ವಿಷಯಕ್ಕೆ ಹೋಗು

ಎ. ಕೆ. ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಎ.ಕೆ.ಶಾಸ್ತ್ರಿ (ಅನಂತ ಕೃಷ್ಣ ಶಾಸ್ತ್ರಿ)
Bornಮಾರ್ಚ್ ೧೭, ೧೯೪೦
ಸಿರ್ಸಿ, ಉತ್ತರ ಕನ್ನಡ ಜಿಲ್ಲೆ
Diedಜನವರಿ ೦೪, ೨೦೨೦
ಸಿರ್ಸಿ, ಉತ್ತರ ಕನ್ನಡ ಜಿಲ್ಲೆ
Nationalityಭಾರತೀಯ
Other namesಕಡತ ಶಾಸ್ತ್ರಿ
Occupationಇತಿಹಾಸ ಪ್ರಾಧ್ಯಾಪಕ
Known forಇತಿಹಾಸ ಪುಸ್ತಕಗಳ ರಚನೆ, ಕಡತಗಳ ಸಂಶೋಧನೆ

ಡಾ.ಎ.ಕೆ.ಶಾಸ್ತ್ರಿ (ಅನಂತ ಕೃಷ್ಣ ಶಾಸ್ತ್ರಿ)ಯವರು (೧೭ ಮಾರ್ಚ್ ೧೯೪೦ - ೦೪ ಜನವರಿ ೨೦೨೦) ಕರ್ನಾಟಕದ ಹಿರಿಯ ಇತಿಹಾಸತಜ್ಞರು.[][][][] ಕರ್ನಾಟಕದ ಇತಿಹಾಸ ಪ್ರಪಂಚದಲ್ಲಿ ಬಹುಮುಖ ಸಂಶೋಧನಾ ಕಾರ್ಯ ಮಾಡಿದ ವಿದ್ವಾಂಸರ ಪರಂಪರೆಯ ಪ್ರಮುಖರಲ್ಲೊಬ್ಬರು. ಸಾಂಸ್ಕೃತಿಕ ಇತಿಹಾಸದ ರಚನೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದವರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವು ಇತಿಹಾಸ ಸಂಬಂಧಿತ ಗ್ರಂಥಗಳನ್ನು ರಚಿಸಿದ್ದಾರೆ. ಇತಿಹಾಸ ಸಂರಚನೆಯಲ್ಲಿ ಕಡತಗಳು ಬಹುಮುಖ್ಯ ಆಕರ ಸಾಮಗ್ರಿಯಾಗುವುದನ್ನು ತಮ್ಮ ಸಂಶೋಧನೆಗಳಲ್ಲಿ ಅಳವಡಿಸಿ ತೋರಿಸಿಕೊಟ್ಟಿರುವುದಲ್ಲದೇ ಕಡತಗಳ ಬೃಹತ್ ಸಂಪುಟಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ[]. 'ಕರ್ನಾಟಕದ ಕಡತಗಳ ವಿದ್ವಾಂಸ'ರೆಂದು, "ಕರ್ನಾಟಕದ ಕಡತ ಶಾಸ್ತ್ರಿ"[] ಎಂದು ಖ್ಯಾತರಾಗಿದ್ದಾರೆ[]. ಶೃಂಗೇರಿ, ಸ್ವರ್ಣವಲ್ಲಿ, ಚಿತ್ರಾಪುರ, ಗೋಕರ್ಣ, ಇಡಗುಂಜಿ, ಬನವಾಸಿ, ಮಂಜುಗುಣಿ ಮತ್ತು ದಕ್ಷಿಣೋತ್ತರ ಜಿಲ್ಲೆಗಳಲ್ಲಿಯ ಕಡತ, ಕಾಗದಪತ್ರ ಮತ್ತು ತಾಡೋಲೆಗಳಲ್ಲಿ ಉಲ್ಲೇಖವಾದ ಕನ್ನಡ ಮೋಡಿಲಿಪಿಯ ಸಹಸ್ರಾರು ಚಾರಿತ್ರಿಕ ದಾಖಲೆಗಳನ್ನು ಅಧ್ಯಯನ ಮಾಡಿ ಈ ಸ್ಥಳಗಳ ಚರಿತ್ರೆಯನ್ನು ಗ್ರಂಥಗಳ ಮೂಲಕ ಬೆಳಕಿಗೆ ತಂದಿದ್ದಾರೆ. ಶೃಂಗೇರಿ ಧರ್ಮಸಂಸ್ಥಾನದಲ್ಲಿರುವ ಲಕ್ಷದಷ್ಟು ಕಡತಗಳನ್ನು ಶೋಧಿಸಿ ಪರಿಶೀಲಿಸಿ ಅವುಗಳ ಐತಿಹಾಸಿಕ ವರ್ಗೀಕರಣ ನಡೆಸಿ ಕಡತಗಳ ಆಕರ ಸಂಪುಟಗಳನ್ನು ರಚಿಸಿದ ಹಿರಿಮೆ ಶಾಸ್ತ್ರಿಗಳದ್ದು. ರಾಜ್ಯ ಮತ್ತು ರಾಷ್ಟ್ರಮಟ್ಟದ ಇತಿಹಾಸ ಗೋಷ್ಠಿಗಳಿಗೆ ಅಧ್ಯಕ್ಷರಾಗಿ ಮತ್ತು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಸಂಶೋಧನಾ ಕಾರ್ಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೬೪ರಿಂದ ೧೯೯೮ವರೆಗೆ ಸಿರ್ಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಮಾರ್ಚ್ ೧೭, ೧೯೪೦ರಂದು ಉತ್ತರ ಕನ್ನಡ ಜಿಲ್ಲೆಸಿರ್ಸಿಯಲ್ಲಿ ಜನನ. ಸಿರ್ಸಿ ಮತ್ತು ಧಾರವಾಡ ಊರುಗಳಲ್ಲಿ ವಿದ್ಯಾಭ್ಯಾಸ ಮತ್ತು ವೃತ್ತಿಜೀವನ.

ಕೃತಿ/ಸಂಶೋಧನೆ ವರ್ಗೀಕರಣ

[ಬದಲಾಯಿಸಿ]

ಎ.ಕೆ.ಶಾಸ್ತ್ರಿಯವರ ಗ್ರಂಥಲೇಖನ ಹಾಗೂ ಸಮಗ್ರ ಸಂಶೋಧನೆಯನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.

  • ಜಾಗತಿಕ ಇತಿಹಾಸದ ಅಧ್ಯಯನ
  • ಶೃಂಗೇರಿಯ ಇತಿಹಾಸದ ಅಧ್ಯಯನ ಮತ್ತು ಕಡತಗಳು
  • ಸ್ವರ್ಣವಲ್ಲೀ ಮಹಾಸಂಸ್ಥಾನ ಚರಿತ್ರೆ ಹಾಗೂ ಕಡತಗಳು
  • ಸಿರ್ಸಿ ತಾಲೂಕಿನ ಇತಿಹಾಸ
  • ಕವನ ಸಂಕಲನಗಳು
  • ಸಂಪಾದಿತ ಕೃತಿಗಳು
  • ಸಂಶೋಧನಾ ಲೇಖನಗಳು
  • ಇತರ ಕಡತಗಳು

ಕೃತಿಗಳು

[ಬದಲಾಯಿಸಿ]

ಇತಿಹಾಸ ಗ್ರಂಥಗಳು

[ಬದಲಾಯಿಸಿ]
  1. 'A History of Sringeri', Karnataka University , Dharwad, 1982, 1999
  2. ’The records of the Sringeri matha', Relating to Keladi', Keladi museum, 2001
  3. 'Selectios from the Kadatas of the Sringeri matha' (Unpublished), ICHR, NewDelhi, 1982
  4. 'A catalogue of the Sringeri records' (2 Volumes), Karnataka state archieves, Bangalore, 1995.96
  5. ’A History of the Swarnavalli Mahasamsthana', Sri Bhagavatpada Prakashana, Swarnavalli, 2004
  6. The Historical Records relating to the Kanara Districts' (Unpublished), UGC, New Delhi, 2002
  7. ’Ramrao Divgi, A Karmayogi (Editor), Divgi family, Sirsi, 2005
  8. ’The Records of Si Chitrapur Matha', Citrapua Matha, 2008; Second volume (Unpublished)
  9. 'The Karnataka Historical Review', xxvi (Editor), Dharwad
  10. ’The Records of Sringeri Dharmasamsthana', (Major Research Project, UGC, New Delhi), Sringeri Matha, 2009
  11. 'Banavasi', Department of Archaeology, Museums and Heritage, Bangalore-2011
  12. ’ಶೃಂಗೇರಿ ಧರ್ಮಸಂಸ್ಥಾನ’, ಶೃಂಗೇರಿ ಮಠ, ೧೯೮೩
  13. ’ಶೃಂಗೇರಿಯ ಇತಿಹಾಸ’ (ಮೂರು ಮುದ್ರಣಗಳು), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
  14. 'ಫ್ರಾನ್ಸ್ ದೇಶದ ಮಹಾಕ್ರಾಂತಿ’, ಕ.ವಿ.ವಿ. ೧೯೭೧
  15. 'ಕನ್ನಡದಲ್ಲಿ ಕಡತಗಳು', ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೭
  16. ಸಿರ್ಸಿ ತಾಲೂಕಿನ ಇತಿಹಾಸ’, ಎಂ.ಇ. ಸೊಸೈಟಿ, ಸಿರ್ಸಿ, ೧೯೮೮
  17. ’ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಗಳು’, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ೧೯೯೭
  18. ’ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ’, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಸ್ವರ್ಣವಲ್ಲಿ, ೧೯೯೭
  19. ’ಶ್ರೀ ಮಂಜುಗುಣಿ ಕ್ಷೇತ್ರದ ಚಾರಿತ್ರಿಕ ದಾಖಲೆಗಳು’, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ೧೯೯೭
  20. ಇಡಗುಂಜಿಯ ಶ್ರೀ ಮಹಾಗಣಪತಿ ಮತ್ತು ಸಭಾಹಿತರು’, ಲೀಲಾಗಣಪತಿ ಚಾರಿಟೆಬಲ್ ಟ್ರಸ್ಟ್, ಹಳದೀಪುರ, ಉತ್ತರ ಕನ್ನಡ, ೨೦೦೪
  21. 'ಶೃಂಗೇರಿ ಮಠದ ಕಡತಗಲಲ್ಲಿಯ ಆಯ್ದ ಚಾರಿತ್ರಿಕ ದಾಖಲೆಗಳು’, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ೨೦೦೩, ಸಂ. ೨, ೨೦೦೬
  22. ’ಶೃಂಗೇರಿ ಮಠದ ಕಡತಗಳ ವಿಷಯ ಸೂಚಿ’, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ೨೦೦೯
  23. ಕದಂಬೋತ್ಸವ ಸ್ಮರಣ ಸಂಚಿಕೆ’,(ಸಂಪಾದಕ), ೧೯೬೬
  24. ಸಿರ್ಸಿ ತಾಲೂಕಾ ದರ್ಪಣ’ (ಸಂಪಾದಕ), ಎಂ.ಇ. ಸೊಸೈಟಿ, ಸಿರ್ಸಿ, ೧೯೮೮
  25. ಬನವಾಸಿ’, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಬೆಂಗಳೂರು, ೨೦೧೦

ಕವನ ಸಂಕಲನಗಳು

[ಬದಲಾಯಿಸಿ]
  1. ಉಪಾಖ್ಯಾನ, ಸಿರ್ಸಿ ೧೯೮೨
  2. ಅನಿಸಿಕೆಗಳು, ಪಂಪ ಪ್ರಕಾಶನ, ಸಿರ್ಸಿ, ೧೯೯೩
  3. ಅನುಭವ (ಅಪ್ರಕಟಿತ)
  4. ಅನಂತ ಚುಟುಕುಗಳು, ಭವಾನಿ ಪ್ರಕಾಶನ, ೨೦೧೦
  5. ಚೂಟಿ ಚುಟುಕುಗಳು, ೨೦೧೨

ಪ್ರಬಂಧಗಳು

[ಬದಲಾಯಿಸಿ]
  • 'India past and present'
  • 'Journals of ICHR, Mythic Society, Indian Records Commission'
  • 'Studies in Karnataka History and Culture'
  • 'The Karnataka Historical Review'
  • 'ಕರ್ನಾಟಕ ಇತಿಹಾಸ ದರ್ಶನ’

ಇನ್ನೂ ಅನೇಕ ಆಂಗ್ಲ ಮತ್ತು ಕನ್ನಡ ಪತ್ರಿಕೆಗಳಲ್ಲಿ ಮತ್ತು ಅಭಿನಂದನಾ ಗ್ರಂಥಗಳಲ್ಲಿ ನೂರಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟವಾಗಿವೆ .

ಸೇವೆ, ವಿಚಾರ ಸಂಕಿರಣ, ಸನ್ಮಾನ ಮತ್ತು ಗೌರವ ಸಮರ್ಪಣೆಗಳು[]

[ಬದಲಾಯಿಸಿ]
  1. ಇತಿಹಾಸ ಪ್ರಾಧ್ಯಾಪಕರಾಗಿ ೩೫ ವರ್ಷಗಳ ಸೇವೆ.
  2. ಫೆಲೋ: ಕುವೆಂಪು ವಿಶ್ವವಿದ್ಯಾಲಯ, ಸಂಪನ್ಮೂಲ ವ್ಯಕ್ತಿ: ಶಿವಾಜಿ ವಿ.ವಿ, ಕೊಲ್ಲಾಪುರ, ಕನ್ನಡ ವಿಶ್ವವಿದ್ಯಾಲಯ ಹಂಪಿ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು
  3. ನಿರ್ದೇಶಕ, ಸಂಶೋಧನಾ ಯೋಜನೆ, ಐ.ಸಿ.ಎಚ್.ಆರ್., ಹೊಸದಿಲ್ಲಿ, ೧೯೮೦-೮೨[೧೦]
  4. ಪ್ರಧಾನ ಸಂಶೋಧಕ, ಮುಖ್ಯ ಸಂಶೋಧನಾ ಯೋಜನೆಗಳು, ಯು.ಜಿ.ಸಿ, ಹೊಸದಿಲ್ಲಿ, ೨೦೦೦-೦೨ ಮತ್ತು ೨೦೦೫-೦೭
  5. ಜಿಲ್ಲಾ ಸಂಯೋಜಕ (ಉತ್ತರ ಕನ್ನಡ ಜಿಲ್ಲೆಯ ಹಸ್ತಪ್ರತಿಗಳ ಸಮೀಕ್ಷೆ), ನ್ಯಾಶನಲ್ ಮಿಶನ್ ಫಾರ್ ಮ್ಯಾನ್ಯುಸ್ಕ್ರಿಪ್ಟ್ಸ್, ಹೊಸದಿಲ್ಲಿ, ೨೦೦೫
  6. ಸದಸ್ಯ (ಐತಿಹಾಸಿಕ ದಾಖಲೆಗಳು ಮತ್ತು ಹಸ್ತಪ್ರತಿಗಳ ಸಮೀಕ್ಷೆ), ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು
  7. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ತ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳ ಮಂಡನೆ. ಕೊಲ್ಲಾಪುರದ ಶಿವಾಜಿ ವಿ.ವಿ.ದಲ್ಲಿ ೨೦೦೦ನೇ ಇಸವಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ, ’ರಾಷ್ಟ್ರ ಮಟ್ಟದ ಇತಿಹಾಸ ಸಂಶೋಧಕ ಮತ್ತು ವಾಗ್ಮಿ’ ಎಂಬ ಗೌರವ.
  8. ಶಿವಾಜಿ ವಿ.ವಿ.ದಲ್ಲಿ ೨೦೦೫ರಲ್ಲಿ ಜರುಗಿದ ಅಂತಾರಾಷ್ಟ್ರೀಯ ಇತಿಹಾಸ ಸಮ್ಮೇಳನದಲ್ಲಿ "ದ ಶೃಂಗೇರಿ ಮಠ ಅಂಡ್ ದಿ ಮರಾಠಾಸ್" ಎಂಬ ಪ್ರಬಂಧ ಮಂಡನೆ.
  9. ಸರ್ವಾಧ್ಯಕ್ಷ:
    1. ಕರ್ನಾಟಕ ಇತಿಹಾಸ ಅಕಾಡೆಮಿಯ ೧೬ನೇ ಸಮ್ಮೇಳನ, ೨೦೦೨.
    2. ಕರ್ನಾಟಕ ಹಿಸ್ಟರಿ ಕಾಂಗ್ರೆಸ್ಸಿನ ೧೮ನೇ ಸಮ್ಮೇಳನ, ೨೦೦೬.
    3. ರಾಷ್ಟ್ರಮಟ್ಟದ ಇತಿಹಾಸ ಸಮ್ಮೇಳನ , ೨೦೦೯.
    4. ನ್ಯಾಶನಲ್ ಮಿಶನ್ ಫಾರ್ ಮ್ಯಾನ್ಯುಸ್ಕ್ರಿಪ್ಟ್ಸ್, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಗಳ ಸಮ್ಮೇಳನಗಳು
  10. ’ದೇಶದ ಪ್ರಸಿದ್ಧ ಇತಿಹಾಸ ಸಂಶೋಧಕ’, ಶೃಂಗೇರಿ ಜಗದ್ಗುರುಗಳಿಂದ ಸನ್ಮಾನ, ೨೦೦೭: ಅನೇಕ ಮಠಾಧೀಶರಿಂದ ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ
  11. ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ೨೦೧೦
  12. ’ಕದಂಬ ಸೇವಾರತ್ನ’ ಪ್ರಶಸ್ತಿ, ೨೦೧೦
  13. ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗೆ ಸಲ್ಲಿಸಿದ ಅದ್ವಿತೀಯ ಸೇವೆಗಾಗಿ ೭೭ನೇ ಅಖಿಲ ಭಾರತ ಕನ್ನಡ ಸಮ್ಮೇಳದಲ್ಲಿ ಗೌರವ ಪೂರ್ವಕ ಸನ್ಮಾನ, ಬೆಂಗಳೂರು, ೨೦೧೧
  14. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ, ೨೦೧೫
  15. ಚಿದಾನಂದ ಪ್ರಶಸ್ತಿ, ೨೦೧೯[೧೧]

