ಎನ್. ಎ. ಹ್ಯಾರಿಸ್
ನಲಪಾಡ್ ಅಹ್ಮದ್ ಹ್ಯಾರಿಸ್ | |
---|---|
ಕರ್ನಾಟಕ ವಿಧಾನಸಭೆಯ ಸದಸ್ಯರು
| |
ಹಾಲಿ | |
ಅಧಿಕಾರ ಸ್ವೀಕಾರ ಮೇ ೨೦೦೮ | |
ಪೂರ್ವಾಧಿಕಾರಿ | ಎಸ್.ರಘು |
ಮತಕ್ಷೇತ್ರ | ಶಾಂತಿ ನಗರ |
ವೈಯಕ್ತಿಕ ಮಾಹಿತಿ | |
ಜನನ | [೧] ಭದ್ರಾವತಿ, ಕರ್ನಾಟಕ | ೧೧ ಜನವರಿ ೧೯೬೭ .
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ವೃತ್ತಿ | ಶಾಸಕ |
ನಲಪಾಡ್ ಅಹ್ಮದ್ ಹ್ಯಾರಿಸ್ (ಜನಪ್ರಿಯವಾಗಿ ಎನ್. ಎ. ಹ್ಯಾರಿಸ್ ಎಂದು ಕರೆಯುತ್ತಾರೆ) ಒಬ್ಬ ಭಾರತೀಯ ಉದ್ಯಮಿ, ರಾಜಕಾರಣಿ ಮತ್ತು ಕ್ರೀಡಾ ನಿರ್ವಾಹಕರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ ಮತ್ತು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.[೨] ಅವರು ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.[೩]
ಆರಂಭಿಕ ಜೀವನ
[ಬದಲಾಯಿಸಿ]ನಲಪಾಡ್ ಅಹಮದ್ ಹ್ಯಾರಿಸ್ ೧೯೬೭ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಎನ್.ಎ.ಮಹಮ್ಮದ್ ಅವರು ೧೯೬೦ ರಲ್ಲಿ ಕೇರಳದ ಕಾಸರಗೋಡಿನಿಂದ ಕರ್ನಾಟಕದ ಭದ್ರಾವತಿಗೆ ಲೋಹದ ಸ್ಕ್ರ್ಯಾಪಿಂಗ್ ಅಂಗಡಿಯನ್ನು ಸ್ಥಾಪಿಸಲು ತೆರಳಿದರು. ಮೊಹಮ್ಮದ್ ಬೆಂಗಳೂರಿಗೆ ತೆರಳಿ ನಂತರ, ಸರ್ಕಾರದ ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇವರ ಗಮನಾರ್ಹ ಯೋಜನೆಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯು ಒಂದು. ಈ ಯೋಜನೆಯಲ್ಲಿ ಮಾಡಿದ ಹಣದಿಂದ ಮೊಹಮ್ಮದ್ ಬೆಂಗಳೂರು ಇಂಟರ್ನ್ಯಾಷನಲ್ ಹೋಟೆಲ್‍ನನ್ನು ಸ್ಥಾಪಿಸಿದರು. ೧೯೭೮ ರಲ್ಲಿ ಮೊಹಮ್ಮದ್ ನಲಪಾಡ್ ಗ್ರೂಪ್ ಆಫ್ ಹೋಟೆಲ್ಸ್ ಅನ್ನು ಸ್ಥಾಪಿಸಿದರು. ಹ್ಯಾರಿಸ್ ೧೯೯೭ ರಲ್ಲಿ ಕುಟುಂಬ ವ್ಯವಹಾರಕ್ಕೆ ಸೇರಿದರು.[೪]
ನಲಪಾಡ್ ಗುಂಪು
[ಬದಲಾಯಿಸಿ]ನಲಪಾಡ್ ಗ್ರೂಪ್ ನ ವ್ಯವಹಾರವನ್ನು ನಲಪಾಡ್ ಪೈಪ್ಸ್, ನಲಪಾಡ್ ಸುರಕ್ಷಾ, ನಲಪಾಡ್ ಇನ್ಫೋಟೆಕ್ ಮತ್ತು ನಲಪಾಡ್ ಎನರ್ಜಿಯಾಗಿ ವೈವಿಧ್ಯಗೊಳಿಸುವಲ್ಲಿ ಹಾರಿಸ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾರಿಸ್ ಕುಟುಂಬ ನಲಪಾಡ್ ಇಂಟರ್‌ನ್ಯಾಶನಲ್ ಸ್ಕೂಲ್ ಕೂಡ ಹೊಂದಿದೆ.[೪]
ರಾಜಕೀಯ ವೃತ್ತಿ
[ಬದಲಾಯಿಸಿ]ನಲಪಾಡ್ ಕುಟುಂಬದ ವ್ಯವಹಾರದ ಮೂಲಕ, ಹ್ಯಾರಿಸ್ ಕೇರಳದವರಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ಅವರ ಸಂಪರ್ಕಕ್ಕೆ ಬಂದರು. ೨೦೦೦ ರ ದಶಕದ ಆರಂಭದಲ್ಲಿ, ಹ್ಯಾರಿಸ್ ಕೆ.ಜೆ. ಜಾರ್ಜ್ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ವಿಶ್ವಾಸಾರ್ಹ ಸಹಾಯಕರಾದರು. ಇದು ಪಕ್ಷದೊಳಗೆ ತಮ್ಮ ಸ್ಥಾನವನ್ನು ಹೆಚ್ಚಿಸಲು ಸಹಾಯ ಮಾಡಿತು.[೪]
ಅವರು ತಮ್ಮ ೪೧ ನೇ ವಯಸ್ಸಿನಲ್ಲಿ, ೨೦೦೮ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶಾಂತಿ ನಗರದಿಂದ ವಿಧಾನಸಭೆಯ ಸದಸ್ಯರಾಗಿ (MLA) ಆಯ್ಕೆಯಾದರು. ಅವರು ದತ್ತಿ ಕಾರ್ಯಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು, ವಿಶೇಷವಾಗಿ ಎನ್ ಎ ಹ್ಯಾರಿಸ್ ಪ್ರತಿಷ್ಠಾನದ ಮೂಲಕ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಿದರು ಮತ್ತು ಉದ್ಯೋಗ ಮೇಳಗಳನ್ನು ಆಯೋಜಿಸಿದರು.[೪]
