ಒನಿಡಾ
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | 11 ಜುಲೈ 1981 |
ಸಂಸ್ಥಾಪಕ(ರು) | ಜಿ.ಎಲ್.ಮಿರ್ಚಂದಾನಿ |
ಮುಖ್ಯ ಕಾರ್ಯಾಲಯ | ಮುಂಬೈ, ಮಹಾರಾಷ್ಟ್ರ, ಭಾರತ |
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
ಪ್ರಮುಖ ವ್ಯಕ್ತಿ(ಗಳು) |
|
ಉದ್ಯಮ |
|
ಉತ್ಪನ್ನ |
|
ಆದಾಯ | ₹೧೫,೨೮೪.೬ ದಶಲಕ್ಷ (ಯುಎಸ್$]೩೩೯.೩೨ ದಶಲಕ್ಷ)[೧] |
ಉದ್ಯೋಗಿಗಳು | ೫೦೦೦[೨] |
ಪೋಷಕ ಸಂಸ್ಥೆ | ಒನಿಡಾ ಕಾರ್ಪೋರೇಷನ್ |
ಜಾಲತಾಣ | www.onida.com |
ಒನಿಡಾ ಎಂಬುದು ಭಾರತದಲ್ಲಿ ನೆಲೆಗೊಂಡ "ಮಿರ್ಕ್ ಎಲೆಕ್ಟ್ರಾನಿಕ್ಸ್" ಎಂಬ ಎಲೆಕ್ಟ್ರಾನಿಕ್ ಬ್ರಾಂಡ್ ಆಗಿದೆ. ಇದು ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತದೆ. ಒನಿಡಾ ತನ್ನ ಬಣ್ಣದ ಸಿಆರ್‌ಟಿ ದೂರದರ್ಶನಗಳು ಮತ್ತು ಸ್ಮಾರ್ಟ್ ಟಿವಿಯಿಂದಾಗಿ ಭಾರತದಲ್ಲಿ ಪ್ರಸಿದ್ಧವಾಯಿತು. ಬ್ರಾಂಡ್ ಟ್ರಸ್ಟ್ ರಿಪೋರ್ಟ್ ೨೦೧೩ ಇಂಡಿಯಾದ ಅಧ್ಯಯನದ ಪ್ರಕಾರ, ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒನಿಡಾ ೫೧ ನೇ ಸ್ಥಾನ ಪಡೆದಿದೆ. ಕಂಪನಿಯು ಫ್ಲಾಟ್ ಪ್ಯಾನೆಲ್ ದೂರದರ್ಶನಗಳು (ಎಲ್‌ಇಡಿ, ಎಲ್‌ಸಿಡಿ ಟಿವಿಗಳು), ಏರ್ ಕಂಡಿಷನರ್‌ಗಳು, ವಾಷಿಂಗ್ ಮೆಷಿನ್‌ಗಳು, ಮೈಕ್ರೋವೇವ್ ಓವನ್‌ಗಳು, ಡಿವಿಡಿ ಹೋಮ್ ಥಿಯೇಟರ್ ಸಿಸ್ಟಮ್‌ಗಳು, ಮೊಬೈಲ್ ಫೋನ್‌ಗಳು, ಪ್ರೊಜೆಕ್ಟರ್ ಸಿಸ್ಟಮ್‌ಗಳು ಮತ್ತು ಎಲ್‌ಇಡಿ ದೀಪಗಳನ್ನು ತಯಾರಿಸುತ್ತದೆ.
