ಎಲ್ ಸಿ ಡಿ ಮತ್ತು ಎಲ್ ಇ ಡಿ ಟಿವಿ
ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ (ಎಲ್‌ಸಿಡಿ)- ದೂರದರ್ಶನ ಯಂತ್ರ, (ಟಿ ವಿ)
[ಬದಲಾಯಿಸಿ]ಈ ಪ್ರಕಾರದ ಟಿ.ವಿ. ಗಳು ಎಲ್ ಸಿ ಡಿ ಪ್ರದರ್ಶಕ ಎಂಬ ತಂತ್ರಜ್ಙಾನವನ್ನು ಚಿತ್ರಗಳ ಪ್ರಸರಣಕ್ಕೆ ಬಳಸಿಕೊಳ್ಳುತ್ತದೆ. ಇವುಗಳು ಕ್ಯಾಥೋಡ್ ರೆ ಟಿ ವಿ (CRT) ಗಳಿಗೆ ಹೋಲಿಸಿದರೆ ತೆಳುವಾಗಿಯೂ, ಕಡಿಮೆ ತೂಕದವುಗಳೂ ಆಗಿರುತ್ತವೆ. ಇವುಗಳ ಪ್ರದರ್ಶಕ ತೆರೆಗಳ (Display Screen) ಗಾತ್ರವೂ ದೊಡ್ಡದಿರುತ್ತದೆ. ೨೦೦೭ ನೇ ಇಸವಿಯನಂತರ ಈ ರೀತಿಯ ಟಿವಿ ಗಳ ಜನಪ್ರಿಯತೆ ಹೆಚ್ಹಾಯಿತು.
ಎಲ್ ಇ ಡಿ - ಲೈಟ್ ಎಮಿಟಿಂಗ್ ಡಯೋಡ್ ಟಿ ವಿ
[ಬದಲಾಯಿಸಿ]ಇವುಗಳೂ ಕೂಡಾ ಎಲ್ ಸಿ ಡಿ ಟಿ ವಿ ಗಳೇ ಆದರೆ ಇವುಗಳು ಎಲ್ ಇ ಡಿ ಯನ್ನು ಬೆಳಕಿನ ಪ್ರಸರಣಕ್ಕಾಗಿ ಬಳಸಿಕೊಳ್ಳುತ್ತದೆ.
ತಂತ್ರಜ್ಙಾನ
[ಬದಲಾಯಿಸಿ]ಎಲ್ ಸಿ ಡಿ ಟಿವಿ ಗಳು ಹಿಂಭಾಗದಲ್ಲಿ ಅಳವಡಿಸಿರುವ ಕೋಲ್ಡ್ ಕ್ಯಾಥೊಡ್ ಪ್ಲೊರೋಸೆಂಟ್ ಲ್ಯಾಂಪ್ (CCFL) ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ. ಎಲ್ ಇ ಡಿ ಟಿವಿ ಗಳು ತೆರೆಯ ಸುತ್ತಾ ಇರುವ ಹಲಗೆ (ಪ್ಯಾನೆಲ್) ಯಲ್ಲಿ ಅಳವಡಿಸಿರುವ ಲೈಟ್ ಎಮಿಟಿಂಗ್ ಡಯೋಡ್ ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ. ಇದರಿಂದಾಗಿ ಈ ಪ್ರಕಾರದ ಟಿವಿ ಗಳು ಎಲ್ ಸಿ ಡಿ ಟಿವಿ ಗಳಿಗಿಂತ ತೆಳ್ಳಗಿರುತ್ತವೆ.
ಎಲ್ ಸಿ ಡಿ ಯ ತುಲನೆಯಲ್ಲಿ ಎಲ್ ಇ ಡಿ ಯ ವೈಶಿಷ್ಟ್ಯ ಗಳು
[ಬದಲಾಯಿಸಿ]- ಇವುಗಳು ತೆಳುವಾಗಿರುತ್ತವೆ - ಚಿತ್ರಗಳ ಪ್ರಖರತೆ ಹೆಚ್ಚು - ಉತ್ತಮ ವೀಕ್ಷಿಸುವ ಕೋನ - ಬಾಳಿಕೆ ಹೆಚ್ಚು - ಕಡಿಮೆ ವಿದ್ಯುತ್ ಬಳಕೆ.
ಪರಾಮರ್ಶಿಸಿದ ಕೊಂಡಿಗಳು
[ಬದಲಾಯಿಸಿ]http://www.gizmag.com/what-is-an-led-tv/13099/
http://tv.about.com/od/frequentlyaskedquestions/f/LEDvsLCDtvs.htm