ಅವರು ೨೦೧೩ ರಲ್ಲಿ ಮರು ಆಯ್ಕೆಯಾದರು, ೨೦೧೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ೧೯,೦೦೦ ಮತಗಳ ಅಂತರದಿಂದ ಗೆದ್ದರು.[೫][೪] ಅವರು ೨೦೧೮ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮರು ಆಯ್ಕೆಯಾದರು.
೨೦೧೭ ರಲ್ಲಿ, ಹ್ಯಾರಿಸ್ ಅವರ ೨೮ ವರ್ಷದ ಮಗ ಮೊಹಮ್ಮದ್ ನಲಪಾಡ್ ಅವರನ್ನು ಬೆಂಗಳೂರು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.[೪][೬]
ಎಐಎಫ್‍ಎಫ್
[ಬದಲಾಯಿಸಿ]೧ ಸೆಪ್ಟೆಂಬರ್ ೨೦೨೨ ರಂದು, ಹ್ಯಾರಿಸ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‍ಎಫ್)ನ ಉಪಾಧ್ಯಕ್ಷರಾಗಿ ಆಯ್ಕೆಯಾದರು.[೭][೮][೯]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "N.A.Haris,52nd birthday celebration with school students". YouTube.
- ↑ "Shanthinagar is home to shanties and malls | Bengaluru News – Times of India". Timesofindia.indiatimes.com. 2013-04-24. Retrieved 2018-02-23.
- ↑ "BMTC chairman says there will be no hike in bus fares". The New Indian Express. Archived from the original on 19 January 2019. Retrieved 2020-02-12.
- ↑ ೪.೦ ೪.೧ ೪.೨ ೪.೩ ೪.೪ ೪.೫ "The origins of the Nalapad family, their meteoric rise and the arrogant present". News Minute. March 26, 2018.
- ↑ "Karnataka Assembly Elections: Live updates". The Hindu. 8 May 2013. Retrieved 2018-02-23.
- ↑ "Pub assault case: Karnataka HC dismisses bail plea of Congress MLA's son Mohammed Nalapad". India Today (in ಇಂಗ್ಲಿಷ್). Retrieved 2018-05-12.
- ↑ Sports Desk, FPJ (2 September 2022). "Former goalkeeper Kalyan Chaubey appointed new AIFF President". www.freepressjournal.com. The Free Press Journal. Archived from the original on 4 September 2022. Retrieved 4 September 2022.
- ↑ "List of AIFF executive committee members & co-opted eminent players". khelnow.com. Khel Now. 2 September 2022. Archived from the original on 4 September 2022. Retrieved 2 September 2022.
- ↑ Media Team, AIFF (3 September 2022). "AIFF Executive Committee appoints Shaji Prabhakaran as new Secretary General". www.the-aiff.com (in ಇಂಗ್ಲಿಷ್). New Delhi: All India Football Federation. Archived from the original on 4 September 2022. Retrieved 4 September 2022.