ಪಠ್ಯೇತರ ಚಟುವಟಿಕೆಗಳು

[ಬದಲಾಯಿಸಿ]
  • ಕ.ವಿ.ವಿ. ಕ್ರೀಡಾಕೂಟದ ಉದ್ದಜಿಗಿತ, ತ್ರಿವಿಧ ಜಿಗಿತ ಮತ್ತು ಪೋಲ್ ವಾಲ್ಟ್ ನಲ್ಲಿ (ಹೊಸವಿಕ್ರಮ) ಪ್ರಥಮ ಮತ್ತು ೧೯೬೧ರಲ್ಲಿ ತಿರುಪತಿಯಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ನಾಯಕ.
  • ಪದವಿ ಮತ್ತು ಸ್ನಾತಕೋತ್ತರ ವರ್ಗ ಪ್ರತಿನಿಧಿ
  • ಸಬ್ ಲೆಫ್ಟಿನೆಂಟ್, ಎನ್.ಸಿ.ಸಿ. (ನೌಕಾದಳ), ೧೯೬೬-೭೦
  • ಅಥ್ಲೆಟಿಕ್ಸ್ ತರಬೇತುಗಾರನಾಗಿ ರಾಜ್ಯಕ್ಕೆ ಪ್ರಥಮ, ೧೯೬೫

ಅಭಿನಂದನಾ ಗ್ರಂಥಗಳು

[ಬದಲಾಯಿಸಿ]
  • ೧೯೯೮ ಇಸವಿಯಲ್ಲಿ ಎ.ಕೆ.ಶಾಸ್ತ್ರಿಯವರ ಸೇವಾನಿವೃತ್ತಿಯ ಸಂದರ್ಭದಲ್ಲಿ ಇತಿಹಾಸ ಸಂಶೋಧಕ ಎನ್ನುವ ಅಭಿನಂದನಾ ಗ್ರಂಥವನ್ನು ಡಾ.ಜಿ.ಎಂ.ಹೆಗಡೆಯವರ ಸಂಪಾದಕತ್ವದಲ್ಲಿ ಪ್ರಕಟಿಸಿ ಗೌರವಿಸಲಾಗಿದೆ.
  • ೨೦೧೫ ಇಸವಿಯಲ್ಲಿ ಎ.ಕೆ.ಶಾಸ್ತ್ರಿಯವರ ಎಪ್ಪತ್ತೈದನೆಯ ಹುಟ್ಟುಹಬ್ಬದ ವರ್ಷದಂದು ಅನಂತ ಕೃಷ್ಣ ಚರಿತ(ಅಕ್ಷಯ ಪ್ರಕಾಶನ, ಬೆಂಗಳೂರು) ಎಂಬ ಅಭಿನಂದನಾ ಗ್ರಂಥವನ್ನು ಗಣಪತಿ ಭಟ್ ವರ್ಗಾಸರ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ.

ಎ.ಕೆ.ಶಾಸ್ತ್ರಿಯವರು ಜನವರಿ ೪, ೨೦೨೦ರಂದು ಶನಿವಾರ ಬೆಳಿಗಿನ ಜಾವದಲ್ಲಿ ಸಿರ್ಸಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟರು. [೧೨] ಅವರಿಗೆ ೮೦ ವರ್ಷ ವಯಸ್ಸಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]


ಇವನ್ನೂ ನೋಡಿ

[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು

[ಬದಲಾಯಿಸಿ]