ವಿಷಯಕ್ಕೆ ಹೋಗು

ಕರ್ಣಾಟಕದ ಅರಣ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ

[ಬದಲಾಯಿಸಿ]

 ಪ್ರಪಂಚದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಭಾರತದಲ್ಲಿರುವ ಅರಣ್ಯಪ್ರದೇಶ ಬಹು ಕಡಿಮೆ. ಪ್ರಪಂಚದ 1.8% ಅರಣ್ಯಪ್ರದೇಶ ಮಾತ್ರ ಭಾರತದಲ್ಲಿದೆ. ಏಷ್ಯವನ್ನು ಮಾತ್ರ ತೆಗೆದುಕೊಂಡರೆ ಅದರ 15% ಮಾತ್ರ. ಪ್ರಪಂಚದ ತಲಾ ಅರಣ್ಯಪ್ರದೇಶ 1.25 ಎಕರೆಗಳಿದ್ದರೆ ಅದು ಭಾರತದಲ್ಲಿ ಕೇವಲ 0.15 ಎಕರೆ ಮಾತ್ರವಾಗಿದೆ. ಭಾರತದ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಒಟ್ಟು ಭೂಪ್ರದೇಶದ 1/3 ಭಾಗ ಅರಣ್ಯಮಯವಾಗಿರಬೇಕು. ಈ ನೇರದಲ್ಲಿ ಕರ್ಣಾಟಕದ ಪರಿಸ್ಥಿತಿ ಹೀಗಿದೆ

        ಭಾರತ        ಕರ್ನಾಟಕ ರಾಜ್ಯ

ಒಟ್ಟು ಭೂಪ್ರದೇಶ       3377690 ಚ.ಕಿ.ಮೀ.      191791 ಚ.ಕಿ.ಮೀ.

ಅರಣ್ಯ ಪ್ರದೇಶ      675538 ಚ.ಕಿ.ಮೀ.        38724 ಚ.ಕಿ.ಮೀ.

ಒಟ್ಟು ವಿಸ್ತೀರ್ಣದ ಸೇ.ಅ.ಪ್ರ.    20.55          20.19

 

ಮೇಲಿನ ಅಂಕಿಅಂಶಗಳಿಂದ ಕರ್ಣಾಟಕದ ಅರಣ್ಯಪ್ರದೇಶ ಸಮಗ್ರಭಾರತದ್ದಕ್ಕಿಂತಲೂ ಸ್ವಲ್ಪ ಕಡಿಮೆ ಇರುವುದು ಕಂಡು ಬರುತ್ತದೆ. ಇದನ್ನು ಸರಿಪಡಿಸಲು ಹೆಚ್ಚು ಭೂ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸಬೇಕಾಗಿದೆ.

 ಕರ್ಣಾಟಕದ ಅರಣ್ಯಗಳು ಅಗಲವಾದ ಎಲೆಗಳುಳ್ಳ ರೀತಿಯವು. ರಾಷ್ಟ್ರೀಯ ಪ್ರಾಮುಖ್ಯವುಳ್ಳ ಅನೇಕ ಮರಗಳು ಇಲ್ಲಿವೆ. ಟೆಕ್ಟೋನ ಗ್ರಾಂಡಿಸ್ (ತೇಗ), ದಾಲ್‍ಬರ್ಜಿಯ ಲ್ಯಾಟಿಫೋಲಿಯ (ಬೀಟೆ), ಟರ್ಮಿನೇಲಿಯ ಟೊಮೆಂಟೋಸ (ಮತ್ತಿ), ದಾಲ್‍ಬರ್ಜಿಯ ಸಿಸು (ಸಿಶ್ಮಬಾಗೆ) ಮತ್ತು ಡಿಪ್ಟಿರೊಕಾರ್ಪಸ್ (ಪದಾಕ್) ಜಾತಿಯ ಅನೇಕ ಪ್ರಭೇದಗಳು ಮುಂತಾದುವುದ ಹೇರಳವಾಗಿವೆ. ಶ್ರೀಗಂಧವಂತೂ ಸಂಪೂರ್ಣವಾಗಿ ಕರ್ಣಾಟಕದ್ದೇ ಆಗಿದೆ.

ವಿತರಣೆ ಮತ್ತು ಬೆಳೆವಣಿಗೆಗಳು

[ಬದಲಾಯಿಸಿ]

 ಸಾಮಾನ್ಯವಾಗಿ ವಿವಿಧ ರೀತಿಯ ಅರಣ್ಯಗಳ ವಿತರಣೆ ಮತ್ತು ಬೆಳೆವಣಿಗೆಗಳು ಮುಖ್ಯವಾಗಿ ವಾಯುಗುಣ, ಭೂಗುಣ ಮತ್ತು ಆಕಾರಗಳು ಹಾಗೂ ಐತಿಹಾಸಿಕ ಕಾರಣಗಳನ್ನು ಅವಲಂಬಿಸಿರುತ್ತವೆ. ಈಗ ಬಂಜರಾಗಿ ಅರಣ್ಯಪ್ರದೇಶವಿಲ್ಲದಿರುವ ಅನೇಕ ಭಾಗಗಳು (ಉದಾ. ಮಂಡ್ಯ ಜಿಲ್ಲೆ) 18ನೆಯ ಶತಮಾನದ ಕೊನೆಯಲ್ಲಿ ಸಾಧಾರಣ ಗಾತ್ರದ ಮರಗಳನ್ನು ಪಡೆದಿದ್ದುವೆಂದು ತಿಳಿದುಬಂದಿದೆ. ಅನೇಕ ಯುದ್ಧಗಳು, ವ್ಯವಸಾಯದ ಬೆಳೆವಣಿಗೆ, ಜನಸಂಖ್ಯೆಯ ಹೆಚ್ಚಳ, ಮನೆಕಟ್ಟಲು, ಸೌದೆ ಇದ್ದಲುಗಳು ಮತ್ತಿತರ ಸಾಮಗ್ರಿಗಳ ಬಗ್ಗೆ ಮಾನವನ ಹೆಚ್ಚಿನ ಆವಶ್ಯಕತೆಗಳು ಇವೆಲ್ಲವುಗಳಿಂದ ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ಅರಣ್ಯಪ್ರದೇಶಗಳು ಇಂದು ಬಂಜರಾಗಿವೆ. ಇಂದಿನ ಅರಣ್ಯಗಳಾದರೂ ಹಾಗೆಯೇ ಉಳಿದು ಬಂದಿರುವುದಕ್ಕೆ ಒಂದು ಮುಖ್ಯ ಕಾರಣವೆಂದೆ ಅವು ಪ್ರವೇಶಿಸಲಸಾಧ್ಯವಾಗಿರುವುದು. ಆದರೆ ಈಗಿನ ಒಳ್ಳೆಯ ರಸ್ತೆಗಳು ಬುಲ್ಡೋಜರುಗಳು, ಜೀಪ್ ಹಾಗೂ ಲಾರಿಗಳು ಇವನ್ನೂ ಹಾಳು ಮಾಡಲು ದಾರಿ ಮಾಡಿ ಕೊಟ್ಟಿವೆ. ನಮ್ಮ ಕೈಗಾರಿಕೆಗಳಾದ ಕಾಗದ, ತಿರುಳು, ರೇಯಾನ್, ಪ್ಲೈವುಡ್, ಬಿಪ್‍ಬೋಡ್ರ್ಸ್, ವೆನೀರ್ಸ್ ಮುಂತಾದುವೆಲ್ಲ ಮುಖ್ಯವಾಗಿ ಅರಣ್ಯವೃಕ್ಷಗಳನ್ನೇ ಅವಲಂಬಿಸಿವೆ.

