ವಿಷಯಕ್ಕೆ ಹೋಗು

ಎರಾಳೆ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜಿರೇಟಮ್
Tropical Whiteweed (Ageratum conyzoides)
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Ageratum

L. 1753 not Mill. 1754 (Plantaginaceae)[]

ಎರಾಳೆ ಗಿಡ ಅಥವಾ ಅಜಿರೇಟಮ್ ಈ ಕುಲದ ಸಸ್ಯಗಳ ಹೂವು ದೀರ್ಘಕಾಲ ಲವಲವಿಕೆಯಾಗಿ ಉಳಿದಿರುವುದರಿಂದ ಈ ಹೆಸರು ಬಂದಿದೆ. ಇದು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯುವುದಾದ್ದರಿಂದ ಉದ್ಯಾನಗಾರಿಕೆಯಲ್ಲಿ ಜನಪ್ರಿಯತೆಗಳಿಸಿದೆ. ಇವುಗಳನ್ನು ಅಂಚು ಸಸ್ಯ, ಮಡಿ ಸಸ್ಯ ಮತ್ತು ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಹೂಗೊಂಚಲುಗಳು ಬಿಳುಪು ಮತ್ತು ನೀಲಿ ಬಣ್ಣಗಳಲ್ಲಿ, ಆಕರ್ಷಕ ಆಕಾರಗಳಲ್ಲಿರುತ್ತವೆ.

ಪ್ರಭೇದಗಳು

[ಬದಲಾಯಿಸಿ]

ಅಜಿರೇಟಮ್ ಜಾತಿಯಲ್ಲಿ ಸುಮಾರು 30ಕ್ಕೂ ಹೆಚ್ಚು 2' ಬೆಳೆಯುವ ಏಕಋತುವಿನ ವರ್ಣಸಸಿ ಪ್ರಭೇದಗಳಿವೆ.

ಲಕ್ಷಣಗಳು

[ಬದಲಾಯಿಸಿ]
Bluemink (Ageratum houstonianum)

ಎಲೆಗಳು ಅಭಿಮುಖರಚನೆಯನ್ನು ಹೊಂದಿದ್ದು ಕರನೆಯಾಕಾರದಲ್ಲಿರುವ ಅವುಗಳ ಗರಗಸದಂಥ ಅಂಚು ಗುಂಡಾದ ಹಲ್ಲುಗಳಾಗಿ ಒಡೆದಿದೆ. ಪ್ರತಿಗೊಂಚಲಲ್ಲೂ ಅನೇಕ ಚೆಂಡುಗಳಿರುತ್ತವೆ. ಚಪ್ಪಟೆಯಾಗಿರುವ ಹೂದಿಂಡಿನ ಮೇಲೆ ಅಸಂಖ್ಯಾತ ಪ್ರತ್ಯೇಕಲಿಂಗ ಅಥವಾ ದ್ವಿಲಿಂಗ ಪುಷ್ಪಗಳು ಇರುತ್ತವೆ. ಬಿಡಿ ಹೂಗಳು ಕಿರಿದಾದ ಕೊಳವೆಯಾಕಾರದ ಬಿಳುಪು ಅಥವಾ ನೀಲಿ ಬಣ್ಣದಾಗಿರುತ್ತವೆ; ಪುಷ್ಪಪತ್ರಗಳಿಂದ ಆವೃತವಾಗಿರುತ್ತವೆ, ಹಣ್ಣು ಒಂದು ಬೀಜದ ಅಕೆನ್ ಮಾದರಿಯದು. ಇದನ್ನು ಐದು ಕೋಣೆಗಳ ಹೂ ತೊಟ್ಟು ಆವರಿಸಿರುತ್ತದೆ.

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಅಜಿರೇಟಮ್ ಸಸ್ಯವನ್ನು ಸುಲಭವಾಗಿ ಬೀಜಗಳಿಂದ ವೃದ್ಧಿ ಮಾಡಬಹುದು. ಬೀಜಗಳನ್ನು ನೇರವಾಗಿ ಸಸಿ ನೆಡುವ ಸ್ಥಳಗಳಲ್ಲೊ, ಮೊಳಕೆ ಕುಂಡಗಳಲ್ಲೊ ಚೆಲ್ಲಿ ಸಸ್ಯಗಳನ್ನು ಬೆಳೆಸಬಹುದು. ಮಳೆಗಾಲದ ಮತ್ತು ಚಳಿಗಾಲದ ವಾರ್ಷಿಕ ಹೂ ಬಿಡುವುದಾದರೂ ಈ ಸಸ್ಯವನ್ನು ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಬಿತ್ತನೆ ಮಾಡಿದ 4-5 ದಿನಗಳಲ್ಲಿ ಪೂರ್ತಿಯಾಗಿ ಬೆಳೆಯುತ್ತದೆ. 20 ದಿನಗಳ ಅನಂತರ, ಬೇರುಬಿಟ್ಟು ನೆಡಲು ಸಿದ್ಧವಾಗುತ್ತದೆ. ಸಸಿ ನೆಟ್ಟ 10 ದಿನಗಳ ಅನಂತರ ಮೇಲುಗೊಬ್ಬರ ಕೊಡಬೇಕು. ತಳಭಾಗದಲ್ಲಿರುವ ಬಲಿತ ಹಳದಿಬಣ್ಣದ ಎಲೆಗಳನ್ನು ಕ್ರಮವಾಗಿ ತೆಗೆಯುತ್ತಿದ್ದರೆ ಒಳ್ಳೆಯದು. ಸಸಿ ನೆಟ್ಟ ಒಂದೂವರೆ ತಿಂಗಳಿಗೆ ಹೂಗಳು ಅರಳುತ್ತವೆ. ಸಸ್ಯಗಳು ಎತ್ತರವಾಗಿ ಬೆಳೆದು ನೆಲದ ಮೇಲೆ ಮಲಗುವಂತಿದ್ದರೆ, ಸುತ್ತಲೂ ಬಿದಿರು ಕಡ್ಡಿಗಳನ್ನು ಸಿಕ್ಕಿಸಿ ದಾರದಿಂದ ಕಟ್ಟಬೇಕು. ಮೊದಲು ಅರಳಿದ ಹೂಗಳನ್ನು ತೆಗೆದು ಹಾಕುವುದರಿಂದ ಹೆಚ್ಚಿನ ಹೊಸ ಹೂಗೊಂಚಲು ಬರುತ್ತದೆ. ಸಸಿ ನೆಟ್ಟ ಎರಡೂವರೆ ತಿಂಗಳ ಅನಂತರ ಬೀಜ ಬಿಡಿಸಲು ಪ್ರಾರಂಭಿಸಬೇಕು. ಸಸ್ಯದ ಜೀವಾವಧಿ ಸುಮಾರು ಮೂರೂವರೆ ತಿಂಗಳು.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: