ಎಲಿಜಬೆತ್ ಗ್ರಿಮ್‌ಸ್ಟನ್
ಎಲಿಜಬೆತ್ ಗ್ರಿಮ್ ಸ್ಟನ್ | |
---|---|
Born | ಎಲಿಜಬೆತ್ ಗ್ರಿಮ್ ಸ್ಟನ್ 16thcentury ಪಿಂಗಮ್, ಇಂಗ್ಲೆಂಡ್ |
Spouse | ಕ್ರಿಷ್ಟೋಪರ್ |
ಜೀವನ
[ಬದಲಾಯಿಸಿ]ಎಲಿಜಬೆತ್ ಗ್ರಿಮ್ ಸ್ಟನ್ ರವರು ನಾರ್ತ್ ಈರ್ ಪಿಂಗಮ್, ಇಂಗ್ಲೆಂಡ್ ನಲ್ಲಿ ಜನಿಸಿದರು.ಆಕೆ [೧]ತನ್ನ ಕುಟುಂಬದಲ್ಲಿ ಐದನೇಯವಳು ಹಾಗೂ ಅವಳಿಗಿಂತ ಚಿಕ್ಕವಳು ಮಾರ್ಗರೇಟ್. ಎಲಿಜಬೆತ್ ರವರ ತಂದೆಯೂ ಲಾಯರ್ ಆಗಿದ್ದರು ಹಾಗೂ ಹೆಚ್ಚಿನ ಜಮೀನನ್ನು ಗನ್ ಟನ್, ನಾಫೋಲ್ಕ್,ಜೋತೆಗೆ ಗನ್ ಟನ್ ಹಾಲ್ ಮತ್ತು ಸೆಂಟ್.ಆಂಡ್ರಿವ್ಸ್ ಚರ್ಚ್ ಗನ್ ಟನ್ ಹಾಲ್ ನಲ್ಲಿ ಹೊಂದಿದ್ದರು.ಆಕೆಯೂ ಕ್ರಿಷ್ಟೋಪರ್ ನನ್ನು ಮದುವೆಯಾಗಿದ್ದಳು, ಆತ ಥಾಮಸ್ ಗ್ರಿಮ್ ಸ್ಟನ್ ರವರ ಕಿರಿಯ ಮಗನಾಗಿದ್ದನು,ಅವರು ಯಾರ್ಕ್ ಕೈರ್ ನ ಗ್ರಿಮ್ ಸ್ಟನ್ ನ ವಾಸಿಯಾಗಿದ್ದರು.ಆಕೆಯ ವೈವಾಹಿಕ ಜೀವನವು ಅಷ್ಟೇನು ಸಂತೋಷದಾಯಕವಾಗಿರಲಿಲ್ಲ. ಆಕೆಯ ತಾಯಿಯ ಕ್ರೂರತೆ ಅದಕ್ಕೆ ಕಾರಣವಾಗಿತ್ತು. ಆಕೆಯು ತನ್ನ ಜೀವನವನ್ನು ವರ್ಣಿಸುವಂತೆ " ಬದುಕಿದ್ದು ಸತ್ತ ಮಹಿಳೆಯಾಗಿದ್ದಳು" ಆಕೆ ಯಾವುದೇ ಫಲ ನೀಡದ ಬರಡು ನೆಲದಲ್ಲಿರುವಂತೆ ಇರುವ ತನ್ನ ಮೆದಳನ್ನು ಮುರಿಯಲು ಇಚ್ಚಿಸಿದಳು.ಆಕೆ ನೈತಿಕ ಮಾರ್ಗದರ್ಶಿ ಪುಸ್ತಕವನ್ನು ತನ್ನ ಮಗ ಬೆರ್ರಿನಿ ಗ್ರಿಮ್ ಸ್ಟನ್ ಮಾತ್ರ ಬದುಕುಳಿದಿದ್ದ. ಆಕೆಯು ೧೬೦೩ ರಲ್ಲಿ ತನ್ನ ಪುಸ್ತಕವನ್ನು ಪ್ರಕಟಿಸುವ ಮುನ್ನವೇ ನಿಧನಳಾದಳು.ಅದು ಮಿಸಲೇನಿಯಾ, ಮೆಡಿಟೇಶನ್ಸ್,ಮೆಮೋರೇಟಿವ್ಸ್,ಎಲಿಜಬೆತ್ ಗ್ರಿಮ್ ಸ್ಟನ್, ಲಂಡನ್ ೧೬೦೪ ರಲ್ಲಿ ಪ್ರಕಟವಾಗಿದೆ.[೨][೩][೪]
