ವಿಷಯಕ್ಕೆ ಹೋಗು

ಎಪ್ಸಮ್ ಲವಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯೂ ಮೆಕ್ಸಿಕೋದ ಒಂದು ಗುಹೆಯಲ್ಲಿ ಎಪ್ಸಮೈಟ್ ರಚನೆ

ಎಪ್ಸಮ್ ಲವಣವು ನೈಸರ್ಗಿಕವಾಗಿ ದೊರೆಯುವ ಮೆಗ್ನೀಸಿಯಂ ಸಲ್ಫೇಟ್, MgSO4.7H2O. ಎಪ್ಸಮೈಟ್ ಪರ್ಯಾಯನಾಮ. ಇಂಗ್ಲೆಂಡಿನ ಸರ‍್ರೆ ಜಿಲ್ಲೆಯಲ್ಲಿ, ಲಂಡನ್ನಿಗೆ ನೈಋತ್ಯದಲ್ಲಿ ಹದಿನೈದು ಮೈಲಿ ದೂರದಲ್ಲಿರುವ, ಖನಿಜಯುಕ್ತ ಚಿಲುಮೆಗಳಿಗೆ ಹೆಸರಾದ ಎಪ್ಸಮ್ ಎಂಬ ಸ್ಥಳದಿಂದ ಈ ಹೆಸರು.[೧][೨][೩] ಈಗ ಕೃತಕವಾಗಿ ತಯಾರಿಸಿದ ಮೆಗ್ನೀಸಿಯಂ ಸಲ್ಫೇಟಿಗೂ ಈ ಹೆಸರು ಬಳಸುವುದುಂಟು.

ಗುಣಗಳು[ಬದಲಾಯಿಸಿ]

ಎಪ್ಸಮೈಟ್‌ನ ಹರಳು ರಚನೆ

ನೈಸರ್ಗಿಕವಾಗಿ ದೊರೆಯುವ ಎಪ್ಸಮ್ ಲವಣದ ಹರಳುಗಳು ಆರ್ಥೋರಾಂಬಿಕ್ ವರ್ಗಕ್ಕೆ ಸೇರಿದ್ದು ಸೂಜಿಯ ಆಕಾರದಲ್ಲಿರುತ್ತವೆ. ಕೆಲವು ವೇಳೆ ಬಹುದೊಡ್ಡ ಹರಳುಗಳು ಸಿಕ್ಕಿದೆ. ವಾಷಿಂಗ್ಟನ್ ಪ್ರಾಂತ್ಯದ ಆರ್ವಿಲ್ ಬಳಿ ಇರುವ ಕ್ರೂಗರ್ ಪರ್ವತದಲ್ಲಿ ದೊರೆತ ಹರಳುಗಳು ಹಲವಾರು ಅಡಿ ಉದ್ದ ಇದ್ದುವೆಂದು ವರದಿ. ಎಪ್ಸಮ್ ಹರಳಿನ ಬಣ್ಣ ರೇಷ್ಮೆಯಂತೆ ಮಾಸಲು ಬಿಳುಪು. ಸುಲಭವಾಗಿ ನೀರಿನಲ್ಲಿ ಕರಗುತ್ತದೆ, ರುಚಿ ಬಲು ಕಹಿ.

ತಯಾರಿಕೆ ಮತ್ತು ಉಪಯೋಗಗಳು[ಬದಲಾಯಿಸಿ]

ನಿಸರ್ಗದಲ್ಲಿ ದೊರೆಯುವ ಮ್ಯಾಗ್ನಸೈಟ್ ಅಥವಾ ಡಾಲಮೈಟ್ ಖನಿಜವನ್ನು ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಿಸಿ ಮೆಗ್ನೀಸಿಯಂ ಸಲ್ಫೇಟನ್ನು ಕೃತಕವಾಗಿ ತಯಾರಿಸುತ್ತಾರೆ. ಇದನ್ನು ಭೇದಿ ಉಪ್ಪು ಎಂಬ ಹೆಸರಿನಲ್ಲಿ ಔಷಧಿಯಾಗಿ ಬಳಸುವುದಲ್ಲದೆ ಚರ್ಮ ಹದಮಾಡುವುದರಲ್ಲೂ ಬಟ್ಟೆಗಳಿಗೆ ಬಣ್ಣಹಾಕುವುದು ಮತ್ತು ಬಟ್ಟೆ ಮುದ್ರಣದಲ್ಲೂ ಉಪಯೋಗಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: