ಕಡಪ ಜಿಲ್ಲೆ
{{{native_name}}} | |
ಜಿಲ್ಲೆ | Kadapa |
ವಿಸ್ತಾರ | {{{area_total}}} km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
{{{population_total}}} - {{{population_density}}}/ಚದರ ಕಿ.ಮಿ. |
ಅಂತರ್ಜಾಲ ತಾಣ: http://kadapa.ap.nic.in/ |


ಕದಪ್ಪ ಜಿಲ್ಲೆಯು ರಾಯಲಾಸೀಮಾದ ಕೇಂದ್ರವಾಗಿರುವುದರಿಂದ ಕೇಂದ್ರೀಯವಾಗಿ ನೆಲೆಗೊಂಡಿದೆ ಮತ್ತು ರಾಯಲಾಸೀಮಾದ ೪ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿದೆ. ಜಿಲ್ಲೆಯು ಅದ್ಭುತ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಕಡಪಾ ಜಿಲ್ಲೆಯು ಭಾರತದ ಆಂಧ್ರಪ್ರದೇಶದ ೧೩ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ರಾಜ್ಯದ ರಾಯಲಾಸೀಮಾ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಒಂದಾಗಿದೆ. ಕದಪ ನಗರವು ಜಿಲ್ಲೆಯ ಆಡಳಿತದ ಸ್ಥಾನವಾಗಿದೆ.

ಭೌಗೋಳಿಕ
[ಬದಲಾಯಿಸಿ]
ಕಡಪಾ ಜಿಲ್ಲೆಯು ೧೫,೯೩೮ ಚದರ ಕಿಲೋಮೀಟರ್ (೬,೧೫೪ ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ, ಇದು ಕೆನಡಾದ ಪ್ರಿನ್ಸ್ ಪ್ಯಾಟ್ರಿಕ್ ದ್ವೀಪಕ್ಕೆ ಸಮಾನವಾಗಿದೆ.
ಪೆನ್ನಾ, ಚಿತ್ರವತಿ, ಕುಂದೆರು, ಪಾಪಾಗ್ನಿ, ಸಾಗಿಲೆರು, ಬಹಡ ಮತ್ತು ಚೆಯೈರು ಈ ಜಿಲ್ಲೆಯ ಮುಖ್ಯ ನದಿಗಳು.
ಜನಸಂಖ್ಯೆ
[ಬದಲಾಯಿಸಿ]೨೦೧೧ ರ ಜನಗಣತಿಯ ಪ್ರಕಾರ ಕಡಪ ಜಿಲ್ಲೆಯಲ್ಲಿ ೨,೮೮೪,೫೨೪ಜನಸಂಖ್ಯೆ ಇದೆ, ಹಿಂದೂಗಳು ೮೩.೭%, ಮುಸ್ಲಿಮರು ೧೪% ಮತ್ತು ಕ್ರಿಶ್ಚಿಯನ್ನರು ೨.೩%ರಷ್ಟಿದೆ ಇದು ಜಮೈಕಾ ಅಥವಾ ಯು.ಎಸ್. ರಾಜ್ಯದ ಅರ್ಕಾನ್ಸಾಸ್ ದೇಶಕ್ಕೆ ಸಮನಾಗಿರುತ್ತಾರೆ. ಇದು ಭಾರತದಲ್ಲಿ ೧೩೨ ನೇ ಸ್ಥಾನದಲ್ಲಿದೆ (ಒಟ್ಟು ೬೪೦ ರಲ್ಲಿ). ಜಿಲ್ಲೆಯು ಪ್ರತಿ ಚದರ ಕಿಲೋಮೀಟರಿಗೆ ೧೮೮ ನಿವಾಸಿಗಳ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ (೪೯೦ / ಚದರ ಮೈಲಿ). ೨೦೦೧-೨೦೧೧ರ ದಶಕದಲ್ಲಿ ಇದರ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ೧೦.೮೭% ಆಗಿತ್ತು. ಕಡಪ ಜಿಲ್ಲೆಯು ಪ್ರತಿ ೧೦೦೦ ಪುರುಷರಿಗೆ೯೮೪ ಹೆಣ್ಣು ಮಕ್ಕಳ ಅನುಪಾತ ಮತ್ತು ೬೭.೮೮% ನಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.

ಉಲ್ಲೇಖಗಳು
[ಬದಲಾಯಿಸಿ]