ವಿಷಯಕ್ಕೆ ಹೋಗು

ಇಮ್ಯೂನೋ ಎಲೆಕ್ಟ್ರೋಫಾರಿಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಮ್ಯೂನೋ ಎಲೆಕ್ಟ್ರೋಫಾರಿಸಿಸ್ ಎಂದರೆ ಕಶೇರುಕ ಜೀವಿಗಳ ದೇಹದಿಂದ ಬೇರ್ಪಡಿಸಿದ ಪ್ರೋಟೀನ್ ಶುದ್ಧವಾದ ವಸ್ತುವೇ ಅಥವಾ ಹಲವಾರು ಪ್ರೋಟೀನುಗಳ ಮಿಶ್ರಣವೇ ಎಂಬುದನ್ನು ಅರಿಯುವ ವಿಧಾನ (ಪ್ರತಿರಕ್ಷೆ ವಿದ್ಯುತ್ಕಣ ಸಂಚಲನ).[]

ಹಿನ್ನೆಲೆ

[ಬದಲಾಯಿಸಿ]

ಈ ಜೀವಿಗಳ ದೇಹವನ್ನು ಅನ್ಯವರ್ಗದ ಕೆಲವು ವಸ್ತುಗಳು ಪ್ರವೇಶಿಸಿದಾಗ ಅದನ್ನು ನಾಶಮಾಡಲು ಇಲ್ಲವೆ ನಿಷ್ಕ್ರೀಯಗೊಳಿಸಲು ವಿಶಿಷ್ಟವಾದ ನಿರೋಧಕ ವಸ್ತುಗಳನ್ನು (ಆಂಟಿಬಾಡೀಸ್) ದೇಹ ತಯಾರಿಸುತ್ತದೆ. ನಿರೋಧಕಗಳ ಉತ್ಪತ್ತಿಯನ್ನು ಪ್ರಚೋದಿಸುವ ವಸ್ತುಗಳನ್ನು ನಿರೋಧಜನಕಗಳೆನ್ನುತ್ತಾರೆ (ಆಂಟಿಜನ್ಸ್). ವೈರಸ್, ಪ್ರೋಟೀನುಗಳು, ಮತ್ತು ಬಹುಶರ್ಕರಗಳು ನಿರೋಧಜನಕಗುಣಗಳನ್ನು ಹೊಂದಿವೆ.

ತತ್ತ್ವ ಮತ್ತು ವಿಧಾನ

[ಬದಲಾಯಿಸಿ]