ಇತಿಹಾಸ
[ಬದಲಾಯಿಸಿ]೧೯೮೧ ರಲ್ಲಿ ಮುಂಬೈಯಲ್ಲಿ ಜಿ.ಎಲ್. ಮಿರ್ಚಂದನಿ ಮತ್ತು ವಿಜಯ್ ಮಾನಕುಖಾನಿಯವರು ಒನಿಡಾವನ್ನು ಪ್ರಾರಂಭಿಸಿದರು.[೩] ಜಿ.ಎಲ್. ಮಿರ್ಚಂದನಿ ಅವರು ಮಿಸ್ಸ್ ಮಿರ್ಕ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಕರ್ನಲ್ ಬ್ರೌನ್ ಕೇಂಬ್ರಿಡ್ಜ್ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ೧೯೮೨ ರಲ್ಲಿ ಮುಂಬೈ ಆಂಧೇರಿಯಲ್ಲಿನ ತಮ್ಮ ಕಾರ್ಖಾನೆಗಳಲ್ಲಿ ಒನಿಡಾ ಟೆಲಿವಿಷನ್ ಸೆಟ್‌ಗಳನ್ನು ಜೋಡಿಸಲು ಆರಂಭಿಸಿದರು. ಇದನ್ನು ೧೯೮೧ ರಲ್ಲಿ "ಮರ್ಕ್ ಎಲೆಕ್ಟ್ರಾನಿಕ್ಸ್" ಎಂದು ಸ್ಥಾಪಿಸಲಾಯಿತು.[೪] ಅಲ್ಲಿಂದೀಚೆಗೆ, ಒನಿಡಾವು ಗ್ರಾಹಕರ ಬಾಳಿಕೆ ಮತ್ತು ಪರಿಕರಗಳ ಕ್ಷೇತ್ರದ ಬಹು ಉತ್ಪನ್ನ ಕಂಪೆನಿಯಾಗಿ ಹೊರಹೊಮ್ಮಿದೆ. ಒನಿಡಾ ಎಸಿ ಮತ್ತು ಮೈಕ್ರೋವೇವ್ ಓವನ್‌ನ್‌ನಲ್ಲಿ ೧೦೦% ಬೆಳವಣಿಗೆ ಸಾಧಿಸಿತು ಮತ್ತು ಕಳೆದ ವರ್ಷ ವಾಷಿಂಗ್ ಮೆಷಿನ್‌ಗಳಲ್ಲಿ ೪೦% ಬೆಳವಣಿಗೆಯನ್ನು ಸಾಧಿಸಿತು.
ಒನಿಡಾದ ಅಡಿಬರಹ ವಿಕಸನ
[ಬದಲಾಯಿಸಿ]ಒನಿಡಾ "ನೇಬರ್ಸ್ ಎನ್ವಿ, ಓನರ್ಸ್ ಪ್ರೈಡ್" ಎಂಬ ಶೀರ್ಷಿಕೆಯೊಂದಿಗೆ ಪ್ರಸಿದ್ಧವಾಯಿತು.[೫] ಜಾಹೀರಾತುಗಳ ಜನಪ್ರಿಯ ಥೀಮ್ ೧೯೮೦ ರಲ್ಲಿ ಕೊಂಬುಗಳು ಮತ್ತು ಬಾಲಗಳೊಂದಿಗೆ ಸಂಪೂರ್ಣ ದೆವ್ವದ ರೀತಿಯಲ್ಲಿ ಇತ್ತು. ೨೦೧೦ ರಲ್ಲಿ ಈ ಥೀಮ್‌ನಿಂದ ದಂಪತಿಗಳ ಚಿತ್ರಕ್ಕೆ ಅದನ್ನು ಬದಲಾಯಿಸಲಾಯಿತು.
