ಎಜುಕೇಟ್ ಗರ್ಲ್ಸ್
Founded | ೨೦೦೭ |
---|---|
ಸ್ಥಾಪಿಸಿದವರು | ಸಫೀನಾ ಹುಸೇನ್ |
ಶೈಲಿ | ಲಾಭರಹಿತ |
Focus | ಬಾಲಕಿಯರ ಶಿಕ್ಷಣ |
ಸ್ಥಳ | |
ಪ್ರದೇಶ | ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಭಾರತ |
Method | ಸರ್ಕಾರ ಮತ್ತು ಸಮುದಾಯಗಳೊಂದಿಗೆ ಕೈಜೋಡಿಸಿ ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವುದು |
Key people | ಸಫೀನಾ ಹುಸೇನ್ |
Volunteers | ೧೩,೦೦೦+ |
ಅಧಿಕೃತ ಜಾಲತಾಣ | www |
ಎಜುಕೇಟ್ ಗರ್ಲ್ಸ್ ಎಂಬುದು ೨೦೦೭ ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ಲಾಭರಹಿತ ಸಂಸ್ಥೆ. ಇದನ್ನು ಸಫೀನಾ ಹುಸೇನ್ ಸ್ಥಾಪಿಸಿದರು. ಇದು ಭಾರತದ ಗ್ರಾಮೀಣ ಪ್ರದೇಶಗಳ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಹುಡುಗಿಯರನ್ನು ಸುಶಿಕ್ಷಿತಗೊಳಿಸುವ ಮೂಲಕ ಹುಡುಗಿಯರ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತದೆ.[೧]
ಇದು ಪ್ರಸ್ತುತ ರಾಜಸ್ಥಾನ ಮತ್ತು ಮಧ್ಯಪ್ರದೇಶದ ೧೩,೦೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ಶಾಲಾಭಿವೃದ್ಧಿಗೆ ಮೀಸಲಿಡುವ ಹೂಡಿಕೆಯನ್ನು ಬಳಸಿಕೊಳ್ಳುವ ಮೂಲಕ ಮತ್ತು ಸಮುದಾಯದ ಸ್ವಯಂಸೇವಕರ ಬೃಹತ್ ನೆಲೆಯೊಂದಿಗೆ ತೊಡಗಿಸಿಕೊಳ್ಳುವ ಮೂಲಕ, ಎಜುಕೇಟ್ ಗರ್ಲ್ಸ್ ಶಾಲೆಯಿಂದ ಹೊರಗುಳಿದ ಹುಡುಗಿಯರನ್ನು ಗುರುತಿಸಲು ಮತ್ತು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ . ಇದು ಎಲ್ಲಾ ಮಕ್ಕಳ (ಹುಡುಗಿಯರು ಮತ್ತು ಹುಡುಗರು ಇಬ್ಬರೂ) ಸಾಕ್ಷರತೆ ಮತ್ತು ಮೂಲಭೂತ ಕೌಶಲ್ಯಗಳನ್ನು ಸುಧಾರಿಸಲು ಶ್ರಮವಹಿಸುತ್ತದೆ.[೨][೩] ೨೦೦೭ ರಲ್ಲಿ ಆರಂಭವಾದಾಗಿನಿಂದ, ಸಂಸ್ಥೆಯು ೬.೭ಮಿಲಿಯನ್ ಕ್ಕಿಂತ ಹೆಚ್ಚು ಒಟ್ಟು ಫಲಾನುಭವಿಗಳನ್ನು ಹೊಂದಿದೆ. ಶಾಲೆಯಿಂದ ಹೊರಗುಳಿದ ಸುಮಾರು ೩೮೦,೦೦೦ ಹುಡುಗಿಯರನ್ನು ಶಾಲೆಗೆ ಸೇರಿಸಲು ಸಮುದಾಯಗಳನ್ನು ಸಜ್ಜುಗೊಳಿಸಲು ಸಹಾಯ ಮಾಡಿದೆ.[೪]
ಕಾರ್ಯನಿರ್ವಾಹಕ ಸಾರಾಂಶ