 ಕರ್ಣಾಟಕದ ಅರಣ್ಯಗಳು ಉತ್ತರ ದಕ್ಷಿಣವಾಗಿ ವಿತರಣೆಗೊಂಡಿವೆ. ಇವುಗಳ ಬೆಳೆವಣಿಗೆ ಮತ್ತು ಅಭಿವೃದ್ಧಿಗಳಲ್ಲಿ ಮಳೆಯ ಪಾತ್ರ ಬಹು ಹಿರಿದಾದದ್ದು. ಸಂಪತ್ಕುಮಾರನ್ ಅವರು ಈ ಅರಣ್ಯಗಳನ್ನು ಮೂರು ಬಗೆಯವನ್ನಾಗಿ ವಿಂಗಡಿಸಿದ್ದಾರೆ.

 1. ನಿತ್ಯ ಹರಿದ್ವರ್ಣದ ಅರಣ್ಯಪ್ರದೇಶ : ವಾರ್ಷಿಕ ಮಳೆ 60"-250". ವಿತರಣೆ ರಾಜ್ಯದ ಪಶ್ಚಿಮ ಭಾಗಗಳಲ್ಲಿ (ಕೊಡಗು, ಹಾಸನ, ಶಿವಮೊಗ್ಗ, ದ.ಕ., ಉ.ಕ., ಧಾರವಾಡ ಮತ್ತು ಬೆಳಗಾಮ್ ಜಿಲ್ಲೆಗಳು).

 2. ಮಿಶ್ರ ಪರ್ಣಪಾತಿ ಸಸ್ಯ (ಡೆಸಿಡ್ಯುಯಸ್) ಪ್ರದೇಶ : ವಾರ್ಷಿಕ ಮಳೆ 25"-60". ಹಿಂದೆ ಹೇಳಿದ ಅರಣ್ಯಪ್ರದೇಶದ ಪೂರ್ವಭಾಗದಲ್ಲಿದೆ.

 3. ಒಣಗಿದ ಇಂಧನ ಮತ್ತು ಕುರುಚಲು ಪ್ರದೇಶ : ವಾರ್ಷಿಕ ಮಳೆ 20" ಗಿಂತ ಕಡಿಮೆ. ಪೂರ್ವದ ಎಲ್ಲ ಜಿಲ್ಲೆಗಳಲ್ಲೂ ಕಂಡುಬರುತ್ತದೆ.

 ಮೇಲೆ ಹೇಳಿದ ಮೂರು ವಿವಿಧ ರೀತಿಯವುಗಳಲ್ಲೂ ಇರುವ ಅನೇಕ ಪ್ರಭೇದಗಳು ಬೇರೆ ಬೇರೆಯವೇ ಆದರೂ ಅವುಗಳ ನಡುವೆ ನೇರವಾದ ರೇಖೆಗಳನ್ನು ಎಳೆಯಲಾಗುವುದಿಲ್ಲ. ಏಕೆಂದರೆ ಪಶ್ಚಿಮದಿಂದ ಪೂರ್ವಕ್ಕೆ ಒಂದು ರೀತಿಯ ಅರಣ್ಯ ಮತ್ತೊಂದು ರೀತಿಯದಕ್ಕೆ ನಿಧಾನವಾಗಿ ಎಡೆಗೊಡುತ್ತದೆ.

ವಿವಿಧ ರೀತಿಯ ಅರಣ್ಯಗಳು

[ಬದಲಾಯಿಸಿ]

1. ನಿತ್ಯ ಹರಿದ್ವರ್ಣದ ಅರಣ್ಯ ಪ್ರದೇಶ.

 ಪಶ್ಚಿಮ ಘಟ್ಟಗಳ ಸಹ್ಯಾದ್ರಿಗಳ ಉದ್ದಕ್ಕೂ 10-70 ಕಿಮೀ.ಗಳ ಅಗಲಕ್ಕೆ ಹರಡಿಕೊಂಡಿದೆ. ಪ್ರಪಂಚದ ಅನೇಕ ಕಡೆಗಳಲ್ಲಿ ಕಂಡುಬರುವ ಉಷ್ಣವಲಯದ ತೇವಪೂರಿತ ಅರಣ್ಯಗಳ ಅವಶೇಷಗಳನ್ನು ಇಲ್ಲಿಯ ಕಡಿದಾದ ಕಣಿವೆಗಳು, ಪರ್ವತಗಳ ಹಳ್ಳತಿಟ್ಟುಗಳು ಮತ್ತು ಪ್ರಪಾತಗಳಲ್ಲಿ ಕಾಣಬಹುದು. ರಸ್ತೆಗಳ ಅಭಾವ ಮತ್ತು ದಟ್ಟವಾಗಿ ಬೆಳೆದಿರುವ ಸಸ್ಯವರ್ಗದಿಂದಾಗಿ ಈ ಅರಣ್ಯಗಳ ಪ್ರವೇಶ ಅತಿ ದುರ್ಗಮವಾಗಿದೆ. ಇಲ್ಲಿನ ಸಸ್ಯವರ್ಗ ಮುಖ್ಯವಾಗಿ ಮೂರು ಸ್ತರಗಳಲ್ಲಿ ಕಂಡುಬರುತ್ತದೆ. ಪ್ರತಿ ಸ್ತರದಲ್ಲೂ ಕಂಡುಬರುವ ಪ್ರಭೇದಗಳು ಸಾಮಾನ್ಯವಾಗಿ ಬೇರೆಯವೇ ಆಗಿವೆ. ಈ ಒಂದೊಂದು ಸ್ತರಕ್ಕೂ ನಡುವಿನ ಅಂತರದಲ್ಲಿ ಉಷ್ಣತೆ ಹಾಗೂ ಆದ್ರ್ರತೆಯ ವ್ಯತ್ಯಾಸಗಳಿವೆ. ಇವು ದಟ್ಟವಾದ ಅಡವಿಗಳಾದ್ದರಿಂದ ಸೂರ್ಯರಶ್ಮಿ ಭೂಮಿಯನ್ನು ಸೋಕುವುದೇ ಕಷ್ಟ. ಆದ್ದರಿಂದ ಅರಣ್ಯದ ಒಳಗೆ ಉಷ್ಣತೆ ಬಹು ಕಡಿಮೆ (ಮರಗಳ ಮೇಲಿನ ಒಣಗಾಳಿಯ ಉಷ್ಣತೆಗೆ ಹೋಲಿಸಿದರೆ). ಮಾನ್ಸೂನಿನ ಪ್ರಬಲ ಗಾಳಿಗಳಿಗೆ ಎದುರಾಗಿರುವ ಬೆಟ್ಟಗಳ ಮೇಲೆ ಬೆಳೆಯುವ ಮರಗಳ ಬೆಳೆವಣಿಗೆ ಕುಂಠಿತವಾಗಿದ್ದು ಅವು ಕುಳ್ಳಾಗಿ ವಿರೂಪಗೊಂಡಿರುತ್ತವೆ. ಅನೇಕ ವೇಳೆ ದಕ್ಷಿಣ ಪಶ್ಚಿಮ ಮಾನ್ಸೂನಿನ ಪ್ರಬಲವಾದ ಮಳೆಯಿಂದ ಕೂಡಿದ ಗಾಳಿ ಇಲ್ಲಿನ ಪ್ರಭೇದಗಳ ವಿತರಣೆಯನ್ನು ನಿಯಂತ್ರಿಸುವುದುಂಟು. ಹಾವಸೆಗಳು, ತೆರ್ಮೆಗಳು, ಕಲ್ಲುಹೂಗಳು ಮತ್ತು ಇತರ ಅಪ್ಪು ಗಿಡಗಳು ಇಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ.

 ಈ ಅರಣ್ಯಗಳ ಮೇಲಿನ ಸ್ತರದಲ್ಲಿ ನೆಲದಿಂದ 60-70 ಮೀಟರುಗಳಷ್ಟು ಎತ್ತರದ ನಿತ್ಯಹರಿದ್ವರ್ಣ ವೃಕ್ಷಗಳು ಇವೆ. ಇವುಗಳ ಮೇಲೆ ಆರ್ಕಿಡ್ ಸಸ್ಯಗಳು, ಕೆಸುವಿನ ಜಾತಿಯ ಸಸ್ಯಗಳು ಮತ್ತು ತೆರ್ಮೆಗಳು ಹೇರಳವಾಗಿ ಬೆಳೆದಿವೆ. ಈ ಕೆಳಗಿನ ಕೆಲವು ಮುಖ್ಯ ಮರಗಳು ಮೇಲಿನ ಸ್ತರದಲ್ಲಿ ಕಂಡುಬರುತ್ತವೆ : ಡಿಪ್ಟಿರೊಕಾರ್ಪಸ್ ಇಂಡಿಕಸ್ (ವಾಲಿಮರ), ವ್ಯಾಟೀರಿಯ ಇಂಡಿಕ (ಧೂಪ), ಕಿಂಜಿಯೊಡೆಂಡ್ರಾನ್ ಪಿನ್ನೇಟಮ್ (ಎಣ್ಣೆಮರ), ಮೆಸುವ ಫೆರಿಯ (ನಾಗಸಂಪಿಗೆ), ಕ್ಯಾಲೊಫಿಲಮ್ ಇಂಡಿಕಮ್ (ಸುರಹೊನ್ನೆ), ಎಲಿಯೊಡೆಂಡ್ರಾನ್ ಟ್ಯುಬಕ್ರ್ಯುಲೇಟಸ್, ಸ್ಟ್ರಿಕ್ನಾಸ್ ರೀಡಿಯೈ, ಅಪೊರೋಸ ಲಿಂಡ್ಲೆಯಾನ (ಸಲ್ಲೆ), ಗ್ಲಾಕಿಡಿಯಾನ್ ಮಲಬಾರಿಕಮ್ ಮತ್ತು ಡೈಯೊಸ್ಪೈರಾಸ್ ಎಬಿನಮ್ (ಬಾಳೆಮರ).