ಒನಿಡಾದ ಶಾಖೆಗಳ ಬಗ್ಗೆ
[ಬದಲಾಯಿಸಿ]ಒನಿಡಾದಲ್ಲಿ ೨೨ ಶಾಖಾ ಕಚೇರಿಗಳು, ೨೦೮ ಗ್ರಾಹಕ ಸಂಬಂಧ ಕೇಂದ್ರಗಳು ಮತ್ತು ೪೧ ಡಿಪೋಗಳು ಭಾರತದಾದ್ಯಂತ ಹರಡಿದೆ.[೬] ೨೦೦೫ರ ಮಾರ್ಚ್ ೩೧ ರಂದು ಒನಿಡಾ ₹ ೩೦೧೪.೬ ಮಿಲಿಯನ್ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿತ್ತು. ಮಿರ್ಕ್ ಎಲೆಕ್ಟ್ರಾನಿಕ್ಸ್ ೧೯೯೯ ರಲ್ಲಿ ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ "ಎಲೆಕ್ಟ್ರಾನಿಕ್ಸ್‌ನಲ್ಲಿ ಶ್ರೇಷ್ಠತೆಗೆ ಪ್ರಶಸ್ತಿ" ಗೆದ್ದುಕೊಂಡಿತು.[೭] ದುಬೈನಲ್ಲಿನ ಮಾರಾಟ ಮತ್ತು ಮಾರ್ಕೆಟಿಂಗ್ ಕಚೇರಿಯಲ್ಲಿ ಒನಿಡಾ ಎರಡು ವರ್ಷಗಳಿಂದ ೨೧೫ ಶೇಕಡಾ ರಫ್ತು ಬೆಳವಣಿಗೆಯನ್ನು ವರದಿ ಮಾಡಿದೆ.
ಉತ್ಪನ್ನಗಳು
[ಬದಲಾಯಿಸಿ]- ಎಲ್‌ಸಿಡಿ ದೂರದರ್ಶನಗಳು
- ಪ್ಲಾಸ್ಮಾ ದೂರದರ್ಶನಗಳು
- ದೂರದರ್ಶನಗಳು
- ಡಿವಿಡಿ ಮತ್ತು ಹೋಮ್ ಥಿಯೇಟರ್ ವ್ಯವಸ್ಥೆಗಳು
- ಏರ್ ಕಂಡಿಷನರ್
- ತೊಳೆಯುವ ಯಂತ್ರಗಳು
- ಮೈಕ್ರೋವೇವ್ ಓವನ್ಸ್
- ಪ್ರಸ್ತುತಿ ಉತ್ಪನ್ನಗಳು
- ಮೊಬೈಲ್ ಫೋನ್‌ಗಳು
- ಎಲ್ಇಡಿ ದೂರದರ್ಶನಗಳು
- ಎಲ್‌ಸಿಡಿ ಮಾನಿಟರ್
- ಎಲ್‌ಸಿಡಿ ದೂರದರ್ಶನಗಳು ಮತ್ತು ಸ್ಮಾರ್ಟ್ ಫೋನ್‌ಗಳು
ಒನಿಡಾದ ಜಾಗತೀಕರಣ
[ಬದಲಾಯಿಸಿ]ಕೊಲ್ಲಿಯ ಸಾಗಣೆಗಳು ಒನಿಡಾದ ರಫ್ತು ಆದಾಯದ ಸುಮಾರು ೬೫ ಶೇಕಡವನ್ನು ಕೊಡುಗೆಯಾಗಿ ನೀಡುತ್ತಿದ್ದು, ವೇಗವಾಗಿ ಬೆಳೆಯುತ್ತಿರುವ ಈಸ್ಟ್ ಆಫ್ರಿಕಾದ ಮಾರುಕಟ್ಟೆಯ (ಉಗಾಂಡಾ, ಟಾಂಜಾನಿಯಾ, ಕೀನ್ಯಾ ಮತ್ತು ಇಥಿಯೋಪಿಯಾ) ಸಾಗಣೆ ಮತ್ತು ಸಾರ್ಕ್ ದೇಶಗಳು ರಫ್ತು ಆದಾಯದ ೧೬ ಶೇಕಡಾವನ್ನು ಹೊಂದಿವೆ. ಗಲ್ಫ್ ರಾಷ್ಟ್ರಗಳ ಜೊತೆಯಲ್ಲಿ, ರಷ್ಯಾ, ಉಕ್ರೇನ್ ಮತ್ತು ನೆರೆಹೊರೆಯ ಸಿಐಎಸ್ ದೇಶಗಳಲ್ಲಿ ಒನಿಡಾ ಒಂದು ಉಪಸ್ಥಿತಿಯನ್ನು ಹೊಂದಿದೆ. ರಷ್ಯಾಕ್ಕೆ ಟೆಲಿವಿಷನ್ ರಫ್ತುಗಳ ಹೊರತಾಗಿ, ಒನಿಡಾ ಡಿವಿಡಿ ಪ್ಲೇಯರ್ ಮತ್ತು ಹೈ-ಎಂಡ್ ಎಲ್ಸಿಡಿ ಟೆಲಿವಿಷನ್‌ಗಳನ್ನು ಸಹ ರಫ್ತು ಮಾಡಿದೆ.[೮]
ಒನಿಡಾ ಕಂಪನಿಯ ಕುಸಿತ