[ಬದಲಾಯಿಸಿ]ಎಜುಕೇಟ್ ಗರ್ಲ್ಸ್ ಎಂಬುದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಭಾರತದ ಅತ್ಯಂತ ದೂರದ ಮತ್ತು ಗ್ರಾಮೀಣ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಹುಡುಗಿಯರ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಬೆಂಬಲಿಸುತ್ತದೆ.[೫] ಇದು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ೧೮,೦೦೦ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಮುದಾಯ ಸ್ವಯಂಸೇವಕರ ದೊಡ್ಡ ನೆಲೆಯೊಂದಿಗೆ ತೊಡಗಿಸಿಕೊಂಡಿದೆ . ಈ ಸಂಸ್ಥೆ ಶಾಲೆಯಿಂದ ಹೊರಗುಳಿದ ಹುಡುಗಿಯರನ್ನು ಗುರುತಿಸಲು, ಉಳಿಸಿಕೊಳ್ಳಲು ಮತ್ತು ಎಲ್ಲಾ ಮಕ್ಕಳಿಗೆ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮೂಲಭೂತ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಸಂಸ್ಥೆಯು ೨೦೨೦ ರಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧವಾದ ಫಿನ್ಲ್ಯಾಂಡ್ ಮೂಲದ ಜಾಗತಿಕ ಲಾಭರಹಿತ ಶಿಕ್ಷಣ 'ಹಂಡ್ರೆಡ್' ಆಯೋಜಿಸಿದ 'ಹಂಡ್ರೆಡ್ ೨೦೨೧ ಗ್ಲೋಬಲ್ ಕಲೆಕ್ಷನ್ ಪಟ್ಟಿ'ಯಲ್ಲಿ ತಾನು ಆಯ್ಕೆಯಾಗಿರುವುದಾಗಿ ಘೋಷಿಸಿತ್ತು. ಎಜುಕೇಟ್ ಗರ್ಲ್ಸ್‌ನ ನಾವೀನ್ಯತೆಯನ್ನು ೫೦ ಕ್ಕೂ ಹೆಚ್ಚು ದೇಶಗಳ ಶೈಕ್ಷಣಿಕ ಶಿಕ್ಷಣತಜ್ಞರು, ನಾವೀನ್ಯಕಾರರು, ನಿಧಿದಾರರು ಮತ್ತು ನಾಯಕರನ್ನು ಒಳಗೊಂಡ ಅಕಾಡೆಮಿಯ ೧೫೦ ಸದಸ್ಯರು ಪರಿಶೀಲಿಸಿದ್ದಾರೆ.[೬]
ಎಜುಕೇಟ್ ಗರ್ಲ್ಸ್, ಸಮುದಾಯಗಳಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಪ್ರೇರೇಪಿಸುತ್ತದೆ.[೭][೮]
ಸಫೀನಾ ಹುಸೇನ್ ನವದೆಹಲಿಯಲ್ಲಿ ಹುಟ್ಟಿ ಬೆಳೆದರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಬಿಎಸ್ ಪದವಿ ಪಡೆದಿದ್ದಾರೆ. ಇವರು ಭಾರತ ಮತ್ತು ವಿದೇಶಗಳಲ್ಲಿ ಹುಡುಗಿಯರ ಶಿಕ್ಷಣಕ್ಕೆ ಯಾವಾಗಲೂ ಬದ್ಧರಾಗಿದ್ದರು ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿಯೂ ಸಹ ಈ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು ಏಷ್ಯಾ ಸೊಸೈಟಿಯಿಂದ ಏಷ್ಯಾ ೨೧ ಯುವ ನಾಯಕರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.[೯]
ಬಾಲಿಕಾ ತಂಡದ ಮೂಲಕ ಸಮುದಾಯ ಮಾಲೀಕತ್ವವನ್ನು ಸುಗಮಗೊಳಿಸುವುದು
