ವಿಷಯಕ್ಕೆ ಹೋಗು

ಕರಿಮಣಿ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಿಮಣಿ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ [] []. 19 ಫೆಬ್ರವರಿ 2024 ರಂದು ಮೊದಲ ಸಂಚಿಕೆ ರಾತ್ರಿ 9:30 ಗಂಟೆಗೆ ಪ್ರಸಾರವಾಯಿತು. ಪ್ರಸ್ತುತ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 6: 00 ಗಂಟೆಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಅಶ್ವಿನ್ ಯಾದವ್, ಸ್ಪಂದನಾ ಸೋಮಣ್ಣ, ಅಮೇರಿಕಾ ಅಮೇರಿಕಾ ಖ್ಯಾತಿಯ ಹೇಮಾ ಪ್ರಭಾತ್, ನಾಗೇಂದ್ರ ಶಾ ಮತ್ತು ಪ್ರಥಮಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ [].


ಕರಿಮಣಿ (ಕನ್ನಡ ಧಾರಾವಾಹಿ)
ಟೈಟಲ್ ಕಾರ್ಡ್
ಶೈಲಿದೈನಂದಿನ ಧಾರಾವಾಹಿ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)ದೀಪಕ್ ಮಹಾದೇವ್
ಸಂಕಲನಕಾರರುರಾಜು ಆರ್ಯನ್
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ20-22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವೃದ್ಧಿ ಕ್ರಿಯೆಷನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ (ವಿಯಾಕಾಂ 18)
ಮೂಲ ಪ್ರಸಾರಣಾ ಸಮಯ19 ಫೆಬ್ರವರಿ 2024 – ಪ್ರಸ್ತುತ


ಕಥಾ ಸಾರಾಂಶ

[ಬದಲಾಯಿಸಿ]

ಪದವಿ ಮಾಡುತ್ತಿರುವ ಸಾಹಿತ್ಯ ತಾಯಿಯಿಲ್ಲದೆ ಬೆಳದಿರುವ ಹುಡುಗಿಯಾಗಿದ್ದಾಳೆ. ಸಾಹಿತ್ಯಳನ್ನು ಅವಳ ತಂದೆ ಯಾವುದೇ ಕುಂದುಕೊರೆತೆ ಬಾರದಾಗೆ ಬೆಳೆಸಿರುತ್ತಾರೆ. ಅನಾರೋಗ್ಯದಿಂದ ಇರುವ ಇವರಿಗೆ ತನ್ನ ಮಗಳು ಸಾಹಿತ್ಯಳಾ ಮದುವೆ ನೋಡ ಬೇಕೆಂಬ ಕನಸು ಇರುತ್ತದೆ. ಇತ್ತ ಕರ್ಣ ಶ್ರೀಮಂತ ಕುಟುಂಬದಿಂದ ಬಂದವನು. ಅವನು ನಿಷ್ಠಾವಂತನಾಗಿದ್ದರೂ, ಅವನಿಗೆ ಕೆಲವು ಕಹಿಯಾದ ಭೂತಕಾಲವಿದೆ, ಅದನ್ನು ಅವನು ಬಹಿರಂಗಪಡಿಸಲು ಬಯಸುವುದಿಲ್ಲ.

ಕರ್ಣ ಹೆಸರಿಗೆ ತಕ್ಕನಾದ ಗುಣದವನಾಗಿರುತ್ತಾನೆ. ಯಾರಿಗೂ ನೋವು ಮಾಡುವುದಕ್ಕೆ ಆಗಲಿ, ಅನ್ಯಾಯವಾಗುವುದಕ್ಕಾಗಲಿ ಬಿಡುವುದಿಲ್ಲ. ಕರ್ಣನ ಮುಂದೆ ಯಾರೇ ಕಷ್ಟದಲ್ಲಿದ್ದರು ಅವರಿಗೆ ಸಹಾಯ ಮಾಡುತ್ತಾನೆ. ಸಾಹಿತ್ಯಾಳ ಅಪ್ಪನ ಪ್ರಾಣವನ್ನು ಒಮ್ಮೆ ಉಳಿಸಿದ್ದನು. ಸ್ನೇಹಿತನ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ, ಯಾರದ್ದೋ ಮದುವೆ ನಿಲ್ಲಿಸಲು ಹೋಗಿ, ಸಾಹಿತ್ಯಾಳ ಮದುವೆಯನ್ನು ನಿಲ್ಲಿಸಿ ಬಂದಿದ್ದಾನೆ. ಸಾಹಿತ್ಯ ಮದುವೆಯ ದಿನವೇ ಕರ್ಣ ತಾವಿಬ್ಬರು ಮದುವೆಯಾಗಿದ್ದೇವೆ ಎಂಬ ವಿಷಯವನ್ನು ಎಲ್ಲರ ಮುಂದೆ ಬಹಿರಂಗ ಪಡಿಸಿ, ಅವಳ ಬಳಿ ವಿಚ್ಛೇದನ ಕೋರುತ್ತಾನೆ.

