ಐಆರ್ಎನ್ಎಸ್ಎಸ್–1ಎಫ್ ಉಪಗ್ರಹ ಉಡಾವಣೆ
ಗೋಚರ
ಐಆರ್ಎನ್ಎಸ್ಎಸ್–1ಎಫ್ ಉಪಗ್ರಹ
೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
- ಹೆಸರು =ಐಆರ್'ಎನ್ಎಸ್ಎಸ್-1ಎಫ್(IRNSS-1F}
- ಯೋಜನಾ ವಿಧ = ಉಪಗ್ರಹ ಉಡಾವಣೆ
- ಆಯೋಜಕರು = ಇಸ್ರೊ
- ಕ್ರಿಯಾಯೋಜನೆಯ ಕಾಲ =12 ವರ್ಷ
- ರಾಕೆಟ್ ವಾಹಕ = ಐ-1ಕೆ (I-1K)
- ತಯಾರಕರು =ಭಾರತೀಯ ಬಾಹ್ಯಾಕಾಶ ಸ೦ಶೋಧನಾ ಸಂಸ್ಥೆ
- ಜಿಗಿತದ ತೂಕ =1425 ಕೆಜಿ
- ಶಕ್ತಿ =1,300 W
- ಉಡಾವಣೆ ದಿನ = 10 ಮಾರ್ಚಿ 2016 ಸಂಜೆ ೪ಗಂ.
- ಉಡಾವಣೆ ವಾಹನ =PSLV-XL C32(ಪಿಎಸ್ಎಲ್'ವಿ-ಸಿ32)
- ಉಡಾವಣೆ ಸ್ಥಳ = ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
- ಉಡಾವಣೆ ಗತ್ತಿಗೆದಾರ = ಇಸ್ರೊ
- ಪರಿಭ್ರಮಣ ಕಕ್ಷೆ = ಭೂಕೇಂದ್ರಿತ ಕಕ್ಷೆಯಲ್ಲಿ
- ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್ಎಸ್ಎಸ್) ಸರಣಿಯ ಆರನೇ ಉಪಗ್ರಹ ಉಡಾವಣೆಗೆ ಮಂಗಳವಾರ ಬೆಳಗ್ಗೆ 9.30ರಿಂದ 54 ಗಂಟೆಗಳ ಗಣನೆ (ಕೌಂಟ್ಡೌನ್) ಆರಂಭವಾಗಿದೆ. ಮಾರ್ಚ್ 10ರಂದು ಸಂಜೆ 4 ಗಂಟೆಗೆ ಆಂಧ್ರಪ್ರದೇಶ ಶ್ರೀಹಕರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವೀಯ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ ) ಸಿ32 ಪಥದರ್ಶಕ ಉಪಗ್ರಹವನ್ನು ಹೊತ್ತು ಆಗಸಕ್ಕೆ ಚಿಮ್ಮಿದೆ.
- ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್ಎಸ್ಎಸ್) ಸರಣಿಯಲ್ಲಿ ಒಟ್ಟು ಏಳು ಉಪಗ್ರಹಗಳಿದ್ದು, ಈಗಾಗಲೇ ಐದು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಇದು ಅಮೆರಿಕದ ಜಿಪಿಎಸ್ ರೀತಿಯ ವ್ಯವಸ್ಥೆಯಾಗಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಭಾರತವು ಸ್ವಂತಬಲದ ಪ್ರಾದೇಶಿಕ ಪಥದರ್ಶಕ (ಜಿಪಿಎಸ್) ವ್ಯವಸ್ಥೆ ಹೊಂದಲಿದೆ. ಪಥದರ್ಶಕ ವ್ಯವಸ್ಥೆಗೆ ನಾಲ್ಕು ಉಪಗ್ರಹಗಳು ಮಾತ್ರ ಸಾಕು. ಆದರೆ ದಕ್ಷ ಮತ್ತು ಕರಾರುವಕ್ಕಾದ ಮಾಹಿತಿ ನೀಡಲು ಏಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ. ಯೋಜನೆ ಕಾರ್ಯಾರಂಭವಾದ ಬಳಿ 24 ಗಂಟೆ ಸೇವೆ ಸಿಗಲಿದೆ. ಇದರ ನಿಖರತೆಯ ವ್ಯತ್ಯಾಸ 20 ಮೀಟರ್.
- 1425 ಕೆ.ಜಿ. ತೂಕದ ಐಆರ್ಎನ್ಎಸ್ಎಸ್ 1ಎಫ್ ಉಪಗ್ರಹವು 14 ವರ್ಷಗಳ ಕಾಲ ಕೆಲಸ ಮಾಡಲಿದೆ. ಈ ಹಿಂದೆ ಪಥದರ್ಶಕ ಉಪಗ್ರಹಗಳ ಉಡಾವಣೆ ವೇಳೆ ಬಳಸಿದಂತೆ, ಈ ಬಾರಿಯೂ ಭಾರ ಹೊತ್ಯುವ ಸಾಮರ್ಥ್ಯದ ‘ಎಸ್ಎಲ್’ ಮಾದರಿಯನ್ನು ಇಸ್ರೋ ಬಳಸುತ್ತಿದೆ. ಚಂದ್ರಯಾನ–1, ಮಂಗಳಯಾನ ಹಾಗೂಆಸ್ಟ್ರೋಸ್ಯಾಟ್ ಉಡಾವಣೆ ವೇಳೆಯೂ ಇದನ್ನು ಬಳಸಿಕೊಳ್ಳಲಾಗಿತ್ತು. ಮಾರ್ಚ್ 2016 ರೊಳಗೆ ಸರಣಿಯ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದು ಇಸ್ರೋ ಗುರಿ.
ಫೋಟೋ ಐಆರ್ಎನ್ಎಸ್ಎಸ್–1ಎಫ್-PSLV Rocket
[ಬದಲಾಯಿಸಿ]ಫೋಟೋಕ್ಕೆ :[೫] Archived 2016-04-05 ವೇಬ್ಯಾಕ್ ಮೆಷಿನ್ ನಲ್ಲಿ. |
ಕಕ್ಷೆಗೆ ಸೇರಿತು
[ಬದಲಾಯಿಸಿ]- ಇಸ್ರೋದ ಆರನೇ ಪಥದರ್ಶಕ ಉಪಗ್ರಹ ಐಆರ್ಎನ್ಎಸ್ಎಸ್–1ಎಫ್ ಅನ್ನು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಬುಧವಾರ ಸಂಜೆ 4.01 ಗಂಟೆಗೆ ಸರಿಯಾಗಿ ಪಥದರ್ಶಕ ಉಪಗ್ರಹವನ್ನು ಹೊತ್ತು ಸಾಗಿದ ಧ್ರುವೀಯ ಉಪಗ್ರಹ ಉಡಾವಣಾ ವಾಹನ ಸಿ32 (ಪಿಎಸ್ಎಲ್ವಿ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
- ‘ಭಾರತವು ಸ್ವಂತಬಲದ ಪಥದರ್ಶಕ (ಅಮೆರಿಕದ ಜಿಪಿಎಸ್ ವ್ಯವಸ್ಥೆ ರೀತಿಯದ್ದು ) ವ್ಯವಸ್ಥೆಯನ್ನು ಹೊಂದುವ ಸಮಯ ಹತ್ತಿರ ಬಂದಿದೆ. ಐಆರ್ಎನ್ಎಸ್ಎಸ್ ಸರಣಿಯ ಕೊನೆಯ ಹಾಗೂ ಏಳನೇ ಉಪಗ್ರಹವನ್ನು ಮುಂದಿನ ತಿಂಗಳು ಉಡಾವಣೆ ಮಾಡಲಾಗುವುದು’ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
- ಪಥದರ್ಶಕ ವ್ಯವಸ್ಥೆಗೆ ನಾಲ್ಕು ಉಪಗ್ರಹಗಳು ಮಾತ್ರ ಸಾಕು. ಆದರೆ ದಕ್ಷ ಮತ್ತು ಕರಾರುವಕ್ಕಾದ ಮಾಹಿತಿ ನೀಡಲು ಏಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ. ಯೋಜನೆ ಕಾರ್ಯಾರಂಭವಾದ ಬಳಿ 24 ಗಂಟೆ ಸೇವೆ ಸಿಗಲಿದೆ.
