ಪರಕೀಯರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿ ಸ್ವಾತಂತ್ರ ದೊರಕಿಸಲು ಹಲವರು ತಮ್ಮದೇ ರೀತಿಯಲ್ಲಿ ಹೋರಾಟವನ್ನು ಕೈಗೊಂಡಿದ್ದಾರೆ. ಈ ದಿಸೆಯಲ್ಲಿ ಕನ್ನೇಶ್ವರ ರಾಮ ಶ್ರೀಮಂತರ ಮನೆಯನ್ನು ಕೊಳ್ಳೆ ಹೊಡೆದು, ದರೋಡೆ ನಡೆಸಿ ಬಡವರಿಗೆ ಸಹಾಯ ಮಾಡುವ ಮೂಲಕ ಚರಿತ್ರೆ ರಚಿಸಿದ ಸ್ವಾತಂತ್ರ್ಯ ಹೋರಾಟಗಾರ. ಈತನ ಹೋರಾಟದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.