ಉಂಧಿಯು
ಗೋಚರ
ಉಂಧಿಯು ಗುಜರಾತ್‍ನ ಒಂದು ಮಿಶ್ರ ತರಕಾರಿಗಳ ಖಾದ್ಯವಾಗಿದೆ ಮತ್ತು ಸೂರತ್‌ನ ಪ್ರಾದೇಶಿಕ ವಿಶೇಷತೆಯಾಗಿದೆ. ಈ ಖಾದ್ಯದ ಹೆಸರು ಗುಜರಾತಿ ಶಬ್ದ "ಉಂಧು"ದಿಮ್ದ ಬರುತ್ತದೆ ಮತ್ತು ಇದರರ್ಥ ತಲೆಕೆಳಗಾದ ಎಂದು. ಸಾಂಪ್ರದಾಯಿಕವಾಗಿ ಈ ಖಾದ್ಯವನ್ನು ಬುಡಮೇಲಾಗಿ ನೆಲದಡಿಯಿರುವ, "ಮಟ್ಲು" ಎಂದು ಕರೆಯಲ್ಪಡುವ ಮಣ್ಣಿನ ಮಡಕೆಗಳಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಈ ಪಾತ್ರೆಗಳಿಗೆ ಬೆಂಕಿಯನ್ನು ಮೇಲಿನಿಂದ ಒದಗಿಸಲಾಗುತ್ತದೆ.
ಈ ಖಾದ್ಯಕ್ಕೆ ಬೇಕಾದ ತರಕಾರಿಗಳು ದಕ್ಷಿಣ ಗುಜರಾತ್‍ನ ಕರಾವಳಿಯಲ್ಲಿ ಲಭ್ಯವಿರುವಂಥವಾಗಿರುತ್ತವೆ. ಬಳಸಲಾದ ತರಕಾರಿಗಳಲ್ಲಿ ಹುರುಳಿಕಾಯಿ ಅಥವಾ ಎಳೆ ಬಟಾಣಿಗಳು (ಬೀಜಕೋಶ ಸಹಿತ), ಬಾಳೆಕಾಯಿ, ಸಣ್ಣ ಬದನೆಕಾಯಿಗಳು, ಮುಠಿಯಾ (ಮೆಂತ್ಯದ ಸೊಪ್ಪು ಮತ್ತು ಸಂಬಾರ ಪದಾರ್ಥಗಳನ್ನು ಸೇರಿಸಿದ ಕಡಲೆ ಹಿಟ್ಟು ಅಥವಾ ಹಾಂಡ್ವಾ ನೊ ಲೋಟ್‍ನಿಂದ ತಯಾರಿಸಲಾದ ಪನಿಯಾಣ, ಹಬೆಯಲ್ಲಿ ಬೇಯಿಸಲಾಗುತ್ತದೆ ಅಥವಾ ಕರಿಯಲಾಗುತ್ತದೆ)[೧], ಆಲೂಗಡ್ಡೆ, ಸುವರ್ಣ ಗೆಡ್ಡೆ ಸೇರಿವೆ.
ಉಲ್ಲೇಖಗಳು
[ಬದಲಾಯಿಸಿ]