ಇಲಿಕಿವಿ ಸೊಪ್ಪು
ಗೋಚರ
ಐಪೋಮಿಯಾ ರೆನಿಫೊರ್ಮಿಸ್ (Ipomea reniformis)ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಇಲಿಕಿವಿಯು 'ಕನ್ವೋಲ್ವುಲೇಸಿ' ಎಂಬ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ.
ಇತರ ಭಾಷೆಗಳಲ್ಲಿ ಇರುವ ಹೆಸರು
[ಬದಲಾಯಿಸಿ]- ಕನ್ನಡ : ಇಲಿ ಕಿವಿ ಸೊಪ್ಪು
- ಹಿಂದಿ : ಚುಹಕಾನ್
- ತಮಿಳು : ಎಲಿಕಟು ಕೀರಯಿ
- ತುಳು: ಎಲಿ ಕೆಬಿ
- ಕೊಂಕಣಿ : ವಿಂದ್ರ ಕಾನು
- ಸಂಸ್ಕ್ರತ : ಮೂಷಕಪರ್ಣಿ
ಲಕ್ಷಣ
[ಬದಲಾಯಿಸಿ]ಈ ಗಿಡ ಅರ್ಧ ಅಡಿ ಎತ್ತರ ಬೆಳೆಯುತ್ತದೆ. ಎಲೆ ದಪ್ಪವಾಗಿದ್ದು ಇಲಿಯ ಕಿವಿ ಆಕಾರವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ. ಗದ್ದೆ ಬದಿ ತೋಟ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಈ ಸಸ್ಯ ಮುಂಗಾರು ಮಳೆ ಪ್ರಾರಂಭದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೇವಾಂಶವಿರುವ ಪ್ರದೇಶಗಳಲ್ಲಿ ಯಾವಾಗಲೂ ಇರುತ್ತದೆ.[೧]
ಔಷಧೀಯ ಉಪಯೋಗಗಳು
[ಬದಲಾಯಿಸಿ]- ಕಿವಿನೋವು : ಎಲೆಯನ್ನು ಹಿಚುಕಿ, ಅದರ ರಸವನ್ನು ಕಿವಿಗೆ ಹಾಕುವುದು.
- ಸ್ವರ ಭಂಗ : ಎಲೆಯ ರಸಕ್ಕೆ ಎರಡು ಮೂರು ಚಿಟಿಕೆ ಬಜೆಯ ಹುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು.
- ಪಿತ್ತ ಜ್ವರ : ಇಲಿಕಿವಿಯ ಕಷಾಯದ ಸೇವನೆ.
- ಕಣ್ಣುರಿ,ನಿದ್ರಾಹೀನತೆ : ಉಷ್ಣತೆಯಿಂದ ಕಣ್ಣುರಿ ಲಕ್ಷಣವಿದ್ದರೆ, ನಿದ್ರೆ ಬಾರದಿದ್ದರೆ ಇದರ ರಸಕ್ಕೆ ಸಕ್ಕರೆ ಸೇವಿಸಿ ಕುಡಿಯಬೇಕು.
- ಹಾವು ಕಡಿತ : ಹಾವು ಕಡಿತದ ಸಂದರ್ಭದಲ್ಲಿ ಎಲೆಯ ರಸವನ್ನು ಕುಡಿಯಲು ನೀಡಬಹುದು. ಮತ್ತು ಜಜ್ಜಿದ ಎಲೆಯನ್ನು ಕಡಿತದ ಭಾಗಕ್ಕೆ ಹಚ್ಚಲು ಬಳಸಬಹುದು.[೨]
ಇಲಿಕಿವಿ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ಮಕ್ಕಳ ಹೊಟ್ಟೆಹುಳು ನಿವಾರಣೆಯಾಗುತ್ತದೆ. ತಲೆಗೆ ಎಣ್ಣೆ ಬಿಸಿಮಾಡುವಾಗಲೂ ಇದರ ರಸವನ್ನು ಹಾಕಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ ಜೀವ ಸಂಜೀವಿನಿ(ಕರಾವಳಿ ತೀರದ ಔಷಧೀಯ ಸಸ್ಯಗಳು),ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂಡ್ಕೂರು ಘಟಕ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರು,ಲಯನ್ಸ್ ಕ್ಲಬ್ ಮುಂಡ್ಕೂರು,ಮೂರನೆ ಮುದ್ರಣ-೨೦೦೦,ಪುಟ-೮
- ↑ https://easyayurveda.com