ವಿಷಯಕ್ಕೆ ಹೋಗು

ಒರೆ (ಖನಿಜಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Streak plates with pyrite (left) and rhodochrosite (right)

ಒರೆ (ಖನಿಜಶಾಸ್ತ್ರ): ಖನಿಜದ ಪುಡಿಯನ್ನು ನಯವಿಲ್ಲದ ಪಿಂಗಾಣಿ ತಟ್ಟೆಯ ಮೇಲೆ ಉಜ್ಜಿದಾಗ ಕಾಣುವ ಬಣ್ಣ (ಸ್ಟ್ರೀಕ್). ಈ ತಟ್ಟೆಯ ಹೆಸರು ಒರೆಗಲ್ಲು (ಸ್ಟ್ರೀಕ್ ಪ್ಲೇಟ್). ಹಾಲುಕಾಗದದ ಮೇಲೆ ಖನಿಜವನ್ನು ಇಟ್ಟು ಪುಡಿಮಾಡುವುದರಿಂದಲೂ ಇದರ ಪರೀಕ್ಷೆ ಸಾಧ್ಯವಿದೆ. ಎಲ್ಲ ಲೋಹಗಳೂ ಲೋಹಕಾಂತಿ ಇರುವ ಬಹುತೇಕ ಖನಿಜಗಳೂ ಇಡಿಯಾಗಿರಲಿ ಪುಡಿಯಾಗಿರಲಿ ಒಂದೇ ಬಣ್ಣವನ್ನು ಪ್ರದರ್ಶಿಸುತ್ತವೆ. ಆದರೆ ಸಿಲಿಕೇಟುಗಳು ಮತ್ತು ಲೋಹಕಾಂತಿ ಇರದ ಬಹುತೇಕ ಖನಿಜಗಳು ಈ ಸನ್ನಿವೇಶಗಳಲ್ಲಿ ಪ್ರದರ್ಶಿಸುವ ಬಣ್ಣಗಳು ಬೇರೆ ಬೇರೆ. ಲೋಹಖನಿಜಗಳ ಅಧ್ಯಯನದಲ್ಲಿ ಒರೆ ಬಲುಮುಖ್ಯ ಭೌತಲಕ್ಷಣ. ಅದು ಇತರ ಲಕ್ಷಣಗಳನ್ನೆಲ್ಲ ಮೆಟ್ಟಿ ಎದ್ದುನಿಲ್ಲುತ್ತದೆ. ಇದರ ಪರಿಶೀಲನೆಯಿಂದ ಲೋಹದ ಪರಿಶುದ್ಧತೆಯನ್ನು ಗ್ರಹಿಸಬಹುದು. ಒರೆಗಲ್ಲಿಗೆ ಉಜ್ಜಿ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸುವುದು ಇದಕ್ಕೊಂದು ನಿದರ್ಶನ. ಕೆಲವು ಖನಿಜಗಳಲ್ಲಿ ಒರೆಗೂ ಖನಿಜದ ಬಣ್ಣಕ್ಕೂ ನಿರ್ದಿಷ್ಟ ವ್ಯತ್ಯಾಸ ತೋರಿ ಬರುವುದುಂಟು. ಇಂಥವುಗಳಲ್ಲಿ ಮುಖ್ಯವಾದುವನ್ನು ಇಲ್ಲಿ ಹೆಸರಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: