ವಿಷಯಕ್ಕೆ ಹೋಗು

ಕಚಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kachin State
ကချင်ပြည်နယ်
Flag of Kachin State
Location of Kachin State in Myanmar
Location of Kachin State in Myanmar
Country Myanmar
RegionNorthern
CapitalMyitkyina
Government
 • Chief MinisterLa John Ngan Hsai[] (USDP)
 • LegislatureKachin State Hluttaw
Area
 • Total೮೯,೦೪೧.೮ km (೩೪,೩೭೯.೨ sq mi)
Population
 • Total೧೬,೮೯,೪೪೧
 • Density೧೯/km (೪೯/sq mi)
Demographics
 • EthnicitiesKachin, Bamar, Shan, Naga, Chinese, Indians, Gurkha,
 • ReligionsTheravada Buddhism, Christianity
Time zoneUTC+06:30 (MST)

ಕಚಿನ್ : ಮಯನ್ಮಾರಿನ ಈಶಾನ್ಯ ಭಾಗದಲ್ಲಿರುವ ರಾಜ್ಯ. 1947ರ ಸಂವಿಧಾನಕ್ಕನುಗುಣವಾಗಿ ಏರ್ಪಟ್ಟಿತು. ವಾಯವ್ಯಕ್ಕೆ ಭಾರತ, ಉತ್ತರಕ್ಕೆ ಟಿಬೆಟ್, ಪೂರ್ವಕ್ಕೆ ಚೀನ ಇದರ ಮೇರೆಗಳು. ಬ್ರಿಟಿಷ್ ಬರ್ಮದ ಜಿಲ್ಲೆಗಳಾಗಿದ್ದ ಭಾಮೊ ಮತ್ತು ಮ್ಯಿಚೀನಾಗಳೂ ಉತ್ತರದ ಪುಟಾ-ಒ ಜಿಲ್ಲೆಯೂ ಈ ರಾಜ್ಯಕ್ಕೆ ಸೇರಿವೆ. ಇರಾವಾಡಿ ನದಿಯ ಮೇಲ್ದಂಡೆಯ ಮೇಲಿರುವ ಮ್ಯಿಚೀನಾ ಇದರ ರಾಜಧಾನಿ. ಇದೊಂದು ರೈಲ್ವೆನಿಲ್ದಾಣ. ಭಾಮೊ ಮತ್ತು ಮೋಗೌಂಗ್ ಇತರ ಪಟ್ಟಣಗಳು. ಇಲ್ಲಿಯ ಪರ್ವತಸೀಮೆಯಲ್ಲಿ ವಾಸವಾಗಿರುವ ಜನ ಕಚಿನರು. ರೈಲುಮಾರ್ಗದ ಪ್ರದೇಶದಲ್ಲೂ ದಕ್ಷಿಣದ ಕಣಿವೆಗಳಲ್ಲೂ ಇರುವವರು ಷಾನ್ ಮತ್ತು ಬರ್ಮೀಯರು. ಈ ಜಿಲ್ಲೆಯ ಉತ್ತರ ಗಡಿಸೀಮೆಯ ವಿಚಾರವಾಗಿ ಮಯನ್ಮಾರಿಗೂ ಚೀನಕ್ಕೂ ನಡುವೆ 1960ರ ದಶಕದ ಆದಿಕಾಲದ ವರೆಗೂ ವ್ಯಾಜ್ಯವಿತ್ತು. ಈ ಜಿಲ್ಲೆಯ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರದಲ್ಲಿ ಒಬ್ಬ ಮಂತ್ರಿಯಿದ್ದಾನೆ. ಸು. 7,00,000 ಜನಸಂಖ್ಯೆಯಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Division and State Administrations". Alternative Asean Network on Burma. 8 July 2011. Archived from the original on 25 ಡಿಸೆಂಬರ್ 2018. Retrieved 21 August 2011.
  2. Census Report. The 2014 Myanmar Population and Housing Census. Vol. 2. Naypyitaw: Ministry of Immigration and Population. May 2015. p. 17.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಚಿನ್&oldid=1054004" ಇಂದ ಪಡೆಯಲ್ಪಟ್ಟಿದೆ