ವಿಷಯಕ್ಕೆ ಹೋಗು

ಉತ್ಪನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪನ್ನ (ವ್ಯವಹಾರ)

自販機作業中 (492228752)

ವ್ಯಾಪಾರೋದ್ಯಮದಲ್ಲಿ,ಉತ್ಪನ್ನವು ಮಾರುಕಟ್ಟೆಯಲ್ಲಿ ಬಳಸುವ ಹಾಗು ಜನಸಾಮಾನ್ಯರ ಅಗತ್ಯವನ್ನು ಪೂರೈಸಲು ಬಳಸುವ ವಸ್ತು. ಚಿಲ್ಲರೆ ವ್ಯಾಪಾರದಲ್ಲಿ ಉತ್ಪನ್ನವನ್ನು ವಾಣಿಜ್ಯ ಸರಕು ಎಂದು ಕರೆಯುತ್ತಾರೆ. ತಯಾರಿಕೆಯಲ್ಲಿ ಉತ್ಪನ್ನವನ್ನು ಕಚ್ಚಾವಸ್ತುವಿನ ರೂಪದಲ್ಲಿರುವುದನ್ನು ಪೂರ್ಣಗೊಂಡ ಸರಕನ್ನು ಮಾಡಿ ಮಾರಾಟಮಾಡಲಾಗುವುದು.ಅರ್ಥಶಾಸ್ತ್ರ ಮತ್ತು ವಾಣಿಜ್ಯದಲ್ಲಿ ಉತ್ಪನ್ನವು ವಿಶಾಲ ವರ್ಗಕ್ಕೆ ಸೇರಿರುವ ವಸ್ತು.ಅರ್ಥಶಾಸ್ತ್ರದಲ್ಲಿ ಉತ್ಪನ್ನದ ಆರ್ಥಿಕ ಅರ್ಥವನ್ನು ಮೊದಲು ಬಳಸಿದ್ದು ಆಡಮ್ ಸ್ಮಿತ್. ಗ್ರಾಹಕರು ಅಥವಾ ಪ್ರೇಕ್ಷಕರನ್ನು ಹಾನಿಮಾಡುವಂತಹ ಉತ್ಪನ್ನವನ್ನು ಅಪಾಯಕಾರಿ ಉತ್ಪನ್ನಗಳು ಎಂದು ಕರೆಯುತ್ತಾರೆ.ಉತ್ಪನ್ನವು ಮಾರಾಟ ಮಾಡಲು ಇರುವ ಒಂದು ರೀತಿಯ ಪದಾರ್ಥ.ಉತ್ಪನ್ನವು ಸೇವೆ ಅಥವಾ ಪದಾರ್ಥ ಆಗಿರಬಹುದು.ಇದು ಶಾರೀರಿಕ ಅಥವಾ ವಾಸ್ತವ ಅಥವಾ ಸೈಬರ್ ರೂಪದಲ್ಲಿ ಇರಬಹುದು.ಪ್ರತಿಯೊಂದು ಉತ್ಪನ್ನ ವೆಚ್ಚದಲ್ಲಿ ತಯಾರಿಸಲಾಗಿದ್ದು ಮತ್ತು ಪ್ರತಿ ಉತ್ಪನ್ನವನ್ನು ಬೆಲೆಗೆ ಮಾರಲಾಗುತ್ತದೆ.ಉತ್ಪನ್ನದ ಬೆಲೆಯನ್ನು ಮಾರುಕಟ್ಟೆಯಲ್ಲಿ ನಿಗದಿಪಡಿಸಲಾಗುತ್ತದೆ ಇದರ ಬೆಲೆಯನ್ನು ಅದರ ಗುಣಮಟ್ಟ ಮತ್ತು ಗುರಿ ನಿಗದಿಪಡಿಸುತ್ತದೆ.ಪ್ರತಿಯೊಂದು ಉತ್ಪನ್ನವು ಬಾಳಿಕೆ ಬರುತ್ತದೆ ಆದರೆ ಇದನ್ನು ಕಾಲಕ್ಕೆ ಅನುಗುಣವಾಗಿ ಬದಲಿ ಅಗತ್ಯವಿದೆ ಹಾಗು ಇದು ತನ್ನದೇ ಆದ ಜೀವನ ಚಕ್ರವನ್ನು ಹೊಂದಿದೆ ಆದ್ದರಿಂದ ಪ್ರತಿ ವರ್ಷವು ಇದನ್ನು ಜನರು ಬಯಸಿದಂತೆ ಮರು ಆವಿಷ್ಕಾರ ಮಾಡಬೇಕು.ಎಪ್.ಎಂಮ್.ಸಿ.ಜಿ ಭಾಷೆಯಲ್ಲಿ 'ಉತ್ಪನ್ನದ ಛಾಪುವನ್ನು ಸಾಮಾನ್ಯವಾಗಿ ಪರಿಷ್ಕರಿಸಿ ಮಾಡಬಹುದು.