ಭಾರತದ ಸಂಚಾರ ಮಾರ್ಗದರ್ಶಕ ಯೋಜನೆ ಯಶಸ್ವಿ
[ಬದಲಾಯಿಸಿ]- 28/04/2016- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಾದೇಶಿಕ ಸಂಚಾರ ಮಾರ್ಗದರ್ಶಕ ಉಪಗ್ರಹ ‘ಐಆರ್ಎನ್ಎನ್ಎಸ್- 1ಜಿ’ ಉಡಾವಣೆ ಗುರುವಾರ ಯಶಸ್ವಿಯಾಗಿದೆ. ‘ಐಆರ್ಎನ್ಎನ್ಎಸ್- 1ಜಿ’ ಭಾರತದ 7ನೇ ಮತ್ತು ಕೊನೆಯ ಪ್ರಾದೇಶಿಕ ಸಂಚಾರ ಮಾರ್ಗದರ್ಶಕ ಉಪಗ್ರಹವಾಗಿದೆ. ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 12.50ಕ್ಕೆ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹಕ ‘ಪಿಎಸ್ಎಲ್ವಿ- ಸಿ33’ ನಭಕ್ಕೆ ಚಿಮ್ಮಿತು. ಉಡಾವಣೆಗೊಂಡ ಸುಮಾರು 20 ನಿಮಿಷಗಳಲ್ಲಿ ಉಪಗ್ರಹ ಕಕ್ಷೆ ಸೇರಿತು.
- ಈ ಹಿಂದೆ ಇಂತಹ ಆರು ಉಪಗ್ರಹಗಳನ್ನು ಇಸ್ರೊ ಉಡಾಯಿಸಿದೆ. ಪ್ರಾದೇಶಿಕ ಸಂಚಾರ ಮಾರ್ಗದರ್ಶಕ ಉಪಗ್ರಹ ಯೋಜನೆಯಲ್ಲಿ ಒಟ್ಟು ಏಳು ಉಪಗ್ರಹಗಳನ್ನು ಉಡಾಯಿಸಲು ಇಸ್ರೊ ಉದ್ದೇಶಿಸಿತ್ತು. ಇಸ್ರೊದ ಈ ಯೋಜನೆಯು ‘ಐಆರ್ಎನ್ಎನ್ಎಸ್- 1ಜಿ’ ಕಕ್ಷೆ ಸೇರುವ ಮೂಲಕ ಯಶಸ್ವಿಯಾಗಿದೆ.
- ಈ ಯೋಜನೆಯನ್ನು ಸಂಪೂರ್ಣವಾಗಿ ದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಅಮೆರಿಕದಲ್ಲಿ ಸದ್ಯಕ್ಕೆ ಬಳಕೆಯಲ್ಲಿ ಇರುವ ಉಪಗ್ರಹ ನೆರವಿನ ಸಂಚಾರ ಮಾರ್ಗದರ್ಶನ ಸೌಲಭ್ಯದ (Global Positioning System) ಮಾದರಿಯಲ್ಲಿಯೇ ಸೇವೆ ಒದಗಿಸುವುದು ಇಸ್ರೊದ ಉದ್ದೇಶವಾಗಿದೆ.
