಏರಿಕೆ ವೆಚ್ಚ ಮತ್ತು ಇಳಿಕೆಯಾಗುತ್ತಿರುವ ಬಲೆಗಳು ಭರ್ತಿಮಾಡಲಾಗದ ನಷ್ಟದ ಮೂಲಗಳಾಗುತ್ತವೆ. ವಾಣಿಜ್ಯೋದ್ಯಮಿಗಳ ದಿವಾಳಿತನ ಇಲ್ಲಿಂದಲೇ ಆರಂಭವಾಗುತ್ತದೆ. ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗೋಳ್ಳುತ್ತದೆ. ಮುಗ್ಗಟ್ಟು ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುತದೆ. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಕಡಿಮೆಯಾಗುತ್ತದೆ. ಬೆಲೆಗಳು ಇನ್ನೂ ಇಳಿಯಲಾರಂಭಿಸುತ್ತವೆ. ಕೃಷಿಕರು ತುಂಬಾ ಸಂಕಷ್ಟಗಳನ್ನು ಎದುರಿಸಿಬೇಕಾಗುತ್ತದೆ. ಬೆಲೆ ಇಳಿಕೆಯಿಂದಾಗಿ ಉದ್ಯಮದಾರರಿಗೆ ಲಾಭ ಕಡಿಮೆಯಾಗಿ ,ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಇಳಿಮುಖವಾಗಿ ಅನೇಕ ಉದ್ಯಮಗಳು ಮುಚ್ಚಲ್ಪಟ್ಟು ನಿರುದ್ಯೋಗ ಬೃಬದಾಕಾರವಾಗಿ ಬೆಳೆಯುತ್ತದೆ. ಹೀಗಾಗಿ ಈ ಹಂತದಲ್ಲಿ ಆರ್ಥಿಕತೆಯಾದ್ಯಂತ ನಿರಾಶವಾದವನ್ನು ಕಾಣಬಹುದಾಗಿದೆ.
  2. ಚೇತೆರಿಕೆ- ಉದ್ಯಮ ಕ್ಷೇತ್ರದಲ್ಲಿ ಮುಗ್ಗಟ್ಟಿನ ಅವಧಿಯಲ್ಲಿದ್ದ ನಿರಾಶವಾದ ಕ್ರಮೇಣವಾಗಿ ಕಣ್ಮರೆಯಾಗಿ ಆಶಾವಾದ ಕಾಣಿಸಿಕೊಳ್ಳುವುದು. ಅಂತಹ ವಾಣಿಜ್ಯ ಅಥವಾ ಆರ್ಥಿಕ ಏರುಪೇರುಗಳನ್ನು ಆರ್ಥಿಕ ಪುನ:ಶ್ಚೇತನ ಅಥವ ಚೇತರಿಕೆ ಎಂದು ಕರೆಯಬಹುದು. ಈ ಹಂತದಲ್ಲಿ ಉದ್ಯಮದಾರರು ಉತ್ಪಾದನಾ ಚಟುವಟಿಕೆ ಗಳನ್ನು ವಿಸ್ತರಿಸಿ ಲಾಭಗಳಿಸುವ ನಿರೀಕ್ಷೆ ಹೊಂದುತ್ತಾರೆ. ಇದರಿಂದಾಗಿ ವಾಣಿಜ್ಯ ವ್ಯವಹಾರಗಳು ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಪ್ರಾರಂಭವಾಗುತ್ತವೆ. ಬೆಲೆಗಳು, ವೇತನ, ಹೊಡಿಕೆ ನಿಧಾನವಾಗಿ ಏರಿಕೆಯಾಗತೊಡಗುತ್ತದೆ. ಬ್ಯಾಂಕು ಸಾಲ ಮತ್ತು ಮುಂಗಡಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ. ಜನರ ಆದಾಯ ಹಚ್ಚಾಗುವುದರಿಂದ ಜನರ ಅನುಭೋಗ ವೆಚ್ಚ , ಲಾಭ ಇನ್ನೂ ಏರಿಕೆಯಾಗಿ ಅಧಿಕ ಹೊಡಿಕೆ ಉತ್ತೇಜನ ದೊರೆಯುತ್ತವೆ. ಈ ಹಂತದಲ್ಲಿ ಉತ್ಪಾದನ ನಿರಂತರವಾಗಿ ಅಧಿಕವಾಗುತ್ತದೆ. ಚೇತರಿಕೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಆರ್ಥಿಕ ಮುಗ್ಗಟ್ಟು ಸಂಭವಿಸುವುದಕ್ಕಿಂತ ಮೊದಲು ಯಾವ ಮಟ್ಟದಲ್ಲಿದ್ದವೂ ಅದೇ ಮಟ್ಟವನ್ನು ತಲುಪುತ್ತವೆ. ಮುಗ್ಗಟ್ಟಿನ ಸಮಯದಲ್ಲಿ ಕವಿದಿದ್ದ ನಿರಾಶವಾದವು ಕಣ್ಮರೆಯಾಗಿ ಆಶಾವಾದ ಮತ್ತು ಸಂತುಷ್ಟತೆ ಕಂಡುಬರುತ್ತದೆ.[]
  3. ವಿಸ್ತರಣೆ- ಆರ್ಥಿಕ ಚೇತರಿಕೆಯ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳ ವಿಸ್ತರಣೆ ನಿರಂತರವಾಗಿ ಮುಂದುವರಿಯುತ್ತದೆ. ಆರ್ಥಿಕ ಚಟುವಟಿಕೆಗಳು ಸಮೃದ್ಧಿಯಾಗಿ ಸಾಗುತ್ತದೆ. ಆರ್ಥಿಕತೆಯಲ್ಲಿ ಅತ್ಯಂತ ಹಿತಕರ ಮಟ್ಟದ ಉತ್ಪಾದನೆ, ಉದ್ಯೋಗ ಹೂಡಿಕೆ, ಬೆಲೆಗಳು, ವೇತನಗಳು ಮತ್ತು ಲಾಭಗಳು ನಿರಂತರವಾಗಿ ಏರಿಕೆಯಾಗುತ್ತವೆ. ಇದರಿಂದ ಉದ್ಯಮ ಸಾಹಸಿಗಳ ಆಶಾಭಾವನೆ ಸದೃಡಗೊಂಡು ಆರ್ಥಿಕ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಇದರಿಂದಾಗಿ ಆರ್ಥಿಕ ವ್ಯವಸ್ಥೆಯ ಪೊರ್ಣೋದ್ಯೋಗ ಮಟ್ಟವನ್ನು ತಲುಪುತ್ತದೆ. ಈ ಹಂತದಲ್ಲಿ ಆರ್ಥಿಕತೆಯೂ ಸ್ಥಿರತೆಯತ್ತ ಮುನ್ನಡೆಯುತ್ತದೆ.
  4. ಉತ್ಕರ್ಷ- ಆರ್ಥಿಕ ಚೇತರಿಕೆಗೆ ಅಗಾಧ ತೀವ್ರತೆ ಲಭಿಸಿದರೆ ಆಗ ಆರ್ಥಿಕತೆಯು ಉತ್ಕರ್ಷ ಹಂತ ತಲುಪುವುದು. ಈ ಹಂತವನ್ನು ಶೃಂಗವೆಂದು ಕರೆಯುತ್ತೇವೆ. ಪೂರ್ಣೋದ್ಯೋಗದ ಹಂತವು ಶಾಶ್ವತವಲ್ಲ ಅದು ಉತ್ಕರ್ಷಕ್ಕೆ ಅವಕಾಶಾ ಮಾಡಿಕೊಡುತ್ತದೆ. ಈ ಹಂತದಲ್ಲಿ ಉತ್ಪಾದನೆ, ಉದ್ಯೋಗ, ಆದಾಯ, ಲಾಭ ಬಂಡವಾಳ ಸಂಚಯ ಮತ್ತು ಹೂಟೆ, ಕೂಲಿ ಮತ್ತು ಬೆಲೆಗಳೆಲ್ಲವೂ ಹೆಚ್ಚಳವಾಗುವುವು. ಉತ್ಕರ್ಷವು ಸರ್ವಾಂಗೀಣ ಆರ್ಥಿಕಾಭಿವೃದ್ದಿಯನ್ನು ಉತ್ತೇಜಿಸುವುದರಿಂದ ಹೊಸ ಬಗೆಯ ಬಯಕೆಗಳನ್ನು ತೃಪ್ತಿ ಪಡಿಸಲು ವಿನೂತನ ವಾಣಿಜ್ಯೋದ್ಯಮಗಳು ಹುಟ್ಟಿಕೊಳ್ಳುತ್ತವೆ. ವಾಣಿಜ್ಯೋದ್ಯಮಿಗಳಲ್ಲಿ ಮತ್ತು ಕೈಗಾರಿಕೋದ್ಯಮಿಗಳಲ್ಲಿ ಉತ್ತಮ ವಾಣಿಜ್ಯ ಭವಿಷ್ಯತ್ತಿನ ಬಗೆಗೆ ಆಸೆ ಮತ್ತು ನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಹೆಚ್ಚುವರಿ ಹೂಟೆಯನ್ನು ಕೈಗೊಳ್ಳುವರು ಇದರಿಂದಾಗಿ ಉತ್ಪಾದನಾಂಗಗಳ ಬೆಲೆಗಳು ಏರಿಕೆಯಾಗುವುವು. ತನ್ಮೂಲಕ ಲಭ್ಯವಿರುವ ಉದ್ಯೋಗವಕಾಶಗಳು ರಾಷ್ಟ್ರದ ಶ್ರಮಿಕ ಶಕ್ತಿಗಿಂತಲೂ ಅಧಿಕವಾಗುವುದು. ಪೂರ್ಣೋದ್ಯೋಗ ನಂತರವು ವಿಸ್ತಾರಗೊಳ್ಳುವ ಹೂಡಿಕೆಗಳಿಂದಾಗಿ ಹಣದುಬ್ಬರ ಸಂಭವಿಸುತ್ತದೆ. ಹಣದುಬ್ಬರದಿಂದ ಸಂಭವಿಸುವ ಬೆಲೆಗಳ ಹೆಚ್ಚಳ ಉದ್ಯಮದಾರರನ್ನು ಇನ್ನೂ ಹೆಚ್ಚಿನ ಉತ್ಪಾದನ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತದೆ. ಲಾಭಾದಾಸೆಯೊಂದ ಉದ್ದಿಮೆದಾರರು ಬೆಲೆ ಮತ್ತು ವಸ್ತುಗಳ ಬೆಲೆ ಒಂದೇ ಸಮನೇ ಹೆಚ್ಚಾಗುವುದರಿಂದ ಹಣದುಬ್ಬರ ತೀವ್ರವಾಗುತ್ತದೆ. ಆರ್ಥಿಕ ಚಟುವಟಿಕೆಗಳ ಸ್ಥಿತಿ ಹೀಗೆಯೇ ಮುಂದುವರಿಯುವುದಿಲ್ಲ. ತೀವ್ರ ಹಣದುಬ್ಬರ ತನ್ನ ದುಷ್ಪರಿಣಾಮಗಳನ್ನು ಆಧಿಕವಾದಂತೆ ಉಳಿತಾಯ ಪ್ರಮಾಣ ಹೆಚ್ಚಾಗಿ ಅಧಿಕ ಉತ್ಪನ , ಅಧಿಕ ದಾಸ್ತಾನು ,ಆರ್ಥಿಕತೆಯಲ್ಲಿ ಕಾಣಿಸಿಕೊಳ್ಳುವುದರಿಂದ ಆರ್ಥಿಕತೆಯು ಹಿಂಜರಿತದ ಹಂತಕ್ಕೆ ಸಾಗುತ್ತದೆ.
  5. ಹಿಂಜರಿತ- ಆರ್ಥಿಕ ಉತ್ಕರ್ಷ ಹಂತದಲ್ಲಿ ಸರಾಗವಾಗಿ ಸಾಗುತ್ತಿದೆ ಆರ್ಥಿಕ ಚಟುವಟಿಕೆಗಳು ನಿರ್ದಿಷ್ಟ ವಾಗಿ ಹಾಗೆಯೇ ಮುಂದುವರಿಯಲು ಸಾಧ್ಯವಿಲ್ಲ. ಆರ್ಥಿಕತೆಯಲ್ಲಿ ಇದ್ದಕ್ಕಿದಂತೆ ಏರು-ಪೇರುಗಳು ಕಾಣಿಸಿಕೊಳ್ಳುತ್ತವೆ. ಉದ್ಯಮ ದಾರರಲ್ಲಿದ್ದ ಆಶಾದಾಯಕ ಭಾವನೆ ಕಾಣೆಯಾಗಿ ಭವಿಷ್ಯದಲ್ಲಿ ಪುಣ: ನಿರಾಶದಾಯಕ ವಾತಾಣರಣ ಕಾಣಿಸಿಕೊಳ್ಳುವುದು. ಇದರಿಂದಾಗಿ ಮಾರುಕಟ್ಟೆ ಕುಸಿಯುತ್ತದೆ, ನಿರುದ್ಯೋಗ್ಯ ಅಧಿಕವಾಗುವುದು . ಈ ಬಗೆಯ ಹಂತವನ್ನು ಆರ್ಥಿಕ ಹಿಂಜರಿತ ಎನ್ನಲಾಗುತ್ತದೆ. ಈ ಹಂತದಲ್ಲಿ ಉದ್ಯಮಿಗಳು ಭರವಸೆಯನ್ನು ಕಳೆದುಕೊಳ್ಳುತಾರೆ .ಬ್ಯಾಂಕುಗಳು ಸಾಲ ನೀಡುವುದನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಹೊಸ ಹೂಡಿಕೆಗೆ ಅವಕಾಶಗಳಿರುವುದಿಲ್ಲ. ಉತ್ಪಾದನೆ, ಉದ್ಯೋಗ, ವರಮಾನ ಮತ್ತು ಬೆಲೆಗಳು ಕುಸಿಯಲು ಪ್ರಾಂಭವಾಗುತ್ತವೆ. ನಿರುದ್ಯೋಗಯದ ಪರಿಣಾಮದಿಂದ ಪರಿಣಾಮಕಾರಿ ಬೇಡಿಕೆ ಕಡಿಮೆಯಾಗುತ್ತದೆ. ಇದರಿಂದಾಗಿ ಬೇಡಿಕೆ ಕುಸಿದು ಉದ್ಯಮಗಳು ನಷ್ಟ ಅನುಭವಿಸಬೇಕಾಗುತ್ತದೆ. ಉತ್ಪಾದನೆ, ಆದಾಯ, ಲಾಭ ಕೊಳಿ, ಬೇಡಿಕೆ , ಬೆಲೆಗಳು ಕುಸಿಯುತ್ತಲೇ ಸಾಗುತ್ತದೆ. ಎಲ್ಲ ಕಡೆ ನಿರಾಶಾವಾದ ವ್ಯಾಪಕವಾಗಿ ಹರಡುತ್ತದೆ. ಹೀಗೆ ಪ್ರಾರಂಭವಾದ ಆರ್ಥಿಕ ಚಟುವಟಿಕೆಗಳ ಹಿಂಜರಿತ ಆರ್ಥಿಕ ಮುಗ್ಗಟ್ಟಿನತ್ತ ಸಾಗುತ್ತದೆ. ಆರ್ಥಿಕ ಆವರ್ತದ ವಿವಿಧ ಹಂತಗಳನ್ನು ಮುಂದಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ. ರೇಖಾ ಚಿತ್ರದಲ್ಲಿ ಪೂರ್ಣೋದ್ಯೋಗ ಹಂತವನ್ನು ಸೂಚಿಸುತ್ತದೆ. ಚಿತ್ರದಲ್ಲಿ ವ್ಯಕ್ತವಾಗುವಂತೆ ಆರ್ಥಿಕ ಆವರ್ತವು ಮುಗ್ಗಟ್ಟು, ಚೇತರಿಕೆ, ವಿಸ್ತರಣೆ ( ಸಮೃದ್ದಿ) ಉತ್ಕರ್ಷ (ಶೃಂಗ), ಹಿಂಜರಿತ ಎಂಬ ವಿವಿಧ ಹಂತಗಳನ್ನು ಹಾದುಹೋಗುತ್ತದೆ. ಆದರೆ ಆರ್ಥಿಕ ಆವರ್ತಗಳು ಯಾವ ಹಂತದಿಂದ ಪ್ರಾರಂಭವಾಗಿ ಯಾವ ಹಂತದಲ್ಲಿ ಕೊನೆಗೊಳ್ಳುತವೆ ಎಂಬುದನ್ನು ನಿಧಿಷ್ಟವಾಗಿ ಹೇಳುವುದು ಕಠಿಣವೆನಿಸುತ್ತದೆ. ಅದಾಗ್ಯೂ ಆರ್ಥಿಕ ಆವರ್ತಗಳನ್ನು ವಿವರಿಸುವಾಗ ಮುಗ್ಗಟಿನಿಂದ ಪ್ರಾರಂಭಿಸುವುದು ವಾಡಿಕೆಯಾಗಿದೆ. ಆರ್ಥಿಕ ಆವರ್ತಗಳು ನಿರಂತರವಾದ ಕ್ರಿಯೆಯಾಗಿದ್ದು ಒಂದು ಹಂತ ಮುಗಿದ ನಂತರ ಮತ್ತೊಂದು ಹಂತ ಕಾಣಿಸಿಕೊಳ್ಳುತ್ತದೆ. ಮುಗ್ಗಟ್ಟು, ಚೇತರಿಕೆ, ವಿಸ್ತರಣೆ, ಉತ್ಕರ್ಷ ಮತ್ತು ಹಿಂಜರಿತ ಈ ವಿವಿಧ ಹಂತಗಳು ಒಂದರ ನಂತರ ಮತ್ತೊಂದು ಸಂಭವಿಸುತ್ತದೆ.
Economic cycle

ಆರ್ಥಿಕ ಆವರ್ತಗಳ ಕಾರಣಗಳು

[ಬದಲಾಯಿಸಿ]

ಆರ್ಥಿಕ ಆವರ್ತಗಳು ಸರ್ವವ್ಯಾಪ್ತಿ ಸ್ವರೂಪವನ್ನು ಹೊಂದಿರುವುದರಿಂದ ಒಮ್ಮೆ ಕಾಣಿಸಿಕೊಂಡರೆ ಇಡೀ ಆರ್ಥಿಕ ವ್ಯವಸ್ಥೆಗೆ ಪರಿಸುತ್ತದೆ. ಆರ್ಥಿಕ ಆವರ್ತಗಳು ಯಾವ ಕಾರಣದಿಂದ ಸಂಭವಿಸುತ್ತವೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅವು ಅನೇಕ ಆಂತರಿಕ ಮತ್ತು ಬಾಹ್ಯ ಅಂಶಗಳು ಪ್ರಭಾವದಿಂದ ಸಂಭವಿಸುತ್ತವೆ. ಆರ್ಥಿಕ ಆವರ್ತಗಳ ಪ್ರಮುಖ ಕಾರಣಗಳನ್ನು ಕೆಳಕಂಡಂತೆ ವಿವರಿಸಬಹುದು.

  1. ಹಣದ ಪೂರೈಕೆ: ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಪೂರೈಕೆ ಅಧಿಕವಾದಾಗ ಆರ್ಥಿಕ ಆವರ್ತಗಳಿಗೆ ದಾರಿ ಮಾಡಿಕೊಡುವ ಸಂಭವವಿರುತ್ತದೆ. ಹಣದ ಪೂರೈಕೆ ಅಧಿಕವಾದಂತೆ ಆರ್ಥಿಕ ಚಟುವಟಿಕೆಗಳು ವಿಸ್ತತಗೊಳ್ಳುತ್ತೆವೆ. ಇದರಿಂದಾಗಿ ಆರ್ಥಿಕತೆ ಸಮೃದ್ಧಿ ಮತ್ತು ಉತ್ಕರ್ಷಕ್ಕೆ ಅವಕಾಶ ಮಾಡಿಕೊಡುತ್ತದೆ. ವ್ಯತರಿಕ್ತವಾಗಿ ಹಣದ ಪೂರೈಕೆ ಕಡಿಮೆಯಾಗಿ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗುತ್ತದೆ. ಇದರಿಂದಾಗಿ ಹಿಂಜರಿತ , ಮುಗ್ಗಟ್ಟು ಸಂಭವಿಸುತ್ತದೆ. ಅದರಿಂದ ಹಣದ ಪೂರೈಕೆ ಆರ್ಥಿಕ ಆವರ್ತಗಳು ಸಂಭವಿಸಲು ಕಾರಣವಾಗಿತ್ತದೆ.[]
  2. ಬ್ಯಾಂಕಿನ ಸಾಲ ನೀಡಿಕೆ: ಬ್ಯಾಂಕಿನ ಸಾಲ ನೀಡಿಕೆಯು ಆರ್ಥಿಕ ಆವರ್ತಗಳು ಸಂಭವಿಸಲು ಅವಕಾಶ ಮಾಡಿಕೊಡುತ್ತದೆ. ಬ್ಯಾಂಕುಗಳು ಸಾಲ ಸೌಲಭ್ಯವನ್ನು ವಿಸ್ತರಿಸಿದರೆ ಹಣದ ಪೂರೈಕೆ ಹೆಚ್ಚಾಗುತ್ತದೆ. ಆಗ ಪರಿಣಾಮಕಾರಿ ಬೇಡಿಕೆಯು ಅಧಿಕವಾಗುವುದರ ಮೂಲಕ ಆರ್ಥಿಕ ಚಟುವಟಿಕೆಗಳು ವಿಸ್ತರಣೆಯಾಗಿ ಸಮೃದ್ಧಿ ಮತ್ತು ಉತ್ಕರ್ಷಕ್ಕೆ ಅವಕಾಶ ಮಾಡಿಕೊಡುತ್ತದೆ. ತದ್ವಿರುದ್ಧವಾಗಿ ಬ್ಯಾಂಕುಗಳು ನೀಡುವ ಸಾಲದ ಪ್ರಮಾಣ ಕಡಿಮೆಯಾದಾಗ ಹಣದ ಪೂರೈಕೆ ಕಡಿಮೆಯಾಗುತ್ತದೆ. ಆಗ ಪರಿಣಾಮಕಾರಿ ಬೇಡಿಕೆ ಕಡಿಮೆಯಾಗಿ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗುತ್ತದೆ. ಪರಿಣಾಮವಾಗಿ ಹಿಂಜರಿತ ,ಮುಗ್ಗಟ್ಟು ಮತ್ತು ಹಿನ್ನಡೆಯ ಸನ್ನಿವೇಶಗಳು ಸೃಷ್ಟಿಯಾಗುತ್ತದೆ.