ವಿವರಣೆ

マクセル製の乾電池

ಒಂದು ಉತ್ಪನ್ನಕ್ಕೆ ಸಂಬಂಧಿತ ಅಗತ್ಯವಿದೆ ಬಳಕೆದಾರರು ಕೊಂಡ ತಕ್ಷಣವೇ ಬಳಕೆ ಮಾಡುವ ಲಕ್ಷಣ ಹೊಂದಿರಬೇಕು.ಒಂದು ಉತ್ಪನ್ನವು ಕ್ರಿಯಾತ್ಮಕವಾಗಿ ಅದರ ಕಾರ್ಯವನ್ನು ನಿರ್ವಹಿಸಿದಾಗ ಮಾತ್ರ ಅದನ್ನು ಒಂದು ಗುಣಮಟ್ಟದ ಉತ್ಪನ್ನ ಎಂದು ಕರೆಯಲಾಗುತ್ತದೆ. ಒಂದು ಉತ್ಪನ್ನ ಹುಟ್ಟಿಕೊಂಡ ಪ್ರಯೋಜನಗಳು ,ಬಳಕೆ ಮಾಡುವ ರೀತಿ, ಸಾಂಭವ್ಯವನ್ನು ಬಳಕೆದಾರರು ತಿಳಿದಿರಬೇಕು.ಒಂದು ಉತ್ಪನ್ನಕ್ಕೆ ಜಾಹೀರಾತಿನ ಅಗತ್ಯ ಮತ್ತು ಉತ್ಪನ್ನದ ಛಾಪು ಬಹು ಮುಖ್ಯವಾಗುತ್ತದೆ.ಒಂದು ಉತ್ಪನ್ನಕ್ಕೆ ಹೆಸರಿನ ಅಗತ್ಯವಿದೆ, ಒಂದು ಹೆಸರಿನ ಉತ್ಪನ್ನ ಹೊಚ್ಚ ಆಗುತ್ತದೆ.ಇದು ಉತ್ಪನ್ನಗಳು ಮತ್ತು ಹೆಸರುಗಳ ಗೊಂದಲವಿಲ್ಲ ಎಂದು ತೋರಿಸುತ್ತದೆ.ಒಂದು ಉತ್ಪನ್ನ ಹೊಂದಿಕೊಳ್ಳಬಲ್ಲ ರೀತಿಯಲ್ಲಿ ಇರಬೇಕು. ಭಾಗಗಳಲ್ಲಿ ಪ್ರವೃತ್ತಿಗಳು, ಸಮಯ ಮತ್ತು ಬದಲಾವಣೆಯೊಂದಿಗೆ, ಉತ್ಪನ್ನವನ್ನು ಹೆಚ್ಚು ಸೂಕ್ತ ಮಾಡಲು ಮತ್ತು ಅದರ ಆದಾಯ ಸ್ಟ್ರೀಮ್ ನಿರ್ವಹಿಸಲು ರೂಪಾಂತರ ತಾನಾಗಿಯೇ ಸಾಲ ಮಾಡಬೇಕು.

ಉತ್ಪನ್ನ ವರ್ಗೀಕರಣ

HK Westwood Wellcome Shop 粟米 sweet corn 玉米 Cling film 保鮮紙 plastic wrap April-2012

ಒಂದು ಉತ್ಪನ್ನವನ್ನು ವಿವಿಧ ಭಾಗಗಳಲ್ಲಿ ವರ್ಗೀಕರಿಸಬಹುದು ಉದಾಹರಣೆಗೆ ನಿರ್ಮಾಣ ವಸ್ತುಗಳು, ಅಮೂರ್ತ ವಸ್ತುಗಳು ಮತ್ತು ಮೂರ್ತ ವಸ್ತುಗಳು ಮೂರ್ತವಸ್ತುವು ಶಾರೀರಿಕವಾಗಿ ಮತ್ತು ಮುಟ್ಟಿ ಗ್ರಹಿಸಬಹುದಾದ ವಸ್ತು.ಉದಾಹರಣೆಗೆ ಕಟ್ಟಡ, ವಾಹನ ಮತ್ತು ಕಿರುಸೂಟಿ.ಅಮೂರ್ತ ವಸ್ತುವನ್ನು ವಿವಿಧ ಭಾಗಗಳಾಗಿ ವರ್ಗೀಕರಿಸಬಹುದು ಅವುಗಳಲ್ಲಿ ಕಾರ್ಯತಃ ಅಂಕೀಯ ಸರಕು, ಗಣಕಯಂತ್ರದ ನಡೆಸೇರ್ಪಾಟಿನಲ್ಲಿ ಇರುತ್ತದೆ ಮತ್ತು ಇದನ್ನು ಬಳಸು ವ್ಯಕ್ತಿಯು ದಫ್ತರು ಮಾದರಿಯಲ್ಲಿ ಬಳಸಬಹುದು ಹಾಗೂ ಇವು ಜೆಪಿಜೆ ಹಾಗೂ ಎಂಪಿ೩ ಮಾದರಿಯಲ್ಲಿರುತ್ತದೆ.ಎರಡನೆಯದು ವಾಸ್ತವ ಅಂಕೀಯ ಸರಕು ಇದನ್ನು ಸಾಮಾನ್ಯವಾಗಿ ೩ಡಿ ಎಂದು ಕರೆಯಲಾಗುತ್ತದೆ.ಮೂರನೆಯದು ಖಾಸಗಿ ಮಾಹಿತಿ ಸಹಾಯಕ ಇದು ಗಣಕಯಂತ್ರದ ನಡೆಸೇರ್ಪಾಟಿನಲ್ಲಿ ಇರುತ್ತದೆ.ಇವುಗಳಲ್ಲಿ ಮೂರನೇ ವಿಧ ಸೇವೆ.ಸೇವೆಯಲ್ಲಿ ವಿಶಾಲವಾಗಿ ಅಮೂರ್ತ ಉತ್ಪನ್ನವನ್ನು ಬಾಳಿಕೆ ಬರುವ ಹಾಗೂ ಬಾಳಿಕೆ ಬಾರದಿರುವ ಉತ್ಪನ್ನವಾಗಿ ವಿಸ್ತರಿಸಬಹುದು.ಸೇವೆಯನ್ನು ಬಳಕೆಯಿಂದ, ಸಂಘದಿಂದ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉತ್ಪನ್ನ ವರ್ಗೀಕರಣಗಳಾಗಿ ವಿಸ್ತರಿಸಬಹುದು.

ಉತ್ಪನ್ನ ಅಂತರ

Film piracy in Singapore

ವ್ಯಾಪಾರೋದ್ಯಮದ ಕಾರ್ಯಗತಿಯು ಉತ್ಪನ್ನದ ಅಂತರವನ್ನು ತೋರುತ್ತದೆ. ಅಂತರ ಉತ್ಪನ್ನವು ಹೆಚ್ಚು ಆಕರ್ಷಕವಾಗಿ ಕಾಣಲು ಒಂದು ಉತ್ಪನ್ನದ ಗುಣಗಳನ್ನು ಮತ್ತೊಂದು ಉತ್ಪನ್ನಕ್ಕೆ ಹೋಲಿಸುತ್ತದೆ. ಈ ರೀತಿ ಅಂತರದಲ್ಲಿ ಯಶಸ್ಸು ಕಂಡ ಉತ್ಪನ್ನವು ಮಾರುಕಟ್ಟೆಯಲ್ಲಿ ಹೆಚ್ಚು ಬಿಕರಿಯಾಗುತ್ತದೆ.ಉತ್ಪನ್ನ ಅಂತರವು ವಿವಿಧ ಕಂಪನಿಯ ಉತ್ಪನ್ನದ ಅರ್ಥಪೂರ್ಣವಾದ ಅಂತರವನ್ನು ತಿಳಿಸುತ್ತದೆ. ಉತ್ಪನ್ನ ಅಂತರವನ್ನು ವಿವಿಧ ರೀತಿಯಲ್ಲಿ ಮಾಡಬಹುದು ಕ್ರಮವಾಗಿ ಅವು ಉತ್ಪನ್ನವನ್ನು ಮೂಟೆ ಕಟ್ಟುವಾಗ ಆಕರ್ಷಕವಾಗಿ ಮಾಡಬೇಕು. ಹೆಚ್ಚು ಹೆಚ್ಚು ಹೊಸ ರೂಪವೈಶಿಷ್ಟ್ಯವನ್ನು ತುಂಬಬೇಕು.ಸುಲಭವಾಗಿ ಹೇಳಬೇಕೆಂದರೆ 'ಉತ್ಪನ್ನ ಅಂತರವು ಒಂದು ಕಂಪನಿಯ ವಸ್ತುವನ್ನು ಮತ್ತೊಂದು ಕಂಪನಿಯ ಪದಾರ್ಥಕ್ಕೆ ಹೋಲಿಸಿ ಅವುಗಳ ಅಂತರವನ್ನು ತಿಳಿಸುವುದಾಗಿದೆ.

