ವಿಷಯಕ್ಕೆ ಹೋಗು

ಇನ್ಫೋಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇನ್ಫೋಸಿಸ್ ಲಿಮಿಟೆಡ್
ಸಂಸ್ಥೆಯ ಪ್ರಕಾರಸಾರ್ವಜನಿಕ
ಬಿಎಸ್‌ಇ: 500209
ಎನ್‌ಎಸ್‌ಇINFY
ಸ್ಥಾಪನೆ೨ನೇ ಜುಲೈ ೧೯೮೧, ಪುಣೆಯಲ್ಲಿ
ಮುಖ್ಯ ಕಾರ್ಯಾಲಯಬೆಂಗಳೂರು, ಭಾರತ ಭಾರತ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಎನ್ ಆರ್ ನಾರಾಯಣಮೂರ್ತಿ (ಗೌರವ ಮಾರ್ಗದರ್ಶಿ)
ಕೆ ವಿ ಕಾಮತ್ (ಅಧ್ಯಕ್ಷ)
ಕ್ರಿಸ್ ಗೋಪಾಲಕೃಷ್ಣನ್ (ಸಹ-ಅಧ್ಯಕ್ಷ)
ಎಸ್. ಡಿ. ಶಿಬುಲಾಲ್ (ಕಾರ್ಯಕಾರಿ ನಿರ್ವಾಹಕ)
ಉದ್ಯಮತಂತ್ರಾಂಶ ಸೇವೆಗಳು
ಉತ್ಪನ್ನಫಿನಾಕಲ್ (ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ)
ಸೇವೆಗಳುಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು
ಆದಾಯರೂ. 21,693 ಕೋಟಿ ($4.66 ಶತಕೋಟಿ) (ವಿತ್ತವರ್ಷ 2008-09)[]
ನಿವ್ವಳ ಆದಾಯ ರೂ. 5,988 ಕೋಟಿ ($1.28 ಶತಕೋಟಿ) (ವಿತ್ತವರ್ಷ 2008-09)[]
ಉದ್ಯೋಗಿಗಳು೧೦೪,೮೫೦[]
ಉಪಸಂಸ್ಥೆಗಳುಇನ್ಫೋಸಿಸ್ ಬಿಪಿಒ
ಇನ್ಫೋಸಿಸ್ ಕನ್ಸಲ್ಟಿಂಗ್
ಇನ್ಫೋಸಿಸ್ ಆಸ್ಟ್ರೇಲಿಯ
ಇನ್ಫೋಸಿಸ್ ಚೀನ
ಇನ್ಫೋಸಿಸ್ ಮೆಕ್ಸಿಕೊ
ಇನ್ಫೋಸಿಸ್ ಸ್ವೀಡನ್
ಜಾಲತಾಣwww.infosys.com
ಇನ್ಫೋಸಿಸ್

ಆಂಗ್ಲ ಹೆಸರು - Infosys Limited (INFY Archived 2005-07-19 ವೇಬ್ಯಾಕ್ ಮೆಷಿನ್ ನಲ್ಲಿ.) ಇನ್ಫೋಸಿಸ್ ಭಾರತಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಒದಗಿಸುತ್ತಿದೆ. ೨೦೦೭-೨೦೦೮ ರ ಸಾಲಿನಲ್ಲಿ ಈ ಸಂಸ್ಥೆ ರೂ. ೪೦೦ ಕೋಟಿಗೂ ಹೆಚ್ಚು ಆದಾಯ ಪಡೆಯಿತು. ೨೦೨೦ರ ಅಂಕಿಅಂಶಗಳ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಂತರದ ಅತಿದೊಡ್ಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿದೆ.[]


೨೪ ಅಗಸ್ಟ ೨೦೨೧ ರಲ್ಲಿ ೧೦೦ ಶತಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ನಾಲ್ಕನೆಯ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದೆ.[][]

ಇತಿಹಾಸ

[ಬದಲಾಯಿಸಿ]

'ಇನ್ಫೋಸಿಸ್‌', ಸಂಸ್ಥೆ, ೧೯೮೧ರಲ್ಲಿ []