[ಬದಲಾಯಿಸಿ]೮೦ ಮತ್ತು ೯೦ ರ ದಶಕಗಳಲ್ಲಿ ಬಿಪಿಎಲ್ ಮತ್ತು ವಿಡಿಯೊಕಾನ್ ಜೊತೆಗೆ ಅಗ್ರ ದೂರದರ್ಶನ ಬ್ರಾಂಡ್ಗಳಲ್ಲಿ ಒಂದಾಗಿದ್ದ ಒನಿಡಾ, ನಂತರ ಕೊರಿಯನ್ ಎದುರಾಳಿ ಎಲ್ಜಿ ಮತ್ತು ಸ್ಯಾಮ್‌ಸಂಗ್‌ನ ಎದುರು ಕುಸಿಯಲಾರಂಭಿಸಿತು. ಅಂದಿನಿಂದ ಒನಿಡಾ ಮಾರುಕಟ್ಟೆಯಲ್ಲಿ ಉಳಿಯಲು ಅನೇಕ ಪ್ರಯತ್ನಗಳನ್ನು ಮಾಡಿದೆ. ಏರ್ ಕಂಡಿಷನರ್‌ಗಳು, ಮೈಕ್ರೋವೇವ್ ಓವನ್ಸ್ ಮತ್ತು ಮೊಬೈಲ್ ಫೋನ್‌ಗಳಂತಹ ಉತ್ಪನ್ನದಿಂದ ಬಂಡವಾಳವನ್ನು ವಿಸ್ತರಿಸಲು ಪ್ರಯತ್ನಿಸಿತು ಆದರೆ ಅದು ಹೆಚ್ಚು ಲಾಭವನ್ನು ಗಳಿಸಿಕೊಡಲಿಲ್ಲ.[೯][೧೦]
ಉಲ್ಲೇಖಗಳು
[ಬದಲಾಯಿಸಿ]- ↑ "2010 BSE Data". Bseindia.com. Retrieved 2010-08-30.
- ↑ "MIRC Electronics Limited". List-of-companies.org. Archived from the original on 22 May 2010. Retrieved 2010-08-02.
- ↑ "Riding The Trough". Businessworld.in. 24 October 2009. Retrieved 2010-08-02.
- ↑ "About us". Onida. Archived from the original on 2010-11-26. Retrieved 2010-08-02.
- ↑ Tripathi, Shailja (7 December 2014). "Give the devil his due". The Hindu. Retrieved 7 December 2014.
- ↑ "Onida to say goodbye to its 'iconic' devil: Rediff.com Business". Business.rediff.com. 7 September 2009. Retrieved 2010-08-02.
- ↑ "Interview of Mr. Gulu Mirchandani, Chairman & MD, Mirc Electronics". Indiainfoline.com. Retrieved 2010-08-02.
- ↑ https://www.scribd.com/.../Onida-Electronics-Wikipedia-The-Free-Encyclopedia
- ↑ "About us". Onida. Archived from the original on 2010-11-26. Retrieved 2010-08-02.
- ↑ https://economictimes.indiatimes.com/industry/cons-products/electronics/onida-attempts-to-live-up-to-its-tagline-neighbours-envy-owners-pride/articleshow/21112848.cms