  3. ಹೆಚ್ಚು ಉಳಿತಾಯ ಅಥವಾ ಕನಿಷ್ಟ ಅನುಭೋಗ: ಆರ್ಥಿಕ ರಂಗದಲ್ಲಿ ಆರ್ಥಿಕ ಆವರ್ತಗಳು ಸಂಭವಿಸಳು ಹೆಚ್ಚು ಉಳಿತಾಯ ಅಥವ ಕನಿಷ್ಟ ಅನುಭೋಗ ಕಾರಣವೆಂದು ಹಾಬ್ಸನ್, ಫಾಸ್ಟರ್, ಸಿಸ್ಮಂಡಿ, ಮಾರ್ಕ್ಸ್ ಮುಂತಾದ ಆರ್ಥಿಕ ವಿದ್ಯಾವಂತರು ಅಭಿಪ್ರಾಯ ಪಡುತ್ತಾರೆ. ಆದಾಯ ಹಾಗು ಸಂಪತ್ತಿನಲ್ಲಿರುವ ತೀವ್ರ ಅಸಮಾನತೆಗಳು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತವೆ ಎಂದು ವಾದಿಸುತ್ತಾರೆ. ಹೆಚ್ಚು ಉಳಿತಾಯ ಮತ್ತು ಕನಿಷ್ಟ ಅನಿಭೋಗಗಳ ಬೇಡಿಕೆಯ ಕೊರತೆಯನ್ನು ಸೃಷ್ಟಿಸಲು ಸಹಾಯಕವಾಗುವುದರೊಂದಿಗೆ ಆರ್ಥಿಕ ಮುಗ್ಗಟ್ಟಿಗೆ ದಾರಿ ಮಾಡಿಕೊಡುವ ಸಂಭವವಿರುತ್ತದೆ.
  4. ವ್ಯಾಪಾರೋದ್ಯಮಗಳ ಮನೋಸ್ಥಿತಿ: ವ್ಯಾಪಾರ್ಯೋದ್ಯಮಿಗಳು ಹೆಚ್ಚು ಸೊಕ್ಷ್ಮ ಮನಸ್ಸಿನವರಾಗಿರುತ್ತಾರೆ. ಆರ್ಥಿಕತೆಯಲ್ಲಿ ಸಂಭವಿಸುವ ಬದಲಾವಣೆಗಳಿಗೆ ಹೆಚ್ಚು ಪ್ರತಿಕ್ರಿಯಿಸುವ ಮನೋಸ್ಥಿತಿಯುಳ್ಳವರಾಗಿರುತ್ತಾರೆ. ಆದ್ದರಿಂದ ಆರ್ಥಿಕತೆಯಲ್ಲಿ ಸ್ವಲ್ಪ ಉತ್ತಮವಾದ ಪರಿಸ್ಥಿತಿ ಕಂಡು ಬಂದರೆ ಮಿತಿಮೀರಿದ ಆಶಾವಾದದಿಂದ ಅಧಿಕ ಪ್ರಮಾಣದಲ್ಲಿ ಉತ್ಪಾದಿಸುತಾರೆ. ಇದರಿಂದ ಆರ್ಥಿಕ ಉತ್ಕರ್ಷ ಸೃಷ್ಟಿಯಾಗುತ್ತದೆ. ತದ್ವಿರುದ್ಧವಾಗಿ, ಆರ್ಥಿಕತೆಯಲ್ಲಿ ಪರಿಸ್ಥಿತಿಯು ಪ್ರತಿಕೂಲವಾಗಿದ್ದರೆ ಅವರು ಉತ್ಪಾದನೆಯನ್ನು ಕಡಿಮೆ ಮಾಡುತ್ತಾರೆ. ಆಗ ಮುಗ್ಗಟ್ಟು ವ್ಯಾಪಿಸುತ್ತದೆ. ಇದರಿಂದಾಗಿ ವ್ಯಾಪಾರೋದ್ಯಮಿಗಳ ಆಶಾವಾದ ಮತ್ತು ನಿರಾಶಾವಾದದ ಸನ್ನಿವೇಶಗಳು ಆರ್ಥಿಕ ಏರಿಳಿತಗಳಿಗೆ ದಾರಿ ಮಾಡಿಕೊಟ್ಟು ಆರ್ಥಿಕ ಆವರ್ತಗಳಿಗೆ ಕಾರಣವಾಗುತ್ತವೆ.
