ವಿಷಯಕ್ಕೆ ಹೋಗು

ಆಲ್ಕಟ್ರಾಝ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈದಿಗಳನ್ನು ಬಂಧಿಸಿದ ಕಾರಾವಾಸ
ಕೈದಿಗಳನ್ನು ಬಂಧಿಸಿದ ಕಾರಾವಾಸ

ಆಲ್ಕಟ್ರಾಝ್[] ಸುಮಾರು ೧೮.೮೬ (೭.೬೩ ಹೆಕ್ಟೇರ್) ಎಕರೆಜಾಗದಲ್ಲಿ ೧೯೩೪ ನೆ ಇಸವಿಯಲ್ಲಿ (ಪೆಸಿಫಿಕ್ ಸಾಗರದ ನೀರಿನ ಮಧ್ಯೆ)ನಿರ್ಮಿಸಲಾಗಿರುವ ಲೈಟ್ ಹೌಸ್, ಹಾಗೂ ಭಾರಿಬಿಗಿ-ಬಂದೋಬಸ್ತ್ ಆದ ಮಿಲಿಟರಿಜೈಲು ಎಂದು ಗುರುತಿಸಲ್ಪಟ್ಟಿದೆ. ಇದು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ನೀರಿನಮಧ್ಯೆ ಇದೆ. ಈಗ ನಾವು, ಫಿಷರ್‍ಮ್ಯಾನ್ ವಾರ್ಫ್‍ನಲ್ಲಿ ಕುಳಿತು (೩೩ ನೇ ಪಿಯರ್ ಹತ್ತಿರದ) ಈ ಭಾರಿ-ದೊಡ್ಡಜೈಲು ಪ್ರದೇಶಕ್ಕೆ ಹೋಗಬಹುದು. ದುರ್ಗಮವಾದ ಸ್ಥಳದಲ್ಲಿ ಕಟ್ಟಲ್ಪಟ್ಟಿದ್ದರಿಂದ, ಹಿಂದಿನಕಾಲದಲ್ಲಿ ಯಾರೂ ಇದರಹತ್ತಿರ ಸುಳಿಯಲೂ ಅಂಜುತ್ತಿದ್ದರು ! ಸನ್. ೨೦೦೦ ಇಸವಿಯಲ್ಲೂ ಇಲ್ಲಿ ಯಾರೂ ವಾಸಿಸಿದ ದಾಖಲೆಗಳಿಲ್ಲ. ಪಶ್ಚಿಮ ಅಮೆರಿಕದ ಸಮುದ್ರ ತೀರದಲ್ಲಿ ಸ್ಥಾಪಿಸಿರುವ ಲೈಟ್ ಹೌಸ್ ನಾವಿಕರಿಗೆ ಕೈಮರವಾಗಿ ಸೇವೆಸಲ್ಲಿಸಿತ್ತು. ಯುವಜನಾಂಗಕ್ಕೆ ಅದು ಚಿರಪರಿತವಾಗಿರುವುದು ಈ ದ್ವೀಪನಡೆಸಿಕೊಂಡುಬಂದ ರಾಕ್ ಸಂಗೀತದ ಪರಂಪರೆಯಿಂದಾಗಿ. ಕ್ಯಾಲೊಫೋರ್ನಿಯ ರಾಜ್ಯದ, ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿಯಲ್ಲಿ, ನಗರದಮಧ್ಯಭಾಗದಲ್ಲಿ, ಪೆಸಿಫಿಕ್ ಮಹಾಸಾಗರ ದ ಮಧ್ಯಭಾಗದಲ್ಲಿ, ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಶೋಭಿಸುತ್ತಿರುವ ಈ ಕಲ್ಲಿನಕೋಟೆ, ಬಹಳಕಾಲ ಮಿಲಿಟರಿ ಕಾರಾಗೃಹವಾಗಿತ್ತು. ಮತ್ತೆ ಅದು,೧೯೫೩ ರರ ವರೆಗೆ, ಫೆಡರಲ್ ಪ್ರಿಸನ್ ಅಗಿ ಸುದ್ದಿಯಲ್ಲಿತ್ತು. ನಂತರ, 'The National Recreation Area', ವಾಗಿ ಪರಿವರ್ತಿತವಾಯಿತು.

ಕೈದಿಗಳನ್ನು ಬಂಧಿಸಿದ ಕಾರಾವಾಸ
ಕೈದಿಗಳನ್ನು ಬಂಧಿಸಿದ ಕಾರಾವಾಸ

ಮಿಲಿಟರಿಜೈಲು ಪರ್ಯಟಕರ ಅತಿಪ್ರಿಯವಾದ ಸ್ಥಳವಾಗಿದೆ

[ಬದಲಾಯಿಸಿ]

೧೯೭೬-೮೬ ರಲ್ಲಿ ಈಗ ಈ ಚಾರಿತ್ರ್ಯಿಕ ಸ್ಥಳದ, ಹಾಗೂ ಗೋಲ್ಡನ್ ಗೇಟ್ ಬ್ರಿಡ್ಜ್ ಆಡಳಿತವನ್ನು National Park Service ಸಂಸ್ಥೆ ನಿರ್ವಹಿಸುತ್ತಿದೆ. ಅದರಿಂದಾಗಿ ಯಾತ್ರಿಗಳು ಇದನ್ನು ತಮ್ಮ ಪ್ರವಾಸದ ಭಾಗವಾಗಿ ಯಾವ ಸಮಯದಲ್ಲಾದರೂ ಫೆರ್ರಿ ಸರ್ವೀಸ್ ಮುಖಾಂತರ ಬಂದು, ಭೇಟಿಮಾಡಬಹುದು. ಅಮೆರಿಕದ ಪಶ್ಚಿಮಗಡಿಯಲ್ಲಿ, ಪೆಸಿಫಿಕ್ ಸಮುದ್ರತೀರದಲ್ಲಿರುವ ಆಲ್ಕಟ್ರಾಝ್ ಅನ್ನು ಮೊದಲು ಅಮೆರಿಕದ ಮಿಲಿಟರಿ ಒಕ್ಕೂಟ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಈಗ ಇಲ್ಲಿ ರಚಿಸಲಾಗಿರುವ ಸೀಬರ್ಡ್ ಕಾಲೋನಿ ಯಲ್ಲಿ, ವೆಸ್ಟರ್ನ್ ಗಲ್ ಪಕ್ಷಿಗಳು, ಕಾರ್ಮೊರ್ಯಾಂಟ್ಸ್ ಪಕ್ಷಿಗಳು, ಎಗ್ರೆಟ್ಸ್ ಪಕ್ಷಿಗಳು, ಬಹುಸಂಖ್ಯೆಯಲ್ಲಿವೆ. ಹಳೆಯ ಭದ್ರವಾದ ಕಲ್ಲಿನ ಗೋಡೆಗಳಿಂದ ಕಟ್ಟಿದ ಸೆಲ್‍ಗಳಲ್ಲಿ ಯುದ್ಧಕೈದಿಗಳು ಹೇಗೆ ವಾಸಿಸುತ್ತಿದ್ದರು, ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.[] ಅನೇಕರು ಇಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿಹೋದರು. ಮತ್ತೆ ಕೆಲವರು ಮಿಲಿಟರಿ ಅಧಿಕಾರಿಗಳ ಗುಂಡಿನೇಟಿಗೆ ಬಲಿಯಾಗಿ, ಪ್ರಾಣಕಳೆದುಕೊಂಡರು.

ಉಲ್ಲೇಖಗಳು

[ಬದಲಾಯಿಸಿ]
  1. History of Alcatraz
  2. "Where the voices of Alcatraz come to life". Archived from the original on 2010-02-08. Retrieved 2014-07-07.