ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಬಿತ್ತನೆ ಭೂಮಿ, ( ಮಳೆ ಕೊರತೆ ಕಾರಣ ೧೨-ಜುಲೈ ೨೦೧೪ ವರೆಗೆ 18.92 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.)
ರಾಜ್ಯದಲ್ಲಿ 1.39 ಕೋಟಿ ಜಾನುವಾರುಗಳಿದ್ದು, (೧೨-೭-೨೦೧೪ ರಿಂದ.72.75 ಲಕ್ಷ ಟನ್ ಮೇವಿನ ಸಂಗ್ರಹ ಇದೆ. ಇದು 15 ವಾರಗಳಿಗೆ ಸಾಕಾಗುತ್ತದೆ.)
‘ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ,(೧೨-೭-೨೦೧೪ ಮಳೆ ಕೊರತೆಯಿಂದ ಸದ್ಯ 166 ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 254 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.)
3,554 ನೀರಾವರಿ ಕೆರೆಗಳಿವೆ, (೧೨-೭-೨೦೧೪ ಮಳೆ ಕೊರತೆ ಕಾರಣ ಎಂಟು ಮಾತ್ರ ತುಂಬಿವೆ. 159 ಕೆರೆಗಳು ಶೇ 50ರಷ್ಟು ಮತ್ತು 1,062 ಕೆರೆಗಳು ಶೇ 30ರಷ್ಟು ತುಂಬಿದ್ದರೆ, ಉಳಿದ ಉಳಿದ 2,328 ಕೆರೆಗಳು ಖಾಲಿಯಾಗಿವೆ’
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ 115 ಟಿಎಂಸಿ ಇದ್ದು, ಪ್ರಸ್ತುತ 34 ಟಿಎಂಸಿ ಮಾತ್ರ ಲಭ್ಯವಿದೆ. ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಗರಿಷ್ಠ ಸಾಮರ್ಥ್ಯ 421 ಟಿಎಂಸಿ ಇದ್ದು, ಕೇವಲ 83 ಟಿಎಂಸಿ ನೀರು ಲಭ್ಯವಿದೆ.)
ರಾಜ್ಯದ ಎಲ್ಲಾ ಜಲಾಶಯಗಳ ಗರಿಷ್ಠ ಸಾಮರ್ಥ್ಯ 864 ಟಿಎಂಸಿ ಇದೆ, (ಕಳೆದ ವರ್ಷ ಜೂ.10ರಂದು 254 ಟಿಎಂಸಿ ಇತ್ತು. ಮಳೆ ಕೊರತೆ ಕಾರಣ ಜುಲೈ ೨೦೧೪,ಈ ವರ್ಷ 166 ಟಿಎಂಸಿ ಇದೆ. ಅಲ್ಲಿಗೆ 88 ಟಿಎಂಸಿ ನೀರಿನ ಕೊರತೆಯಿದೆ)
ರಾಜ್ಯದಲ್ಲಿ 59,25,551 ಎಕರೆ ಜಮೀನಿಗೆ ನೀರಾವರಿ ಒದಗಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.ವಿಧಾನಸಭೆಯಲ್ಲಿ ಸೋಮವಾರ ಕೆ.ಆರ್.ರಮೇಶ್‌ಕುಮಾರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.(೨೮-೭-೨೦೧೪/೨೯-೭-೨೦೧೪ ಪ್ರಜಾವಾಣಿ)
ಜೂ.1ರಿಂದ ಜು.22ರವರೆಗೆ ರಾಜ್ಯದಲ್ಲಿ ಶೇ.25ರಷ್ಟು ಮಳೆ ಕೊರತೆ ಉಂಟಾಗಿದೆ. ಸದ್ಯ ಕರಾವಳಿ ಮತ್ತು ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ, ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದರೂ ಹನಿಗಳಾಗಿ ನೆಲಕ್ಕೆ ಬೀಳುತ್ತಿಲ್ಲ.
ಕೃಷಿ ಇಲಾಖೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಆದರೆ, ಇದುವರೆಗೆ ಕೇವಲ 30.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.41ರಷ್ಟು ಪೂರ್ಣಗೊಂಡಿದೆ. ಆದರೆ, ಕಳೆದ ವರ್ಷ ಇದೇ ಅವಧಿಗೆ 37.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಗಮನಿಸಿದರೆ 7 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಕುಂಠಿತವಾಗಿದೆ.
ಭತ್ತ 10.93 ಲಕ್ಷ ಹೆಕ್ಟೇರ್‌ನಲ್ಲಿ ವಿಸ್ತೀರ್ಣದ ಗುರಿ ಇದ್ದರೆ ಇದುವರೆಗೆ ಕೇವಲ 1.77 ಲಕ್ಷ ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಒಟ್ಟು ಏಕದಳ ಧಾನ್ಯಗಳ ವಿಸ್ತೀರ್ಣದ ಗುರಿ 35.18 ಲಕ್ಷ ಹೆಕ್ಟೇರ್ ಇದ್ದು, 10.83 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ತೊಗರಿ, ಹುರುಳಿ, ಅಲಸಂದೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳ ಗುರಿ 15.36 ಲಕ್ಷ ಹೆಕ್ಟೇರ್ ಇದ್ದರೆ, 5.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ, ಎಳ್ಳು, ಸೋಯಾ ಅವರೆ ಸೇರಿದಂತೆ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ 12.49 ಲಕ್ಷ ಹೆಕ್ಟೇರ್ ಗುರಿಗೆ 4.61 ಲಕ್ಷ ಹೆಕ್ಟೇರ್ ಬೀಜ ಕಂಡಿದೆ.
ಮುಂಗಾರು ಅವಧಿಯಲ್ಲಿ ಹೆಚ್ಚಾಗಿ ಬೆಳೆಯುವ ಹತ್ತಿ ಬಿತ್ತನೆ ಇದುವರೆಗೆ ಶೇ.74ರಷ್ಟು ಪೂರ್ಣಗೊಂಡಿದೆ. ಪ್ರಸಕ್ತ ಮುಂಗಾರಿನಲ್ಲಿ 4.91 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದರೆ, ಈಗಾಗಲೇ 3.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದೇ ರೀತಿ ಕಬ್ಬು ವಿಸ್ತೀರ್ಣದ ಗುರಿ 4.95 ಲಕ್ಷ ಹೆಕ್ಟೇರ್ ಇದ್ದರೆ, ಈಗಾಗಲೇ 4.46 ಲಕ್ಷ ಹೆಕ್ಟೇರ್‌ನಲ್ಲಿ ನಾಟಿಯಾಗಿ ಶೇ.90ರಷ್ಟು ಪೂರ್ಣಗೊಂಡಿದೆ. ಜೂನ್ ಅಂತ್ಯದಲ್ಲಿ ಸುರಿದ ಮಳೆಗೆ ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಈಗ ಕೆಲವೆಡೆ ಮೊಳಕೆಯೊಡೆದು ಪೈರು ಬಂದಿದೆ. ಆದರೀಗ ಮಳೆ ಇಲ್ಲದಿರುವುದರಿಂದ ಬೆಳೆ ಒಣಗುವ ಆತಂಕ ಎದುರಾಗಿದೆ. ಅಲ್ಲದೆ, ಬೇರುಗಳನ್ನು ಹುಳುಗಳು ತಿಂದುಹಾಕುತ್ತಿರುವ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ.(೨೩-೭-೨೦೧೪)
ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ.
ವಿಧಾನಮಂಡಲದ ಪ್ರಸಕ್ತ ೨೦೧೪/2014 ರ ಡಿಸೆಂಬರ್, ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ, ರಾಜ್ಯದ ವಿವಿಧ ಜಲಾಶಯಗಳಲ್ಲಿ ಶೇಖರಣೆಯಾಗಿರುವ ಹೂಳಿನ ಪ್ರಮಾಣದ ಮಾಹಿತಿಯನ್ನು ಅವಲೋಕಿಸಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ನೀರಾವರಿ ಯೋಜನೆ(ದೊಡ್ಡ ಮತ್ತು ಚಿಕ್ಕ ಪ್ರಮಾ¬ಣದ್ದು) ಉದ್ದೇಶಗಳಿಗೆ ನಿರ್ಮಿಸಲಾಗಿರುವ 57 ಜಲಾ¬ಶಯಗಳ ಪೈಕಿ 14ರಲ್ಲಿ ಹೂಳಿನ ಸಮಸ್ಯೆ ಇದೆ. ಇವುಗಳಲ್ಲಿ ಕೆಲವು ಜಲಾಶಯಗಳಲ್ಲಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ.
ತುಂಗಭದ್ರೆಗೆ ಮೊದಲ ಸ್ಥಾನ
ಹೂಳಿನ ಸಮಸ್ಯೆ ಎದುರಿಸುತ್ತಿರುವ ಜಲಾಶಯಗಳ ಪಟ್ಟಿಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಮೊದಲ ಸ್ಥಾನ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಂದಾಜು 12 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಉದ್ದೇಶದಿಂದ ನಿರ್ಮಿಸಲಾ¬ಗಿ¬ರುವ ಈ ಜಲಾಶಯದಲ್ಲಿ ಬರೋಬ್ಬರಿ 31.616 ಟಿಎಂಸಿ ಅಡಿ ಹೂಳಿದೆ. 1953ರಲ್ಲಿ ಬಳಕೆಗೆ ಮುಕ್ತವಾದಾಗ 133 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರ¬ಹಿಸುವ ಸಾಮರ್ಥ್ಯ ಹೊಂದಿದ್ದ ಈ ಜಲಾಶಯದಲ್ಲಿ ಈಗ ಕೇವಲ 100.855 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆಯಷ್ಟೇ.
ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಲ್ಲಿ 10 ಟಿಎಂಸಿ ಅಡಿಗಳಷ್ಟು ಕೆಸರು ಮಣ್ಣು ತುಂಬಿದೆ. ಸದ್ಯ ಇದರ ನೀರಿನ ಸಂಗ್ರಹ ಸಾಮರ್ಥ್ಯ 32.313 ಟಿಎಂಸಿ ಅಡಿ.
ಕೃಷ್ಣೆಯ ಮಡಿಲಲ್ಲಿ
ಉತ್ತರ ಕರ್ನಾಟಕ ಜನರ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯವೂ ಈ ಸಮಸ್ಯೆ¬ಯಿಂದ ಹೊರ¬ತಾಗಿಲ್ಲ. 123.081 ಟಿಎಂಸಿ ಅಡಿಗಳಷ್ಟು ನೀರನ್ನು ಹಿಡಿದಿಡುವ ತಾಕತ್ತಿರುವ ಈ ಜಲಾಶಯದ ತಳದಲ್ಲಿ 5 ಟಿಎಂಸಿ ಅಡಿಗಳಷ್ಟು ಹೂಳು ಕೂತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕ ಈ ಭಾಗದ ಜನರದ್ದು. 49.5 ಟಿಎಂಸಿ ನೀರು ಅಡಿಯಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮಂಡ್ಯ ಜಿಲ್ಲೆಯ ಕೃಷ್ಣ¬ರಾಜ ಸಾಗರ ಜಲಾಶಯದಲ್ಲೂ ಮೂರು ಟಿಎಂಸಿ ಅಡಿ ಹೂಳಿದೆ.
ಹೂಳು ತೆರವು ಸವಾಲು: ಜಲಾಶಯಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು ಬಹು ದೊಡ್ಡ ಸವಾಲು. ತುಂಗಭದ್ರಾ ಜಲಾಶಯದಲ್ಲಿ ಶೇಖರವಾಗಿರುವ ಭಾರಿ ಪ್ರಮಾಣದ ಹೂಳನ್ನು ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಅಧ್ಯಯನವನ್ನೂ ನಡೆಸಿದೆ. ಕೆಲವು ಖಾಸಗಿ ಕಂಪೆನಿಗಳ ಸಹಕಾರವನ್ನು ಈ ಹಿಂದೆ ಕೇಳಿತ್ತು. ಆದರೆ, ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ
ಆದರೂ, ರಾಜ್ಯ ಸರ್ಕಾರ ಈ ಯೋಚನೆ ಕೈ ಬಿಟ್ಟಿಲ್ಲ. ಜಲಾ¬ಶಯದ ಸಂಗ್ರಹಣಾ ಸಮಾರ್ಥ್ಯವನ್ನು ಮರುಸ್ಥಾಪಿಸಲು ಪರ್ಯಾಯ ತಾಂತ್ರಿಕ ಪರಿ¬ಹಾರ¬ಗಳನ್ನು ಒದಗಿಸಲು ಮತ್ತು ಪರ್ಯಾಯ ಪ್ರಸ್ತಾವನೆಗಳ ವಿವರ¬ವಾದ ಯೋಜನಾ ವರದಿಯನ್ನು ತಯಾರಿಸಲು ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನಿಸಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದ ಅವರು, ಒಂದು ವೇಳೆ ತುಂಗಭದ್ರಾ ಜಲಾಶಯದಿಂದ ಹೂಳನ್ನು ತೆಗೆದರೆ ಅದನ್ನು ಹಾಕಲು 60 ಸಾವಿರ ಎಕರೆ ಜಮೀನು ಬೇಕು ಎಂದು ಹೇಳಿದ್ದರು.
ಪರ್ಯಾಯ ಮಾರ್ಗ ಅಗತ್ಯ
ಜಲಾಶಯಗಳಲ್ಲಿ ಹೂಳು ತುಂಬುವುದು ಸಹಜ. ಸಣ್ಣ ಪ್ರಮಾಣದಲ್ಲಿ ಹೂಳಿದ್ದರೆ ತೆರವುಗೊಳಿಸಬಹುದು. ಆದರೆ, ಭಾರಿ ಪ್ರಮಾಣದಲ್ಲಿದ್ದರೆ ಅದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಜೊತೆಗೆ ಹೂಳು ಹಾಕಲು ನೂರಾರು ಎಕರೆ ಜಮೀನೂ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಖರ್ಚು ಮಾಡುವ ವೆಚ್ಚದಲ್ಲಿ ಹೊಸ ಅಣೆಕಟ್ಟೆಯನ್ನೇ ನಿರ್ಮಿಸಬಹುದು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.
ಹೂಳಿನ ಕಾರಣದಿಂದಾಗಿ ಜಲಾಶಯದಿಂದ ಹೋಗುವ ನೀರನ್ನು ಸಂಗ್ರಹಿಸಲು ಸಣ್ಣ ಅಣೆಕಟ್ಟೆಗಳನ್ನು ನಿರ್ಮಿಸುವುದು, ಜಲಾಶಯದಲ್ಲಿ ಹೂಳು ತುಂಬುವಿಕೆಯನ್ನು ತಡೆ¬ಯುವ ನಿಟ್ಟಿನಲ್ಲಿ ನದಿ ಪಾತ್ರದಲ್ಲಿ ಗಿಡಗಳನ್ನು ನೆಡುವುದು (ಇದ¬ರಿಂದ ಮಣ್ಣಿನ ಸವೆತ ಅಥವಾ ಕೊರೆತ ನಿಯಂತ್ರಿಸ¬ಬಹುದು) ಸೇರಿದಂತೆ ಇತರ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿಂತಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ೨.
ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ.ತುಂಗ¬ಭದ್ರಾ ಜಲಾಶಯದಲ್ಲಿ ಶೇಖರವಾಗಿ¬ರುವ ಭಾರಿ ಪ್ರಮಾಣದ ಹೂಳನ್ನು ತೆಗೆ¬ಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷ¬ಗ¬ಳಿಂದ ಚಿಂತನೆ ನಡೆಸುತ್ತಿದೆ.
ಅದರ ಪಟ್ಟಿ ಕೆಳಗೆ ಕೊಟ್ಟಿದೆ
(ಪ್ರಜಾವಾಣಿಯಲ್ಲಿ ಕೊಟ್ಟಿರುವ ಈ ನೀರು ಸಂಗ್ರಹದ ಅಂಕಿ ಅಂಶಗಳಲ್ಲಿ ಕೆಲವು ಸರಯಿಲ್ಲ)
ಕ್ರಮ ಸಂಖ್ಯೆ
ಜಲಾಶಯ
ನೀರಿನ ಸಂಗ್ರಹ ಸಾಮರ್ಥ್ಯ
ತುಂಬಿರುವ ಹೂಳು
.
.
ಟಿ.ಎಂ.ಸಿ.ಗಳಲ್ಲಿ
ಟಿ.ಎಂ.ಸಿ.ಗಳಲ್ಲಿ
1
ತುಂಗಭದ್ರಾ
100.855
31.616
2
ಆಲಮಟ್ಟಿ
32.315
10.157
3
ಕೃಷ್ಣರಾಜ ಸಾಗರ
49.452
5.309
4
ಮಲಪ್ರಭಾ
37.73
2.744
5
ಹೇಮಾವತಿ
37.103
2.689
6
ಭದ್ರಾ
71.535
2.125
7
ಹಾರಂಗಿ
8.50
0.833
8
ಕಬಿನಿ
19.52
0.814
9
ವಾಟೆಹೊಳೆ
1.50
0.235
10
ಮಾರ್ಕೋನಹಳ್ಳಿ
2.401
0.136
11
ಹಿಪ್ಪರಗಿ
6.00
0.126
12
ತೀತಾ
0.242
0.005
ಒಟ್ಟು
367.153
56.789
1 ಟಿಎಮ್`ಸಿ ಅಡಿ ಎಂದರೆ(Tmcft is equal to): 28,316,846,592 ಲೀಟರ್`ಗಳು (liters)
1,000,000,000 ಘನ ಅಡಿ (cubic ft or) ಅಥವಾ 28,000,000 m3 -ಘನ ಮೀಟರ್.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿಕೆ:
ರಾಜ್ಯದಲ್ಲಿ ಪ್ರತಿವರ್ಷ 40 ರಿಂದ 50 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವುದನ್ನು ಕೈ ಬಿಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’; ಕಳೆದ 10 ವರ್ಷಗಳಲ್ಲಿ ರಾಜ್ಯದ 1.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಕಡಿಮೆಯಾಗಿದೆ. ವೈಜ್ಞಾನಿಕ ಹಾಗೂ ಒಟ್ಟು ಸಂಶೋಧನೆ ಮೂಲಕ ಬೆಳೆ ಬೆಳೆಯಬೇಕಿದೆ. ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕದೇ ಇದ್ದರೆ ಭತ್ತದ ಬೇಸಾಯ ಸೇರಿದಂತೆ ಒಣಬೇಸಾಯ ಉಳಿಯುವುದು ಕಷ್ಟ. ಕೇರಳದಲ್ಲಿ ಆದ ಪ್ರಯೋಗ ನಮ್ಮಲ್ಲಿ ಬಳಕೆಗೆ ಬಂದಿದ್ದೇ ಆದರೆ, ಅದರ ಉಪಯೋಗ ಸಿಕ್ಕಂತಾಗುತ್ತದೆ. ದೇಸೀ ತಳಿಯ ಜೀವವೈವಿಧ್ಯ ಇಲ್ಲಿನ ಭತ್ತದ ತಳಿಗಳಿಗಿದೆ. ಈ ಕುರಿತು ರಾಜ್ಯ, ದೇಶ ಚಿಂತಿಸಿದರೆ ಸಾಲದು ಜಗತ್ತೇ ಯೋಚಿಸಬೇಕಿದೆ.[೨]
2-8-2016ರ ವರೆಗಿನ ಸಮೀಕ್ಷೆಯಂತೆ ರಾಜ್ಯದ ಕರಾವಳಿಯಲ್ಲಿ ಈ ವರ್ಷ ವಾಡಿಕೆಗಿಂತ ಶೇ 18ರಷ್ಟು ಹಾಗೂ ಮಲೆನಾಡಿನಲ್ಲಿ ಶೇ 26ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದಾಗಿ ಭತ್ತದ ಬಿತ್ತನೆಗೆ ಭಾರಿ ಹಿನ್ನಡೆಯಾಗಿದೆ.
ರಾಜ್ಯದಲ್ಲಿ ಈ ವರ್ಷ 73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇರಿಸಿಕೊಳ್ಳಲಾಗಿತ್ತು. ಈವರೆಗೆ 50.87 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ 70ರಷ್ಟು ಸಾಧನೆಯಾಗಿದೆ. ಒಟ್ಟು 10.56 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಗುರಿ ಇದೆ. ಆದರೆ, ಈವರೆಗೆ 3 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.
ಅಂದರೆ ಕೇವಲ ಶೇ 28ರಷ್ಟು ಗುರಿ ಸಾಧನೆಯಾಗಿದೆ. ಭತ್ತದ ಕೃಷಿ ಹೆಚ್ಚಿರುವ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗದಿರುವುದು ಹಾಗೂ ಜಲಾಶಯಗಳು ಭರ್ತಿಯಾಗದೆ ಇರುವುದು ಇದಕ್ಕೆ ಕಾರಣ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.(2-8-2016)
ಧಾನ್ಯ
ಬಿತ್ತನೆ
ಬಿತ್ತನೆ
ವಾಡಿಕೆ ಬಿತ್ತನೆ
ಬಿತ್ತನೆ
ಪುನರ್ವಿಮರ್ಶಿತ
2016
2015
2016
2-8-2016>
ಗುರಿ
ಒಟ್ಟು
ಶೇಕಡಾ
ಲಕ್ಷ ಹೆಕ್ಟೇರ್‍ಗಳಲ್ಲಿ
ಭತ್ತ
1.42
1.30
13ಲಕ್ಷ ಹೆ.->
10.56
2.99
28
ಏಕದಳ ಧಾನ್ಯ
6.88
7.52
ಜೋಳ
1.52
1.05
69
ಎಣ್ಣೆಕಾಳು
3.98
4.92
ಶೇಂಗಾ
6.31
4.12
65
ತೊಗರಿ
1.74
3.72
->
8.51
10.22
120
ಉದ್ದು
0.55
0.51
ಮೆಕ್ಕೆಜೋಳ
11.91
11
92
ಹೆಸರು
2.16
2.32
ಸೂರ್ಯಕಾಂತಿ
2
1.09
54
ಹತ್ತಿ
0.68
1.03
->
5.77
3.72
65
ಕಬ್ಬು
3.63
2.84
->
4.62
3.63
79
ಒಟ್ಟು
17.06
19.24
ರಾಗಿ (11ಲಕ್ಷ ಹೆ.)
7.34
1.15
16
ಕೇಂದ್ರ ಕೃಷಿ ಸಚಿವಾಲಯ ಮಾಹಿತಿ:2-7-2016&2-8-2016:ಪ್ರಜಾವಾಣಿ,ವರದಿ.
ಸತತ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಬರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ತಳಿಯ ಬಿತ್ತನೆ ಬೀಜ ಪೂರೈಸಲು ಕರ್ನಾಟಕ ರಾಜ್ಯ ಸರ್ಕಾರ ಉದ್ದೇಶಹೊಂದಿದೆ.
ಹೈದರಾಬಾದ್‌ನಲ್ಲಿರುವ ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್ ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟಾಪಿಕ್ಸ್ (ಐಸಿಆರ್ಎಸ್‌ಎಟಿ)ಯು ಈ ಸಂಶೋಧನೆಯಲ್ಲಿ ತೊಡಗಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಈ ಸಂಶೋಧನೆಗೆ ರೂ.25 ಕೋಟಿ ನೀಡಿದೆ.
ದೇಶದಲ್ಲಿಯೇ ಅತಿ ಹೆಚ್ಚು ಒಣಭೂಮಿ ಪ್ರದೇಶವನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೆಯ ರಾಜ್ಯ ಕರ್ನಾಟಕ. ಇಲ್ಲಿ ಶೇ 70ಕ್ಕಿಂತ ಹೆಚ್ಚಿನ ರೈತರು ಬೇಸಾಯಕ್ಕೆ ಮಳೆಯನ್ನೆ ನೆಚ್ಚಿಕೊಂಡಿದ್ದಾರೆ. ಎಷ್ಟೇ ಅತ್ಯುತ್ತಮ ಗುಣಮಟ್ಟದ ಬೀಜ ಬಿತ್ತಿದರೂ ಅವು ಸಸಿಯಾಗಿ, ಗಿಡವಾಗುವಷ್ಟರಲ್ಲಿ ಮಳೆ ಕಾಣೆಯಾಗುವುದರಿಂದಾಗಿ ರೈತ ಸಮುದಾಯಕ್ಕೆ ನಷ್ಟ ಸ್ಥಿತಿ ತಪ್ಪಿದ್ದಿಲ್ಲ.
ಐಸಿಆರ್ಎಸ್‌ಐಟಿಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಸುಹಾಸ್ ಪಿ ವಾನಿ ಅವರ ನೇತೃತ್ವದಲ್ಲಿ ಬರ ನಿಗ್ರಹ, ರೋಗ ನಿರೋಧಕ ಸಂಶೋಧನೆ ಅಂತಿಮ ಹಂತದಲ್ಲಿದೆ. ಈ ವರ್ಷ ಧಾರವಾಡ ಮತ್ತು ಬೆಂಗಳೂರು ಕೃಷಿ ವಿ.ವಿ. ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರಯೋಗ ಆರಂಭವಾಗಲಿದೆ. ಕರ್ನಾಟಕದ ಒಣಭೂಮಿ ಪ್ರದೇಶದ ರೈತರು ಹೆಚ್ಚಾಗಿ ಬೆಳೆಯುವ ರಾಗಿ, ಸಜ್ಜೆ, ಬಿಳಿಜೋಳ, ತೊಗರಿ, ಶೇಂಗಾ ಹೀಗೆ ಐದು ತಳಿಗಳ ಸಂಶೋಧನೆ ನಡೆಯುತ್ತಿದೆ.
ವಿಧಾನ: ಜಿನೋಮ್ ಸೀಕ್ವೆನ್ಸಿಂಗ್(ವಂಶವಾಹಿ ಸರಪಳಿ ಜೋಡಣೆ)ಎಂಬ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಬರ ಮತ್ತು ರೋಗ ನಿರೋಧಕ ತಳಿ ಸೃಷ್ಟಿಸುವ ಯತ್ನದಲ್ಲಿ ಸಂಶೋಧನಾ ತಂಡ ನಿರತವಾಗಿದೆ.
‘ಕರ್ನಾಟಕದಲ್ಲಿ ಅತ್ಯುತ್ತಮ ಇಳುವರಿ ನೀಡುವ ರಾಗಿ, ತೊಗರಿ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಬರ ಮತ್ತು ರೋಗವನ್ನು ನಿಗ್ರಹಿಸಿ, ಮಳೆ ಕೊರತೆಯಾದರೂ ತಾಳಿಕೊಳ್ಳುವ ಶಕ್ತಿ ಈ ತಳಿಗಳಿಗೆ ಇಲ್ಲದೇ ಇರುವುದರಿಂದ ರೈತರು ಪ್ರತಿವರ್ಷ ಬೆಳೆನಷ್ಟ ಅನುಭವಿಸುವಂತಾಗಿದೆ. ಈ ಕಾರಣಕ್ಕೆ ಬರ, ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿ ಪಡಿಸಿ, ರೈತರಿಗೆ ವಿತರಿಸಲು ಸರ್ಕಾರ ಮುಂದಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ. ಸುಹಾಸ್ ಪಿ ವಾನಿ ಅವರು, ‘ಇಳುವರಿ ಕಡಿಮೆ ಇದ್ದರೂ ಬರ ನಿಗ್ರಹ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳ ವರ್ಣತಂತು ಮತ್ತು ವಂಶವಾಹಿ ಗಳನ್ನು ತೆಗೆದು, ಇಳುವರಿ ಹೆಚ್ಚಿನ ಪ್ರಮಾಣದಲ್ಲಿರುವ ತಳಿಗಳಿಗೆ ಸೇರಿಸುವ ಮೂಲಕ ಹೊಸ ತಳಿ ಸೃಷ್ಟಿ ಮಾಡಲಾಗುವುದು. ಇದನ್ನು ಜಿನೋಮ್ ಸೀಕ್ವೆನ್ಸಿಂಗ್ ಎಂದು ಕರೆಯುತ್ತೇವೆ’ ಎಂದು ತಿಳಿಸಿದರು.
‘ರೋಗ ನಿಗ್ರಹ, ಬರ ನಿರೋಧಕ ಶಕ್ತಿ ಇರುವ ತಳಿಗಳ ಡಿಎನ್ಎ ಮ್ಯಾಪಿಂಗ್ ಮಾಡಲಾಗುತ್ತದೆ. ಸಸ್ಯದ ಯಾವ ವಂಶವಾಹಿಯಲ್ಲಿ ಈ ಶಕ್ತಿ ಇದೆ ಎಂಬುದನ್ನು ಪ್ರಯೋಗಾಲಯದಲ್ಲಿ ಪತ್ತೆ ಹಚ್ಚಿ, ಈ ವಂಶವಾಹಿಯನ್ನು ತೆಗೆದು, ಗರಿಷ್ಠ ಇಳುವರಿ ನೀಡುವ ತಳಿಯ ವಂಶವಾಹಿ ಸರಪಳಿಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ಹೇಳಿದರು.