 ಮಧ್ಯಮಸ್ತರದಲ್ಲಿ ಮೇಲಿನ ಸ್ತರದ ನೆರಳನ್ನು ಸಹಿಸಿಕೊಳ್ಳುವ ಮಧ್ಯಮ ಗಾತ್ರದ ವೃಕ್ಷಗಳಿವೆ. ವೃಕ್ಷಗಳ ದಪ್ಪ ಕಡಿಮೆ, ಎತ್ತರ 20-60 ಮೀ. ಮೇಲಿನ ಸ್ತರ ನಿರ್ಮಿಸಿರುವ ಸೂಕ್ಷ್ಮವಾತಾವರಣದಲ್ಲಿ ಇವು ಚೆನ್ನಾಗಿ ಬದುಕಬಲ್ಲವು. ಈ ಮರಗಳ ಮೇಲೂ ಹಾವಸೆಗಳು ಹಾಗೂ ತೆರ್ಮೆಗಳು ಮುಂತಾದ ಅಪ್ಪುಗಿಡಗಳಿರುತ್ತವೆ. ಇಲ್ಲಿನ ಕೆಲವು ಮುಖ್ಯ ವೃಕ್ಷಗಳು- ಎಲಿಯೊಕಾರ್ಪಸ್ ಟ್ಯುಬಕ್ರ್ಯುಲೇಟಸ್ (ರುದ್ರಾಕ್ಷಿ), ಮಿರಿಸ್ಟಿಕ ಮ್ಯಾಗ್ನಿಫಿಕ (ರಾಮನದಿಕೆ), ಹಾಲಿಗಾರ್ನ ಆರ್ನೋಟಿಯಾನ (ಕುಟುಗೇರಿ), ಹಾಪಿಯ ವೈಟಿಯಾನ (ಹೈಗ), ಡೈಸೊಸೈóಲಮ್ ಮಲಬಾರಿಕಮ್ (ಬಿಳೀ ದೇವದಾರು), ಆರ್ಟೊಕಾರ್ಪಸ್ ಹಿರ್ಸುಟ (ಹೆಬ್ಬಲಸು), ಆಗ್ಲೇಯಿಯ ಓಡೊರಟಿಸ್ಸಿಮ, ಕೆನೇರಿಯಮ್ ಸ್ಟ್ರಿಕ್ಟಮ್ (ಮಂಡ ಧೂಪ), ಮ್ಯಾಕಿಲಸ್ ಮ್ಯಾಕ್ರಾಂತ (ಚಿಟ್ಟು ತಂದ್ರಿಮರ), ಬಿಸ್ಕೋಫಿಯ ಜವಾನಿಕ (ಗೊಬ್ರನೇರಳೆ) ಮತ್ತು ಲೋಫೋಪೆಟಲಮ್ ವೈಟಿಯಾನಮ್.

ಕೆಳಗಿನ ಸ್ತರದ ಮರಗಳ ಎತ್ತರ 10-20 ಮೀ. ವರೆಗೆ ಇದೆ. ಅವುಗಳಲ್ಲಿ ಮುಖ್ಯವಾದ ಕೆಲವು ಮರಗಳು ಕೆಳಗಿನವಾಗಿವೆ: ಸ್ಲೀಶೆರ ಓಲಿಯೋಸ (ಸಗದೆ), ಆರ್ಟೊಕಾರ್ಫಸ್ ಹೆಟರೋಫಿಲಸ್ (ಹಲಸು), ಹಾಪಿಯ ಪಾರ್ವಿಫ್ಲೋರ (ಕಿರಾಲ್ ಭೋಗಿ), ಮಿರಿಸ್ಟಿಕ ಮಲಬಾರಿಕ (ಕನಾಗಿ), ಲಿಟ್ಸಿಯ, ಸಿನಮೋಮಮ್ ಜಿóಲಾನಿಕಮ್ (ದಾಲ್ಚಿನ್ನಿ), ಸಿನಮೋಮಮ್ ಇನರ್ಸ್ (ಎಲ್ಲಗ), ನೆಫೀಲಿಯಮ್ ಲಾಂಗಾನ (ಕೆಂದಾಳ), ಗಾರ್ಸೀನಿಯ ಕಾಂಬೋಜಿಯ (ಅರದಳ) ಹೈನಿಯ ಟ್ರೈಜುಗ (ಕೊರ), ಕ್ರೈಸೋಫಿಲಮ್ ರಾಕ್ಸ್‍ಬರ್ಗಿಯೈ, ಟ್ರಿವಿಯ ನ್ಯೂಡಿಫ್ಲೋರ (ಕಾಡುಕುಂಬಳ), ಆಸ್ಟೊಡಿಸ್ ಜಿóಲಾನಿಕ (ಸೊಟಿಗೆಮರ) ಮತ್ತು ಸಿಂಪ್ಲಕಸ್ ರೇಸಿóಮೋಸ (ಲೊಡ್ಡುಗಿನ ಮರ).

ನಿತ್ಯಹರಿದ್ವರ್ಣ ಅರಣ್ಯಗಳು ಅವಕ್ಕೆ ದೊರೆಯುವ ಎಲ್ಲ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತವೆ. ಇವುಗಳ ತಳಭಾಗದಲ್ಲಿ ಪೊದೆಯಂತೆ ಬೆಳೆದುಕೊಳ್ಳುವ ಸಸ್ಯಗಳು ಕೆಳಗಿನಂತಿವೆ : ಹಂಬೋಲ್ಟಿಯ ಬ್ರುನೋನಿಸ್ (ಹಾಸಿಗೆಮರ), ಮ್ಯಾಲೋಟಸ್ ಫಿಲಿಪ್ಪೆನ್ಸಿಸ್ (ಕುಂಕುಮದ ಮರ), ಸ್ಟಕ್ರ್ಯುಲಿಯ ವಿಲೋಸ (ಬಿಳಿದಾಳೆ). ಹೆಚ್ಚಾಗಿ ತೆರೆದಿರುವ (ಸ್ವಲ್ಪ ಬಯಲಾಗಿರುವ) ಪ್ರದೇಶಗಳಲ್ಲಿ: ಇಕ್ಸೋರ ಕಾಕ್ಸಿನಿಯ (ಕಿಸ್ಕಾರ), ಟ್ರೀಮ ಓರಿಯಂಟ್ಯಾಲಿಸ್ (ಬೆಂಡು ಮರ), ಪವೆಟ ಇಂಡಿಕ (ಪಾವಟೆ), ಕ್ಯಾಲಿಕಾರ್ಪ ಲೇನೇಟ (ಆದ್ರ್ರಿ), ಸೈಕೋಟ್ರಿಯ ದಾಲ್ಜೆಲಿ (ದತ್ತಲೆ), ಮತ್ತು ಕೆಲವು ವೇಳೆ ಪಿನಂಗ ಡಿಕ್ಸೊನಿ (ಕಾಡು ಅಡಿಕೆ), ಅಡರುಬಳ್ಳಿಗಳು : ನೀಟಮ್ ಉಲ, ಸ್ಪತೋಡಿಯ ರಾಕ್ಸ್‍ಬರ್ಗಿಯೈ, ದಾಲ್‍ಬರ್ಜಿಯ ಸಿಂಪತೆಟಿಕ, ಬಾಹಿನಿಯ ವಾಹ್ಲಿ (ಹೆಪ್ಪರಿಗೆ) ಸ್ಟ್ರಿಕ್ನಾಸ್ ಕಾಲಂಬ್ರಿನ (ನಾಗಮುಷ್ಠಿ), ಲವಂಗ ಎಲ್ಯೂತೆರಾಂಡ್ರ (ಲವಂಗ ಲತೆ), ಡಯಸ್ಕೋರಿಯ ಏಲೇಟ (ತೂನಗೆಣಸು) ಮತ್ತು ಎಂಟಾಡ ಪರ್ಸಿಯಥ.