  5. ಆವಿಷ್ಕಾರಗಳು: ಆರ್ಥಿಕತೆಯಯಲ್ಲಿ ಆರ್ಥಿಕ ಆವರ್ತಗಳು ಸಂಭವಿಸಲು ಮೂಲಕಾರಣ ಆವಿಷ್ಕಾರಗಳು ಎಂಬುದು ಶುಂಪೀಟರ್ರವರ ಅಭಿಪ್ರಾಯವಾಗಿದೆ. ಆವಿಷ್ಕಾರ ಎಂದರೆ ಹೊಸ ಸಂಶೋಧನೆ ಅಥವ ಶೋಧನೆಯ ಕಾರ್ಯರೂಪಕ್ಕೆ ತರುವುದಾಗಿದೆ. ಹೊಸ ಸರಕುಗಳ ಉತ್ಪಾದನೆ, ಹೊಸ ಕಚ್ಚಾ ವಸ್ತುಗಳ ಶೋಧನೆ ,ಹೊಸ ಮಾರುಕಟ್ಟೆಯ ಲಭ್ಯತೆ ಮೊದಲಾದವುಗಳಿಗಿರುತ್ತವೆ. ನಿರಂತರವಾಗಿ ನಡುವೆಯು ಇಂತಹ ಆವಿಷ್ಕಾರಗಳು ಸಂಭವಿಸಲು ದಾರಿ ಮಾಡಿಕೊಡುತ್ತದೆ.
  6. ಬಂಡವಾಳ ಸೀಮಾಂತ ದಕ್ಷತೆ: ಬಂಡವಾಳ ಸೀಮಾಂತ ದಕ್ಷತೆಯಲ್ಲಿನ ಬದಲಾವಣೆಗಳೇ ಆರ್ಥಿಕ ಆವರ್ತಗಳಿಗೆ ಕಾರಣವೆಂದು ಜೆ.ಎಂ.ಕೆನ್ಸ್ ರವರ ಅಭಿಪ್ರಾಯ ಪಡುತ್ತಾರೆ. ಬಂಡವಾಳ ಸೀಮಾಂತ ದಕ್ಷತೆ ಎಂದರೆ ಬಂಡವಾಳ ಹೊಡಿಕೆಯಿಂದ ನಿರೀಕ್ಷಿಸುವ ಪ್ರತಿಫಲ ಅಥವಾ ಲಾಭದ ಪ್ರಮಾಣ ಎಂದರ್ಥ. ಬಂಡವಾಳ ಸೀಮಾಂತ ದಕ್ಷತೆ ಹೆಚ್ಚಾದಾಗ ಉತ್ಪಾದನೆ ವೃದ್ಧಿಯಾಗಿ ಪ್ರೇರಣೆ ದೊರೆಯುತ್ತದೆ. ಇದರಿಂದಾಗಿ ಸಮೃದ್ಧಿಯು ನೆಲೆಯಾಗಿರುತ್ತದೆ. ಬದಲಾಗಿ ಬಂಡವಾಳ ಸೀಮಾಂತ ದಕ್ಷತೆ ಕಡಿಮೆಯಾದಾಗ ಉತ್ಪಾದನೆಯು ಕುಗ್ಗುವುದರ ಮೂಲಕ ಆರ್ಥಿಕ ಮುಗ್ಗಟ್ಟು ಸಂಭವಿಸುತ್ತದೆ.
Business cycle
  1. ಮಿತಿಮೀರಿದ ಹೂಡಿಕೆ: ಬಂಡವಾಳ ಸರಕುಗಳು ಕೈಗಾರಿಕೆಯಲ್ಲಿ ಕೈಗೊಳ್ಳಲಾಗುವ ಮೀತಿಮೀರಿದ ಹೂಡಿಕೆಯು ಆರ್ಥಿಕ ಆವರ್ತಗಳಿಗೆ ಕಾರಣವಾಗಿತ್ತದೆ. ಅತಿಯಾದ ಹೂಡಿಕೆ ಆರ್ಥಿಕತೆಯಲ್ಲಿ ಹಣದ ಪೂರೈಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಕಾರಣವಾಗಿ ಬೇಡಿಕೆಯು ಕುಸಿಯುತ್ತದೆ. ಆದ್ದರಿಂದ ಅತಿಯಾದ ಹೂಡಿಕೆ ಆರ್ಥಿಕ ಏರಿಳಿತಗಳಿಗೆ ಅವಕಾಶ ಮಾಡಿ ಕೊಡುತ್ತದೆ.
