ಆಲ್ಸೀಯಸ್
ಗೋಚರ
ಆಲ್ಸೀಯಸ್ ಪ್ರ.ಶ.ಪು. 6ನೆಯ ಶತಮಾನದ ಗ್ರೀಕ್ ಕವಿ. ಹೆಚ್ಚಾಗಿ ಭಾವಗೀತೆ ಗಳನ್ನು ಬರೆದಿದ್ದಾನೆ. ಉಪಲಬ್ಧವಾಗಿರುವ ಅವನ ಗೀತೆಗಳ ವಸ್ತು ಹೆಚ್ಚಾಗಿ ರಾಜಕೀಯ, ಪ್ರೇಮ, ಯುದ್ಧ, ಕುಡಿತ,-ಇವುಗಳಿಗೆ ಸಂಬಂಧಿಸಿವೆ. ಅಂದಿನ ಆಡುಭಾಷೆಯಾದ ಈಯೋಲಿಕ್ ಅನ್ನೇ ತನ್ನ ಗೀತೆಗಳಲ್ಲಿ ಬಳಸಿದ. ಬರೆವಣಿಗೆಯಲ್ಲಿ ಆವೇಗಪರತೆ ಪ್ರಧಾನವಾಗಿದ್ದರೂ ರಮ್ಯತೆಯಿದೆ. ಇವನು ಶ್ರೀಮಂತನಾಗಿದ್ದರೂ ಗ್ರೀಸ್‍ನ ನಿರಂಕುಶ ಪ್ರಭುಗಳ ವೈರತ್ವಕ್ಕೆ ಪಕ್ಕಾದ ಇವನು ಸ್ಯಾಫೊವಿನ ಒಡನಾಡಿಯಾಗಿದ್ದನೆಂಬ ಐತಿಹ್ಯವಿದೆ. ಆಲ್ಕೇಯಿಕ್ ವೃತ್ತ ಮಾದರಿಗಳೆಂದು ಹೆಸರು ಪಡೆದು ಮುಂದಿನ ಅನೇಕ ಗ್ರೀಕ್ ಕವಿಗಳಿಗೂ ಹೊರೇಸನಿಗೂ ಮಾದರಿಯಾಗುವಂತಹ ಕಾವ್ಯರಚನಾವಿಧಾನ ಇವನಿಂದ ಪ್ರಾರಂಭ ವಾಯಿತು. ಪ್ರತಿಯೊಂದು ಪದ್ಯಕ್ಕೂ ನಾಲ್ಕು ಸಾಲುಗಳು; ಅವುಗಳಲ್ಲಿ ಹನ್ನೊಂದು ಉಚ್ಚಾರಾಂಶಗಳುಳ್ಳ (ಸಿಲಬಲ್) ಮೊದಲ ಎರಡು ಸಾಲುಗಳೂ ಒಂಬತ್ತು ಮತ್ತು ಹತ್ತು ಉಚ್ಚಾರಾಂಶಗಳುಳ್ಳ ಇರುವ ಮೂರು, ನಾಲ್ಕನೆಯ ಸಾಲುಗಳು ಇರುವುದು ಅದರ ವಿಶಿಷ್ಟಾಂಶವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Alcaeus.
Greek Wikisource has original text related to this article:
- Poems by Alcaeus – English translations
- A. M. Miller, Greek Lyric: Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ. – Alcaeus, many fragments
- Alcaeus Bilingual Anthology (in Greek and English, side by side)
- James S. Easby-Smith The Songs of Alcaeus (1901), W. H. Lowdermilk and Co., Washington: biography, history of criticisms, history of editions/publications, translations of fragments, commentary etc.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: