ವಿಷಯಕ್ಕೆ ಹೋಗು

ಕರುಣೆಯ ಗೋಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರುಣೆಯ ಗೋಡೆ ಮೈಸೂರು, ಭಾರತ.

ಉಳ್ಳವರು ಮತ್ತು ಇಲ್ಲದವರ ನಡುವೆ ಸೇತುವೆಯಾಗಿ ನಗರದ ಪ್ರಮುಖ ಸ್ಥಳದಲ್ಲಿ ಸುಣ್ಣ ಬಣ್ಣ ಹಚ್ಚಿ ಸುಂದರ ಗೋಡೆ ನಿರ್ಮಿಸಲಾಗುತ್ತದೆ. ಆ ಗೋಡೆಗೆ ಸೆಲ್ಟರ್‌ ನಿರ್ಮಾಣ ಮಾಡಿ, ಅಲ್ಲಿ ಕಪಾಟು ಇಡಲಾಗುತ್ತದೆ. ಈ ಗೋಡೆಯೇ '''ಕರುಣೆಯ ಗೋಡೆ'''.ಯಾರೇ ಆಗಲಿ, ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿ ತಂದಿಡಬಹುದು. ಬಟ್ಟೆ, ವಸ್ತು, ಶಾಲೆ ಮಕ್ಕಳು ಉಪಯೋಗಿಸುವ ಪುಸ್ತಕ, ಪೆನ್ನು, ಲೇಖನ ಸಾಮಗ್ರಿ ಸೇರಿದಂತೆ ಬಟ್ಟೆ, ಪರ್ಸ್‌, ಶೂ, ಚಪ್ಪಲಿ ಮುಂತಾದ ವಸ್ತುಗಳನ್ನು ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಯಾವುದೇ ಮುಜುಗರವಿಲ್ಲದೆ ಇಲ್ಲಿ ತಂದಿಡಬಹುದು. ತಮಗೆ ಇಂಥ ವಸ್ತು ಬೇಕು ಎನ್ನುವರು ಇಲ್ಲಿ ಇರುವ ವಸ್ತುವನ್ನು ತೆಗದುಕೊಳ್ಳಬಹುದು. ಇಲ್ಲಿ ಯಾರನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ತೆಗೆದುಕೊಳ್ಳುವವರಿಗೆ ಮತ್ತು ವಸ್ತು ಇಡುವವರಿಗೆ ಮುಜುಗರ ಆಗಬಾರದೆಂದು ನೋಡಿಕೊಳ್ಳಲು ಯಾರು ಇರುವುದಿಲ್ಲ.[]

ಘೋಷ ವಾಕ್ಯ

[ಬದಲಾಯಿಸಿ]

ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ

ಹಿನ್ನಲೆ

[ಬದಲಾಯಿಸಿ]

ಇರಾನ್‌ನಲ್ಲಿ ಮೊದಲಿಗೆ ಪ್ರಾರಂಭವಾದ ವಾಲ್‌ ಆಫ್‌ ಕೈಂಡ್‌ನೆಸ್‌ ಸಂಸ್ಕೃತಿ ಆರಂಭದಲ್ಲಿ ಇರಾನ್ನ ಮಶ್ಹಾದ್ನ ನಿರಾಶ್ರಿತ ಜನರಿಗೆ ಸಹಾಯ ಮಾಡಲು ಪ್ರಾರಂಭಿಸಲಾಯಿತು , ಇದು ಜನರಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಿತು. ಸಾಮಾಜಿಕ ಮಾಧ್ಯಮಕ್ಕೆ ಪ್ರತಿಕ್ರಿಯೆಯಾಗಿ, ಹೆಚ್ಚಿನ ಸಂಖ್ಯೆಯ ಜನರು ಅಭಿಯಾನದಂತೆ ಭಾಗವಹಿಸಿದರು ಮತ್ತು ಶೀತ ಚಳಿಗಾಲದ ಹವಾಮಾನದ ಅವಧಿಯಲ್ಲಿ ಇದು ಅನೇಕ ನಿರಾಶ್ರಿತರಿಗೆ ಸಹಾಯವಾಯಿತು. ಜಗತ್ತಿನ ನಾನಾ ದೇಶಗಳಿಗೆ ಈ ಸಂಸ್ಕೃತಿ ಪ್ರಾರಂಭವಾಗಿದೆ . ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಈ ಸಂಸ್ಕೃತಿ ಪರಿಚಯವಾಗುತ್ತಿದೆ.

ಮೈಸೂರಿನಲ್ಲಿ

[ಬದಲಾಯಿಸಿ]

ಮೈಸೂರಿನ ಪ್ರಮುಖ ಸ್ಥಳವಾದ ಹೆಚ್ಚು ಜನರು ಓಡಾಡುವ ಜಾಗವಾದ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ದಾಸಪ್ಪ ವೃತ್ತದಲ್ಲಿ ಈ ವಾಲ್‌ ಆಫ್‌ ಕೈಂಡ್‌ನೆಸ್‌ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರಿನಾದ್ಯಂತ ಇಂತಹ ಗೋಡೆ ನಿರ್ಮಿಸುವ ಯೋಜನೆ ಇದ್ದು, ಶಾಲಾ ಕಾಲೇಜು ಇರುವ ಸ್ಥಳ, ಸ್ಲಂ, ಬಸ್‌ ನಿಲ್ದಾಣ, ಕಾರ್ಪೊರೇಟ್‌ ಕಂಪನಿಗಳಿರುವ ಜಾಗ, ವಸತಿ ಪ್ರದೇಶ, ಗ್ರಾಮಾಂತರ ಪ್ರದೇಶ ಸೇರಿದಂತೆ 5 ಸ್ಥಳಗಳಲ್ಲಿ ನಿರ್ಮಿಸುವ ಗುರಿ ಹೊಂದಿದೆ.[]


ಉಲ್ಲೇಖಗಳು

[ಬದಲಾಯಿಸಿ]
  1. ಉಳ್ಳವರು, ಇಲ್ಲದವರ ನಡುವೆ ‘ಕರುಣೆಯ ಗೋಡೆ’ www.vijaykarnataka.indiatimes.com
  2. "ಮೈಸೂರಿನಲ್ಲಿ ಕರುಣೆಯ ಗೋಡೆ ಮಳಿಗೆ ಪ್ರಾರಂಭ...ಇದರ ವಿಶೇಷತೆ ಏನ್‌ ಗೊತ್ತೆ!?". www.kannada.eenaduindia.com ,4 September 2017.


ಬಾಹ್ಯ ಕೊಂಡಿಗಳು

[ಬದಲಾಯಿಸಿ]