ವಿಷಯಕ್ಕೆ ಹೋಗು

ಎಚ್.ವಿ.ನಂಜುಂಡಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್.ವಿ.ನಂಜುಂಡಯ್ಯ ನವರು ಕ್ರಿ.ಶ. ೧೮೬೦ರಲ್ಲಿ ಜನಿಸಿದರು. ಬಡತನದಲ್ಲಿಯೆ ಓದಿ ಬಿ.ಎ., ಎಂ.ಎ. ಮಾಡಿಕೊಂಡರು. ಗುಮಾಸ್ತೆಗಿರಿಯಿಂದ ವೃತ್ತಿಯನ್ನಾರಂಭಿಸಿದ ನಂಜುಂಡಯ್ಯನವರು ಸಬ್ ರಜಿಸ್ಟ್ರಾರ, ಮುನಸೀಫ್, ನ್ಯಾಯಾಧೀಶ, ದಿವಾನರ ಮಂತ್ರಾಲೋಚನೆ ಮಂಡಲಿಯ ಸದಸ್ಯ ಹೀಗೆ ಹಂತ ಹಂತವಾಗಿ ಮೇಲೇರುತ್ತ ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ೧೯೧೫ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಗ್ಗಳಿಕೆ ಇವರದು. ೧೯೧೬ರಲ್ಲಿ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವೂ ಬೆಂಗಳೂರಿನಲ್ಲಿಯೆ, ಇವರ ಅಧ್ಯಕ್ಷತೆಯಲ್ಲಿಯೆ ಜರುಗಿತು.೧೯೧೭ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇವರೇ ಅಧ್ಯಕ್ಷರು. ಇದನ್ನು "ಹ್ಯಾಟ್ರಿಕ್" ಎನ್ನಬಹುದೆ?! ಎಚ್.ವಿ.ನಂಜುಂಡಯ್ಯನವರು ಬಹುಭಾಷಾ ಪ್ರವೀಣರು. ಕನ್ನಡವಲ್ಲದೆ ತೆಲುಗು, ಸಂಸ್ಕೃತ, ಇಂಗ್ಲಿಷ್ ಹಾಗು ಫ್ರೆಂಚ್ ಭಾಷೆಗಳಲ್ಲೂ ಪರಿಣತರು.[][][]

ಕೃತಿಗಳು

[ಬದಲಾಯಿಸಿ]

ಎಚ್.ವಿ.ನಂಜುಂಡಯ್ಯನವರು ಆ ಕಾಲದಲ್ಲಿಯೆ ಆಡಳಿತ , ಕಾನೂನು ಹಾಗು ಅರ್ಥಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಮೂಲ್ಯ ಕನ್ನಡ ಕೃತಿಗಳನ್ನು ರಚಿಸಿದರು:

  • ಲೇಖ್ಯಬೋಧಿನಿ (ಆಡಳಿತ)
  • ವ್ಯವಹಾರ ದೀಪಿಕೆ(ಕಾನೂನು)
  • ಅರ್ಥಶಾಸ್ತ್ರ[]

ಪುರಸ್ಕಾರ

[ಬದಲಾಯಿಸಿ]
Road[ಶಾಶ್ವತವಾಗಿ ಮಡಿದ ಕೊಂಡಿ] sign at 6th main road, Malleshwaram, named after Nanjundaiah

ಇವರ ಬಹುಮುಖ ಸೇವೆಗಾಗಿ ಅಂದಿನ ಬ್ರಿಟಿಷ್ ಸರಕಾರ ಇವರಿಗೆ ‘ಸಿ.ಡಿ.ಇ.’ (ಕಂಪ್ಯಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಪುರಸ್ಕಾರವನ್ನು ನೀಡಿತು.ಎಚ್.ವಿ.ನಂಜುಂಡಯ್ಯನವರು ಉಪಕುಲಪತಿಯಾಗಿ ಸೇವೆಯಲ್ಲಿದ್ದಾಗಲೆ ೧೯೨೦ರಲ್ಲಿ ನಿಧನರಾದರು.[][]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಎಚ್.ವಿ. ನಂಜುಂಡಯ್ಯ kanaja.in[ಶಾಶ್ವತವಾಗಿ ಮಡಿದ ಕೊಂಡಿ]
  2. "Anthropology was Not All White Males: Early Ethnographies by Women and Persons of Color « Krazy Kioti – the Gene Anderson website". Krazykioti.com. 2012-01-09. Retrieved 2013-10-24.
  3. [ಶಾಶ್ವತವಾಗಿ ಮಡಿದ ಕೊಂಡಿ] [1] [ಮಡಿದ ಕೊಂಡಿ]
  4. Journal & Proceedings of the Asiatic Society of Bengal - Google Books. Books.google.co.in. Retrieved 2013-10-24.
  5. "Tribute to the greatest teacher - Times Of India". Articles.timesofindia.indiatimes.com. Archived from the original on 2013-03-29. Retrieved 2013-10-24.
  6. "Dr VKRV Rao Digital Library" (PDF). 203.200.22.249:8080. Retrieved 2013-10-24.[ಶಾಶ್ವತವಾಗಿ ಮಡಿದ ಕೊಂಡಿ]