ವಿಷಯಕ್ಕೆ ಹೋಗು

ಉಪಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಾಲಿ: ಬೌದ್ಧ ಸನ್ಯಾಸಿ, ಬುದ್ಧನ ಹತ್ತು ಪ್ರಮುಖ ಶಿಷ್ಯರಲ್ಲೊಬ್ಬ.

ಬುದ್ಧನ ಸಮಕಾಲೀನ, ರಾಜಮನೆತನಕ್ಕೆ ಸೇರಿದವ, ಪ್ರಾರಂಭದಲ್ಲಿ ಮಹಾವೀರನ ಬೋಧನೆಯನ್ನು ಸ್ವೀಕರಿಸಿ ಗೃಹಸ್ಥಾಶ್ರಮವನ್ನನುಸರಿಸುತ್ತಿದ್ದು ಬುದ್ಧನ ತತ್ತ್ವಗಳನ್ನು ವಿರೋಧಿಸುತ್ತಿದ್ದವರಲ್ಲಿ ಒಬ್ಬನಾಗಿದ್ದ. ಒಮ್ಮೆ ಬುದ್ಧ ರಾಜಗೃಹಕ್ಕೆ ಬಂದಾಗ ಆತನನ್ನು ವಿರೋಧಿಸಲು ಹೊರಟು ಬುದ್ಧನ ವ್ಯಕ್ತಿತ್ವ ಮತ್ತು ಬೋಧನೆಗೆ ಮಾರುಹೋಗಿ ಬೌದ್ಧಮತಾವಲಂಬಿಯಾದ. ಮುಂದೆ ಮಹಾವೀರನನ್ನು ವಿರೋಧಿಸಲು ಪ್ರಾರಂಭಿಸಿದ; ಬುದ್ಧನ ನಿರ್ವಾಣಾನಂತರ ಬೌದ್ಧಧರ್ಮ ಪ್ರಚಾರಕರಲ್ಲಿ ಗಣ್ಯನಾದ. ರಾಜಗೃಹದಲ್ಲಿ ಸೇರಿದ್ದ ಮೊದಲ ಬೌದ್ಧ ಮಹಾಸಮ್ಮೇಳನದಲ್ಲಿ ಆನಂದನೂ ಉಪಾಲಿಯೂ ಬುದ್ಧನ ತತ್ತ್ವಗಳನ್ನು ವಿವರಿಸಿದುದಲ್ಲದೆ ಅವನ್ನು ಗ್ರಂಥಸ್ಥಗೊಳಿಸಲು ನೆರವಾದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಪಾಲಿ&oldid=1158710" ಇಂದ ಪಡೆಯಲ್ಪಟ್ಟಿದೆ