ನಿತ್ಯಹರಿದ್ವರ್ಣ ಅರಣ್ಯಗಳ ಬೇರೆ ರೂಪಾಂತರಗಳಾದ ಷೋಲಾ ಅರಣ್ಯಗಳು 1000 ಮೀ. ಗಳಿಗಿಂತಲೂ ಎತ್ತರವಿರುವ ಪರ್ವತ ಪ್ರದೇಶಗಳಲ್ಲಿ ಝರಿಗಳ ಎರಡು ಕಡೆಗಳಲ್ಲೂ ಬೆಳೆದುಕೊಂಡಿವೆ. ವಾಯುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಇವು ಇದ್ದು ತೀರ ಮೇಲಕ್ಕೆ ಗಾಳಿಯ ಹೊಡೆತಕ್ಕೆ ಸಿಕ್ಕಿರುವ ಪರ್ವತಾಗ್ರಗಳಿಗೆ ಹೋದಂತೆಲ್ಲ ಹುಲ್ಲುಗಾವಲುಗಳಿಗೆ ಎಡೆಗೊಡುತ್ತವೆ. ಈ ಉಪೋಷ್ಣವಲಯದ ಅರಣ್ಯಗಳಲ್ಲಿ ಉಷ್ಣವಲಯದ ಮತ್ತು ಸರಿಸುಮಾರು ಸಮಶೀತೋಷ್ಣವಲಯದ ಪ್ರಭೇದಗಳು ಮಿಶ್ರವಾಗಿದ್ದು ಜೊತೆಗೂಡಿ ಬೆಳೆಯುತ್ತಿರುತ್ತವೆ. ಬಾಬಾಬುಡನ್, ಬಿಳಿಗಿರಿರಂಗ ಕುದುರೆಮುಖ ಮುಂತಾದ ಬೆಟ್ಟ ಪ್ರದೇಶಗಳಲ್ಲಿ ಎತ್ತರದ ಭಾಗಗಳಲ್ಲಿ ಷೋಲಾ ಅರಣ್ಯಗಳು ಕಂಡುಬರುತ್ತವೆ. ವಿಶೇಷವೆಂದರೆ ಇಲ್ಲಿನ ಮರಗಳು ಅಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಮತ್ತು ಬೇರುಗಳು ಆಳವಾಗಿರುವುದಿಲ್ಲ. ಮರಗಳ ಮೇಲೆ ಹಾಸವೆಗಳು ಬೆಳೆದುಕೊಂಡಿರುತ್ತವೆ.

ಷೋಲಾ ಅರಣ್ಯಗಳ ಮರಗಳು

[ಬದಲಾಯಿಸಿ]

ಗ್ಲಾಕಿಡಿಯನ್ ಆರ್ಬೋರಿಯಮ್, ಲಿಟ್ಸಿಯ ಗ್ಲಾಬ್ರೇಟ, ಪಿಟೋಸ್ಪೋರಮ್ ಟೆಟ್ರಸ್ಪರ್ಮಮ್, ಸಿಡರೊಕ್ಸೈ ಟೊಮೆಂಟೋಸಮ್ (ಕುಂಪೋಲಿ) ಡ್ಯಾಫ್ನಿಫಿಲಮ್ ಗ್ಲಾಸೆಸನ್ಸ್ (ನೀರುಜಪ್ಲೆ), ಪಿಟೋಸ್ಪೋರಮ್ ನೀಲ್ಗೆರೆನ್ಸ್, ಎಲಿಯೊಕಾರ್ಪಸ್ ಮುನ್ರೋನಿ (ಕಲ್‍ಬಿಕ್ಕಿ) ಅಥವಾ ಕೆಳಗಿನವುಗಳ ಜೊತೆ : ಕ್ಯಾಲಿಕಾರ್ಪ ಟೊಮೆಂಟೋಸ, ಕ್ಯಾಂತಿಯಮ್ ಡೈಕಾಕಮ್ ವೈರೈಟಿ ಅಂಬೆಲೇಟಮ್, ಎಲಿಯೊಕಾರ್ಪಸ್ ಸೆರೇಟಸ್ (ಬೀಗದಮರ), ಸಿನಮೋಮಮ್ ಜಿûಲಾನಿಕಮ್ (ದಾಲ್ಚಿನ್ನಿ) ಮೀಲಿಯೋಸ್ಮ ಮೈಕ್ರೊಕಾರ್ಪ, ಟೀರೋಕಾರ್ಪಸ್ ಮಾರ್ಸುಪಿಯಮ್ (ಹೊನ್ನೆ), ಸಿಂಪ್ಲೋಕಾಸ್ ಲಾರಿನ (ಚಂಗ) ಶೆಫ್ಲೆರ ಕ್ಯಾಪಿಟೇಟ, ಟೂನ ಸಿಲಿಯೇಟ (ಕಂಡಗರಿಗೆ) ಮತ್ತು ಷೋಲಾ ಇಳಿಜಾರುಗಳ ಹೊರಭಾಗದಲ್ಲಿ ಆರ್ಟಿಮಿಸಿಯ ಪಾರ್ವಿಪ್ಲೋರ, ಹೈಪರಿಕಮ್ ಮೈಸೂರೆನ್ಸ್ (ಚಿನ್ನದಾವರೆ) ಮತ್ತು ಫೀನಿಕ್ಸ್ ಹ್ಯುಮಿಲಿಸ್ ವೆರೈಟಿ ಪೀಡಂಕ್ಯುಲೇಟ (ಕಿರು ಈಚಲು) ಇವು ಬೆಳೆಯುತ್ತಿರುತ್ತವೆ.

 ಷೋಲಾ ಅರಣ್ಯಗಳು ವಾಯುಪೀಡಿತ ಪರ್ವತಾಗ್ರಗಳಲ್ಲಿ ಹುಲ್ಲುಗಾವಲುಗಳಿಗೆ ಎಡೆಗೊಟ್ಟಿದ್ದು ಕೆಳಗೆ ಬಂದಂತೆಲ್ಲ ನಿಧಾನವಾಗಿ ಉಷ್ಣವಲಯದ ತೇವಪೂರಿತ ಪರ್ಣಪಾತಿ ಸಸ್ಯದ ಅರಣ್ಯಗಳೊಂದಿಗೆ ಕೂಡಿಕೊಳ್ಳುತ್ತವೆ.