[ಬದಲಾಯಿಸಿ]ಎಜುಕೇಟ್ ಗರ್ಲ್ಸ್ ೧೩,೦೦೦ ಕ್ಕೂ ಹೆಚ್ಚು ಸಮುದಾಯಗಳ ಸ್ವಯಂಸೇವಕ(ಬಾಲಿಕಾ ತಂಡ)ರನ್ನು ಹೊಂದಿದ್ದು, ಅವರು ತಮ್ಮ ತಮ್ಮ ಹಳ್ಳಿಗಳಲ್ಲಿ ಹುಡುಗಿಯರ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಾರೆ.[೧೦] ಬಾಲಿಕಾ ತಂಡದ ಸದಸ್ಯರು ಸರ್ಕಾರಿ ಶಾಲೆಗಳು ಮತ್ತು ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಾರೆ.[೧೧] ಬಾಲಿಕಾ ತಂಡವು ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಸಂಪರ್ಕ (ಮನೆ-ಮನೆಗಳಲ್ಲಿ ಸಮೀಕ್ಷೆ ನಡೆಸುವುದು, ದಾಖಲಾತಿ ಚಟುವಟಿಕೆಗಳು, ಸಮುದಾಯ ಸಭೆಗಳನ್ನು ನಡೆಸುವುದು), ಪಠ್ಯಕ್ರಮ (ಜಿಕೆಪಿ) ಅನುಷ್ಠಾನ, ನಾಯಕತ್ವ ಮತ್ತು ಪ್ರೇರಣೆಯಲ್ಲಿ ತರಬೇತಿ ಪಡೆದಿದೆ.[೧೨] ಈ ತಂಡದಲ್ಲಿರುವವರು ಹೆಚ್ಚಾಗಿ ೧೮ ರಿಂದ ೩೦ ವರ್ಷ ವಯಸ್ಸಿನವರು ಮತ್ತು ಅಕ್ಷರಸ್ಥರು. ಪ್ರತಿ ಬಾಲಿಕಾ ತಂಡಗಳಿಗೆ ಅವರ ಪ್ರಯತ್ನಗಳನ್ನು ಸುಗಮಗೊಳಿಸಲು ವರ್ಷವಿಡೀ ಎಜುಕೇಟ್ ಗರ್ಲ್ಸ್‌ನಿಂದ ನಿರಂತರ ತರಬೇತಿ ಮತ್ತು ಬೆಂಬಲ ನೀಡಲಾಗುತ್ತದೆ.[೧೩]
ಬಾಲಕಿಯರ ದಾಖಲಾತಿ ಹೆಚ್ಚಳ
[ಬದಲಾಯಿಸಿ]ಶಾಲೆಯಿಂದ ಹೊರಗುಳಿದ ಹುಡುಗಿಯರನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಸರ್ಕಾರಿ ದತ್ತಾಂಶ ಮತ್ತು ಮನೆ-ಮನೆ ಸಮೀಕ್ಷೆಗಳನ್ನು (ಎಜುಕೇಟ್ ಗರ್ಲ್ಸ್ ನಡೆಸಿದ) ಬಳಸಿದ ನಂತರ, ಹುಡುಗಿಯರನ್ನು ಮತ್ತೆ ಶಾಲೆಗೆ ಕರೆತರುವ ಜವಾಬ್ದಾರಿಯನ್ನು ಗ್ರಾಮದ ಮುಖಂಡರು, ಹಿರಿಯರು, ಶಾಲಾ ಆಡಳಿತ, ಟೀಮ್ ಬಾಲಿಕಾ ಮತ್ತು ಎಜುಕೇಟ್ ಗರ್ಲ್ಸ್ ಸಿಬ್ಬಂದಿಯ ನಡುವೆ ವಿತರಿಸಲಾಗುತ್ತದೆ.[೧೪][೧೫] ಇದರಲ್ಲಿ ಹೆಚ್ಚಾಗಿ ಮನೆ ಮನೆಗೆ ತೆರಳಿ ಪೋಷಕರನ್ನು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸುವುದು ಮತ್ತು ಗ್ರಾಮ ಶಿಕ್ಷಾ ಸಭೆಗಳು ಮತ್ತು ಮೊಹಲ್ಲಾ ಸಭೆಗಳ ಮೂಲಕ ಸಮುದಾಯವನ್ನು ಒಟ್ಟುಗೂಡಿಸುವುದು ಒಳಗೊಂಡಿರುತ್ತದೆ.[೧೬][೧೭]
ಶಾಲಾ ಆಡಳಿತವನ್ನು ಬೆಂಬಲಿಸುವುದು