‘ಈ ಕ್ರಮದಲ್ಲಿ ಒಂದೇ ತಳಿ ಅಭಿವೃದ್ಧಿ ಪಡಿಸುವುದಿಲ್ಲ. ಐದು ತಳಿಗಳನ್ನು ಸಂಶೋಧಿಸಿ, ವೈಜ್ಞಾನಿಕ ವಾಗಿ ದೃಢಪಡಿಸಿಕೊಂಡ ಮೇಲೆ, ಅದನ್ನು ಕೃಷಿ ಕ್ಷೇತ್ರದಲ್ಲಿ ಪರೀಕ್ಷಾ ಪ್ರಯೋಗ (ಫೀಲ್ಡ್ ಟ್ರಯಲ್)ಕ್ಕೆ ಗುರಿ ಪಡಿಸಲಾಗುವುದು. ಈ ಐದು ತಳಿಗಳಲ್ಲಿ ಬರ ಮತ್ತು ರೋಗ ನಿರೋಧಕ ಶಕ್ತಿಯನ್ನು ಯಾವ ತಳಿ ಸದೃಢವಾಗಿ ಪಡೆದಿರುತ್ತದೋ ಅಂತಹ ತಳಿಯನ್ನು ಬಿತ್ತನೆ ಬೀಜ ಉತ್ಪಾದನೆಗೆ ಯೋಗ್ಯ ತಳಿ ಎಂದು ಶಿಫಾರಸು ಮಾಡಲಾಗುವುದು. ಸಂಕರ ತಳಿ ತಂತ್ರಜ್ಞಾನದಲ್ಲಿ ಆರೇಳು ವರ್ಷಗಳು ಬೇಕಾಗುವ ಹೊಸ ತಳಿಯ ಸೃಷ್ಟಿ ಪ್ರಕ್ರಿಯೆ, ಜಿನೋಮ್ ಸೀಕ್ವೆನ್ಸಿಂಗ್ ತಂತ್ರಜ್ಞಾನದಲ್ಲಿ ಮೂರು ವರ್ಷ ತೆಗೆದುಕೊಳ್ಳುತ್ತದೆ. ಹೊಸ ತಳಿ ಬೀಜವನ್ನು ರೈತರಿಗೆ ಬೇಗ ತಲುಪಿಸುವ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದು ಡಾ. ಸುಹಾಸ್ ಪಿ ವಾನಿ ಹೇಳಿದ್ದಾರೆ.
‘ಕುಲಾಂತರಿ ತಳಿ(ಜಿನೆಟಿಕಲಿ ಮಾಡಿ ಫೈಡ್-ಜಿಎಂ)ಹಾಗೂ ಜಿನೋಮ್ ಸೀಕ್ವೆ ನ್ಸಿಂಗ್ ತಂತ್ರಜ್ಞಾನದಲ್ಲಿ ಸಿದ್ಧಪಡಿ ಸಿದ ತಳಿಗೆ ಸಾಕಷ್ಟು ವ್ಯತ್ಯಾಸವಿದೆ. ಈ ತಂತ್ರ ಜ್ಞಾನದಲ್ಲಿ ಒಂದೇ ಪ್ರಬೇಧಕ್ಕೆ ಸೇರಿದ ಅಂದರೆ ರಾಗಿ ತಳಿಗೆ ಮತ್ತೊಂದು ರಾಗಿ ತಳಿಯ ವಂಶವಾಹಿ ಸರಪಳಿಯನ್ನು ಜೋಡಿಸಲಾಗುವುದು, ಇದರಿಂದ ತಳಿ ಸಾಮರ್ಥ್ಯ ಮತ್ತು ನಿಗ್ರಹ ಶಕ್ತಿ ಹೆಚ್ಚುತ್ತದೆ ವಿನಃ ಮನುಷ್ಯನ ಆರೋಗ್ಯಕ್ಕೆ ಹಾನಿ ಕಾರಕವಲ್ಲ’ ಎಂದು ವಾನಿ ತಿಳಿಸಿದರು. ತಳಿ ಸಂಶೋಧನೆಗೆ ಸರ್ಕಾರ ನೆರವು ನೀಡಿದೆ. ಒಂದೂವರೆ ವರ್ಷದಲ್ಲಿ ಹೊಸತಳಿ ಬಿತ್ತನೆ ಬೀಜ ರೈತರಿಗೆ ಲಭ್ಯವಾಗಲಿದೆ ಎಂದು ಕೃಷಿ ಸಚಿವಕೃಷ್ಣ ಬೈರೇಗೌಡ ಹೇಳಿದ್ದಾರೆ.
ಹಿಂಗಾರು ಹಂಗಾಮು ಅವಧಿಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್‌ಗಳಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನವೆಂಬರ್ 4 ರವರೆಗೆ ಒಟ್ಟು 4.28 ಲಕ್ಷ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷ 2.76 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ನಡೆದಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣ ಶೇ 55 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಬಳಿಕ ಯಾವ ಬೆಳೆಗಳನ್ನು ಬೆಳೆಯಬೇಕು ಎನ್ನುವ ನಿರ್ಧಾರಕ್ಕೆ ಬರಲು ರೈತರು ಕಾಯುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಭತ್ತ, ಎಣ್ಣೆಕಾಳುಗಳ ಬಿತ್ತನೆ ಹೆಚ್ಚಾಗಿದೆ. ಆದರೆ, ಬೆಳೆಕಾಳುಗಳ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಕಳೆದ ವರ್ಷ 30. ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 24.16 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ.
ರಾಜ್ಯದ ಅಂತರ್ಜಲ ಮಟ್ಟ ತೀವ್ರ ಕಳವಳಕಾರಿಯಾಗಿದೆ. 176 ತಾಲ್ಲೂಕುಗಳ ಪೈಕಿ 30 ತಾಲ್ಲೂಕುಗಳು ಅಂತರ್ಜಲವನ್ನು ಮಿತಿ ಮೀರಿ ಬಳಸಿವೆ. 13 ತಾಲ್ಲೂಕುಗಳ ಶೇ 90ರಷ್ಟು ಅಂತರ್ಜಲ ಕಲುಷಿತ ಮತ್ತು ವಿಷಯುಕ್ತವಾಗಿದ್ದು ಪರಿಸ್ಥಿತಿ ಅಪಾಯಕಾರಿ ಮಟ್ಟ ಮುಟ್ಟಿದೆ. 63 ತಾಲ್ಲೂಕುಗಳಲ್ಲಿ ಅಂತರ್ಜಲದ ಮಟ್ಟ ಮಿಶ್ರ ಸ್ಥಿತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ 70 ತಾಲ್ಲೂಕುಗಳಲ್ಲಿ ಅಂತರ್ಜಲದ ಗುಣಮಟ್ಟ ಸುರಕ್ಷಿತವಾಗಿದೆ.