  2. ಸ್ಪರ್ಧಾತ್ಮಕ ಸನ್ನಿವೇಶ: ಸ್ಪರ್ಧಾತ್ಮಕ ಸನ್ನಿವೇಶ ಆರ್ಥಿಕ ಆವರ್ತಗಳು ಸಂಭವಿಸಲು ಕಾರಣ ವೆನಿಸಿತ್ತದೆ. ಆರ್ಥಿಕ ರಂಗದಲ್ಲಿ ಸ್ಪರ್ಧೆಯು ಅಸ್ತಿತ್ವದಲ್ಲಿದ್ದಾಗ ಮಿತಿಮೀರಿದ ಉತ್ಪಾದನೆಯು ಜರಗುತ್ತದೆ. ಇದು ಆರ್ಥಿಕ ಉತ್ಕರ್ಷಕ್ಕೆ ಅವಕಾಶ ಮಾಡಿ ಕೊಡುವುದರ ಮೂಲಕ ಅಂತಿಮವಾಗಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತದೆ. ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಉದ್ಯಮ ಸಂಸ್ಥೆಗಳು ಲಾಭದ ಆಸೆಯಿಂದ ಹೆಚ್ಚು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಸರಕುಗಳ ಬಾಹುಳ್ಯಕ್ಕೆ ಅವಕಾಶವಾಗುತ್ತದೆ. ಆದರೆ ಮಿತಿಮೀರಿದ ಪೂರೈಕೆಯು ಬೆಲೆಗಳ ಮತ್ತು ಲಾಭದ ಕುಸಿತಕ್ಕೆ ಮತ್ತು ಕೊನೆಗೆ ಮುಗ್ಗಟ್ಟಿಗೆ ಕಾರಣವಾಗುತ್ತದೆ.
  3. ಬಾಹ್ಯ ಅಂಶಗಳು: ಆಂತರಿಕ ಅಂಶಗಳಲ್ಲದೆ ಬಾಹ್ಯ ಅಂಶಗಳು ಸದಾ ಆರ್ಥಿಕ ಆವರ್ತಗಳಿಗೆ ಕಾರಣವಾಗುತ್ತದೆ. ಬಾಹ್ಯ ಅಂಶಗಳು ಅಂದರೆ ಆರ್ಥವ್ಯವಸ್ತ್ಗೆಯ ಹೊರಗಿರುವ ಅಂಶಗಳು ಎಂದಾರ್ಥ. ಬಾಹ್ಯ ಅಂಶಗಳಾದ ಹವಾಮಾನ, ಯುದ್ಧಗಳು, ಕ್ರಾಂತಿಗಳು, ರಾಜಕೀಯ ಘಟನೆಗಳು, ತಾಂತ್ರಿಕ ಪ್ರಗತಿ, ಹೊಸ ನಿಕ್ಷೇಪ ಮತ್ತು ಸಂಪನ್ಮೂಲಗಳ ಸಂಶೋಧನೆ, ಅಂತರರಾಷ್ಟ್ರೀಯ ಮಟ್ತದ ಆರ್ಥಿಕ ಬೆಳೆವನಿಗೆ ಜನಸಂಖ್ಯೆ ಬೆಳವಣಿಗೆ ಮೊದಲಾದವು ಆರ್ಥಿಕ ಆವರ್ತಗಳು ಸಂಭವಿಸಲು ಕಾರಣವಾಗುತ್ತದೆ. ಇವು ಉದ್ಯೋಗ, ಉತ್ಪಾದನೆ, ಹೂಡಿಕೆ ಮುಂತಾದವುಗಳ ಏರಿಳಿತಗಳಿಗೆ ಕಾರಣವಾಗುವ ಸೃಷ್ಟಿಸುತ್ತವೆ. ಹೀಗೆ ಆರ್ಥಿಕ ಆವರ್ತಗಳು ಯಾವುದೇ ನಿರ್ದಿಷ್ಟ ಕಾರಣದಿಂದ ಸಂಭವಿಸುತ್ತವೆ ಎಂದು ಹೇಳಲು ಸಾಧಾವಾಗುವುದಿಲ್ಲ. ಅವು ಹಲವಾರು ಆಂತರಿಕ ಮತ್ತು ಬಾಹ್ಯ ಅಂಶಗಳು ಕಾರಣದಿಂದ ಸಂಭವಿಸುತ್ತವೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://kalyan-city.blogspot.in/2011/07/what-is-trade-cycle-meaning-definition.html
  2. "ಆರ್ಕೈವ್ ನಕಲು". Archived from the original on 2016-03-06. Retrieved 2016-01-12.
  3. "ಆರ್ಕೈವ್ ನಕಲು". Archived from the original on 2015-11-15. Retrieved 2016-01-12.
  4. http://www.yourarticlelibrary.com/trade-2/trade-cycle-4-phases-of-trade-cycle-discussed/23414/
  5. "ಆರ್ಕೈವ್ ನಕಲು". Archived from the original on 2016-03-29. Retrieved 2016-01-12.
  6. ಹಣ ಮತ್ತು ಬ್ಯಾಂಕು- ರಾಜಣ್ಣ ಕೆ.ಎ : ಪುಟ ೧೯೯-೨೦೩