ಒಣ ಮೀನು ಚಟ್ನಿ
ಗೋಚರ
ಇತರ ಹೆಸರು | ಒಣ ಮೀನು ಚಟ್ನಿ |
---|---|
ಬಗೆ | ಚಟ್ನಿ |
ಮೂಲ | ಭಾರತ |
ಪ್ರದೇಶ ಅಥವಾ ರಾಜ್ಯ | ಮಂಗಳೂರು , ಉಡುಪಿ |
ಒಣ ಮೀನಿನ ಚಟ್ನಿ ರುಚಿಕರವಾದ ಮತ್ತು ಮಸಾಲೆಯುಕ್ತ ಚಟ್ನಿ ಒಣ ಮೀನುಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಬಡತನ ಇದ್ದಲ್ಲಿ ಇಂತಹ ಚಟ್ನಿಗಳನ್ನು ತಯಾರಿಸಿ ಜನರು ಹೊಟ್ಟೆ ತುಂಬಿಸುತ್ತಿದ್ದರು. ಅದರಲ್ಲೂ ಆಟಿ ತಿಂಗಳಲ್ಲಿ ಇಂತಹ ಚಟ್ನಿಗಳನ್ನು ತಯಾರಿಸಿ ಊಟ ಮಾಡುತ್ತಿದ್ದರು.[೧]
ಬೇಕಾಗುವ ಸಾಮಾಗ್ರಿಗಳು
[ಬದಲಾಯಿಸಿ]50 ಗ್ರಾಂ- ಒಣಗಿದ ಮೀನು, ಒಂದು ಚಮಚ ತೆಂಗಿನ ಎಣ್ಣೆ, ಶುಂಠಿ, ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ, ಒಂದು ಚಮಚ ಕೊತ್ತಂಬರಿ ಬೀಜ, ಎರಡು ಕಪ್ ತೆಂಗಿನ ಕಾಯಿ ತುರಿ, ಮೂರು ನಾಲ್ಕು ಬೆಳ್ಳುಳ್ಳಿ ಎಸಳು, ಸ್ವಲ್ಪ ಹುಣಸೆ.[೨]
ಮಾಡುವ ವಿಧಾನ
[ಬದಲಾಯಿಸಿ]- ಮೊದಲಿಗೆ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಒಣ ಮೀನು ಕಂದು ಬಣ್ಣಕ್ಕೆ ಬರುವ ತನಕ ಫ್ರೈ ಮಾಡಿಕೊಳ್ಳಿ. ಮೀನು ಗರಿಗರಿಯಾದ ಬಳಿಕ, ಬಾಣಲೆಯಿಂದ ತೆಗೆದು ತಣ್ಣಗಾಗಲು ಬಿಡಿ.
- ಒಣಮೀನಿನ ಬಾಲ ಹಾಗೂ ತಲೆಯ ಭಾಗವನ್ನು ತೆಗೆದು ಕ್ಲೀನ್ ಮಾಡಿ. (ಬೇಕಿದ್ದರೆ ಒಣಮೀನನ್ನು ಶುದ್ಧ ನೀರಿನಲ್ಲಿ ಒಂದು ಬಾರಿ ತೊಳೆದುಕೊಳ್ಳಬಹುದು). ಆ ಬಳಿಕ ಈ ಒಣಮೀನನ್ನು ತುಂಡುಗಳಾಗಿ ಮಾಡಿಟ್ಟುಕೊಳ್ಳಿ.
- ಮಿಕ್ಸಿ ಜಾರಿಗೆ ಸಾಮಗ್ರಿಗಳನ್ನು ಹಾಕಿ ಒಮ್ಮೆ ಗ್ರೈಂಡ್ ಮಾಡಿಕೊಳ್ಳಿ. ರುಬ್ಬಿದ ಮಸಾಲೆಗೆ ತೆಂಗಿನ ತುರಿ ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಿ. (ಮಸಾಲೆಯನ್ನು ನುಣ್ಣಗೆ ರುಬ್ಬಿಕೊಳ್ಳಬಾರದು ).
- ಈ ಮಸಾಲೆಗೆ ಈಗಾಗಲೇ ತುಂಡರಿಸಿಟ್ಟ ಒಣಮೀನನ್ನು ಹಾಕಿ ಮಿಶ್ರಣ ಮಾಡಿದರೆ ಚಟ್ನಿ ರೆಡಿಯಾದಂತೆ. ಒಣಮೀನಿನಲ್ಲಿ ಉಪ್ಪಿನ ಅಂಶವಿರುವ ಕಾರಣ ಬೇಕಿದ್ದರೆ ಮಾತ್ರ ಉಪ್ಪು ಸೇರಿಸಿಕೊಳ್ಳಬೇಕು. ಗಂಜಿಯ ಜೊತೆಗೆ ಒಣಮೀನು ಚಟ್ನಿಯನ್ನು ಸೇವಿಸಿದರೆ ಅದರ ರುಚಿಯೇ ಬೇರೆ.
ಬೇರೆ ಬಾಷೆಯಲ್ಲಿ ಒಣ ಮೀನು ಚಟ್ನಿ
[ಬದಲಾಯಿಸಿ]- ನುಂಗೆಲ್ ಮೀನ್ ಚಟ್ನಿ - ತುಳು
ಉಲ್ಲೇಖಗಳು
[ಬದಲಾಯಿಸಿ]- ↑ Kannada, TV9 (17 January 2024). "ತಿಂದರೆ ಮತ್ತೆ ತಿನ್ನಬೇಕು ಎನಿಸುವ ಕರಾವಳಿ ಶೈಲಿಯ ಒಣ ಮೀನು ಚಟ್ನಿ ಮಾಡುವುದು ಹೇಗೆ?". TV9 Kannada. Retrieved 17 July 2024.
{{cite news}}
: CS1 maint: numeric names: authors list (link) - ↑ "Dry fish chutney Recipe: How to Make Dry fish chutney Recipe - bigbasket Cookbook| bigbasket.com". www.bigbasket.com. Retrieved 17 July 2024.