- ಫೋಟೋಗಳು:[೬][೪]
ಫೋಟೋಗಳು:
[ಬದಲಾಯಿಸಿ]*1) IRNSS-1G ಬಾಹ್ಯಾಕಾಶ ಕಾಣಬಹುದು ಶಾಖ ರಕ್ಷಕಗಳು ಎರಡು ಹಂತವಾಗಿ ಜೊತೆ ಪಿಎಸ್ಎಲ್ವಿ C33 ಅಂತರ್ಗತವಾಗಿರುತ್ತದೆ. (ಇಸ್ರೋ)
- 2) IRNSS-1G ಇಂಧನ ಭರ್ತಿ ಪ್ರಗತಿಯಲ್ಲಿದೆ; ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ. (ಇಸ್ರೋ)
- 3) ಪಿಎಸ್ಎಲ್ವಿ C33 ತಾಪದ ಕಾಪು IRNSS-1G ಕೆಳಗಿವೆ; (ಇಸ್ರೋ) ಮುಚ್ಚಲಾಗಿದೆ
- 4) IRNSS-1G ಮಾಡಲಾಗುತ್ತಿದೆ; SDSC ಎಸ್ಎಚ್ಎಆರ್ ನಲ್ಲಿ ಕ್ಲೀನ್ ಕೋಣೆ ಡಿ-ಧಾರಕಗಳಲ್ಲಿ. (ಇಸ್ರೋ)
- 5) IRNSS-1G ಧಾರಕ ISITE ರಿಂದ SDSC ಎಸ್ಎಚ್ಎಆರ್, ISAC ಬೆಂಗಳೂರಿನಲ್ಲಿ ಸಾರಿಗೆ ಟ್ರಕ್ ಮೇಲೆ ಲೋಡ್ ಮಾಡಲಾಗುತ್ತಿದೆ. (ಇಸ್ರೋ)
- 6) ಪಿಎಸ್ಎಲ್ವಿ C33 ಕೋರ್ ಹಂತದ ಲಾಂಚ್ ಪೀಠದ ಮೇಲೆ ಸಂಯೋಜಿಸಲ್ಪಟ್ಟಿದೆ. (ಇಸ್ರೋ)
- 7) ಪೂರ್ತಿಯಾಗಿ ಸಂಘಟಿತಗೊಂಡ PLSV-C33 (ಇಸ್ರೋ ಸೈಡ್ ವೀಕ್ಷಿಸಿ)
- 8) ಇಸ್ರೊದ ಏಳನೇ ಸಂಚರಣೆ ಉಪಗ್ರಹ IRNSS-1G ಪ್ರಾರಂಭಗೊಂಡ ಶ್ರೀಹರಿಕೋಟದ spaceport ಬುಧವಾರ,ಒಂದು ದಿನ ಮೊದಲು. (ಪಿಟಿಐ)
-27-4-2016
.*ಫೋಟೋಗಳು:
- 1) IRNSS-1G spacecraft integrated with PSLV-C33 with two halves of the heat shields seen. (ISRO)
- 2) Fuel filling of IRNSS-1G in progress at Satish Dhawan Space Centre. (ISRO)
- 3) PSLV-C33 heat shield closed with IRNSS-1G encapsulated (ISRO)
- 4) IRNSS-1G being de-containerised at clean room at SDSC SHAR. (ISRO)
- 5) Container with IRNSS-1G is being loaded on to the truck for transportation to SDSC SHAR from ISITE, ISAC Bengaluru. (ISRO)
- 6) PSLV-C33 core stage integrated over the launch pedestal. (ISRO)
- 7) Side view of fully integrated PLSV-C33 (ISRO)
- 8) ISRO's seventh navigation satellite IRNSS-1G a day before its launch from spaceport of
Sriharikota on Wednesday. (PTI)-27-4-2016
.ನೋಡಿ
[ಬದಲಾಯಿಸಿ]- ಮಂಗಳ ಗ್ರಹದ ಅನ್ವೇಷಣೆ
- ಮಂಗಳಯಾನ
- ಮಹಾ ಸ್ಪೋಟ
- ಮೆಸ್ಸೆಂಜರ್ ಗಗನನೌಕೆ
- ಲೂನ ಕಾರ್ಯಕ್ರಮ
- ವಾತಾವರಣದಲ್ಲಿ ಮರುಪ್ರವೇಶಿಸುವಿಕೆ
- ಸೃಷ್ಟಿ ಮತ್ತು ವಿಜ್ಞಾನ
- ಹಬಲ್ ದೂರದರ್ಶಕ
- ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ
- ಜಿಸ್ಯಾಟ್ -14
- ಜಿಸ್ಯಾಟ-೧೬/GSAT-16 ಉಪಗ್ರಹ
- ಜಿ.ಎಸ್.ಎಲ್.ವಿ
- ಜಿಸ್ಯಾಟ (GSAT) ಉಪಗ್ರಹ
- ಇಸ್ರೋ
- ಮರುಬಳಕೆ ಉಡಾವಣಾ ವಾಹನ-ಆರ್ಎಲ್ವಿ–ಟಿಡಿ
ಉಲ್ಲೇಖಗಳು
[ಬದಲಾಯಿಸಿ]