ವೈವಾಹಿಕ ಜೀವನ
[ಬದಲಾಯಿಸಿ]೧೫೮೪ ರಲ್ಲಿ ಎಲಿಜಬೆತ್ ರವರು ೨೧ ನೆಯ ವಯಸ್ಸಿನಲ್ಲಿ ಕ್ರಿಸ್ಟೋಫರ್ ಗ್ರಿಮ್ ಸ್ಟನ್ ನನ್ನು ಮದುವೆಯಾದಳು.ಕ್ರಿಸ್ಟೋಪರ್ ಗ್ರಿಮ್ ಸ್ಟನ್ ತನ್ನ ೧೪ ನೆಯ ವಯಸ್ಸಿನಲ್ಲಿ ೧೭ ಡಿಸಂಬರ್ ೧೫೭೮ ರಲ್ಲಿ ಕೇಂಬ್ರಿಡ್ಜ್ ನ ಕಾಲೇಜಿನಲ್ಲಿ ಪೆನ್ ಷನರ್ ಆಗಿ ಸೇರಿಕೊಂಡಿದ್ದರು.ಕ್ರಿಸ್ಟೋಪರ್ ೧೫೮೨-೮೩ ಬ್ಯಾಚುಲರ್ಸ್ ಪಡೆದರು.೧೫೮೪ ಶಾಲೆಯಲ್ಲಿ ಸಾಮಾನ್ಯ ರೀತಿಯ ಸೇವೆಮಾಡಿದರು.ಅನಂತರ ತನ್ನ ಮಾಸ್ಟರ್ ೧೫೮೬ ರಲ್ಲಿ ಪಡೆದರು. ಅವರು ಕಾಲೇಜಿನಲ್ಲಿ ಸಹವರ್ತಿಯಾದರು.೧೫೮೮ ಬುಗ್ ಸರ್ ಕಚೇರಿಯನ್ನು ಪಡೆದರು.ಕ್ರಿಸ್ಟೋಪರ್ ರರು ಕಾಲೇಜಿನ ಯಶಸ್ವಿಯಾಗಿದ್ದಾಗೂ ಎಲಿಜಬೆತ್ ಒಂದಿಗೆ ಅವರ ಮದುವೆ ಪಾತ್ರಯಲ್ಲಿ ಅವನ್ನು ದಂಡ ತೆರಬೇಕಾಯಿತು.ಕಾಲೇಜಿನಲ್ಲಿ ನಿವಾಸವು ಎಲ್ಲಾ ಫೆಲೋಗಲಲ್ಲೂ ವಿಶೇಷವಾಗಿ ಬರ್ಸರ್ ಕಛೇರಿಗೆ ಅಗತ್ಯವಾಗಿತ್ತು.ಈ ಅವಶ್ಯಕತೆಗಳನ್ನು ಕ್ರಿಸ್ಟೋಫರ್ ಎತ್ತಿಹಿಡಿದಿದ್ದಾನೆ ಮತ್ತು ಶಾಲೆಯಲ್ಲಿ ಒಬ್ಬ ಸಹಯೋಗಿಯಾಗಿರುವ ಅವನ ದೀರ್ಘಕಾಲದ ಸ್ಥಳ ಎಲಿಜಬೆತ್ ನೊಂದಿಗೆ ಅವರ ಮದುವೆಯು ಸುಮಾರು ಹತ್ತು ವರ್ಷಗಳ ಕಾಲ ರಹಸ್ಯವಾಗಿರಿಸಲ್ಪಟ್ಟಿತು.ಮದುವೆಯಲ್ಲಿನ ತೊಂದರೆಗಳು ಹಾಗೂ ಅವರ ಸಂಪೂರ್ಣ ಸಂಬಂದವನ್ನು ಶಾಲೆಯಿಂದ ರಹಸ್ಯವಾಗಿರಿಸಲಾಗಿತ್ತು .ಕ್ರಿಸ್ಟೋಫರ್ ಲಂಡನ್ನ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ೧೫೯೨ ರ ಜನವರಿ ೨೧ ರಂದು ಗ್ರೇಸ್ ಇನ್ ಅನ್ನು ಸೇರಿದರು.ದಂಪತಿಯ ಗುಪ್ತ ಸಂಬಂಧ ಎಲಿಜಬೆತ್ ಮತ್ತು ಕ್ರಿಸ್ಟೋಫರ್ ತಮ್ಮ ಮದುವೆಯ ಸಮಯದಲ್ಲಿ ಹೆಣಗಾಡಿದ ಏಕೈಕ ಹಗರಣವಲ್ಲ.ತನ್ನ ತಾಯಿಯ ಕ್ರೋಧದಿಂದ ಬಳಲುತ್ತಿದ್ದಾಳೆಂದು ಬಹಿರಂಗಪಡಿಸಿದಳು ಮತ್ತು ಅವಳ ಪತಿಯ ಜೀವನಕ್ಕೆ ಭಯಪಟ್ಟರು ,ಕ್ರಿಸ್ಟೋಫರ್ ಹಲವಾರು ಪ್ರಯತ್ನಗಳ ಹಿಂಸೆಗೆ ಬೆದರಿಕೆ ಹಾಕಿದ್ದಾಳೆಂದು ತಿಳಿಸಿದರು.ಎಲಿಜಬೆತ್ ಪುಸ್ತಕದ ಏಕೈಕ ಉದ್ದೇಶವೆಂದರೇ,ತನ್ನ ಮಗನಿಗೆ ಸಲಹೆ ನೀಡುವುದು,ಅವನು ಸರಿಯಾದ,ಧಾರ್ಮಿಕ ವ್ಯಕ್ತಿಯಾಗಿ ಹೇಗೆ ಬದುಕಬೇಕು ಎಂದು ಅವನಿಗೆ ಕಲಿಸುವುದು ಮುಖ್ಯಗುರಿಯಾಗಿತ್ತು.ಎಲಿಜಬೆತ್ ಮತ್ತು ಕ್ರಿಸ್ಟೋಫರ್ ಅವರ ನಂಬಿಕೆಗಳು ಕಲಹ ಮತ್ತು ಉದ್ವೇಗಕ್ಕೆ ಕಾರಣವಾಗಿದ್ದವು ಮತ್ತು ಅವಳ ತಾಯಿಯೊಂದಿಗೆ ವಿವಾದಗಳಿಗೆ ಕಾರಣವಾಗಬಹುದು. ಎಲಿಜಬೆತ್ ಮತ್ತು ಅವಳ ಪತಿ ಇಬ್ಬರೂ ಹಿಂದುಳಿದವರಾಗಿದ್ದಾರೆ-ಚರ್ಚ್ ಆಫ್ ಇಂಗ್ಲೆಂಡ್ನಲ್ಲಿ ಕ್ಯಾಥೋಲಿಕ್ ಪ್ರವೃತಿಯನ್ನು ಆಯ್ಕೆ ಮಾದಿದವರು.ತನ್ನ ಪುಸ್ತಕದಲ್ಲಿ , ಎಲಿಜಬೆತ್ ಕ್ಯಥೊಲಿಕ್ ಪ್ರೇರಿತ ಪಠ್ಯಕ್ರಮವನ್ನು ತನ್ನ ಮಗನಿಗೆ ಕಲಿಸಲು ಬಳಸುತ್ತಾಳೆ.ಅವರ ಕೃತಿಗಳಿಗೆ ಸ್ಫೂರ್ತಿ ನೀಡಿದ ಕವಿತೆಗಳು ಮತ್ತು ಬೋಧನೆಗಳು ಕ್ಯಾಥೋಳೀಖ್ ಸಂಪ್ರದಾಯದಿಂದ ಬಂದವು.