ರಾಜ್ಯದ ವಿವಿಧ ಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ವಿವಿಧ ನಿಗಮಗಳನ್ನು ಸ್ಥಾಪಿಸಿದೆ. ಆದರೆ ಕರಾವಳಿ ಭಾಗ ಮಾತ್ರ ಈವರೆಗೆ ಹೇಳಿಕೊಳ್ಳುವಂತಹ ಯಾವುದೇ ಬೃಹತ್ ಅಥವಾ ಮಧ್ಯಮ ನೀರಾವರಿ ಯೋಜನೆಗಳ ಭಾಗ್ಯ ಪಡೆದಿಲ್ಲ. ಅದಕ್ಕೆ ಪೂರಕ ವ್ಯವಸ್ಥೆಯೊಂದು ರೂಪಿತವಾಗಿಲ್ಲ. ಕರಾವಳಿ ಪಾಲಿಗೆ ಯೋಜನೆ ನೀಡುವ ಬದಲು ಇಲ್ಲಿನ ಜೀವನದಿ ನೇತ್ರಾವತಿ ನೀರನ್ನೆ ಮೇಲಕ್ಕೆ ಹರಿಸಲು ಎತ್ತಿನಹೊಳೆ ಯೋಜನೆ ರೂಪಿಸುವ ಮೂಲಕ ಇನ್ನಷ್ಟು ಅಘಾತ ನೀಡಿದೆ.
ರಾಜ್ಯದಲ್ಲಿ ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ, ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರಾಧಿಕಾರ ಹೀಗೆ ಹಲವು ನಿಗಮಗಳು, ಪ್ರಾಧಿಕಾರಗಳಿವೆ. ಕೃಷ್ಣಾ ಮೇಲ್ಡಂಡೆ ಯೋಜನೆಯಲ್ಲಿ 15,36,000 ಎಕ್ರೆ ಪ್ರದೇಶಕ್ಕೆ ನೀರು ಹರಿಯುತ್ತದೆ. ಭದ್ರ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು ಹಾಗೂ ಚಿತ್ರದುರ್ಗದ 2.65 ಲಕ್ಷ ಎಕ್ರೆ ಭೂಮಿಗೆ ನೀರುಣಿಸಲಿದೆ. ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಡಿಪಿಆರ್ ಸಿದ್ಧವಾಗಿದೆ. ಕಲಬುರಗಿ, ಕಾವೇರಿ ನೀರಾವರಿ ನಿಗಮ ತನ್ನ ಪೂರ್ಣ ಗಮನವನ್ನು ಬಯಲು ಸೀಮೆಗೆ ಕೇಂದ್ರೀಕರಿಸಿದೆ. ಎತ್ತಿನಹೊಳೆ ಯೋಜನೆಗೆ 12,000 ಕೋ. ರೂ. ಗೂ ಅಧಿಕ ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರ ತ್ವರಿತ ಅನುಷ್ಠಾನಕ್ಕೆ ಎತ್ತಿನಹೊಳೆ ಪ್ರಾಧಿಕಾರ ರಚಿಸಿದೆ.
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 4,000 ಟಿಎಂಸಿಯಷ್ಟು ಮಳೆ ನೀರು ಸುರಿಯುತ್ತಿದೆ. ಅಂಕಿ-ಅಂಶದ ಪ್ರಕಾರ ದ.ಕ. ಜಿಲ್ಲೆಯ 5 ನದಿಗಳಿಂದ 657.21 ಟಿಎಂಸಿ, ಉಡುಪಿ ಜಿಲ್ಲೆಯ 13 ನದಿಗಳಿಂದ 582.48 ಟಿಎಂಸಿ, ಉತ್ತರ ಕನ್ನಡ ಜಿಲ್ಲೆಗಳ ನದಿಗಳಿಂದ 240.31 ಟಿಎಂಸಿ ಸೇರಿದಂತೆ 1,480 ಟಿಎಂಸಿ ನೀರು ಹರಿಯುತ್ತಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರಧಾನ ಜಲಮೂಲ ಕೊಳವೆ ಬಾವಿಧಿಗಳು. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳ ಭೌಗೋಳಿಕ ಸ್ಥಿತಿ ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ಒಂದೋ ಲೇಟ್ರೈಟ್ ಗುಣದ (ಕೆಂಪುಕಲ್ಲು) ಮಣ್ಣು ಅಥವಾ ಮರಳು ಮಣ್ಣು (ಸ್ಯಾಂಡ್ ಸಾಯಿಲ್) ಇದೆೆ. ಭೂಪ್ರದೇಶದ ಹೆಚ್ಚಿನ ಭಾಗ ಇಳಿಜಾರು ಪ್ರದೇಶವಾಗಿದ್ದು, ವಾರ್ಷಿಕ 4,000 ಮಿ.ಮೀ. ಮಳೆಯಾದರೂ ನೀರು ಇಂಗುವ ಪ್ರಮಾಣ ಕಡಿಮೆ ಮತ್ತು ವೇಗವಾಗಿ ಹರಿದು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತದೆ. ಜನವರಿಯ ಬಳಿಕ ಅಂತರ್ಜಲ ಮಟ್ಟ ಕ್ಷೀಣಿಸುತ್ತಾ ಹೋಗುತ್ತದೆ. ಕರಾವಳಿ ತೀರದ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಜಲಮಟ್ಟ ಕ್ಷೀಣಿಸುವುದರಿಂದ ಉಪ್ಪು ನೀರಿನ ಒರತೆ ಉಂಟಾಗುತ್ತದೆ. ಕೆಲವು ಕೊಳವೆ ಬಾವಿಗಳು ಫೆಬ್ರವರಿ ತಿಂಗಳಿನಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿದ್ದು, ಕುಡಿಯುವ ನೀರಿನ ತತ್ವಾರ ಎದುರಿಸುತ್ತದೆ ಮತ್ತು ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ತಾತ್ಕಾಲಿಕ ವ್ಯವಸ್ಥೆಗಾಗಿ ವ್ಯಯಿಸಬೇಕಾಗುತ್ತದೆ. ಇತ್ತೀಚಿನ ವರ್ಷಗಳ ಮಳೆ ಪ್ರಮಾಣದ ಅಂಕಿ-ಅಂಶ ಅವಲೋಕಿಸಿದರೆ ನಿರಂತರ ಕುಸಿತ ಕಂಡುಬಂದಿದೆ. ಕುಡಿಯುವ ನೀರಿಗೆ, ಕೃಷಿಗೆ ಬೇಸಗೆಯಲ್ಲಿ ನೀರಿನ ಕೊರತೆ ತೀವ್ರತರದಲ್ಲಿ ಕಾಡುತ್ತಿದೆ.
