ವಿಷಯಕ್ಕೆ ಹೋಗು

ಒಸ್ಮಾನಿಯಾ ಬಿಸ್ಕೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಸ್ಮಾನಿಯಾ ಬಿಸ್ಕೆಟ್‍ಗಳು
Subhan_osmania_biscuits.jpg
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಹೈದರಾಬಾದ್
ವಿವರಗಳು
ಮುಖ್ಯ ಘಟಕಾಂಶ(ಗಳು)ಹಾಲು, ಹಿಟ್ಟು, ಉಪ್ಪು, ಸಕ್ಕರೆ

ಒಸ್ಮಾನಿಯಾ ಬಿಸ್ಕೆಟ್ ತೆಲಂಗಾಣದ ಹೈದರಾಬಾದ್‍ನ ಒಂದು ತಿನಿಸು.[] ಇದರ ಹೆಸರು ಹೈದರಾಬಾದ್ ರಾಜ್ಯದ ಕೊನೆಯ ಅರಸ, ಮೀರ್ ಒಸ್ಮಾನ್ ಅಲಿ ಖಾನ್‍ನಿಂದ ಬಂದಿದೆ.

ಇತಿಹಾಸ

[ಬದಲಾಯಿಸಿ]

ಈ ಬಿಸ್ಕೆಟ್‍ಗಳನ್ನು ಹೈದರಾಬಾದ್‍ನ ಕೊನೆಯ ನಿಜ಼ಾಮ್, ಮೀರ್ ಒಸ್ಮಾನ್ ಅಲಿ ಖಾನ್‍ನ ಬೇಡಿಕೆ ಮೇಲೆ ಮೊದಲು ಬೇಕ್ ಮಾಡಲಾಯಿತು. ಅವನಿಗೆ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಉಪ್ಪುಪ್ಪಾಗಿರುವ ತಿನಿಸು ಬೇಕಾಗಿತ್ತು. ಇಂದು, ಈ ನಗರದಲ್ಲಿ ಎಲ್ಲೇ ಆಗಲಿ ಈ ಬಿಸ್ಕೆಟ್‍ಗಳಿಲ್ಲದೆ ಸಂಜೆಯ ಚಹಾ ಅಪೂರ್ಣವಾಗಿರುತ್ತದೆ. ಒಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಆಹಾರ ತಜ್ಞರಿಗೂ ಇದರ ಸೃಷ್ಟಿಯನ್ನು ಹೊರಿಸಲಾಗಿದೆ. ಒಸ್ಮಾನಿಯಾದ ಅನನ್ಯ ರುಚಿಯು ಅನೇಕ ರೋಗಿಗಳು ಮತ್ತು ವೈದ್ಯರಿಗೆ ಇಷ್ಟವಾಯಿತು. ನಂತರ ಇದು ಭೇಟಿಕಾರರ ಗಮನ ಸೆಳೆಯಿತು. ಶೀಘ್ರದಲ್ಲೇ ಇದನ್ನು ಆಸ್ಪತ್ರೆಯ ಹತ್ತಿರದಲ್ಲಿನ ಕೆಫೆಗಳಲ್ಲಿ ಮಾರಾಟ ಮಾಡಲಾಯಿತು. ನಗರದಲ್ಲಿನ ಬೇಕರ್‌ಗಳಿಗೆ ತಮ್ಮ ಖಾದ್ಯಪಟ್ಟಿಯಲ್ಲಿ ಇರಾನಿ ಚಹಾದೊಂದಿಗೆ ಇದನ್ನು ಸೇರಿಸುವಂತೆ ಬೇಡಿಕೆ ಹೆಚ್ಚಿತು.[] []

ಉಲ್ಲೇಖಗಳು

[ಬದಲಾಯಿಸಿ]
  1. "Osmania Biscuit". Archived from the original on 2018-06-12. Retrieved 2018-03-29.
  2. Osmania biscuit-A tough cookie indeed
  3. http://timesofindia.indiatimes.com/life-style/food/food-features/Hyderabads-Osmania-biscuits-to-cross-borders/articleshow/47250214.cms