ಉತ್ಪನ್ನಗಳ ವಿಧಗಳು

Chartreuse-fake

ಗ್ರಾಹಕ ಉತ್ಪನ್ನಗಳು ಇದೊಂದು ವ್ಯಾಪಾರ ಉದ್ದೇಶಗಳಿಗಾಗಿ ಒಂದು ವ್ಯಕ್ತಿ ಅಥವಾ ಮನೆಯು ಬಳಸುವ ಮಾರಾಟ ಸುಸ್ಪಷ್ಟವಾದ ಉತ್ಪನ್ನವಾಗಿದೆ ,ಖರೀದಿ ಉತ್ಪನ್ನಗಳು ಇದರಲ್ಲಿ ಖರೀದಿದಾರರ ಶ್ರಮ ಅಗತ್ಯವಿದೆ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಜನಸಾಮಾನ್ಯರು ನೋಡಿಕೊಂಡು ಹಾಗು ಒಂದು ಪದಾರ್ಥಕ್ಕೂ ಮತ್ತು ಇನೊಂದು ಪದಾರ್ಥಕ್ಕೂ ಹೊಂದಾಣಿಕೆ ಮಾಡಿ ಕೊಳ್ಳುವ ಉತ್ಪನ್ನವಿದು,ವಿಶೇಷ ಉತ್ಪನ್ನವು ಒಂದು ಅಪೂರ್ವವಾದ ಉತ್ಪನ್ನ ಜನರು ಇದನ್ನು ಕೊಳ್ಳಲು ಅಂದರೆ ವಿಶೇಷ ಸರಕನ್ನು ಪಡೆಯಲು ಬಹು ದೂರ ಪ್ರಯಾಣ ಮಾಡುತ್ತಾರೆ,ಹುಡುಕದ ಉತ್ಪನ್ನಗಳು ಇವುಗಳು ಗ್ರಾಹಕರು ಭಯದಿಂದ ಕೊಳ್ಳುವ ಉತ್ಪನ್ನ ಗ್ರಾಹಕರು ಸಾಮಾನ್ಯವಾಗಿ ಭಯದಿಂದ, ಮುನ್ನೆಚ್ಚರಿಕೆ, ಅಗತ್ಯ, ಇತ್ಯಾದಿ ಕಾರಣಗಳಿಂದ ಇದನ್ನು ಖರೀದಿಸುವುದು ಸಹಜ ಪ್ರಕ್ರಿಯೆ ಮತ್ತು ಉದ್ಯಮ ಉತ್ಪನ್ನಗಳು ಇವು ಗ್ರಾಹಕರಿಗೆ ಮಾರಲ್ಪಡುವ ಉತ್ಪನ್ನ ಗ್ರಾಹಕರಿಗೆ ಕಂಪನಿಯವರು ಇದನ್ನು ಲಾಭಕ್ಕಾಗಿ ಮಾರಾಟ ಮಾಡುತ್ತಾರೆ.

[] [][]

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Product_%28business%29
  2. http://economictimes.indiatimes.com/definition/product
  3. "ಆರ್ಕೈವ್ ನಕಲು". Archived from the original on 2016-03-05. Retrieved 2016-01-12.


"https://kn.wikipedia.org/w/index.php?title=ಉತ್ಪನ್ನ&oldid=1249569" ಇಂದ ಪಡೆಯಲ್ಪಟ್ಟಿದೆ