ಓ.ಎಲ್.ನಾಗಭೂಷಣಸ್ವಾಮಿ
ಗೋಚರ
ಪ್ರೊಫೆಸರ್ ಓ ಎಲ್ ನಾಗಭೂಷಣ ಸ್ವಾಮಿ[೧]ಯವರು ಕನ್ನಡದ ಪ್ರತಿಷ್ಠಿತ ಲೇಖಕರಲ್ಲೊಬ್ಬರು[೨]. ಜನನ: ೨೨ ಸೆಪ್ಟೆಂಬರ್, ೧೯೫೩. ತಂದೆ ಓ.ಎನ್.ಲಿಂಗಣ್ಣಯ್ಯ, ತಾಯಿ ಪುಟ್ಟಗೌರಮ್ಮ. ವಿದ್ಯಾಭ್ಯಾಸ: ಎಂ.ಎ ಇಂಗ್ಲಿಷ್ ೧೯೭೩, ಮೈಸೂರು ವಿಶ್ವವಿದ್ಯಾಲಯ, ಎಂ.ಎ ಕನ್ನಡ ೧೯೭೫, ಮೈಸೂರು ವಿಶ್ವವಿದ್ಯಾನಿಲಯ. ಉದ್ಯೋಗ: ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಶಿಕಾರಿಪುರ, ಸರ್ಕಾರಿ ಪ್ರಾಥಮ ದರ್ಜೆ ಕಾಲೇಜು ಆನೇಕಲ್, ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ, ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ, ಮಹಾರಾಣಿ ಮಹಿಳಾ ಕಲಾ ಕಾಲೇಜು ಬೆಂಗಳೂರು ಇಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ. ಜನವೆರಿ ೨೦೦೫ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ. ಕೆಲವು ವರ್ಷ ಶೇಷಾದ್ರಿಪುರಂ ಸ್ನಾತಕೋತ್ತರ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸ್ನಾತಕ ಪದವಿ ಪಡೆವವರಿಗೆ ತೂಕ ತಂದುಕೊಟ್ಟವರು.
ಕವನ ಸಂಕಲನಗಳು
[ಬದಲಾಯಿಸಿ]- ನಕ್ಷತ್ರಗಳು, (೧೯೭೩)
- ನಮ್ಮ ಕನ್ನಡ ಕಾವ್ಯ (೧೯೯೭)
ಸಾಹಿತ್ಯ ವಿಮರ್ಶೆ
[ಬದಲಾಯಿಸಿ]- ವಿಮರ್ಶೆಯ ಪರಿಭಾಷೆ (೧೯೮೩)
- ಪ್ರಜ್ಞಾಪ್ರವಾಹ ತಂತ್ರ (೧೯೮೫)
- ಇಂದಿನ ಹೆಜ್ಜೆ (೧೯೯೭)
- ಮತ್ತೆ ತೆರೆದ ಬಾಗಿಲು.
ಪ್ರವಾಸ ಕಥನ
[ಬದಲಾಯಿಸಿ]- ನನ್ನ ಹಿಮಾಲಯ, (೧೯೯೨)
ಸಂಪಾದಿತ ಕೃತಿಗಳು
[ಬದಲಾಯಿಸಿ]- ವಚನ ಸಾವಿರ (೨೦೦೪)
- ವಚನಗಳು, ನವಸಾಕ್ಷರರಿಗಾಗಿ
- ಅಲ್ಲಮ ವಚನ ಸಂಗ್ರಹ
- ತತ್ವಪದಗಳು, ಪ್ರಾತಿನಿಧಿಕ ಸಂಕಲನ, (ಸಂಪಾದಕ)
- ಮಲಯಾಳಂ ವೈಚಾರಿಕ ಬರಹಗಳು,(ಇತರರೊಡನೆ)
- ಆಧುನಿಕ ತಮಿಳು ಕವಿತೆ, ಅನುವಾದ (ಸಂಪಾದಕ)
ಅನುವಾದಗಳು
[ಬದಲಾಯಿಸಿ]- ಲಿಯೊ ಟಾಲ್ ಸ್ಟಾಯ್ ೦೩ ಕಥೆಗಳು (೨೦೦೭)
- ಯುದ್ಧ ಮತ್ತು ಶಾಂತಿ ಭಾಗ-೧,೨ (೨೦೧೦)
- ನಾನು ನೆನೆವ ಭವಿಷ್ಯ (ಚೇತನ ತ್ರಿಪಾಠಿ- ದ ಫ್ಯೂಚರ್ ಐ ರಿಕಾಲ್ ಕವನ ಸಂಕಲನ)(೨೦೧೨)
- ಎ.ಕೆ.ರಾಮಾನುಜನ್:ಆಯ್ದ ಪ್ರಬಂಧಗಳು(೨೦೧೨)
- ಅನುದಿನ ಚಿಂತನೆ (ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ)(೨೦೧೩)
- ವಿಚಾರ ಸಂಕಥನ - ೧(ಪೀಟರ್ ವ್ಯಾಟ್ಸನ್ ಕೃತಿ)(೨೦೧೬).