ಮಾನ ಮಾರ್ಯದೆಯಿಂದ ಬದುಕಿದ್ದ ಸಾಹಿತ್ಯಾಳ ತಂದೆ ವಿಶ್ವಾನಾಥ್ ಅವರಿಗೆ ಈ ಘಟನೆಯಿಂದ ಅಘಾತವಾಗಿ ಆಸ್ಪತ್ರೆ ಸೇರುವಂತೆ ಆಗುತ್ತದೆ. ಸಾಹಿತ್ಯ ಹಾಗೂ ಅವಳ ಕುಟುಂಬಕ್ಕೆ ಅವಮಾನವಾಗಿರುತ್ತದೆ. ಸುದ್ದಿ ವಾಹಿನಿಗಳಲ್ಲಿ ಸಾಹಿತ್ಯ ಕುರಿತಾಗಿ ಬ್ರೇಕಿಂಗ್ ನ್ಯೂಸ್ ಬರ್ತಿದ್ದನ್ನು ಕಂಡ ಕರ್ಣನ ಸ್ನೇಹಿತ ಸಂತೋಷ್, ‘’ನನಗೆ ಮೋಸ ಮಾಡಿದವಳು ಮೋನಿಕಾ. ಸಾಹಿತ್ಯ ಅಲ್ಲ! ಸಾಹಿತ್ಯ ಮದುವೆಯನ್ನ ನಿಲ್ಲಿಸಿ ದೊಡ್ಡ ಅನ್ಯಾಯ ಮಾಡಿದ್ದೀಯಾ ಎಂದು ಕರ್ಣನಿಗೆ ಹೇಳುತ್ತಾನೆ. ಸಂತೋಷ್‌ಗೆ ಮೋಸ ಮಾಡಿದ ಹುಡುಗಿ ಯಾರು ಅಂತ ಸರಿಯಾಗಿ ತಿಳಿದುಕೊಳ್ಳದೆ, ಸಾಹಿತ್ಯ ಬದುಕನ್ನ ಹಾಳು ಮಾಡಿದ್ದೇನೆ. ಕರ್ಣನಿಗೆ ತಾನು ಎಡವಟ್ಟು ಮಾಡಿದ್ದೇನೆ ಎಂಬವುದು ಅರಿವಾಗುತ್ತದೆ.

ನಿರ್ಮಾಣ

[ಬದಲಾಯಿಸಿ]

ಪ್ರಸಾರ

[ಬದಲಾಯಿಸಿ]

ಕಲರ್ಸ್ ಕನ್ನಡದಲ್ಲಿ 19ನೇ ಫೆಬ್ರವರಿ 2024 ರಂದು ರಾತ್ರಿ 9:30 ಗಂಟೆಗೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿತ್ತು. ಆದರೆ ಬಿಗ್ ಬಾಸ್‌ನ ಪ್ರಸಾರದಿಂದ ಧಾರಾವಾಹಿಯು ಸಂಜೆ ಆರು ಗಂಟೆಗೆ ತನ್ನ ಪ್ರಸಾರವನ್ನು ಪ್ರಾರಂಭಿಸಿತು. ಈ ಧಾರಾವಾಹಿ ಸಂಚಿಕೆಗಳನ್ನು ಜಿಯೋ ಸಿನಿಮಾದಲ್ಲಿ ಕೂಡ ವೀಕ್ಷಣೆ ಮಾಡಬಹುದು.


ಪಾತ್ರವರ್ಗ

[ಬದಲಾಯಿಸಿ]

ಮುಖ್ಯ ಪಾತ್ರಗಳು

[ಬದಲಾಯಿಸಿ]
  • ಸ್ಪಂದನಾ ಸೋಮಣ್ಣ[]: ಕಥಾ ನಾಯಕಿ ಸಾಹಿತ್ಯ ಪಾತ್ರದಲ್ಲಿ.
  • ಅಶ್ವಿನ್ ಯಾದವ್[]: ಕಥಾ ನಾಯಕ ಕರ್ಣ ಪಾತ್ರದಲ್ಲಿ.