[ಬದಲಾಯಿಸಿ]ಗ್ರಾಮ ಸಭೆಗಳಲ್ಲಿ ಶಾಲಾ ನಿರ್ವಹಣಾ ಸಮಿತಿ (ಎಸ್‌ಎಂಸಿ) ಯನ್ನು ರಚಿಸಲು ೧೫ ಸದಸ್ಯರ ಮಂಡಳಿಯನ್ನು ಆಯ್ಕೆ ಮಾಡಲಾಗುತ್ತದೆ. ಇದು ಪೋಷಕರು, ಶಿಕ್ಷಕರು ಮತ್ತು ಗ್ರಾಮದ ಮುಖಂಡರನ್ನು ಒಳಗೊಂಡಿರುತ್ತದೆ. ಇವರು ಶಾಲಾ ಆಡಳಿತಕ್ಕೆ ಜವಾಬ್ದಾರರಾಗಿರುತ್ತಾರೆ. ಎಜುಕೇಟ್ ಗರ್ಲ್ಸ್ ಈ ಸಮಿತಿಯ ಸದಸ್ಯರನ್ನು ಹಿಡಿದು, ಶಾಲಾ ಸುಧಾರಣಾ ಯೋಜನೆಗಳನ್ನು (ಎಸ್‌ಐಪಿಗಳು) ಸಿದ್ಧಪಡಿಸಲು ಮತ್ತು ಕಾರ್ಯಗತಗೊಳಿಸಲು ಮತ್ತು ಶಾಲಾ ಮೌಲ್ಯಮಾಪನಗಳನ್ನು ನಡೆಸಲು ಅವರಿಗೆ ಬೆಂಬಲವನ್ನು ನೀಡುತ್ತದೆ.[೧೮][೧೯]
ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವುದು
[ಬದಲಾಯಿಸಿ]ಎಜುಕೇಟ್ ಗರ್ಲ್ಸ್ ತನ್ನ ಬಾಲಿಕಾ ತಂಡಕ್ಕೆ (ಸಮುದಾಯ ಸ್ವಯಂಸೇವಕರು) ಜ್ಞಾನ್ ಕಾ ಪಿತಾರ (ಜಿಕೆಪಿ) ಎಂದು ಕರೆಯಲ್ಪಡುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಿಟ್‌ಗಳ ಬಳಕೆಯೊಂದಿಗೆ ಪರಿಹಾರ ಕಲಿಕಾ ಪಠ್ಯಕ್ರಮವನ್ನು ಜಾರಿಗೆ ತರಲು ತರಬೇತಿ ನೀಡುತ್ತದೆ. ಕಲಿಕಾ ಪರಿಕರಗಳು ೩, ೪ ಮತ್ತು ೫ ನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್, ಹಿಂದಿ ಮತ್ತು ಗಣಿತದಲ್ಲಿ ಸೂಕ್ಷ್ಮ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಗಮನಹರಿಸುತ್ತವೆ. ಜಿಕೆಪಿ ತರಗತಿಯಲ್ಲಿನ ಮಕ್ಕಳಿಗೆ ಸಂವಾದಾತ್ಮಕ ಪರಿಕರಗಳು, ಚಟುವಟಿಕೆಗಳು, ಆಟಗಳು ಮತ್ತು ವರ್ಕ್‌ಶೀಟ್‌ಗಳನ್ನು ಉಪಯೋಗಿಸಿ ಕಲಿಸುತ್ತದೆ, ಯಾವುದೇ ಮಗು ಹಿಂದುಳಿಯದಂತೆ ನೋಡಿಕೊಳ್ಳುತ್ತದೆ. ಪಠ್ಯಕ್ರಮದ ಅನುಷ್ಠಾನದ ಮೊದಲು ಮತ್ತು ನಂತರ ಕಲಿಕೆಯ ಮಟ್ಟವನ್ನು ನಿರ್ಣಯಿಸಲು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಮಹಿಳಾ ನಾಯಕಿಯರ ಸೃಷ್ಟಿ
[ಬದಲಾಯಿಸಿ]ಎಜುಕೇಟ್ ಗರ್ಲ್ಸ್ ಸಂಸ್ಥೆಯು ಪ್ರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಸಭಾಗಳ (ಬಾಲಕಿಯರ ಮಂಡಳಿಗಳು) ಚುನಾವಣೆಯನ್ನು ಸುಗಮಗೊಳಿಸುತ್ತದೆ. ೧೩ ಸದಸ್ಯರ ಈ ಮಂಡಳಿಯು ಹುಡುಗಿಯರಿಗೆ ಶಾಲೆಯೊಳಗೆ ನಾಯಕತ್ವದ ಸ್ಥಾನವನ್ನು ನೀಡುತ್ತದೆ ಮತ್ತು ಸಂವಹನ, ನಾಯಕತ್ವ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಲು ಜೀವನ ಕೌಶಲ್ಯಗಳಲ್ಲಿ ತರಬೇತಿಯನ್ನು ನೀಡುತ್ತದೆ.[೨೦]
ಇತಿಹಾಸ