- ಬಿನ್ನಪ (ಟಾಲ್ ಸ್ಟಾಯ್ ಆತ್ಮಕತೆ ಕನ್ ಫೆಶನ್), ೨೦೧೭
- ಪಾಬ್ಲೊ ನೆರೂಡ ನೆನಪುಗಳು (ಮೆಮಾಯರ್ಸ್ ಆತ್ಮಕತೆ),೨೦೧೮
- ಮುಗ್ಧ ಪ್ರಬುದ್ಧ (ಒರ್ಹಾನ್ ಪಮುಕ್ ನ ಕೃತಿ),೨೦೧೯
- ಕೆಂಪು ಮುಡಿಯ ಹೆಣ್ಣು (ಒರ್ಹಾನ್ ಪಮುಕ್ ),೨೦೨೦
- ದುಃಖವಿರದ ಬದುಕಿಗಾಗಿ, ಜೆಕೆ ಕೃತಿಯ ಅನುವಾದ
- ದುಃಖಕ್ಕೆ ವಿದಾಯ, ಜೆಕೆ ಕೃತಿಯ ಅನುವಾದ
- ಪ್ರೀತಿ ಎಂದರೇನು, ಜೆಕೆ ಕೃತಿಯ ಅನುವಾದ
- ಸಂಬಂಧವೆಂದರೇನು, ಜೆಕೆ ಕೃತಿಯ ಅನುವಾದ
ಅಂಕಣ ಬರಹಗಳು
[ಬದಲಾಯಿಸಿ]- ಏಕಾಂತ ಲೋಕಾಂತ.
- ನುಡಿಯೊಳಗಾಗಿ,
ಆಂಗ್ಲ ಕೃತಿಗಳು
[ಬದಲಾಯಿಸಿ]- ಚಕೋರಿ, ಚಂದ್ರಶೇಖರ ಕಂಬಾರ ಅವರ ಕನ್ನಡ ಕಾದಂಬರಿಯ ಅನುವಾದ
- ತುಕ್ರಾಸ್ ಡ್ರೀಮ್, ಚಂದ್ರಶೇಖರ ಕಂಬಾರರ ಕನ್ನಡ ನಾಟಕದ ಅನುವಾದ
- ಯೇಗ ಹ್ಯಾಸ್ ಇಟ್ ಆಲ್, ಬೆಳಗೆರೆ ಕೃಷ್ಣಶಾಸ್ತ್ರಿಯವರ ಕೃತಿಯ ಇಂಗ್ಲಿಷ್ ಅನುವಾದ
- ಬಿಟ್ವೀನ್ ಯು ಅಂಡ್ ಮಿ, ಜಿ. ಎಸ್. ಶಿವರುದ್ರಪ್ಪ ಅವರ ಕವಿತೆಗಳ ಇಂಗ್ಲಿಷ್ ಅನುವಾದ
- ರಾಕ್ಸ್ ಆಫ್ ಹಂಪಿ, ಚಂದ್ರಶೇಖರ ಕಂಬಾರರ ಕವಿತೆಗಳ ಅನುವಾದ
- ಡೆಟ್ ಅಂಡ್ ಅದರ್ ಸ್ಟೋರೀಸ್, ಮನುಬಳಿಗಾರ ಅವರ ಕಥೆಗಳ ಅನುವಾದ
ಮನ್ನಣೆ, ಗೌರವ
[ಬದಲಾಯಿಸಿ]- ವಿಮರ್ಶೆಯ ಪರಿಭಾಷೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ
- ವಿಮರ್ಶೆಯ ಪರಿಭಾಷೆಗೆ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಬಹುಮಾನ
- ಚಕೋರಿ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ[೩]
- ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
- ಜಿ.ಎಸ್.ಎಸ್.ಪ್ರಶಸ್ತಿ
ಹೊರಗಿನ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]