ವಿಷಯಕ್ಕೆ ಹೋಗು

ಉತ್ತಪ್ಪಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತಪ್ಪಮ್
ಉತ್ತಪ್ಪಮ್
ಮೂಲ
ಪರ್ಯಾಯ ಹೆಸರು(ಗಳು)ಉತ್ತಪ್ಪ, ಉತ್ತಪ
ಮೂಲ ಸ್ಥಳIndia
ಪ್ರಾಂತ್ಯ ಅಥವಾ ರಾಜ್ಯದಕ್ಷಿಣ ಭಾರತ
ವಿವರಗಳು
ಮುಖ್ಯ ಘಟಕಾಂಶ(ಗಳು)ಅಕ್ಕಿ, ಉದ್ದಿನ ಬೇಳೆ

ಉತ್ತಪ್ಪಮ್ :

[ಬದಲಾಯಿಸಿ]

ದೋಸೆ ಯಂತಿರುವ ಉತ್ತಪ್ಪಮ್, ದಕ್ಷಿಣ ಭಾರತ ದ ಒಂದು ರೀತಿಯ ತಿಂಡಿಯಾಗಿದೆ. ಅಡುಗೆಗೆ ಹಾಕುವ ಹಲವು ವಸ್ತುಗಳನ್ನು ದೋಸೆ ಹಿಟ್ಟಿಗೆ ಹಾಕಿ ಇದನ್ನು ತಯಾರಿಸುತ್ತಾರೆ. ಇದು ದಪ್ಪದಪ್ಪವಾಗಿಯೂ, ಗರಿ ಗರಿಯಾಗಿಯೂ ಮತ್ತು ನಯವಾಗಿಯೂ ಇರುತ್ತದೆ.

ತಯಾರಿಸುವುದು :

[ಬದಲಾಯಿಸಿ]

1:3 ಪ್ರಮಾಣದ ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ಉತ್ತಪ್ಪಮ್ ಹಿಟ್ಟನ್ನು ತಯಾರಿಸುತ್ತಾರೆ. ಇದು ಕುಸುಬಲ ಅಕ್ಕಿ ಮತ್ತು ಬಾಸ್ಮತಿ ಯಂತಹ ಸಾದಾ ಅಕ್ಕಿಯನ್ನೊಳಗೊಂಡಿರುತ್ತದೆ. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರಾತ್ರಿಯಿಡೀ ನೆನೆ ಹಾಕಿ ರುಬ್ಬಿದ ನಂತರ ರುಬ್ಬಿದ ಹಿಟ್ಟು ಹುಳಿಬಂದ ಮೇಲೆ ಉತ್ತಪ್ಪಮ್ ಮಾಡಲು ತಯಾರಾಗುವುದು. ಈ ಹಿಟ್ಟನ್ನು ಒಲೆಯ ಮೇಲಿರುವ ಬಿಸಿ ಹೆಂಚಿನ ಮೇಲೆ ವೃತ್ತಾಕಾರದಲ್ಲಿ ಹಾಕಬೇಕು. ಹಿಟ್ಟಿನ ಮೇಲ್ಭಾಗವನ್ನು ನಿಧಾನವಾಗಿ ಹರಡಬೇಕು. ನಂತರ ಎಣ್ಣೆಯನ್ನು ಸುತ್ತಲೂ ಹಾಕಿ ಕಂದುಬಣ್ಣಕ್ಕೆ ಬಂದ ಮೇಲೆ ಅಡಿಭಾಗದಿಂದ ಮೀಟಬೇಕು. ಮತ್ತೊಮ್ಮೆ ಎಣ್ಣೆ ಹಾಕಿ ಎರಡನೆಯ ಮೇಲ್ಮೈ ಬೆಂದ ಮೇಲೆ ಅದನ್ನು ಹೆಂಚಿನಿಂದ ತೆಗೆಯಬೇಕು. ಈಗ ಬಿಸಿ ಬಿಸಿಯಾದ ಉತ್ತಪ್ಪಮ್ ತಿನ್ನಲು ತಯಾರಾಗುವುದು.