[ಬದಲಾಯಿಸಿ]ಸಫೀನಾ ಹುಸೇನ್ ನೇತೃತ್ವದ ಒಂದು ಸಣ್ಣ ಸ್ಥಳೀಯ ತಂಡವು ರಾಜಸ್ಥಾನದ ಪಾಲಿ ಜಿಲ್ಲೆಯ ೫೦ ಶಾಲೆಗಳಲ್ಲಿ ಆರಂಭಿಕ ಪರೀಕ್ಷಾ ಯೋಜನೆಯನ್ನು ನಡೆಸಿತು. ಈ ೫೦-ಶಾಲೆಗಳ ಯೋಜನೆಯನ್ನು ರಾಜಸ್ಥಾನ ಶಿಕ್ಷಣ ಉಪಕ್ರಮ (ಆರ್‌ಇಐ) ದ ಅಡಿಯಲ್ಲಿ ಪ್ರಾರಂಭಿಸಲಾಯಿತು.[೨೧][೨೨][೨೩] ೨೦೦೮ ರಲ್ಲಿ ೫೦೦ ಶಾಲೆಗಳೊಂದಿಗೆ ಪ್ರಾರಂಭವಾದ ಈ ಉಪಕ್ರಮವು ೨೦೧೩ ರಲ್ಲಿ ೪,೪೨೫ ಕ್ಕೂ ಹೆಚ್ಚು ಶಾಲೆಗಳಿಗೆ ತಲುಪಿತು. ಗ್ರಾಮೀಣ ರಾಜಸ್ಥಾನದಲ್ಲಿ ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವ ಗುರಿಯೊಂದಿಗೆ, ಸಫೀನಾ ಅವರು ಸರ್ಕಾರಿ ಶಾಲೆಗಳಿಗೆ ಹುಡುಗಿಯರನ್ನು ದಾಖಲಿಸಲು ಇಡೀ ಸಮುದಾಯವು ಕೈಜೋಡಿಸುವ ಸುಸ್ಥಿರ ಮಾದರಿಯನ್ನು ವಿನ್ಯಾಸಗೊಳಿಸಿದರು. ಸಮುದಾಯದ ಒಳಗೊಳ್ಳುವಿಕೆಯಿಂದಾಗಿ ಈ ಉಪಕ್ರಮವು ಯಶಸ್ವಿಯಾಯಿತು.[೨೪]
ಪರೀಕ್ಷಾ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಸಂಸ್ಥೆಯು ೨೦೦೭ ರಲ್ಲಿ ಸ್ವತಂತ್ರವಾಗಿ ನೋಂದಾಯಿಸಲ್ಪಟ್ಟಿತು. ೨೦೦೮ ರಲ್ಲಿ ೫೦೦ ಶಾಲೆಗಳಲ್ಲಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರದ ಅನುಮೋದನೆಯನ್ನು ಪಡೆಯಿತು, ಯುನಿಸೆಫ್, ಪ್ರಥಮ್ ರಾಜಸ್ಥಾನ, ಸರ್ವ್ ಮತ್ತು ಡ್ರೀಮ್ ಕ್ಯಾಚರ್ಸ್ ಫೌಂಡೇಶನ್‌ನಂತಹ ಪಾಲುದಾರರಿಂದ ಸಹಕಾರ ಮತ್ತು ಬೆಂಬಲದೊಂದಿಗೆ ಪಾಲಿ ಜಿಲ್ಲೆಯ ಬಾಲಿ, ಸುಮೇರ್‌ಪುರ ಮತ್ತು ರಾಣಿ ಬ್ಲಾಕ್‌ಗಳಲ್ಲಿ ೭೦,೦೦೦ ಮಕ್ಕಳೊಂದಿಗೆ ಕೆಲಸ ಮಾಡಿತು.[೨೫][೨೬] [೨೭]
ಗುರಿ
[ಬದಲಾಯಿಸಿ]ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಸುಸ್ಥಿರತೆಯನ್ನು ಮಾರ್ಗದರ್ಶಿ ನಿಯತಾಂಕಗಳಾಗಿಟ್ಟುಕೊಂಡು, ಎನ್‌ಜಿಒ ಈ ಕೆಳಗಿನ ಗುರಿಗಳನ್ನು ಹೊಂದಿದೆ:
- ಸಮುದಾಯಗಳಲ್ಲಿ ಹುಡುಗಿಯರ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ಹುಡುಗಿಯರ ಶಾಲಾ ದಾಖಲಾತಿ ಮತ್ತು ಉಳಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು.
- ಶಾಲೆಗಳು ಮತ್ತು ಯೋಜನಾ ಕ್ಷೇತ್ರಗಳಲ್ಲಿ ಲಿಂಗ ಅಸಮಾನತೆಯನ್ನು ಕಡಿಮೆ ಮಾಡಿ ಹುಡುಗಿಯರ ಜೀವನ ಕೌಶಲ್ಯ ಮತ್ತು ಸಾಮರ್ಥ್ಯದ ಮಟ್ಟವನ್ನು ಸುಧಾರಿಸುವುದು.
- ಸಮಗ್ರ ಶಿಕ್ಷಣಕ್ಕಾಗಿ ಹಮ್ಮಿಕೊಳ್ಳುವ ಯೋಜನೆಗಳು ಮತ್ತು ಕಾರ್ಯಗಳಲ್ಲಿ ಮಕ್ಕಳು, ಕುಟುಂಬಗಳು ಮತ್ತು ಸಮುದಾಯಗಳು ಹೆಚ್ಚಾಗಿ ಭಾಗವಹಿಸುವಂತೆ ನೋಡಿಕೊಳ್ಳುವುದು.
ಪರಿಣಾಮ
[ಬದಲಾಯಿಸಿ]- ೩೮೦,೦೦೦ ಕ್ಕೂ ಹೆಚ್ಚು ಹುಡುಗಿಯರನ್ನು ಮರಳಿ ಶಾಲೆಗೆ ಕರೆತರಲಾಯಿತು.
- ಶಾಲೆ ಮೊಟಕುಗೊಳಿಸಲು ಹೊರಟಿದ್ದ ೯೦% ಹುಡುಗಿಯರನ್ನು ಮರಳಿ ಕರೆತರಲಾಯಿತು .[೨೮]
- ೧೫೦,೦೦೦ ಸಕ್ರಿಯ ಮಹಿಳಾ ನಾಯಕರು.[೨೯]
- ೧೩,೦೦೦ ಕ್ಕೂ ಹೆಚ್ಚು ಸಕ್ರಿಯ ಬಾಲಿಕಾ ತಂಡದ ಸದಸ್ಯರು.
- ಒಟ್ಟು ೬.೭ ಫಲಾನುಭವಿಗಳು.
- ಯುಬಿಎಸ್ ಆಪ್ಟಿಮಸ್ ಫೌಂಡೇಶನ್ [೩೦] ಮತ್ತು ಸಿಐಎಫ್‌ಎಫ್ ಜೊತೆಗೂಡಿ ಶಿಕ್ಷಣ ವಲಯದಲ್ಲಿ ವಿಶ್ವದ ಮೊದಲ ಡಿಐಬಿ ( ಅಭಿವೃದ್ಧಿ ಇಂಪ್ಯಾಕ್ಟ್ ಬಾಂಡ್ ) [೩೧] ಅನ್ನು ಪ್ರಾರಂಭಿಸಲಾಯಿತು. ಇದು ೨೦೧೮ ರಲ್ಲಿ ಪೂರ್ಣಗೊಂಡಾಗ, ಅದರ ಎರಡೂ ಗುರಿ ಫಲಿತಾಂಶಗಳನ್ನು ಮೀರಿಸಿತು.[೩೨]
೨೦೦೭ ರಿಂದ ಎಜುಕೇಟ್ ಗರ್ಲ್ ೭೫೦,೦೦೦ ಕ್ಕೂ ಹೆಚ್ಚು ಹುಡುಗಿಯರನ್ನು ಶಾಲೆಗಳಿಗೆ ದಾಖಲಿಸಿದೆ. ೧.೩ ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳ ಕಲಿಕಾ ಫಲಿತಾಂಶಗಳನ್ನು ಸುಧಾರಿಸಿದೆ. ಇದು ಏಷ್ಯಾದ ಮೊದಲ ಧೈರ್ಯಶಾಲಿ (ಆಡಾಸಿಯಸ್) ಯೋಜನೆಯಾಗಿದೆ.[೩೩]
ಗೌರವಗಳು
[ಬದಲಾಯಿಸಿ]ಎಜುಕೇಟ್ ಗರ್ಲ್ಸ್ ಈ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದೆ:
- ೨೦೧೦ ರಲ್ಲಿ ದಾಸ್ರಾ ವಿಲೇಜ್ ಕ್ಯಾಪಿಟಲ್ ಪ್ರಶಸ್ತಿ.[೨೪]
- ೨೦೧೧ ರ ೩ನೇ ಎಡೆಲ್‌ಗಿವ್ ಸಾಮಾಜಿಕ ನಾವೀನ್ಯತೆ ಗೌರವಗಳು.[೨೪]
- ೨೦೧೧ ರಲ್ಲಿ ವಿಶ್ವ ಬ್ಯಾಂಕಿನ ಭಾರತ ಅಭಿವೃದ್ಧಿ ಮಾರುಕಟ್ಟೆ ಪ್ರಶಸ್ತಿ [೨೪]
- ಮಿಲೇನಿಯಮ್ ಅಲೈಯನ್ಸ್ ಪ್ರಶಸ್ತಿ, ೨೦೧೪.[೩೪]
- ಶಿಕ್ಷಣದಲ್ಲಿನ ನಾವೀನ್ಯತೆಗಾಗಿ WISE ಪ್ರಶಸ್ತಿ, ೨೦೧೪.[೩೫]
- ಸ್ಟಾರ್ಸ್ ಇಂಪ್ಯಾಕ್ಟ್ ಪ್ರಶಸ್ತಿ ೨೦೧೪.