ಪೋಷಕ ಪಾತ್ರಗಳು

[ಬದಲಾಯಿಸಿ]
  • ಸುಚೇಂದ್ರ ಪ್ರಸಾದ್: ವಿಶ್ವನಾಥ್ ಪಾತ್ರದಲ್ಲಿ. ಸಾಹಿತ್ಯ ತಂದೆಯಾಗಿ
  • ಅನುಷಾ ರಾವ್: ಅರುಂಧತಿ ಪಾತ್ರದಲ್ಲಿ. ಕರ್ಣನ ಮಲತಾಯಿಯಾಗಿ.
  • ಹೇಮಾ ಪ್ರಭಾತ್: ಅನುರಾಧ ಆಲಿಯಾಸ್ ರಾಧಾ ಮಿಸ್ ಪಾತ್ರದಲ್ಲಿ. ಕರ್ಣನ ಹೆತ್ತತಾಯಿಯಾಗಿ.
  • ಅಪೂರ್ವ ಕಾಸವರಳ್ಳಿ: ರಾಜೇಂದ್ರ ಪ್ರಸಾದ್ ಪಾತ್ರದಲ್ಲಿ. ಕರ್ಣನ ತಂದೆಯಾಗಿ. ಅನುರಾಧ ಮತ್ತು ಅರುಂಧತಿ ಗಂಡನಾಗಿ.
  • ರೇಣುಕಾ ಬಳ್ಳಿ: ಪಾಪಮ್ಮ ಪಾತ್ರದಲ್ಲಿ
  • ರಾಜೇಂದ್ರ ಕಾರಂತ್ : ವೆಂಕಟೇಶ್ ಪಾತ್ರದಲ್ಲಿ
  • ನಾಗೇಂದ್ರ ಶಾ: ದಯನಂದಾ ಪಾತ್ರದಲ್ಲಿ
  • ದೀಪಾ ರವಿಶಂಕರ್: ನಳಿನಿ ಪಾತ್ರದಲ್ಲಿ
  • ಪ್ರಥಮ ಪ್ರಸಾದ್: ವನಜಾ ಪಾತ್ರದಲ್ಲಿ
  • ಪ್ರಸನ್ನ: ನಾಗಾರಾಜ್ ಭಟ್
  • ಕೀರ್ತನ ರಾಜ್: ಸಿಂಚನ ಪಾತ್ರದಲ್ಲಿ
  • ರಜನೀಶ್ ಗೌಡ: ಭರತ್ ಪಾತ್ರದಲ್ಲಿ
  • ವಿಶ್ವಾಸ್ : ಅದ್ವಿತ್ ಪಾತ್ರದಲ್ಲಿ
  • ಶೀಮತಿ: ಆಯಿ ಪಾತ್ರದಲ್ಲಿ, ಅರುಂಧತಿ ತಾಯಿಯಾಗಿ.
  • ಪೂಜಾ: ಗ್ರೀಷ್ಮಾ ಪಾತ್ರದಲ್ಲಿ
  • ರಾಜ್: ಸ್ವರೂಪ್ ಪಾತ್ರದಲ್ಲಿ
  • ರಾಮಕೃಷ್ಣ: ರಾಮಚಂದ್ರಪ್ಪ ಪಾತ್ರದಲ್ಲಿ. ಸಾಹಿತ್ಯಾಳ ಅಜ್ಜನಾಗಿ

ಉಲ್ಲೇಖಗಳು

[ಬದಲಾಯಿಸಿ]
  1. "ಮೂರೇ ಮೂರು ದಿನಗಳಲ್ಲಿ ಶುರುವಾಗ್ತಿದೆ ಹೊಸ ಧಾರಾವಾಹಿ - ಕರಿಮಣಿ". News18 Kannada. Retrieved 16 ಫೆಬ್ರವರಿ 2024.
  2. "karimani: A tale of love, betrayal, and family secrets". ಟೈಮ್ಸ ಆಫ್‌ ಇಂಡಿಯಾ. Retrieved 20 ಫೆಬ್ರವರಿ 2024.
  3. "ಕರಿಮಣಿ ಧಾರಾವಾಹಿಯ ಪಾತ್ರವರ್ಗ". ವಿಜಯ ಕರ್ನಾಟಕ. Retrieved 4 Mar 2024.
  4. "ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ". ಫಿಲ್ಮಿಬೀಟ್ ಕನ್ನಡ. Retrieved 29 ಜನವರಿ 2024.
  5. "ಫಿಟ್ನೆಸ್ ಫ್ರೀಕ್..ರಂಗಭೂಮಿ ಕಲಾವಿದ: ಕರಿಮಣಿ ಸೀರಿಯಲ್ ನಾಯಕ ಕರ್ಣ ಕುರಿತ ನಿಮಗೆ ಗೊತ್ತಿರದ ವಿಷಯಗಳಿವು!". ಫಿಲ್ಮಿಬೀಟ್ ಕನ್ನಡ. Retrieved 3 ಏಪ್ರಿಲ್ 2024.


ಬಾಹ್ಯಕೊಂಡಿಗಳು

[ಬದಲಾಯಿಸಿ]