ಆಲಿಫಾಂಟ್, ಮಾರ್ಗರೇಟ್
ಮಾರ್ಗರೇಟ್ ಅಲಿಫಾಂಟ್ | |
---|---|
ಜನನ | Margaret Oliphant Wilson ೪ ಏಪ್ರಿಲ್ ೧೮೨೮ Wallyford, Scotland |
ಮರಣ | 25 June 1897 Wimbledon, London | (aged 69)
ಪ್ರಕಾರ/ಶೈಲಿ | Romance |
ಸಹಿ |
ಆಲಿಫಾಂಟ್, ಮಾರ್ಗರೇಟ್ (೧೮೨೮-೯೭). ಸ್ಕಾಟ್ಲೆಂಡಿನ ಲೇಖಕಿ. ಕಾದಂಬರಿ, ಜೀವನಚರಿತ್ರೆ ಬರೆದಿದ್ದಾಳೆ.
ಜೀವನ
[ಬದಲಾಯಿಸಿ]೧೮೫೨ರಲ್ಲಿ ಫ್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. ೧೮೪೯ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ, ಕರುಣ ಪಾತ್ರರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದ್ದಾಳೆ.
ಸಾಹಿತ್ಯ
[ಬದಲಾಯಿಸಿ]ಅವಸರದಿಂದ ಬರೆಯುತ್ತಿದ್ದುದರಿಂದ ಶೈಲಿ, ವಸ್ತುನಿರೂಪಣೆಗಳಲ್ಲಿ ಅನೇಕ ದೋಷಗಳು ಕಂಡುಬರುತ್ತವೆ. ದಿ ಕ್ರಾನಿಕಲ್ಸ್ ಆಫ್ ಕಾರ್ಲಿಂಗ್ ಫರ್ಡ್ (೧೮೬೩-೭೬), ದಿ ಮಿನಿಸ್ಟರ್ಸ್ ವೈಫ಼್ (೧೮೬೯), ಎಫಿ ಆಗಿಲ್ವಿ (೧೮೮೬), ಕರ್ಸಟೀನ್ (೧೮೯೦), ಎ ಬಿಲೀಗರ್ಡ್ ಸಿಟಿ (೧೮೮೦), ಎ ಲಿಟಲ್ ಪಿಲ್ಗ್ರಿಂ ಇನ್ ದಿ ಅನ್ ಸೀನ್ (೧೮೮೨) ಎಂಬ ಕಾದಂಬರಿಗಳನ್ನೂ ಸ್ಕೆಚಸ್ ಆಫ್ ದಿ ರೇನ್ ಆಫ್ ಜಾರ್ಜ್ II (೧೮೬೯), ದಿ ಮೇಕರ್ಸ್ ಆಫ್ ಫ್ಲಾರೆನ್ಸ್ (೧೮೭೬), ಲಿಟರರಿ ಹಿಸ್ಟರಿ ಆಫ್ ಇಂಗ್ಲೆಂಡ್ ೧೭೯೦-೧೮೨೫ (೧೮೮೨), ರಾಯಲ್ ಎಡಿನ್ಬರೊ (೧೮೯೦), ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ, ಎಡ್ವರ್ಡ್ ಇರ್ವಿಂಗ್ - ಇವೇ ಮುಂತಾದ ಜೀವನಕಥೆ ಗಳನ್ನೂ ಜೀವನಚರಿತ್ರೆಗಳನ್ನೂ ಈಕೆ ಬರೆದಿದ್ದಾಳೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Margaret Oliphant Fiction Collection – all novels and stories with summaries, pictures, links, series, themes.
- Works by Margaret Oliphant at Project Gutenberg
- Margaret Oliphant at The Victorian Web
- Basketful of Fragments: Krystyna Weinstein's 'fictional autobiography' of Margaret Oliphant Archived 2012-01-27 ವೇಬ್ಯಾಕ್ ಮೆಷಿನ್ ನಲ್ಲಿ.
- Archival material relating to Margaret Oliphant listed at the UK National Archives
- Author Profile at Persephone Books
- The Mystery of Mrs Blencarrow at Persephone Books Archived 2013-08-21 ವೇಬ್ಯಾಕ್ ಮೆಷಿನ್ ನಲ್ಲಿ.