 ಪರ್ವತಾಗ್ರಗಳ ಮೇಲೆ ಬೆಳೆಯುವ ಮೂಲಿಕೆಗಳ ಸಸ್ಯವರ್ಗ ಋತುಗಳಿಗೆ ತಕ್ಕಂತೆ ಬೇರೆ ಬೇರೆಯೇ ಆಗಿರುತ್ತದೆ. ಇಲ್ಲಿರುವ ಹುಲ್ಲುಗಳು ಹಾಗೂ ಮೂಲಿಕೆಗಳಿಗೆ ಉಷ್ಣತೆಯ ವೈಪರೀತ್ಯಗಳು, ಸೂರ್ಯನ ಗಾಢಪ್ರಖರತೆ ಮುಂತಾದುವನ್ನೆಲ್ಲ ತಡೆದುಕೊಳ್ಳುವ ಶಕ್ತಿ ಇದೆ. ಒಮ್ಮೊಮ್ಮೆ ಹುಲ್ಲುಗಾವಲುಗಳಲ್ಲಿ ಬೆಳೆವಣಿಗೆ ಕುಂಠಿತಗೊಂಡ, ಅಗಲ ಕಡಿಮೆ ಇರುವ ಎಲೆಗಳ, ಕಡಿಮೆ ಎತ್ತರದ ಮರಗಳು ಕಂಡು ಬರುವುದುಂಟು. ಓಲಿಯ, ವೆಂಡ್‍ಲ್ಯಾಂಡಿಯ, ಆಲೋಫಿಲಸ್, ಯೂಜೀನಿಯ, ಸಿಂಪ್ಲೊಕಾಸ್ ಮತ್ತು ಲೊನಿಸೆರ ಇವೇ ಆ ಜಾತಿಯವು. ಕುರಂಜಿಗಿಡದ ಪೊದೆಗಳಂತೂ ಸಮೃದ್ಧವಾಗಿ ಬೆಳೆದಿರುತ್ತವೆ. ಇಲ್ಲಿರುವ ಪ್ರಧಾನ ಹುಲ್ಲುಗಳು: ಆಂಡ್ರೋ ಪೋಗಾನ್ ಪರ್ಟುಸಸ್, ಇಶೀಮಮ್ ಪೈಲೋಸಮ್ (ಕುಂದರಕಡ್ಡಿಹುಲ್ಲು), ತಿಮಿಡ ಇಂಬರ್ಬಿಸ್, ಸಿಂಬೊಪೋಗಾನ್ ಪಾಲಿನ್ಯೂರೋಸ್ ಮತ್ತು ಎರಾಗ್ರಾಸ್ಟಿಸ್ ನೈಗ್ರ.

2. ಮಿಶ್ರ ಪರ್ಣಪಾತಿ ಸಸ್ಯ ಪ್ರದೇಶ : ಘಟ್ಟ ಪ್ರದೇಶಗಳ ಪೂರ್ವಭಾಗದಲ್ಲಿದೆ. ಇಲ್ಲಿ ಬಿದಿರು, ತೇಗಗಳ ಜೊತೆಗೆ ನಿತ್ಯಹರಿದ್ವರ್ಣ ಹಾಗೂ ಪರ್ಣಪಾತಿ ಸಸ್ಯ ಪ್ರಭೇದಗಳು ಮಿಶ್ರಗೊಂಡು ಬೆಳೆಯುತ್ತವೆ. ಈ ಪ್ರದೇಶದ ಅಗಲ ಪಶ್ಚಿಮದಿಂದ ಪೂರ್ವಕ್ಕೆ 35-50 ಕಿಮೀ. ಗಳಷ್ಟಿದೆ. ಈ ಅರಣ್ಯಗಳನ್ನು ಸುಲಭವಾಗಿ ಪ್ರವೇಶಿಸಬಹುದಾದ್ದರಿಂದ ಸರ್ಕಾರಕ್ಕೆ ಇವುಗಳಿಂದ ಒಳ್ಳೆಯ ಆದಾಯ ಬರುತ್ತದೆ. ಬೀಳುವ ಮಳೆಯ ಪ್ರಮಾಣಕ್ಕನುಗುಣವಾಗಿ ತೇವಪೂರಿತ ಹಾಗೂ ಒಣ ಪರ್ಣಪಾತಿ ಸಸ್ಯದ ಅರಣ್ಯಗಳು ಇಲ್ಲಿ ಬೆಳೆಯುತ್ತವೆ. ಇವೆರಡಕ್ಕಿರುವ ಮುಖ್ಯ ವ್ಯತ್ಯಾಸವೆಂದರೆ ಮೊದಲಿನ ದರಲ್ಲಿ ಮರಗಳ ಬೆಳೆವಣಿಗೆ ಬಲು ಹುಲುಸಾಗಿರುವುದು. ಇಲ್ಲೂ ಸಸ್ಯ ವರ್ಗದಲ್ಲಿ ವಿವಿಧಸ್ತರಗಳು ಕಂಡುಬಂದರೂ ಅವು ನಿತ್ಯಹರಿದ್ವರ್ಣ ರೀತಿಯದರಷ್ಟು ಸ್ಪಷ್ಟವಾಗಿರುವುದಿಲ್ಲ. ಮರಗಳು ಅಷ್ಟು ಎತ್ತರವಾಗಿರುವುದಿಲ್ಲ ಮತ್ತು ಅಲ್ಲಲ್ಲೆ ತೆರೆದ ಸ್ಥಳಗಳಿರುತ್ತವೆ.  ಸ್ಥಳ ಮತ್ತು ತೇವಗಳಿಗನುಗುಣವಾಗಿ ಸಸ್ಯವರ್ಗ ವೈವಿಧ್ಯಪೂರ್ಣವಾಗಿದೆ. ಈ ಅರಣ್ಯಗಳಿರುವ ಕಣಿವೆಗಳಲ್ಲಿ ಮರಗಳ ಎತ್ತರ 30-40 ಮೀ. ಇಲ್ಲಿನ ಕೆಲವು ಮುಖ್ಯ ಮರಗಳು ಕೆಳಗಿನವು: ಅಡಿನ ಕಾರ್ಡಿಫೋಲಿಯ (ಹೆತ್ತೇಗ), ಆಲ್ಬಿಜಿóಯ ಓಡೊರೊಟಿಸಿಮ (ಬಿಲ್ವಾರ), ಸ್ಟೀರಿಯೊಸ್ಪರ್ಮಮ್ ಕಿಲೊನಾಯ್ಡಿಸ್ (ಪಾದ್ರಿ), ಲ್ಯಾಗರ್‍ಸ್ಟ್ರೋಮಿಯ ಲ್ಯಾನ್ಸಿಯೋಲೇಟ (ನಂದಿ), eóÉೈಲಿಯ eóÉೈ ಲೊಕಾರ್ಪ (ಜಂಬೆ), ಟಿಕ್ಟೋನ ಗ್ರಾಂಡಿಸ್ (ತೇಗ), ಕೈಡಿಯ ಕ್ಯಾಲಿಸಿನ (ಬೆಂಡೆಮರ), ಟೀರೊಕಾರ್ಪಸ್ ಮಾರ್ಸುಪಿಯಮ್ (ಹೊನ್ನೆ) ಮುಂತಾದವು. ಇವುಗಳ ಪೈಕಿ ಅನೇಕ ಮರಗಳಿಗೆ ಸುತ್ತಳತೆ 3-5 ಮೀ. ಗಳಿಷ್ಟಿರುತ್ತದೆ. ಮೇಲಿನ ಅರಣ್ಯಗಳ ಸ್ಥಳೀಯ ರೂಪಾಂತರಗಳಲ್ಲಿ ಈ ಕೆಳಗಿನ ಸಸ್ಯಗಳೂ ಕಂಡುಬರುತ್ತವೆ: ಅಲೋಫಿಲಸ್ ರೀಡಿಯೈ, ಬಾಸ್ವೆಲಿಯ ಸೆರೇಟ (ಮಡಿಮರ), ಎರಿಯೊಲೀನ ಕ್ವಿನ್‍ಕ್ವಾಂಗ್ಯುಲಾರಿಸ್ (ಗೋಮಜ್ಜಿಗೆ), ಮೆಲೈನ ಆರ್ಬೊರಿಯ (ಕೂಲಿ) ಮತ್ತು ಸಿಜಿûಜಿಯಮ್ ಕ್ಯೂಮಿನಿ (ಜಂಬುನೇರಳೆ). ಇವುಗಳ ಜೊತೆಗೆ ಡೆಂಡ್ರೊಕ್ಯಾಲಮಸ್ ಸ್ಟ್ರಿಕ್ಟಸ್ (ಕಿರುಬಿದಿರು) ಅಥವಾ ಬ್ಯಾಂಬೂಸ ಅರುಂಡಿನೇಸಿಯಗಳ (ಹೆಬ್ಬಿದಿರು) ಮೆಳೆಗಳಿರುತ್ತವೆ.

