ಕಟ್ಟುಮರ
ಮರದ ಕೆಲವು ತುಂಡುಗಳನ್ನು ಒಟ್ಟಾಗಿ ಸೇರಿಸಿ ಕೊನೆಗಳನ್ನು ಚೂಪಾಗಿ ಮಾಡಿ ದೋಣಿಯ[೧] ಆಕಾರದಲ್ಲಿ ಕಟ್ಟಿದ ತೆಪ್ಪ. ಇದೇ ಶಬ್ದ ಇಂಗ್ಲಿಷಿನಲ್ಲಿ ಕ್ಯಾಟಮರಾನ್[೨] (ಕಟ್ಟು+ಮರಂ) ಆಗಿದೆ.
ನಿರ್ಮಾಣ
[ಬದಲಾಯಿಸಿ]ಸಾಮಾನ್ಯವಾಗಿ ನಾಲ್ಕು ತುಂಡುಗಳನ್ನು ಬೋಲ್ಟ್ ಮತ್ತು ನಟ್ಟುಗಳಿಂದ ಜೋಡಿಸುವುದು ಈಚೆಗೆ ರೂಢಿಯಾಗಿದೆ. ನಡುವಿನ ಎರಡು ತುಂಡುಗಳು ಎರಡಕ್ಕಿಂತ ತಗ್ಗಾಗಿಯೂ ಉದ್ದವಾಗಿಯೂ ಇದ್ದು ಅದರ ಮೇಲೆ ಆಲೆಗಳು ಬಡಿದು ಏಳುವ ನೊರೆ ಹೆಚ್ಚಾಗಿರುವ ಸಮುದ್ರತೀರಗಳಲ್ಲಿ ಮೀನುಗಳನ್ನು ಹಿಡಿಯುವುದಕ್ಕೆ ಕಟ್ಟುಮರದಿಂದ ಬಹಳ ಅನುಕೂಲವಾಗುತ್ತದೆ. ಭದ್ರವಾಗಿರುವುದಕ್ಕಾಗಿ ಕೆಲವು ವೇಳೆ ಎರಡು ಕಟ್ಟುಮರಗಳನ್ನು ಜೋಡಿಸಿ ಹಗ್ಗಗಳಿಂದ ಬಿಗಿಯುತ್ತಾರೆ.
ಉಪಯೋಗ
[ಬದಲಾಯಿಸಿ]ಸಾಮಾನ್ಯವಾಗಿ ಬೆಳಗಿನ ಜಾವ ಕಟ್ಟುಮರದ ಮೇಲೆ ಕುಳಿತು ಹೊರಟವರು ಸಾಯಂಕಾಲ ಮೀನುಗಳನ್ನು ಹೇರಿಕೊಂಡು ಬಂದು ಅವನ್ನು ಮಾರಿ ಅನ್ನಬಟ್ಟೆಗಳನ್ನು ಒದಗಿಸಿಕೊಳ್ಳುತ್ತಾರೆ. ಹಿಂತಿರುಗಿ ಬರುವಾಗ ಗಾಳಿಯ ಅನುಕೂಲವಿದ್ದರೆ ಒಂದು ಪಟವನ್ನು ಕಟ್ಟುತ್ತಾರೆ. ನಮ್ಮ ದೇಶದ ಸಮುದ್ರತೀರದ ಸಾವಿರಾರು ಸಂಸಾರಗಳಿಗೆ ಈ ಸಣ್ಣ ಉಪಕರಣದಿಂದ ಜೀವನೋಪಾಯ ನಡೆಯುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]