ವಿಷಯಕ್ಕೆ ಹೋಗು

ಉಪೇಂದ್ರ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Upendra Kumar
ಮೂಲಸ್ಥಳOrissa, India.
ಸಂಗೀತ ಶೈಲಿFilm score, Theatre
ವೃತ್ತಿComposer, music director, instrumentalist
ಸಕ್ರಿಯ ವರ್ಷಗಳು1966 – 2001

ಉಪೇಂದ್ರ ಕುಮಾರ್ ಕನ್ನಡದ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು.((೧೯೪೧-೨೦೦೨ ಜನವರಿ ೨೩)[]

ಹೆಗ್ಗಳಿಕೆ

[ಬದಲಾಯಿಸಿ]

ವರನಟ ಡಾ.ರಾಜಕುಮಾರ್ ಹಾಗೂ ಅವರ ಇಡೀ ಕುಟುಂಬಕ್ಕೆ ಸಂಗೀತ ಹೇಳಿಕೊಟ್ಟ ಮೇಷ್ಟ್ರು ಉಪೇಂದ್ರ ಕುಮಾರ್.

ಸಾವಿರಾರು ಮಧುರ ಕನ್ನಡ ಗೀತೆಗಳನ್ನು ರೂಪಿಸಿದ ಉಪೇಂದ್ರ ಕುಮಾರ್ ಮೂಲತಹ ಕನ್ನಡದವರಲ್ಲ,ಅವರು ಹುಟ್ಟಿದ್ದು ಒರಿಸ್ಸಾದ ಅನಂಗ್ ಪುರದಲ್ಲಿ,(೧೯೪೧)ಇವರ ಮನೆ ಮಾತು ತೆಲುಗು.ತಂದೆ ಲಕ್ಷ್ಮಣ್ ಸ್ವಾಮಿ,ತಾಯಿ ನಾನ್ ಚಾರಿಯಮ್ಮ.ಇವರದ್ದು ಪುರೋಹಿತರಾಗಿ ಮತ್ತು ಜ್ಯೋತಿಷಿ ಗಳಾಗಿ ಹೆಸರು ಮಾಡಿದ್ದ ಮನೆತನ.

ಶಿಕ್ಷಣ

[ಬದಲಾಯಿಸಿ]


ಏಳನೆ ತರಗತಿವರೆಗೆ ಮಾತ್ರ ಸಾಂಪ್ರದಾಯಿಕವಾದ ಶಿಕ್ಷಣ ಪಡೆದ ಅವರು ಸೋದರ ಮಾವ ಅಪ್ಪಾರಾವ್ ರವರ ಪ್ರೋತ್ಸಾಹದಿಂದ ಸಂಗೀತ ಕಲಿತರು.ಭುವನೇಶ್ವರ್ ಮಿಶ್ರ ಅವರ ಬಳಿ ಪಿಟೀಲು,ಬಾಲಕೃಷ್ಣ ದಾಸ್ ಬಳಿ ಹಿಂದೂಸ್ತಾನಿ,ದಿನ್ ಭಜನ್ ಸಿಂಗ್ ಬಳಿ ಪಾಶ್ಚಾತ್ಯ ಸಂಗೀತ ಕಲಿತರು.ಸಂಗೀತದ ಹಾದಿಯಲ್ಲಿಯೇ ಸಾಗಿದ ಉಪೇಂದ್ರ ಕುಮಾರ್"ಉತ್ಕಲ್ ಕಾಲೇಜ್ ಆಫ್ ಮ್ಯೂಸಿಕ್"ನಿಂದ ಪ್ರಥಮ ಸ್ಥಾನದೊಂದಿಗೆ ಬಿ,ಎ,ಪದವಿ ಪಡೆದರು.೧೯೬೬ರಲ್ಲಿ ಅವಕಾಶ ಅರಸಿ ಮದ್ರಾಸಿಗೆ ಬಂದ ಅವರಿಗೆ ಆರಂಭದಲ್ಲಿ ವಾದ್ಯ ಗೋಷ್ಠಿಯಲ್ಲಿ ಅವಕಾಶ ಸಿಕ್ಕಿತು.ಸಂಗೀತ ಪಾಠ ಹೇಳಿ ಹೊಟ್ಟೆ ಪಾಡು ನೋಡಿಕೊಳ್ಳುತಿದ್ದರು.ಹೀಗೆ ಅವರ ಶಿಷ್ಯೆಯಾಗಿ ಬಂದ "ಗೀತಾ "ಮುಂದೆ ಮಡದಿಯಾದರು.ಉಪೇಂದ್ರ ಕುಮಾರ್ ರವರ ಜೀವನ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.

ಚಿತ್ರಜೀವನ

[ಬದಲಾಯಿಸಿ]

ಉಪೇಂದ್ರ ಕುಮಾರ್ ಅವರಿಗೆ "ಕಠಾರಿ ವೀರ" ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕನಾಗುವ ಅವಕಾಶ ಸಿಕ್ಕಿತು.ಚಿತ್ರದ ಗೀತೆಗಳು ಜನಪ್ರಿಯತೆಗಳಿಸುವುದರ ಜೊತೆಗೆ ಅವರ ಸ್ಥಾನವೂ ಗಟ್ಟಿಯಾಯಿತು.ರಾಜಕುಮಾರ್ ಅವರ ಜೊತೆಗಿನ ಬಾಂದವ್ಯವೂ ನಿಕಟವಾಯಿತು."ಹಸಿರು ತೋರಣ"ದ "ಒಂದು ದಿನ ಎಲ್ಲಿಂದಲೋ "ಹಾಡಿನಲ್ಲಿ ಇವರು ಗಮಕ ಬಳಸಿದ ಕ್ರಮವು ವಿಶಿಷ್ಟವಾಗಿತ್ತು."ಪರೋಪಕಾರಿ" ಚಿತ್ರದ "ಗುಟ್ಟೊಂದು ಹೇಳುವೆ","ಕಣ್ಣರೆಪ್ಪೆ ಒಂದನೊಂದು" , "ಜೋಕೆ ನಾನು ಬಳ್ಳಿಯ ಮಿಂಚು"ಉಪೇಂದ್ರ ಕುಮಾರರ ವ್ಯಾಪ್ತಿಗೆ ನಿದರ್ಶನವಾದವು."ಸಿಪಾಯಿ ರಾಮು" ಚಿತ್ರದಲ್ಲಿ ಅವರು ಇನ್ನಷ್ಟು ವಿಶಿಷ್ಟ ಗೀತಗಳನ್ನು ಸಂಯೋಜಿಸಿದರು."ವಾಹರೇ ಮೇರೆ ಮುರುಗ"ದಲ್ಲಿ ಅವರು ಹೊಸತನದ ಅಲೆಯನ್ನೇ ಎಬ್ಬಿಸಿದ್ದರು.ಹಾಗೇ "ತ್ರಿವೇಣಿ "ಚಿತ್ರದ "ನೀನಾ ಭಗವಂತ "ಮತ್ತು "ಕವಿಯ ಮಧುರ ಕಲ್ಪನಾ" ಕಡಿಮೆ ವಾದ್ಯಗಳಲ್ಲಿ ಸಂಗೀತ ಶ್ರೀಮಂತಿಕೆ ತುಂಬಿಕೊಂಡ ಗೀತೆಗಳು.

"ಪ್ರೇಮದ ಕಾಣಿಕೆ" ಚಿತ್ರದಲ್ಲಿ ಉಪೇಂದ್ರ ಕುಮಾರ್ ಅವರ ಸಂಯೋಜನೆಯ ಪಕ್ವ ಫಲಗಳನ್ನು ಹೊಂದಿದ ಚಿತ್ರ.ಇದರಲ್ಲಿಯ ಕಾಪಿರಾಗದ "ಇದು ಯಾರೋ ಬರೆದ ಕತೆಯೂ "ವಿಶಿಷ್ಟ ಗೀತೆ. "ಶಂಕರ್ ಗುರು " ಚಿತ್ರದಲ್ಲಿಯೂ ಕೆಲವು ವಿಶಿಷ್ಟ ರಚನೆಗಳಿವೆ .ಕಾಶ್ಮೀರಿ ಪಲುಕು ಬಳಸಿ ಚಿಮ್ಮಿಸಿದ "ಏನೇನೋ ಆಸೆ" ಒಂದು ಸುಂದರವಾದ ಸಂಯೋಜನೆ."ಧರ್ಮ ಸೆರೆ" ಚಿತ್ರದ "ಮೂಕ ಹಕ್ಕಿಯೂ ಹಾಡುತಿದೆ"ಅನ್ನು ಬಹಳ ಭಿನ್ನವಾಗಿ ಬಳಸಿದ್ದರು."ದೃವತಾರೆ "ಚಿತ್ರದ 'ಆ ರತಿಯೇ ಧರೆಗಿಳಿದಂತೆ"ಒಂದು ಪ್ರಯೋಗ ಶೀಲ ಗೀತೆ.ಇದರಲ್ಲಿ ಮೂರು ಸಮುಚ್ಚಯಗಳಿವೆ.ಕಲ್ಯಾಣಿ ಮತ್ತು ಷಣ್ಮುಗ ಪ್ರಿಯ ಒಂದೇ ಸ್ವರ ಪ್ರಕಾರದಲ್ಲಿ ಸಾಗುವ ಧಾಟಿಯೇ ಸೊಗಸು.