ಒಣಪರ್ಣಪಾತಿ ಅರಣ್ಯ ಶಕ್ತಿಯುಡುಗಿನ ತೇವಪೂರಿತ ಅರಣ್ಯದ ರೂಪಾಂತರ. ಇದರ ಮೇಲಿನ ಸ್ತರದಲ್ಲಿ ತೇಗವಿರುತ್ತದೆ. ಅದರ ಜೊತೆಗೇ ಟರ್ಮಿನೇಲಿಯ ಟೊಮೆಂಟೋಸ (ಮತ್ತಿ) ಲ್ಯಾಗರ್‍ಸ್ಟ್ರೋಮಿಯ ಲ್ಯಾನ್ಸಿಯೊಲೇಟ (ನಂದಿ) ಆನೋಜಿಸ್ಸಸ್ ಲ್ಯಾಟಿಪೋಲಿಯ (ದಿಂಡಗ) ಗಳಿರುತ್ತವೆ.

 ಎರಡನೆಯ ಸ್ತರವೇನಾದರೂ ಕಂಡುಬಂದಲ್ಲಿ ಅದರಲ್ಲಿ ಫಿಲ್ಯಾಂತಸ್ ಎಂಬ್ಲಿಕ (ನೆಲ್ಲಿ), ಕೇರಿಯ ಆರ್ಬೋರಿಯ (ಕಾವಲ್), ಬುಕನಾನಿಯ ಲಂಜûನ್ (ಮುರ್ಕಲಿ) ಮತ್ತು ಕ್ಸೀರಾಂಫಿಸ್ ಸ್ಪೈನೋಸ ಮುಂತಾದ ಮರಗಳಿರುತ್ತವೆ. ಇಲ್ಲಿ ಅನೇಕ ಅಡರುಬಳ್ಳಿಗಳೂ ಇರುತ್ತವೆ. ಅವುಗಳಲ್ಲಿ ಮುಖ್ಯವಾದವು ಸಿಲ್ಯಾಸ್ಟ್ರಸ್ಸ್ ಪ್ಯಾನಿಕ್ಯುಲೇಟ (ಕಂಗೊಂದಿಬಳ್ಳಿ), ದಾಲ್‍ಬರ್ಜಿಯ ವಾಲ್ಯೂಬಿಲಿಸ್, ಸ್ಮೈಲ್ಯಾಕ್ಸ್ ಜಿûಲಾನಿಕ (ಕಾಡು ಹಂಬುತಾವರೆ) ಮತ್ತು ಕ್ಯಾಲಿಕಾಪ್ಟೆರಿಸ್ ಫ್ಲಾರಿಬಂಡ (ಮರ್ಸದ ಬಳ್ಳಿ).