ಇನ್ಫೋಸಿಸ್‌, ೨೦೧೨ ೩ನೇ ತ್ರಿಮಾಸಿಕದಂತೆ ೬.೮೨೫ $(US)[] ಆದಾಯಹೊಂದಿದೆ. ಇನ್ಫೋಸಿಸ್‌ವು ಫೋರ್ಬಸ್ ಸರ್ವೆಯಲ್ಲಿ,[] ಮೆಲ್ದರ್ಜೆ ಹೊಸ ಶೋಧನೆ ಕಂಪನಿಗಳಲ್ಲಿ, ಬೊಸ್ಟನ್ ಕಂಸಲ್ಟಿಂಗ್ ಕಂಪನಿ ಪ್ರಕಾರ [] ವರದಿ ತಾಂತ್ರಿಕ ಕಂಪನಿಗಳಲ್ಲಿ ಅಗ್ರಸ್ಥಾನ ಹಾಗೂ ನಿವ್ಸವೀಕ ಗ್ರೀನ್ ರಾಂಕಿಂಗ್ [೧೦] ಪ್ರಕಾರ ಮೊದಲ ಹತ್ತು ಹಸಿರು ಕಂಪನಿಗಳೊಂದಗಿದೆ. ಇನ್ಫೋಸಿಸ್‌ವು ೨೦೦೦ದಿಂದ ಪ್ರತಿ ವರ್ಷ್, ಭಾರತದ ಬಹಳ ಹೊಗಳಲ್ಪಟ್ಟ ಅನುಮೋದಿತ ಕಂಪನಿಯಾಗಿದೆಯೆಂದು ವಾಲ್ ಸ್ಟ್ರೀಟ್ ಜರ್ನ್‌ಲ್‌ ಎಸಿಯಾ ೨೦೦ ನಲ್ಲಿ [೧೧] ಹೇಳಿದೆ. ೨೦೦೧ರಲ್ಲಿ ಬಿಜ್‌ನೆಸ್ ಟುಡೆ.[೧೨] ಹಾಗೂ ೨೦೦೦, ೨೦೦೧ ಮತ್ತು ೨೦೦೨ ರಲ್ಲಿ ಹೆವಿಟ್ಟ್ ಅಸ್ಸೊಸ್ಸಿಯೆಟೆಡ್‌ನಲ್ಲಿ ಕೆಲಸಕ್ಕೆ ಅತ್ಯುತ್ತಮ ಕಂಪನಿಯೆಂದು ಹೊಗಳಲ್ಪಟ್ಟಿದೆ. ಇನ್ಫೋಸಿಸ್‌ವು ೧೩ ಲಕ್ಷಕ್ಕೂ ಹೆಚ್ಚು ಉದ್ಯೊಗಿಕ ಅರ್ಜಿಪಡೆದು, ೩%ಕ್ಕಿಂತ ಕಡಿಮೆ ಅರ್ಜಿದಾರರನ್ನು ಕೆಲಸಕ್ಕೆ ತೆಗೆದುಕೊಂಡಿದೆಯೆಂದು [೧೩] ಹೇಳಿಕೊಂಡಿದೆ. ಇನ್ಫೋಸಿಸ್‌ವು ೨೦೦೩, ೨೦೦೪ ಹಾಗೂ ೨೦೦೫ ರಲ್ಲಿ ಗ್ಲೋಬಲ್ MAKE (Most Admired Knowledge Enterprises) ಪ್ರಶಸ್ತಿ ಗೆದ್ದುಕೊಂಡಿದ್ದು, ಗ್ಲೋಬಲ್ ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.[೧೪][೧೫] ಇನ್ಫೋಸಿಸ್‌ವು ೨೦೦೧ರಲ್ಲಿ ಭಾರತದ ೧೫ನೇ ನಂಬಿಕೆಯುಳ್ಳ ಕಂಪನಿಯೆಂದೂ ಪ್ರಖ್ಯಾತಿಹೊಂದಿತ್ತು.[೧೬]

ಶೇರು ವಿವರ

[ಬದಲಾಯಿಸಿ]

ಡಿಸೆಂಬರ್ ೨೦೧೧ರಲ್ಲಿ, ಲೈಫ್ ಇನ್ಸುರನ್ಸ್ ಆಫ್ ಇಂಡಿಯಾ ೫.೭%, ಅಬು ಧಾಭಿ ಇನ್ವೆಶ್ಟಮೆಂಟ್ ಅಥೊರಿಟಿ ಮತ್ತು ಸಿಂಗಾಪೂರ್ ಗೊವರ್ನ್ಮೆಂಟ್ ಕೂಡ ಪ್ರಮುಖ ಶೇರುಗಳನ್ನು ಹೊಂದಿವೆ. ಉಳಿದ ಶೇರುಗಳನ್ನು ಸಾರ್ವಜನಿಕ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಹೊಂದಿವೆ.[೧೭]

ಅಭಿವೃಧ್ಧಿ ಕಾರ್ಯಾಲಯಗಳು

[ಬದಲಾಯಿಸಿ]

೧.ಬೆಂಗಳೂರು ೨.ಪುಣೆ ೩.ಚೆನ್ನೈ ೪.ಹೈದರಾಬಾದ ೫.ಮೈಸೂರು ೬.ಮಂಗಳೂರು ೭.ಚಂಡೀಗಡ ೮.ಭುವನೇಶ್ವರ

ಮೊದಲ ಹೆಜ್ಜೆಗಳು

[ಬದಲಾಯಿಸಿ]
ಭಾರತದ ಮೈಸೂರು ನಗರದಲ್ಲಿ, 'ವಿಶ್ವದ ಆತ್ಯಂದ ದೊಡ್ಡ ಕಾರ್ಪೊರೇಟ್ ವಿಶ್ವವಿದ್ಯಾಲಯ'ವನ್ನು ಹೊಂದಿದೆ.

campus.[೧೮]

ಇನ್ಫೊಸಿಸ್ ಫೌಂಡೇಶನ್

[ಬದಲಾಯಿಸಿ]

೧೯೯೬ರಲ್ಲಿ ಇನ್ಫೊಸಿಸ್‌ ಇನ್ಫೊಸಿಸ್ ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ನಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬ್ಗಳಲ್ಲಿ ಹರಡಿಕೊಂಡಿದೆ.[೧೯]

ಸಿ.ಇ.ಒ.ಗಳ ವಿವರ

[ಬದಲಾಯಿಸಿ]

ಇನ್ಫೋಸಿಸ್ ಕಂಪೆನಿ 1981 ರಲ್ಲಿ ಸ್ಥಾಪನೆಯಾದ ವರ್ಷದಿಂದ 2014,ರವರೆಗೆ ಇನ್ಪೋಫೋಸಿಸ್ ಸಿ.ಇ.ಓ.ಗಳು ಸ್ಥಾಪಕರಾಗಿ ಆರ್.ಏನ್.ನಾರಾಯಣಮೂರ್ತಿಯವರು ಪ್ರಾಥಮಿಕ ೨೧ ವರ್ಷಗಳ ಸಮಯ ಕೆಲಸಮಾಡಿ ಮುನ್ನಡೆಸಿದರು.ಡಾ. ವಿಶಾಲ್‌ ಸಿಕ್ಕಾರವರು ಮೊದಲ ನಾನ್ ಪ್ರಮೋಟರ್ ಸಿ.ಇ.ಒ ಆಗಿ ಇನ್ಫೋಸಿಸ್ ಕಂಪೆನಿಯಲ್ಲಿ ೩ ವರ್ಷ ಕೆಲಸಮಾಡಿದರು.[೨೦][೨೧][೨೨] ಆಗ ೨೦೧೭ ರಲ್ಲಿ ರಾಜೀನಾಮೆ ಸಲ್ಲಿಸಿದ ಅವರು, ತಮ್ಮ ಹೇಳಿಕೆಯಲ್ಲಿ ಹೀಗೆ ಹೇಳಿದರು.[೨೩] 'drumbeat of distractions' and "false, baseless, malicious and increasingly personal attacks" as his reason for leaving Infosys.[೨೪] ಎಂದು ಹೇಳಿದ್ದಾರೆ. ಯು.ಬಿ.ಪ್ರವೀಣ್ ರಾವ್ ಹಂಗಾಮಿ ಸಿ.ಇ.ಓ ಹಾಗೂ ಎಂ.ಡಿ.ಆಗಿ ನೇಮಿಸಲ್ಪಟ್ಟರು.[೨೫][೨೬] ಡಾ.ವಿಶಾಲ್ ಸಿಕ್ಕರವರು ಕಂಪನಿಯಿಂದ ರಾಜೀನಾಮೆ ಕೊಟ್ಟ ಆಗಸ್ಟ್ ತಿಂಗಳಿನಿಂದ ಹುಡುಕುತ್ತಿದ್ದು, ಕಂಪೆನಿಯ ಸ್ಥಾಪಕ ಆಡಳಿತ ನಿರ್ದೇಶಕರು, ಮತ್ತು ಮುಖ್ಯನಿರ್ವಣಾಧಿಕಾರಿಗಳು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ ಮೇಲೆ ನಿರ್ಣಯಕ್ಕೆ ಬಂದರು] [೨೬]