ಕರಾವಳಿಯಲ್ಲಿ ಬೀಳುವ ಮಳೆ ನೀರು ಸಂಗ್ರಹಿಸಿ ನಿರ್ವಹಿಸುವ ನಿಟ್ಟಿನಲ್ಲಿ ಒಂದು ಕೇಂದ್ರೀಕೃತ ವ್ಯವಸ್ಥೆ ಈ ಭಾಗದಲ್ಲಿ ಅವಶ್ಯವಿದೆ. ನೀರಾವರಿ ನಿಗಮದ ಮೂಲಕ ಇದನ್ನು ಮಾಡಬಹುದು. ಉತ್ತರ ಕರ್ನಾಟಕ, ಬಯಲು ಸೀಮೆಯ ರೀತಿಯಲ್ಲಿ ಇಲ್ಲಿ ಬೃಹತ್ ನೀರಾವರಿ ಯೋಜನೆಗಳು ಬೇಕೆಂದಿಲ್ಲ. ಮಧ್ಯಮ ಹಾಗೂ ಸಣ್ಣ ಯೋಜನೆಗಳಿಂದಲೇ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಇದಕ್ಕೆ ಉಳಿದ ಯೋಜನೆಗಳಂತೆ ಸಾವಿರಾರು ಕೋಟಿ ರೂ. ಅಗತ್ಯವಿರಲಾರದು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕೂಡ ಇದರ ವ್ಯಾಪ್ತಿಗೆ ತರಬಹುದು.ರಾಜ್ಯದಲ್ಲಿ ನೀರಾವರಿ ಯೋಜನೆಗಳು ಬರುವುದು ಎಲ್ಲರಿಗೂ ಸಂತಸದ ವಿಚಾರ. ಇದಕ್ಕೆ ಯಾರೂ ತಕರಾರು ಮಾಡುವುದಿಲ್ಲ. ಆದರೆ ಈ ಭಾಗ್ಯ ಕರಾವಳಿಗೂ ಬರಲಿ ಎಂಬುದಷ್ಟೆ ಕೋರಿಕೆ.
ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ 2013-14ನೇ ಸಾಲಿನಲ್ಲಿ 9812 ಕೋ. ರೂ.. 2014-15ನೇ ಸಾಲಿನಲ್ಲಿ 11,349 ಕೋ. ರೂ., 2014-15ನೇ ಸಾಲಿನಲ್ಲಿ 12,955 ಕೋ. ರೂ. ವಿನಿಯೋಗಿಸಲಾಗಿದೆ. 2016-17ನೇ ಸಾಲಿನಲ್ಲಿ 14,477 ಕೋ. ರೂ. ನಿಗದಿಪಡಿಸಲಾಗಿದೆ.
ಪಶ್ಚಿಮವಾಹಿನಿ ಯೋಜನೆೆಗೆ ಸರಿಸುಮಾರು 16 ವರ್ಷಗಳು. ಇಷ್ಟು ವರ್ಷಗಳಿಂದ ಪದೇ ಪದೇ ಸದ್ದು ಮಾಡಿ ಸುದ್ದಿಯಿಂದ ಮರೆಯಾಗುತ್ತಿರುವ ಯೋಜನೆಗೆ ಈವರೆಗೆ ಅನುಷ್ಠಾನ ಬಂದೇ ಇಲ್ಲ. ಈ ಯೋಜನೆ ರೂಪುಗೊಂಡದ್ದು 2001ರಲ್ಲಿ. ಆಗ ಆದರ ವೆಚ್ಚ 100 ಕೋ. ರೂ. ಮೂಲಯೋಜನೆ ಪ್ರಕಾರ ಮೂರು ಜಿಲ್ಲೆಗಳಲ್ಲಿ ಹರಿಯುವ ನದಿಗಳು ಹಾಗೂ ಉಪನದಿಗಳಿಗೆ 1489 ಅಣೆಕಟ್ಟು ನಿರ್ಮಿಸಿ 39,041.67 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಪ್ರಸ್ತಾವನೆ ಹೊಂದಿತ್ತು. ಆದರೆ ಯೋಜನೆ ಮತ್ತೆ ಪರಿಷ್ಕೃತಗೊಂಡು 707 ಅಣೆಕಟ್ಟು ಹಾಗೂ 74 ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಇದರಿಂದ 23,269 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಸಿದ್ಧಪಡಿಸಲಾಯಿತು. ಪ್ರಸ್ತುತದ ವೆಚ್ಚ 1000 ಕೋ. ರೂ. ಎಂದು ಅಂದಾಜಿಸಲಾಗಿದೆ. ಆದರೆ ಇನ್ನೂ ಅನುಷ್ಠಾನದ ಹಂತಕ್ಕೆ ಬಂದಿಲ್ಲ.[೮]
ಭದ್ರಾ ಹಾಗೂ ತುಂಗಾ ಜಲಾಶಯಗಳ ವ್ಯಾಪ್ತಿಯಲ್ಲಿ ಈ ಬಾರಿ ಭತ್ತದ ಬೆಳೆಗೆ ನೀರು ಹರಿಸದಿರಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿರುವ ಕಾರಣ ಬೇಸಿಗೆ ಹಂಗಾಮಿನ 5 ಲಕ್ಷ ಟನ್ ಇಳುವರಿ ಖೋತಾ ಆಗಲಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಶಿವಮೊಗ್ಗ 10 ಸಾವಿರ, ದಾವಣಗೆರೆ 60 ಸಾವಿರ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶ. ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ 60,800 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಬರುತ್ತದೆ. ಆದರೆ, ಬೇಸಿಗೆ ನೀರು ದೊರೆಯುವುದು ಕೇವಲ 4 ಸಾವಿರ ಹೆಕ್ಟೇರ್‌ಗೆ ಮಾತ್ರ. ಅದೂ ಈ ವರ್ಷ ಸ್ಥಗಿತವಾಗಿದೆ.[೯]