ಸೆಪ್ಟೆಂಬರ್ 1998 24 ಉತ್ತರ ಪ್ರದೇಶ ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.[೧]
ಉತ್ತರಾಖಂಡ್ ಶಾಸನಸಭೆಯು*ಸೆಪ್ಟೆಂಬರ್ 1998 24 ಉತ್ತರ ಪ್ರದೇಶ ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯದ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.[೨] ಉತ್ತರಾಖಂಡ್ ವಿಧಾನಸಭೆ ಎಂದೂ ಹೆಸರಾಗಿದೆ, (ಹಿಂದಿ: उत्तराखण्ड विधानसभा) ಉತ್ತರಾಖಂಡ್, ಭಾರತದ 29 ನೆಯ ರಾಜ್ಯ. ಇದು ಒಂದು ಏಕಸಭೆಯ ಆಡಳಿತ ಮತ್ತು ಕಾನೂನು ಕೈಗೊಳ್ಳುವ ಅಂಗವಾಗಿದೆ. ಡೆಹ್ರಾಡೂನ್ ಉತ್ತರಾಖಂಡ ರಾಜ್ಯದ ರಾಜಧಾನಿ. ಉತ್ತರಾಖಂಡ್ ವಿಧಾನಸಭೆ (ಲೆಜಿಸ್ಲೇಟಿವ್ ಅಸೆಂಬ್ಲಿ)ಯಲ್ಲಿ 71 ಶಾಸನಸಭಾ ಸದಸ್ಯರು(MLA) ಇದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಫೆಬ್ರವರಿ 2002ರ ಚುನಾವಣೆಯಲ್ಲಿ 70 ಸ್ಥಾನದ ಶಾಸನಸಭೆಯಲ್ಲಿ 36 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಉತ್ತರಾಖಂಡ್ ರಾಜ್ಯ ವಿಧಾನಸಭೆ ಚುನಾವಣೆ, 2002 ರಾಜ್ಯದ ಮೊದಲ ವಿಧಾನಸಭೆ. ಈ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 19 ಸ್ಥಾನಗಳನ್ನು ಹೊಂದಿರುವ ಅಧಿಕೃತ ವಿರೋಧ ಆಯಿತು.[೩]
ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
*ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್‍ನಲ್ಲಿ , ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು. [೫]
ಆರ್‍ಎಸ್ಎಸ್ ಮಾಜಿ ಪ್ರಚಾರಕ್ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ತ್ರಿವೇಂದ್ರ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ನಿನ್ನೆ ರಾತ್ರಿ ಅವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಶಾಸಕಾಂಗ ಸಭೆಯಲ್ಲಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಮೂರನೆಯ ಎರಡರಷ್ಟು ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲು. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್, ಪ್ರಕಾಶ್ ಪಂತ್ ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಸತ್ಪಾಲ್ ಮಹಾರಾಜ್ ಅವರ ಹೆಸರು ಕೇಳಿ ಬಂದಿತ್ತು. ಇಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ,ಸರೋಜ್ ಪಾಂಡೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರಾಖಂಡ್ ರಾಜ್ಯದ ಉಸ್ತುವಾರಿ ವಹಿಸಿರುವ ಶ್ಯಾಮ್ ಜಾಜು ಭಾಗವಹಿಸಿದ್ದಾರೆ.
2017 ಮಾರ್ಚ್ 18 ರಂದು ಡೆಹ್ರಾಡೂನ್‍ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು:[೮][೯]