- ೨೦೧೫ ರ ಭಾರತದ ಅತ್ಯಂತ ನೈತಿಕ ಕಂಪನಿಗಳ ಪ್ರಶಸ್ತಿ.[೩೬]
- ೨೦೧೫ ರ ಸಾಮಾಜಿಕ ಉದ್ಯಮಶೀಲತೆಗಾಗಿ ಸ್ಕೋಲ್ ಪ್ರಶಸ್ತಿ - ಸಫೀನಾ ಹುಸೇನ್ ಅವರಿಗೆ.[೩೭]
- ನಾಸ್ಕಾಮ್ ಫೌಂಡೇಶನ್ ಸಾಮಾಜಿಕ ನಾವೀನ್ಯತೆ ಪ್ರಶಸ್ತಿ ೨೦೧೬.[೩೮]
- NDTV-L'Oréal ಪ್ಯಾರಿಸ್ ವುಮೆನ್ ಆಫ್ ವರ್ತ್ ಪ್ರಶಸ್ತಿ ೨೦೧೬ – ಸಫೀನಾ ಹುಸೇನ್ ಅವರಿಗೆ.[೩೯]
- ಇಟಿ ಪ್ರೈಮ್ ಮಹಿಳಾ ನಾಯಕತ್ವ ಪ್ರಶಸ್ತಿ ೨೦೧೯ – ಸಫೀನಾ ಹುಸೇನ್ ಅವರಿಗೆ.[೪೦]
ಉಲ್ಲೇಖಗಳು
[ಬದಲಾಯಿಸಿ]- ↑ "Educate Girls Organisation: A Developmental Imperative for Future". www.learningroutes.in (in ಇಂಗ್ಲಿಷ್). Retrieved 2024-05-30.
- ↑ "Dr. Shamika Ravi director of Research brookings India congratulates Educate girls". www.devdiscourse.com. 30 August 2018. Retrieved 11 April 2019.
- ↑ "In Rajasthan, this NGO is getting boys campaign for girls education". Firstpost. April 17, 2015. Retrieved 15 April 2019.
- ↑ "When girls returned to the classroom". India Today. December 5, 2014. Retrieved 12 April 2019.
- ↑ "The Bond that is Educating Girls Across India". www.ipsnews.net. 2018. Retrieved 17 April 2019.
- ↑ "Educate Girls Among the World's 100 Most Inspiring Innovations in K12 Education" (in ಇಂಗ್ಲಿಷ್). www.businesswire.com. 13 November 2020. Retrieved 10 April 2021.
- ↑ Educate Girls: What We Do[ಮಡಿದ ಕೊಂಡಿ]
- ↑ "Can Machine Learning Double Your Social Impact?". Retrieved 12 April 2019.
- ↑ "Educate Girls - Enabling Communities In Rural Rajasthan To Send Their Daughters To School". The Better India. 18 November 2013. Retrieved 10 April 2021.
- ↑ "'Who Will Look After The Goats?': How a 9-YO Girl Battled All Odds For Education". The Better India. October 11, 2018. Retrieved 12 April 2019.
- ↑ "The cause of girl child education is close to my heart: Safeena Husain, Educate Girls". 3 October 2017. Retrieved 14 April 2019.
- ↑ "Here's how Development Impact Bond helped Mumbai's Safeena Husain and her NGO". Mumbai Mirror. September 9, 2018. Retrieved 12 April 2019.
- ↑ "Educating India's Girls: It Takes a Community". World Bank Group. June 1, 2015. Retrieved 10 April 2019.
- ↑ "Development impact bond results in education announced". Business Line. August 30, 2018. Retrieved 14 April 2019.
- ↑ "The Educate Girls DIB exceeded its goals: How did they do it and what does it mean?". www.devex.com. 13 July 2018. Retrieved 12 April 2019.
- ↑ "Here's how Development Impact Bond helped Mumbai's Safeena Husain and her NGO". Mumbai Mirror. September 9, 2018. Retrieved 12 April 2019."Here's how Development Impact Bond helped Mumbai's Safeena Husain and her NGO". Mumbai Mirror. September 9, 2018. Retrieved 12 April 2019.
- ↑ "The cause of girl child education is close to my heart: Safeena Husain, Educate Girls". 3 October 2017. Retrieved 14 April 2019."The cause of girl child education is close to my heart: Safeena Husain, Educate Girls". 3 October 2017. Retrieved 14 April 2019.
- ↑ "Here are 15 projects helping educate needy children". Daily News and Analysis. December 30, 2015. Retrieved 13 April 2019.
