ವಿಷಯಕ್ಕೆ ಹೋಗು

ಒಣ ಸಿಗಡಿ ಚಟ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಣ ಸಿಗಡಿ ಚಟ್ನಿ
ಒಣ ಸಿಗಡಿ ಚಟ್ನಿ
ಇತರ ಹೆಸರುಒಣ ಸಿಗಡಿ ಚಟ್ನಿ
ಬಗೆಚಟ್ನಿ
ಮೂಲಭಾರತ
ಪ್ರದೇಶ ಅಥವಾ ರಾಜ್ಯಮಂಗಳೂರು , ಉಡುಪಿ

ಒಣ ಸಿಗಡಿ ಚಟ್ನಿ ರುಚಿಕರವಾದ ಮತ್ತು ಮಸಾಲೆಯುಕ್ತ ಚಟ್ನಿ. ಇದನ್ನು ಒಣ ಸಿಗಡಿಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಬಡತನ ಇದ್ದಲ್ಲಿ ಇಂತಹ ಚಟ್ನಿಗಳನ್ನು ತಯಾರಿಸಿ ಜನರು ಹೊಟ್ಟೆ ತುಂಬಿಸುತ್ತಿದ್ದರು. ಅದರಲ್ಲೂ ಆಟಿ ತಿಂಗಳಲ್ಲಿ ಇಂತಹ ಚಟ್ನಿಗಳನ್ನು ಹೆಚ್ಚಾಗಿ ತಯಾರಿಸಿ ಊಟ ಮಾಡುತ್ತಿದ್ದರು.

ಬೇಕಾಗುವ ಸಾಮಾಗ್ರಿಗಳು

[ಬದಲಾಯಿಸಿ]

50 ಗ್ರಾಂ- ಒಣಗಿದ ಸಿಗಡಿ, ಒಂದು ಚಮಚ ತೆಂಗಿನ ಎಣ್ಣೆ, ಶುಂಠಿ, ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ ಅಥವಾ ಒಣ ಮೆಣಸಿನಕಾಯಿ, ಒಂದು ಚಮಚ ಕೊತ್ತಂಬರಿ ಬೀಜ, ಎರಡು ಕಪ್ ತೆಂಗಿನ ಕಾಯಿ ತುರಿ, ಮೂರು ನಾಲ್ಕು ಬೆಳ್ಳುಳ್ಳಿ ಎಸಳು, ಸ್ವಲ್ಪ ಹುಣಸೆ.[]

ಮಾಡುವ ವಿಧಾನ

[ಬದಲಾಯಿಸಿ]
  • ಮೊದಲಿಗೆ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಒಣ ಸಿಗಡಿ ಕಂದು ಬಣ್ಣಕ್ಕೆ ಬರುವ ತನಕ ಫ್ರೈ/ಹುರಿದುಕೊಳ್ಳಿ. ಸಿಗಡಿ ಗರಿಗರಿಯಾದ ಬಳಿಕ, ಬಾಣಲೆಯಿಂದ ತೆಗೆದು ತಣ್ಣಗಾಗಲು ಬಿಡಬೇಕು.
  • ಮಿಕ್ಸಿ ಜಾರಿಗೆ ಸಾಮಗ್ರಿಗಳನ್ನು ಹಾಕಿ ಒಮ್ಮೆ ಗ್ರೈಂಡ್ ಮಾಡಿಕೊಳ್ಳಬೇಕು. ರುಬ್ಬಿದ ಮಸಾಲೆಗೆ ತೆಂಗಿನ ತುರಿ ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಿ. (ಮಸಾಲೆಯನ್ನು ನುಣ್ಣಗೆ ರುಬ್ಬಿಕೊಳ್ಳಬಾರದು ).
  • ಈ ಮಸಾಲೆಗೆ ಸಿಗಡಿಗಳನ್ನು ಹಾಕಿ ಮಿಶ್ರಣ ಮಾಡಿದರೆ ಚಟ್ನಿ ರೆಡಿಯಾದಂತೆ. ಸಿಗಡಿಯಲ್ಲಿ ಉಪ್ಪಿನ ಅಂಶವಿರುವ ಕಾರಣ ಬೇಕಿದ್ದರೆ ಮಾತ್ರ ಉಪ್ಪು ಸೇರಿಸಿಕೊಳ್ಳಬೇಕು. ಗಂಜಿಯ ಜೊತೆಗೆ ಒಣ ಸಿಗಡಿಯ ಚಟ್ನಿಯನ್ನು ಸೇವಿಸಿದರೆ ಅದರ ರುಚಿಯೇ ಬೇರೆ.
  • ಈ ಚಟ್ನಿಯನ್ನು ನೀರು ಹಾಕದೆ ಹುಡಿ ಚಟ್ನಿ ತಯಾರಿಸಬಹುದು.[]

ಬೇರೆ ಬಾಷೆಯಲ್ಲಿ ಒಣ ಮೀನು ಚಟ್ನಿ

[ಬದಲಾಯಿಸಿ]
  • ನುಂಗೆಲ್ ಎಟ್ಟಿ ಚಟ್ನಿ - ತುಳು

ಉಲ್ಲೇಖಗಳು

[ಬದಲಾಯಿಸಿ]
  1. ವಾರ್ತೆ, ಪ್ರಜಾವಾಣಿ. "ರೆಸಿಪಿ: ಒಣ ಸಿಗಡಿ ಚಟ್ನಿ". Prajavani. Retrieved 17 July 2024.
  2. "Dried-Shrimp Chutney । Galmbyachi Chutney । Nungel Yetti Chutney । One Plate Please". Retrieved 17 July 2024.