ನಿರೋಧಜನಕದ ರಾಸಾಯನಿಕ ರಚನೆ ಏನೇ ಇರಲಿ, ಉತ್ಪತ್ತಿಯಾಗುವ ನಿರೋಧಕ ಪ್ರೋಟೀನೇ ಆಗಿರುತ್ತದೆ. ಈ ವಸ್ತುಗಳು ಪ್ರಾಣಿಯ ರಕ್ತದಲ್ಲಿ ಕಾಣಬರುತ್ತವೆ. ನಿರೋಧಕಗಳ ರಚನೆ ನಿರೋಧಜನಕಗಳ ಪ್ರಕೃತಿಯನ್ನು ಅವಲಂಬಿಸಿ ವಿಶಿಷ್ಟ ರೀತಿಯಲ್ಲಿ ಆಗುತ್ತದೆ. ಯಾವುದೇ ಒಂದು ನಿರೋಧಜನಕದ ಪ್ರವೇಶದಿಂದ ಉತ್ಪತ್ತಿಯಾದ ನಿರೋಧಕ ಆ ನಿರೋಧಜನಕದೊಂದಿಗೆ ಮಾತ್ರ ಕೊಡಿ ಒತ್ತರವನ್ನು ರಚಿಸುತ್ತದೆ. ಈ ನಿರ್ದಿಷ್ಟತೆಯನ್ನು ಉಪಯೋಗಿಸಿಕೊಂಡು ನಿರೋಧಜನಕದ ಶುದ್ಧತೆಯನ್ನು ಕಂಡುಹಿಡಿಯಬಹುದು. ಇದೇ ಇಮ್ಯೂನೋ ಎಲೆಕ್ಟ್ರೋಫಾರಿಸಿಸ್ ವಿಧಾನದ ತತ್ತ್ವ. ಈ ವಿಧಾನದಲ್ಲಿ ಬೇರ್ಪಡಿಸಿ ಪರಿಶೀಲನೆಗೆ ಒಳಗಾಗಿರುವ ಪ್ರೋಟೀನನ್ನು ನಿರೋಧಜನಕವನ್ನಾಗಿ ಬಳಸಿ ನಿರೋಧಕಗಳನ್ನು ಮೊಲದಲ್ಲಿ ಉತ್ಪತ್ತಿಮಾಡುತ್ತಾರೆ. ಅನಂತರ ಮೊಲದ ರಕ್ತವನ್ನು ತೆಗೆದು ರಕ್ತಸಾರವನ್ನು (ವಸೆ) ಬೇರ್ಪಡಿಸಿ, ಸ್ಟಾರ್ಚ ಜೆಲ್ಲನ್ನು ಆಧಾರ ವಸ್ತುವನ್ನಾಗಿ ಉಪಯೋಗಿಸಿ ವಸೆಯನ್ನು ವಿದ್ಯುತ್ ಪ್ರವಾಹಕ್ಕೆ ಒಳಪಡಿಸುತ್ತಾರೆ. ಕೆಲವು ಗಂಟೆಗಳ ಕಾಲ ಪ್ರವಾಹವನ್ನು ಹರಿಸಿದಾಗ ನಿರೋಧಕಗಳು ವಿವಿಧ ಅಂತರಗಳಿಗೆ ಚಲಿಸಿ ಬೇರ್ಪಡೆಯಾಗುತ್ತವೆ. ಅನಂತರ ಸ್ಟಾರ್ಚಜಲ್ಲನ್ನು ಒಂದು ಗಾಜಿನ ಹಲಗೆಯ ಮೇಲೆ ಹರಡಿರುವ ಆಗಾರ್ ಜೆಲ್ಲಿನ ಮೇಲೆ ಇಡುತ್ತಾರೆ. ಆಗಾರ್ ಜೆಲ್ಲಿನಲ್ಲಿ ಸ್ಟಾರ್ಚಜೆಲ್ಲಿಗೆ ಅನತಿದೂರದಲ್ಲಿ ಸಮಾನಾಂತರವಾಗಿ ಅದರ ಉದ್ದದಷ್ಟು ಉತ್ತಳ (ಶ್ಯಾಲೋ) ಮತ್ತು ಕಿರಿದಾದ ಕಾಲುವೆಯನ್ನು ಇಕ್ಕಡೆಗಳಲ್ಲಿ ಮಾಡಿ ಈ ಕಾಲುವೆಗಳಲ್ಲಿ ನಿರೋಧಜನಕವಸ್ತುವಿನ ದ್ರಾವಣವನ್ನು ತುಂಬುತ್ತಾರೆ. ಇಂಥ ವ್ಯವಸ್ಥೆಯನ್ನು ಕೆಲವು ಗಂಟೆಗಳ ಕಾಲ ಸ್ಥಿರವಾಗಿಟ್ಟರೆ ನಿರೋಧಕ ಮತ್ತು ನಿರೋಧಜನಕಗಳು ಈ ಅವಧಿಯಲ್ಲಿ ಆಗಾರ್ ಜೆಲ್ಲಿನಲ್ಲಿ ಪ್ರಸರಿಸುತ್ತವೆ, ಈ ಸಂದರ್ಭದಲ್ಲಿ ಪರಸ್ಪರ ಅನುಗುಣವಾದ ನಿರೋಧ ಮತ್ತು ನಿರೋಧಜನಕಗಳು ಸಂಧಿಸಿದರೆ ಒತ್ತಡ ರಚಿತವಾಗುತ್ತದೆ. ಒತ್ತರ ತಿಳಿಯಾದ ಆಗಾರ್ ಜೆಲ್ಲಿನಲ್ಲಿ ವಕ್ರಾಕೃತಿಯ ಒತ್ತರರೇಖೆಗಳಂತೆ ಕಾಣುತ್ತದೆ. ಒತ್ತರದ ರೇಖೆಯ ಸಂಖ್ಯೆ ಒಂದಕ್ಕಿಂತ ಹೆಚ್ಚಾಗಿದ್ದರೆ ನಿರೋಧಜನಕ ವಸ್ತು ಪ್ರೋಟೀನ್, ಒಂದೇ ಬಗೆಯ ಪ್ರೋಟೀನ್ ಆಗಿರದೆ ಒತ್ತರದ ರೇಖೆಯ ಸಂಖ್ಯೆಗಳಷ್ಟು ಪ್ರೋಟೀನುಗಳನ್ನೊಳಗೊಂಡ ಮಿಶ್ರವಸ್ತುವೆಂದು ಗೊತ್ತಾಗುತ್ತದೆ. ಸಾಮಾನ್ಯವಾಗಿ ಕಶೇರುಕಗಳಲ್ಲಿ ಶರೀರದ ಹಿಂಭಾಗದಲ್ಲಿ ಬಾಲವಿರುತ್ತದೆ. ಆದರೆ ಇದರೊಳಗೆ ದೇಹಾಂತರ ಅವಕಾಶವಿಲ್ಲ. ಅಲ್ಲದೆ ಉದರಭಾಗದೊಳಗಿರುವ ಯಾವ ಅಂಗವೂ ಬಾಲದೊಳಕ್ಕೆ ಪ್ರವೇಶಿಸುವುದಿಲ್ಲ. ಕಶೇರುಕಗಳಲ್ಲಿರುವ ಮಸ್ತಕ ದೇಹರಚನಾಶಾಸ್ತ್ರದ ದೃಷ್ಟಿಯಿಂದ ಮುಖ್ಯವಾದ ಭಾಗ. ಮಸ್ತಕವಿಲ್ಲದಿರುವ ಕಾರ್ಡೇಟಗಳೂ ಇವೆ. ಕಶೇರುಕಗಳ ಮೂಲ ಲಕ್ಷಣ ಕಶೇರುಸ್ತಂಭ. ಇದರಿಂದಾಗಿಯೇ ಕಶೇರುಕ ಎಂಬ ಹೆಸರು ಬಂದಿದೆ. ಅಕಶೇರುಕಗಳಲ್ಲಿ ಕಶೇರುಸ್ತಂಭ ಇಲ್ಲ.

ವೈಶಿಷ್ಟ್ಯ

[ಬದಲಾಯಿಸಿ]

ಈ ವಿಧಾನ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಪ್ರೋಟೀನಿನಲ್ಲಿ 1-2 ಮೈಕ್ರೋ ಗ್ರಾಂಗಳಷ್ಟು (1 ಮೈಕ್ರೋ ಗ್ರಾಂ=10-6 ಗ್ರಾಂ; ಗ್ರಾಂನ 10ಲಕ್ಷ ಭಾಗಗಳಲ್ಲಿ ಒಂದು ಭಾಗ) ಅಶುದ್ಧತೆಯಿದ್ದರೂ ಕಂಡುಹಿಡಿಯಬಹುದು. ಆರೋಗ್ಯವಂತ ಮನುಷ್ಯನ ರಕ್ತ ಸಾರವನ್ನು ಇಮ್ಯೂನೋ ಎಲೆಕ್ಟ್ರೋಫಾರಿಸಿಸ್ ವಿಧಾನದಿಂದ ವಿಶ್ಲೇಷಣೆಮಾಡಿದಾಗ ಮೂಡಿಬಂದ ರೇಖೆಗಳನ್ನು ಉಲ್ಲೇಖಿಸಿದೆ. ಪ್ರತಿ ಒಂದು ವಕ್ರರೇಖೆಯೂ ರಕ್ತಸಾರದಲ್ಲಿರುವ ಒಂದು ಪ್ರೋಟೀನನ್ನು ಪ್ರತಿನಿಧಿಸುತ್ತದೆ. ಪ್ರೋಟೀನುಗಳು ಪ್ರಸರಿಸುವಾಗ ಚಕ್ರಾಕೃತಿಯಲ್ಲಿ ಚಲಿಸುವುದರಿಂದ ಒತ್ತರ ರೇಖೆಗಳು ವಕ್ರಾಕೃತಿಯಲ್ಲಿರುತ್ತವೆ.

ಹೊಸ ಬೆಳವಣಿಗೆ

[ಬದಲಾಯಿಸಿ]

ಶುದ್ಧತೆ ಪರಿಶೀಲನೆಗೆ ದೇಹದ ಒಳಗೆ ಬಯೋ ಸೆನ್ಸರ್ ಗಳನ್ನ ಇಟ್ಟು, ವೈರಸ್, ಪ್ರೋಟೀನುಗಳು ಇವೇ ಮುಂತಾಅದ್ ಮಾಹಿತಿ ಅನ್ನು ಪಡೆಯ ಬಹುದಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. https://medical-dictionary.thefreedictionary.com/immunoelectrophoresis
  2. https://medcraveonline.com/IJBSBE/electro-immuno-sensors-current-developments-and-future-trends.html

ಹೊರಗಿನ ಕೊಂಡಿಗಳು

[ಬದಲಾಯಿಸಿ]