ವಿಶಾಲ್ ಸಿಕ್ಕಾ ರಾಜೀನಾಮೆ

[ಬದಲಾಯಿಸಿ]

ಇನ್ಫೋಸಿಸ್ ಕಂಪನಿಯ ನಿರ್ವಹಣೆಯಲ್ಲಿ ಸತತ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ವಿಶಾಲ್‌ ಸಿಕ್ಕಾರವರು, ಇನ್ಫೋಸಿಸ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ನಂದನ್ ನಿಲೇಕಣಿ[೨೭] ಇನ್ಫೋಸಿಸ್‌ಗೆ ಮರಳಿ, ಇನ್ಫೋಸಿಸ್‌ನಲ್ಲಿ ನಾನ್ ಎಗ್ಜಿಕ್ಯೂಟೀವ್, ಮುಖ್ಯಸ್ಥರಾಗಿ ನಾನ್ ಇಂಡಿಪೆಂಡೆಂಟ್ ನಿರ್ದೇಶಕರಾಗಿ ಅವರು ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಇನ್ಫಿ ಮುಖ್ಯಸ್ಥರಾಗಿ ಕೆಲಸ ಮಾಡಿರುವ ಆರ್.ಶೇಷಶಾಯಿ, ಕೋ-ಚೇರ್ಮನ್ ರವಿ ವೆಂಕಟೇಶನ್ ರಾಜೀನಾಮೆ ಸಲ್ಲಿಸಿದ್ದರೂ, ರವಿ ವೆಂಕಟೇಶನ್, ಸ್ವತಂತ್ರ ನಿರ್ದೇಶಕರಾಗಿ ಮುಂದುವರೆಯುತ್ತಾರೆ.

ವಿಶಾಲ್‌ ಸಿಕ್ಕಾ[೨೮] ನಿರ್ಗಮದ ಬಳಿಕ,ಇನ್ಫೋಸಿಸ್‌ನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸ್ಥಾನಕ್ಕೆ ೨, ಜನವರಿ, ೨೦೧೮ ರಂದು ಸಲೀಲ್ ಪರೇಖ್ [೨೯] ನೇಮಕಗೊಂಡರು. ಐಟಿ ಉದ್ಯಮದ ಕ್ಷೇತ್ರದಲ್ಲಿ ಮೂರು ದಶಕಗಳಷ್ಟು ಅನುಭವ ಹೊಂದಿರುವ ಸಲೀಲ್ ಪರೇಖ್, ಫ್ರೆಂಚ್‌ ಮೂಲದ ಐಟಿ ದೈತ್ಯ ಕ್ಯಾಪ್ಜೆಮಿನಿಯ ಯುರೋಪ್, ಉತ್ತರ ಅಮೆರಿಕಾ ಮತ್ತು ಏಷ್ಯಾದ್ಯಂತ ಹಣಕಾಸು ಸೇವೆಗಳ ಸಿಇಓ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ಫೋಸಿಸ್ [೩೦] (ಬೆಂಗಳೂರು ಶಾಖೆ) ಅವರನ್ನು ಐದು ವರ್ಷದ ಅವಧಿಗೆ ನೇಮಕಮಾಡಿದ್ದಾರೆ.[೩೧]

ಮಾರುಕಟ್ಟೆ ಫಲಿತಾಂಶ

[ಬದಲಾಯಿಸಿ]

ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ಇನ್ಫೊಸಿಸ್‌, ಮೂರನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ₹ 5,129 ಕೋಟಿಗಳಷ್ಟು ನಿವ್ವಳ ಲಾಭಗಳಿಸಿದೆ.[೩೨]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಆರ್ಕೈವ್ ನಕಲು" (PDF). Archived from the original (PDF) on 2009-04-19. Retrieved 2009-06-12.
  2. "ಆರ್ಕೈವ್ ನಕಲು" (PDF). Archived from the original (PDF) on 2009-04-19. Retrieved 2009-06-12.
  3. "Forbes 2020 Global 2000". Forbes. Retrieved 28 February 2021.
  4. "Infosys becomes 4th Indian company to touch $100 bn market cap". The Economic Times. Retrieved 2021-08-25.
  5. Salil, K. (2021-08-24). "Infosys becomes fourth Indian company to reach market cap of $100 billion". The Federal (in ಅಮೆರಿಕನ್ ಇಂಗ್ಲಿಷ್). Retrieved 2021-08-31.
  6. "Infosys - Company History & Defining Milestones | About Us". www.infosys.com.
  7. "Infosys About us". Archived from the original on 2012-04-15. Retrieved 2012-02-10.
  8. "The World's Most Innovative Companies". Forbes.
  9. "BCG documents" (PDF). Archived from the original (PDF) on 2010-10-11. Retrieved 2012-02-10.
  10. "Newsweek Green Rankings". Archived from the original on 2012-09-13. Retrieved 2012-02-10.
  11. "Infosys Technologies Toughs Out Global Storm to Win Asia 200 in India". ನವೆಂ 2, 2010 – via www.wsj.com. {{cite web}}: Check date values in: |date= (help)
  12. R. Sukumar. "India's Best Employers: The Top 5". A BT-Hewitt study. Business Today. Archived from the original on 1 July 2006. Retrieved 10 October 2006.
  13. "INFY 2007 20-F, Item 6". Sec.gov. Retrieved 7 September 2010.
  14. "Infosys recognized as a Globally Most Admired Knowledge Enterprise for 2004" (PDF). A Teleos study. Infosys Media. Retrieved 1 December 2004.
  15. "Infosys in the Global Hall of Fame". Archived from the original on 2006-10-16. Retrieved 2012-02-10.
  16. "Components of trust that brands can focus on". thehindubusinessline.com. 2011-05-18.
  17. http://www.infosys.com/investors/reports-filings/quarterly-results/Documents/Share-Holding/clause35-december31-2011.pdf
  18. Infosys Technologies Limited. "Sustainability". Infosys. Archived from the original on 1 ಡಿಸೆಂಬರ್ 2009. Retrieved 27 July 2010.
  19. "ಇನ್ಫೋಸಿಸ್ ಸಂಸ್ಥೆ, ಭಾರತದ ಇತರ ರಾಜ್ಯಗಳಲ್ಲೂ ಹರಡಿದೆ". Archived from the original on 2012-02-13. Retrieved 2012-02-10.
  20. "Infosys Names Vishal Sikka First External CEO; Chairman Murthy to Step Down". Gadgets 360. ಜೂನ್ 12, 2014.
  21. http://news.biharprabha.com/2014/07/infosys-to-pay-its-ceo-vishal-sikka-rs-30-crores-annually/ INFOSYS to appoint Dr.Vishal sikka as CEO & MD on 2nd, July, 2015
  22. "to pay its CEO Dr.Vishal sikka Rs.30 crores, annually New.bihar prabha.com, Indo Asian news 3, july 2014".
  23. "letter/articleshow/60113647.cms".
  24. "Infosys chief executive Vishal Sikka resigns". ಆಗ 18, 2017 – via www.bbc.com. {{cite web}}: Check date values in: |date= (help)
  25. "vishal-sikka-resigns-as-md-ceo-of infosys ಸಲೀಲ್ ಪಾರೇಖ್ ಹೊಸ ಸಿ.ಇ ಓ ಮತ್ತು ಎಂ. ಡಿ.ಆಗಿ ೨ ಜನವರಿ, ೨೦೧೮ ರಲ್ಲಿ ನೇಮಿಸಲ್ಪಟ್ಟರು".
  26. ೨೬.೦ ೨೬.೧ "Infosys appoints Capgemini's Salil Parekh as MD & CEO". ಡಿಸೆಂ 3, 2017 – via The Economic Times - The Times of India. {{cite web}}: Check date values in: |date= (help)
  27. "ಇನ್ಫೋಸಿಸ್‌ಗೆ ಹಿಂತಿರುಗಿದ ನಂದನ್ ನಿಲೇಕಣಿ". Vijay Karnataka.
  28. "ಇನ್ಫೋಸಿಸ್‌ ಎಂಡಿ ವಿಶಾಲ್‌ ಸಿಕ್ಕಾ ರಾಜೀನಾಮೆ". Vijay Karnataka.
  29. [೧], Financialexpress.com,3rd,January, 2018
  30. "Vijaya Karnataka". Vijay Karnataka.
  31. I’m making Infy relevant for future clients’ Shilpa Phadnis, Sujit John & Asha Rai TNN, TOI, 18th, April, 2018
  32. "ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶ ಇನ್ಫೊಸಿಸ್‌ ಲಾಭ ಹೆಚ್ಚಳ, prajavani.net, 13 Jan, 2018". Archived from the original on 2018-01-12. Retrieved 2018-01-13.