- ↑ "Union Minister Smriti Zubin Irani to present Women Transforming India Awards". August 29, 2017. Archived from the original on 17 ಏಪ್ರಿಲ್ 2019. Retrieved 13 April 2019.
- ↑ "The Sunday Tribune - Spectrum". www.tribuneindia.com. January 5, 2014. Retrieved 12 April 2019.
- ↑ "Lessons from Educate Girls DIB are for everyone: Safeena Husain, Founder & Executive Director, Educate Girls". The Financial Express (India). October 15, 2018. Retrieved 14 April 2019.
- ↑ "A Review of the Rajasthan Education Initiative (REI)". EducationInnovations.org. Archived from the original on 2016-03-13. Retrieved 2016-03-06.
- ↑ Rajasthan Education Initiative Error in webarchive template: Check
|url=
value. Empty. Government of Rajasthan Official Website - ↑ ೨೪.೦ ೨೪.೧ ೨೪.೨ ೨೪.೩ "Educate Girls - Enabling Communities In Rural Rajasthan To Send Their Daughters To School". The Better India. 18 November 2013. Retrieved 10 April 2021."Educate Girls - Enabling Communities In Rural Rajasthan To Send Their Daughters To School". The Better India. 18 November 2013. Retrieved 10 April 2021.
- ↑ "Lessons from Educate Girls DIB are for everyone: Safeena Husain, Founder & Executive Director, Educate Girls". The Financial Express (India). October 15, 2018. Retrieved 14 April 2019."Lessons from Educate Girls DIB are for everyone: Safeena Husain, Founder & Executive Director, Educate Girls". The Financial Express (India). October 15, 2018. Retrieved 14 April 2019.
- ↑ "Educate Girls: History". Archived from the original on 2011-12-28. Retrieved 2012-01-14.
- ↑ Basu, Ranajoy (7 March 2017). "How impact investors are helping to educate girls in India | Reuters Events | Sustainable Business". www.reutersevents.com. Retrieved 11 April 2021.
- ↑ "5 Women On A Crusade To Empower The Girl Child". January 24, 2018. Retrieved 16 April 2019.
- ↑ "Helping girls to study rather than become child brides". BBC News Online. 28 November 2017. Retrieved 16 April 2019.
- ↑ "What can we learn from the results of the world's first development impact bond in education?". July 13, 2018. Retrieved 12 April 2019.
- ↑ "UBS puts Indian girls into school - and makes a profit". Reuters. July 13, 2018. Retrieved 12 April 2019.
- ↑ "Education Development Impact Bond". ciff.org. Retrieved 2016-12-27.
- ↑ "Educate Girls Among the World's 100 Most Inspiring Innovations in K12 Education" (in ಇಂಗ್ಲಿಷ್). www.businesswire.com. 13 November 2020. Retrieved 10 April 2021."Educate Girls Among the World's 100 Most Inspiring Innovations in K12 Education". www.businesswire.com. 13 November 2020. Retrieved 10 April 2021.
- ↑ "Women of Worth: About the Nominee - Safeena Husain". NDTV.com.
- ↑ "2014 Wise Awards". Wise-Qatar.org.
- ↑ webthemez. "India's Most Ethical Companies Conference & Awards". www.worldcsrcongress.com. Retrieved 2016-12-27.
- ↑ Skoll.org (2015-04-27), Safeena Husain - Educate Girls - 2015 Skoll Award for Social Entrepreneurship, retrieved 2016-12-27
- ↑ "Forbes India Magazine - NASSCOM Social Innovation Forum aims to impact 1 billion lives by 2020". Forbes India (in ಅಮೆರಿಕನ್ ಇಂಗ್ಲಿಷ್). Retrieved 2016-12-27.
- ↑ "Women of Worth: About the Awardee - Safeena Husain". Women Of Worth (in ಅಮೆರಿಕನ್ ಇಂಗ್ಲಿಷ್). 2016-02-11. Retrieved 2016-12-27.
- ↑ Mar 2019, ET Online | 29; Ist, 11:03 Pm (29 March 2019). "ETPWLA 2019: Safeena Husain of Educate Girls Foundation receives 'Beyond Business' award". The Economic Times. Retrieved 2021-04-25.
{{cite web}}
: CS1 maint: numeric names: authors list (link)
- Pages using the JsonConfig extension
- CS1 ಇಂಗ್ಲಿಷ್-language sources (en)
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from August 2019
- Articles with invalid date parameter in template
- Webarchive template errors
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 maint: numeric names: authors list
- ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ
- ಶಿಕ್ಷಣ
- ಸಂಘ-ಸಂಸ್ಥೆಗಳು