ಕೆಲಸ
[ಬದಲಾಯಿಸಿ]ಎಲಿಜಬೆತ್ ರವರ ಏಕೈಕ ಕೃತಿ,ಮೀಸಲೇನಿಯ,ಧ್ಯಾನ,ಸ್ಮರಣಾರ್ಥ ಇವು ೧೬೦೪ ರಲ್ಲಿ ಅವರ ಮರಣದನಂತರ ಬಿಡುಗಡೆಯಾಯಿತು. ಮೀಸಲೇನಿಯ ಪುಸ್ತಕದಲ್ಲಿ ತನ್ನ ಮಗನ ಬೆರ್ರಿಯ ಏಳಿಗೆಯ ಮಾರ್ಗದರ್ಶನಕ್ಕಾಗಿ ತನ್ನ ಸಾವಿಗೂ ಮುಂಚೆ ಬೆರೆದಿದ್ದಾಳೆ. ಎಲಿಜಬೆತ್ ತನ್ನ ಮಗ ಮತ್ತು ಅವಳ ಓದುಗರಿಗೆ ನೇರತೆ ಮತ್ತು ಸರಳತೆಗಳಿಂದ ಕಾಂಕ್ರೀಟ್ ಚಿತ್ರಗಳನ್ನು ಮತ್ತು ಅನೇಕ ಮಾಹಿತಿಗಳನ್ನು ತನ್ನ ಉದ್ದೇಶಕಾಗಿ ಮಾರ್ಪಡಿಸಿಕೊಂಡು ಅಳವಡಿಸಿ ಕೊಂಡಿದ್ದಳು.ಆ ಪುಸ್ತಕವನ್ನು ಹದಿನಾಲ್ಕು ಅಧ್ಯಾಯಗಳಾಗಿ ವಿಭಾಗಿಸಲಾಗಿದೆ.ಇದರಲ್ಲಿ ಹೆಚ್ಚಾಗಿ ಧಾರ್ಮಿಕ ವಿಷಯಗಳ ಬಗ್ಗೆ ಸಂಕ್ಷಿಪ್ತ ಪ್ರಬಂಧಗಳಾಗಿವೆ.
ಮರಣ
[ಬದಲಾಯಿಸಿ]ಎಲಿಜಬೆತ್ ಗ್ರಿಮ್ ಸ್ಟನ್ ರವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.ಆದರೆ ೧೬೦೪ ರಲ್ಲಿ ಅವರ ಪುಸ್ತಕ ಪ್ರಕಟಿಸಿದಾಗ ಅವರು ಜೀವಂತವಾಗಿರಲಿಲ್ಲ.೧೬೦೨,೧೬೦೩ ರಲ್ಲಿ ಅವರು ಬಹುಮಟ್ಟಗೆ ನಿಧನರಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ https://sites.google.com/site/16thcenturybritishliterature/home/.../elizabeth-grymeston
- ↑ https://www.primoquotes.com/author/Elizabeth+Grimston
- ↑ greatthoughtstreasury.com/author/elizabeth-grymeston-or-grimston
- ↑ https://en.wikipedia.org/wiki/Elizabeth_Grimston