ಎಂ. ಡಿ. ಪಲ್ಲವಿ
ಎಂ. ಡಿ. ಪಲ್ಲವಿ | |
---|---|
ಹಿನ್ನೆಲೆ ಮಾಹಿತಿ | |
ಸಂಗೀತ ಶೈಲಿ | ಸುಗಮ ಸಂಗೀತ |
ವೃತ್ತಿ | ಗಾಯಕಿ |
ಸಕ್ರಿಯ ವರ್ಷಗಳು | 2000–ಇದುವರೆಗೆ |
ಅಧೀಕೃತ ಜಾಲತಾಣ | http://mdpallavi.com/ |
ಎಂ. ಡಿ. ಪಲ್ಲವಿ, ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ. ಹಾಗೆಯೇ ಇವರು ನಟನೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಸಂಗೀತ
[ಬದಲಾಯಿಸಿ]ಪಲ್ಲವಿಯವರು ಹಿಂದೂಸ್ಥಾನೀ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ನಂತರದ ದಿನಗಳಲ್ಲಿ ಮೈಸೂರು ಅನಂತಸ್ವಾಮಿಯವರ ಅಡಿಯಲ್ಲಿ ಸುಗಮ ಸಂಗೀತದ ತರಬೇತಿ ಪಡೆದಿದ್ದಾರೆ. [೧]
ನಟನೆ
[ಬದಲಾಯಿಸಿ]ನಾಟಕ
[ಬದಲಾಯಿಸಿ]ಪಲ್ಲವಿಯವರು ನಾಟಕರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಹಲವು ಬೀದಿನಾಟಕಗಳನ್ನು ನಿರ್ಮಿಸಿದ್ದಾರೆ. ಇವರು ನಟಿಸಿದ ಕೆಲ ನಾಟಕಗಳೆಂದರೆ, ಹ್ಯಾಮ್ಲೆಟ್, ಫಯರ್ ಅಂಡ್ ರೇನ್, ಬಲಿದಾನ, ಮೈ ಫೇರ್ ಲೇಡಿ, ಗಾಜಿನ ಗೊಂಬೆಗಳು, ವಕ್ರ ಹಾಗೂ ಇತರೆ.
ದೂರದರ್ಶನ ಮತ್ತು ಚಲನಚಿತ್ರ
[ಬದಲಾಯಿಸಿ]ಪಲ್ಲವಿಯವರು ಕಿರುತೆರೆಯ ಮಾಯಾಮೃಗ ಹಾಗೂ ಗರ್ವ ಎಂಬ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಸ್ಟಂಬಲ್ ನಲ್ಲಿ ನಟಿಸಿದ್ದಾರೆ.ಹಾಗೆಯೇ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಗುಲಾಬಿ ಟಾಕೀಸ್ ನಲ್ಲೂ ಉಮಾಶ್ರೀಯವರೊಂದಿಗೆ ನಟಿಸಿದ್ದಾರೆ.
ಕಂಠದಾನ
[ಬದಲಾಯಿಸಿ]ಪಲ್ಲವಿಯವರು ಹಲವಾರು ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾದವು, ಎದೆಗಾರಿಕೆ, ಆ ದಿನಗಳು, ಐಶ್ವರ್ಯ, ಮೀರ ಮಾಧವ ರಾಘವ. ಇವರು ಕನ್ನಡದ ನಟಿ ಡೈಸಿ ಬೊಪಣ್ಣರವರಿಗೆ, ಐಶ್ವರ್ಯ, ಸತ್ಯವಾನ್ ಸಾವಿತ್ರಿ, ರಾಮ ಶಾಮಭಾಮ, ಬಿಂಬ ಹಾಗೂ ಇತರೆ ಚಲನಚಿತ್ರಗಳಲ್ಲಿ ಕಂಠದಾನ ಮಾಡಿದ್ದಾರೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website Archived 2016-04-28 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]