3. ಒಣಗಿದ ಇಂಧನ ಮತ್ತು ಕುರುಚಲು ಪ್ರದೇಶ : ಈ ಪ್ರದೇಶ ವಿಶಾಲವಾದುದು ಮತ್ತು ಉಳಿದ ರೀತಿಯ ಅರಣ್ಯಗಳ ಪೂರ್ವಕ್ಕೆ ಇದು ಹಬ್ಬಿದೆ. ಕರ್ಣಾಟಕದ 80%-85% ರಷ್ಟು ಭೂಪ್ರದೇಶಗಳನ್ನು ಇದು ಆವರಿಸಿದೆ. ಇದರ ಸಸ್ಯವರ್ಗ ಎಂದೂ ಅರಣ್ಯದಂತೆ ಕಾಣಲಾರದು. ಇಲ್ಲಿನ ವಾರ್ಷಿಕ ಮಳೆ ಅತಿ ಕಡಿಮೆಯಾದ್ದರಿಂದ ಮರಗಳು ಬೆಳೆಯುವುದು ಬಹಳ ಕಷ್ಟ. ಆಕಸ್ಮಾತ್ತಾಗಿ ಮರಗಳೇನಾದರೂ ಬೆಳೆದರೆ ಅವು ಅಲ್ಲೊಂದು ಇಲ್ಲೊಂದರಂತೆ ವಿತರಣೆಗೊಂಡಿದ್ದು ಬಹುಸಣ್ಣ ಪ್ರಮಾಣದವಾಗಿರುತ್ತವೆ. ಇಲ್ಲಿ ಅನಾವೃಷ್ಟಿಯನ್ನು ಸಹಿಸಿಕೊಳ್ಳಬಲ್ಲ ವೈವಿಧ್ಯ ಪೂರ್ಣವಾದ ಮತ್ತು ಮುಳ್ಳುಗಳಿರುವ ಅನೇಕ ಪ್ರಭೇದಗಳಿವೆ. ಇಲ್ಲಿ ಬೆಳೆಯುವ ಮುಖ್ಯ ಮರಗಳು ಈ ಕೆಳಗಿನವಾಗಿವೆ : ಜಿವ್ನೊಸ್ಪೋರಿಯ ಮಾಂಟಾನ (ತಂಡರಸಿ) ಅಕೇಸಿಯ ಕ್ಯಾಟಿಚು (ಕಾಚಿನ ಮರ), ಅಕೇಸಿಯ ನಿಲೋಟಿಕ ಸಬ್‍ಸ್ಪೀಶೀಸ್ ಇಂಡಿಕ (ಜಾಲಿ), ಫ್ಲಾಕೂರ್ಶಿಯ ರ್ಯಾಮೋಂಚಿ (ಕುಡುವಲೆ), ಕೆಪಾರಿಸ್ ಡೈವೇರಿಕೇಟ, ಗ್ರಿವಿಯ ಪೈಲೋಸ ಮತ್ತು ಕ್ಯಂತಿಯಮ್ ಪೈಲೋಸಮ್. ರಕ್ಷಿತ ಮತ್ತು ಕಾದಿರಿಸಿದ ಅರಣ್ಯಗಳಲ್ಲಿ ಅನೋಜಿಸ್ಸಸ್ ಲ್ಯಾಟಿಫೊಲಿಯ (ದಿಂಡಗ) ಬಾಹಿನಿಯ ರೇಸಿಮೋಸ (ಕಾರಾಚ), ಸ್ಯಾಂಟಲಮ್ ಆಲ್ಬಮ್ (ಶ್ರೀಗಂಧ), ಕಾಕ್ಲೊಸ್ಪರ್ಮಮ್ ರಿಲಿಜಿಯೋಸಮ್ (ಅರಿಸಿನ ಬೂರುಗ), ಕ್ಯಾಸಿಯ ಫಿಸ್ಟುಲ (ಕಕ್ಕೆ), ಡೈಯೊಸ್ಪೈರಾಸ್ ಮಾಂಟಾನ (ಎಬನಿ) ಬ್ಯೂಟಿಯ ಮಾನೊಸ್ಪರ್ಮ (ಮುತ್ತುಗ) ಮತ್ತು ಅಲಾಂಜಿಯಮ್ ಸಾಲ್ವಿಫೋಲಿಯಮ್ (ಅಂಕೋಲೆ) ಮರಗಳಿರುತ್ತವೆ.[]

 ಕೆಲವು ಜಿಲ್ಲೆಗಳಲ್ಲಿ ಸಣ್ಣ ಗುಡ್ಡಗಳಲ್ಲಿ ಯೂಫೋರ್ಬಿಯ ಆಂಟಿಕೋರಮ್ (ಮುಂಡುಗಳ್ಳಿ), ಕೆಪಾರಿಸ್ ಏಫಿಲ (ಕರೀಉಪ್ಪಿಗಿಡ) ಮುಂತಾದವು ಇವೆ. ವಿಶಾಲವಾದ ಬಯಲುಗಳಲ್ಲಿ ಮರಗಳ ಮಧ್ಯೆ ಅನೇಕ ಜಾತಿಯ ಹುಲ್ಲುಗಳಿವೆ. ಹೆಟೆರೋ ಪೋಗಾನ್ ಕಂಟಾರ್ಟಸ್ (ಸುಂಕರೀಹುಲ್ಲು), ಅರಿಸ್ಟಿಡ ಸಿಟೇಸಿಯ (ದೊಡ್ಡ ಹಂಚೀಹುಲ್ಲು), ಸಿಂಬೋಪೋಗಾನ್ ಮಾರ್ಟಿನಿಯೈ (ಕುಂತಿಹುಲ್ಲು) ಮತ್ತು ಅಪ್ಲೂಡ ಮ್ಯೂಟಿಕಗಳು ಇವುಗಳಲ್ಲಿ ಕೆಲವು.

 ಮೇಲಿನ ಮೂರು ಮುಖ್ಯ ರೀತಿಯ ಅರಣ್ಯಪ್ರದೇಶಗಳ ಪೈಕಿ ನಿತ್ಯಹರಿದ್ವರ್ಣದವನ್ನು ಕಡ್ಡಾಯವಾಗಿ ಸಂರಕ್ಷಿಸಬೇಕು. ಎರಡನೆಯ ರೀತಿಯದನ್ನು ದುರುಪಯೋಗಗೊಳಿಸಿಕೊಳ್ಳದೆ ನ್ಯಾಯವಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಮೂರನೆಯ ರೀತಿಯ ಅರಣ್ಯಪ್ರದೇಶವಿರುವ ವಿಶಾಲಪ್ರದೇಶದಲ್ಲಿ ವನಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಿ ಅರಣ್ಯಾಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಒಳ್ಳೆಯದು. ಮರದ ಕೈಗಾರಿಕೆಗಳಿಗೆ ಬೇಕಾದ ಮರವನ್ನು ಶೀಘ್ರಗತಿಯಲ್ಲಿ ಒದಗಿಸುವ ಪ್ರಭೇದಗಳನ್ನು ಈ ಭಾಗದ ಪ್ರದೇಶಗಳಲ್ಲಿ ಬೆಳೆಸಬೇಕು. []

ಉಲ್ಲೇಖಗಳು

[ಬದಲಾಯಿಸಿ]