"ರಥ ಸಪ್ತಮಿಯ""ಶಿಲೆಗಳು ಸಂಗೀತವ " ಹಾಡು ಶಾಸ್ರೀಯತೆಯ ವಿಸ್ತಾರದ ಸೊಬಗನ್ನು ಭಾವ ತೀವ್ರತೆಗೆ ಬಳಸಿದ ಪಕ್ವ ಸಂಯೋಜನೆ." "ಜೋಕೆ ನಾನು ಬಳ್ಳಿಯ ಮಿಂಚು"ವಿನಿಂದ ಕನ್ನಡದಲ್ಲಿ ಕ್ಯಾಬರೆ ಗೀತೆಗಳಿಗೆ ಮಾದರಿ ಸೃಷ್ಟಿಸಿದ್ದ ಉಪೇಂದ್ರ ಕುಮಾರ್ ಹಲವು ದಶಕದ ನಂತರ "ನಂಜುಂಡಿ ಕಲ್ಯಾಣ" ಚಿತ್ರದ "ಒಳಗೆ ಸೇರಿದರೆ ಗುಂಡು " ಹಾಡಿನ ಮೂಲಕ ಇನ್ನೊಂದು ಟ್ರೆಂಡ್ ಸೃಷ್ಟಿಸಿದ್ದು ಗಮನಾರ್ಹ ಸಂಗತಿ.

ವೈಶಿಷ್ಠ್ಯ

[ಬದಲಾಯಿಸಿ]

ಮಾತೃ ಭಾಷೆ ಕನ್ನಡವಲ್ಲದಿದ್ದರೂ ಉಪೇಂದ್ರ ಕುಮಾರ್ ಅವರ ಸೇವೆ ಸಂದಿದ್ದು ಬಹುತೇಕ ಕನ್ನಡ ಚಿತ್ರರಂಗಕ್ಕೇ. ಮೂರು ತೆಲುಗು,ತಮಿಳು,ಒರಿಯಾದಲ್ಲಿ ತಲಾ ಹದಿಮೂರು.ಮಲಯಾಳದಲ್ಲಿ ಆರು,ಬಂಗಾಳಿ ಮತ್ತು ತುಳುವಿನಲ್ಲಿ ತಲಾ ಒಂದೊಂದು ಚಿತ್ರ ಬಿಟ್ಟರೆ ಅವರು ಸಂಗೀತ ನೀಡಿದ ೧೮೦ ಚಿತ್ರಗಳಲ್ಲಿ ಉಳಿದವೆಲ್ಲ ಕನ್ನಡ ಚಿತ್ರಗಳೇ.

ಪ್ರಶಸ್ತಿ

[ಬದಲಾಯಿಸಿ]

ನಂಜುಂಡಿ ಕಲ್ಯಾಣ, ಹೃದಯ ಹಾಡಿತು, ಜೀವನ ಚೈತ್ರ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಪಡೆದ ಅವರಿಗೆ, ಪ್ರಮುಖ ಗೌರವ ಸಿಗಲೇ ಇಲ್ಲ,ಆದರೆ ಅವರು ಸಂಗೀತ ನೀಡಿದ ೧೮ ಚಿತ್ರಗಳು ೨೫ ವಾರ ಓಡಿದ ಹೆಗ್ಗಳಿಕೆ ಹೊಂದಿದೆ ಎಂಬುದನ್ನು ಗಮನಿಸಿದರೆ ಜನ ಅವರ ಸಂಗೀತವನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಸಂಗೀತದ ಕುರಿತು ಸಂಶೋಧನೆ ಮಾಡುವ ಉದ್ದೇಶ ಹೊಂದಿದ್ದರು ಉಪೇಂದ್ರ ಕುಮಾರ್. ಸಂಗೀತವು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಹೇಗೆ ನಿವಾರಿಸ ಬಲ್ಲದು ಎಂಬ ಬಗ್ಗೆ ಕುತೂಹಲ ಹೊಂದಿದ್ದರು,ಆ ಕುರಿತ ಅವರ ಪ್ರಯೋಗಗಳು ಪ್ರಾಥಮಿಕ ಹಂತದಲ್ಲಿದ್ದಾಗಲೇ ೨೦೦೨ರ ಜನವರಿ ೨೩ ರಂದು ವಿಧಿ ಶಿಲೆಗಳಲ್ಲಿಯೂ ಸಂಗೀತ ಹಾಡಿಸಿದ ಉಪೇಂದ್ರಕುಮಾರ್ ಅವರ ಬದುಕಿನ ಸಂಗೀತವನ್ನೇ ಅಂತ್ಯ ಗೊಳಿಸಿತು."ನಮನ"

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ


ಉಲ್ಲೇಖಗಳು

[ಬದಲಾಯಿಸಿ]