ವಿಷಯಕ್ಕೆ ಹೋಗು

ಆರ್ದ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾವ್ಯಾಧ ನಕ್ಷತ್ರಪುಂಜದಲ್ಲಿ ಆರ್ದ್ರಾ ನಕ್ಷತ್ರವನ್ನು ತೋರಿಸುವ ನಕ್ಷೆ

ಆರ್ದ್ರಾ ಮಹಾವ್ಯಾಧ ನಕ್ಷತ್ರಪುಂಜದ ಪ್ರಥಮ ನಕ್ಷತ್ರ (ಬೆಟಲ್ಗ್ಯೂಸ್ ಅಥವಾ µ-ಒರೈಯಾನಿಸ್). ಡಿಸೆಂಬರ್ ಜನವರಿ ತಿಂಗಳ ಸಂಜೆ ಪೂರ್ವಾಕಾಶದಲ್ಲಿ ಕಾಣುವ ನಾಲ್ಕು ಸ್ಪಷ್ಟ ನಕ್ಷತ್ರಗಳ ಸಮಲಂಬಾಕೃತಿ ಮಹಾವ್ಯಾಧ.[] ಇದರ ಪೂರ್ವ ಬಾಹುವಿನ (ಈಶಾನ್ಯ ಮೂಲೆಯ) ಕೆಂಪು ನಕ್ಷತ್ರ ಆರ್ದ್ರಾ. ಗೋಚರ ಕಾಂತಿ ಪ್ರಮಾಣದಲ್ಲಿ ಇದರ ಸ್ಥಾನ ೧೩ (ಸೂರ್ಯ ೧). ದೂರ ೩೦೦-೬೦೦ ಜ್ಯೋತಿರ್ವರ್ಷಗಳೆಂದು ಅಂದಾಜು. ೫.೮ ವರ್ಷಗಳ ಅವಧಿಯಲ್ಲಿ ಈ ನಕ್ಷತ್ರದ ಕಾಂತಿ ಸುಮಾರು ೦.೩ ಮತ್ತು ೧.೩ ಕಾಂತಿವರ್ಗಗಳ ನಡುವೆ ಆಂದೋಲಿಸುತ್ತದೆ. ಆರ್ದ್ರಾ ಕೆಂಪು ಮಹಾ ದೈತ್ಯ ನಕ್ಷತ್ರ (ರೆಡ್ ಸೂಪರ್ ಜಯಂಟ್ ಸ್ಟಾರ್). ಇದರ ವ್ಯಾಸ ಸೂರ್ಯವ್ಯಾಸದ ೩೦೦ರಿಂದ ೪೦೦ರಷ್ಟು ಪಟ್ಟು ದೊಡ್ಡದು.[]

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆರ್ದ್ರಾ&oldid=718036" ಇಂದ ಪಡೆಯಲ್ಪಟ್ಟಿದೆ